ಆರ್‌ಸಿಬಿ ೧೦ ಪಂದ್ಯಗಳಲ್ಲಿ ೭ ಗೆದ್ದು ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ೬ ಹೊರಂಗಣ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿರುವುದು ವಿಶೇಷ. ೨೦೧೧ರ ನಂತರ ಮೊದಲ ಬಾರಿಗೆ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ, ಪ್ಲೇ ಆಫ್‌ಗೆ ಬಹುತೇಕ ಅರ್ಹತೆ ಪಡೆದಿದೆ. ಇದೇ ವೇಳೆ, ಚೆನ್ನೈ ಕೊನೆಯ ಸ್ಥಾನದಲ್ಲಿದೆ. ಇನ್ನು ನಾಲ್ಕು ಪಂದ್ಯಗಳು ಬಾಕಿ ಇವೆ.
ಬೆಂಗಳೂರು (ಏ.28): ಈ ಬಾರಿಯ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಬಹಳ ವಿಭಿನ್ನವಾಗಿ ಸಾಗುತ್ತಿದೆ. ಆಡಿದ 10 ಪಂದ್ಯಗಳಲ್ಲಿ ಆರ್‌ಸಿಬಿ 7 ಪಂದ್ಯ ಗೆದ್ದು ಟೇಬಲ್ ಟಾಪರ್ ಆಗಿದೆ. ಇನ್ನೂ ವಿಶೇಷ ಏನೆಂದರೆ, ಈ ಬಾರಿ ಆರ್‌ಸಿಬಿ ಚಿನ್ನಸ್ವಾಮಿಯ ಹೊರಗಡೆ ಆಡಿದ 6 ಪಂದ್ಯಗಳಲ್ಲಿ ಆರರಲ್ಲೂ ಗೆಲುವು ಕಂಡಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್ ಗೆಲುವು ಕಂಡ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಲೀಗ್‌ನಲ್ಲಿ ಇನ್ನು ಆರ್‌ಸಿಬಿಗೆ ನಾಲ್ಕು ಪಂದ್ಯಗಳು ಮಾತ್ರವೇ ಬಾಕಿ ಇದ್ದು, ಹೆಚ್ಚೂ ಕಡಿಮೆ ಪ್ಲೇ ಆಫ್‌ಗೆ ಏರುವುದು ನಿಶ್ಚಯವಾಗಿದೆ. ಆದರೆ, ಅಂಕಪಟ್ಟಿಯಲ್ಲಿ ಟಾಪ್-2 ಆಗುವ ತಂಡಗಳಿಗೆ ಪ್ಲೇ ಆಫ್‌ನಲ್ಲಿ ಹೆಚ್ಚಿನ ಅವಕಾಶ ಸಿಗುವ ಕಾರಣ ಮೊದಲ ಎರಡು ಸ್ಥಾನದಲ್ಲೇ ಲೀಗ್ ಹಂತ ಮುಗಿಸಬೇಕು ಅನ್ನೋದು ಆರ್‌ಸಿಬಿಯ ಇರಾದೆಯಾಗಿದೆ.
ಆರ್‌ಸಿಬಿ ಲೀಗ್ ಹಂತದಲ್ಲಿ ಟೇಬಲ್ ಟಾಪರ್ ಆಗಿರುವುದು ಇತಿಹಾಸದಲ್ಲಿ ಒಮ್ಮೆ ಮಾತ್ರ. 2011ರ ಐಪಿಎಲ್‌ನಲ್ಲಿ ಆರ್‌ಸಿಬಿ 19 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಈ ಸೀಸನ್‌ನಲ್ಲಿ ಆರ್‌ಸಿಬಿ ಫೈನಲ್‌ಗೇರಿ ರನ್ನರ್‌ಅಪ್ ಕೂಡ ಆಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಫೈನಲ್‌ನಲ್ಲಿ ಸೋಲು ಕಂಡಿತ್ತು.
2011ರ ಲೀಗ್‌ನಲ್ಲಿ ಆರ್‌ಸಿಬಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು, 4 ಸೋಲು ಹಾಗೂ ಒಂದು ಪಂದ್ಯ ರದ್ದಾಗಿದ್ದರಿಂದ 19 ಅಂಕ ಸಂಪಾದಿಸಿತ್ತು. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ
ಆರ್‌ಸಿಬಿ ಅಭಿಮಾನಿಗಳಿಗೆ ಇನ್ನೂ ಖುಷಿಯ ವಿಚಾರ ಏನೆಂದರೆ, ಆರ್‌ಸಿಬಿ ಅಂಕಪಟ್ಟಿಯಲ್ಲಿ ಟೇಬಲ್ ಟಾಪರ್ ಆಗಿದ್ದರೆ, ತಂಡದ ಹಾಗೂ ಅಭಿಮಾನಿಗಳ ಬದ್ಧವೈರಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವುದು. ಆರ್‌ಸಿಬಿ ಟಾಪ್‌ಅಲ್ಲಿ ಇದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೇಬಲ್‌ನಲ್ಲಿ ಕೊನೆಯಲ್ಲಿರುವುದು ಕೂಡ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಘಟಿಸಿದೆ.
ಶುಭ್‌ಮನ್ ಗಿಲ್ ಡೇಟಿಂಗ್ ರೂಮರ್ಸ್: ಸಾರಾ ಅಲ್ಲದೇ ಈ ಮೂವರ ಜತೆ ಲವ್ವಿಡವ್ವಿ?
ಭರ್ಜರಿ ಲಯದಲ್ಲಿರುವ ಆರ್‌ಸಿಬಿಗೆ ಇನ್ನು ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಮೇ.3 ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಲಿದ್ದರೆ, ಮೇ. 9 ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮೇ 13 ರಂದುಸ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮೇ. 17 ರಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
