ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹೊಸ ವಿಡಿಯೋ ವೈರಲ್. ಜಿಪ್‌ಲೈನ್ ಸವಾರಿ ಮಾಡುತ್ತಿದ್ದ ವ್ಯಕ್ತಿಯ ವಿಡಿಯೋದಲ್ಲಿ ಗುಂಡಿನ ಸದ್ದಿನ ನಡುವೆಯೂ ಆಪರೇಟರ್ "ಅಲ್ಲಾಹು ಅಕ್ಬರ್" ಎಂದು ಕೂಗುತ್ತಿರುವುದು ಕಂಡುಬಂದಿದೆ. ಓಡಿಹೋಗುತ್ತಿದ್ದ ಪ್ರವಾಸಿಗರ ಮೇಲೆ ಗುಂಡು ಹಾರಿಸಲಾಗಿದ್ದು, ದಾಳಿ ಪೂರ್ವನಿಯೋಜಿತ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯರಿಗೆ ದಾಳಿಯ ಬಗ್ಗೆ ಮೊದಲೇ ತಿಳಿದಿತ್ತೆಂಬ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು (ಏ.28): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ನರಮೇಧ ಮಾಡಿದ ಪ್ರಕರಣ ದೇಶದ ಜನರ ಸಿಟ್ಟು ತಾರಕಕ್ಕೇರುವಂತೆ ಮಾಡಿದೆ. ಇದರ ಒಂದೊಂದು ವಿಡಿಯೋಗಳು ಕೂಡ ರಕ್ಯ ಕುದಿಯುವಂತೆ ಮಾಡಿದೆ. ಈ ನಡುವೆ ದಾಳಿಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದೆ.
53 ಸೆಕೆಂಡ್‌ನ ವಿಡಿಯೋ ಇದಾಗಿದ್ದು, ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ವ್ಯಕ್ತಿಯೊಬ್ಬ ಜಿಪ್‌ಲೈನ್ ಎಂಜಾಯ್ ಮಾಡುತ್ತಿರುವ ದೃಶ್ಯವಿದೆ. ವಿಡಿಯೋದ ಆರಂಭದಲ್ಲಿ ಜಿಪ್‌ಲೈನ್ ಆಪರೇಟರ್ ಮೂರು ಬಾರಿ ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಎಂದು ಹೇಳುತ್ತಿರುವುದು ಕಂಡಿದೆ. ಈ ವೇಳೆಗಾಗಲೇ ಉಗ್ರರು ಗುಂಡು ಹಾರಿಸುತ್ತಿರುವ ಸದ್ದು ಕೂಡ ಕೇಳುತ್ತದೆ.
ವೀಡಿಯೊದಲ್ಲಿ ಭಯೋತ್ಪಾದಕರು ಮುಗ್ಧ ಪ್ರವಾಸಿಗರ ಮೇಲೆ ಗುಂಡು ಹಾರಿಸುತ್ತಿದ್ದರೆ, ಜನರು ಜೀವ ಉಳಿಸಿಕೊಳ್ಳಲು ಓಡುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೂ ಕೆಲವವು ಗುಂಡು ಬಿದ್ದ ನಂತರ ಓಡುವಾಗ ನೆಲಕ್ಕೆ ಬೀಳುವುದನ್ನು ಕಾಣಬಹುದು. ಯಾರೂ ಅವರ ರಕ್ಷಣೆಗೆ ಬರಲಿಲ್ಲ. ಇದು ಚೆನ್ನಾಗಿ ಯೋಜಿಸಲಾದ ಭಯೋತ್ಪಾದಕ ದಾಳಿ ಎನ್ನುವಂತೆ ಕಂಡಿದೆ.
ಪಾಕಿಸ್ತಾನದೊಂದಿಗೆ ಭಾರತದ ಮಾತುಕತೆಗೆ ಒಲವು ತೋರುತ್ತಿದ್ದೆ ಆದರೆ ಈಗ : ಫಾರುಕ್ ಅಬ್ದುಲ್ಲಾ ಹೇಳಿದ್ದೇನು?
ಆರಂಭದಲ್ಲಿ ಗನ್‌ಶಾಟ್‌ನ ಸದ್ದು ಕೇಳುವಾಗಲೇ ಜಿಪ್‌ಲೈನ್ ಆಪರೇಟರ್ ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಎಂದು ಹೇಳುವುದನ್ನು ನೋಡಿದರೆ ಸ್ಥಳೀಯರಿಗೆ ದಾಳಿಯ ಬಗ್ಗೆ ಗೊತ್ತಿತ್ತು ಅನ್ನೋದನ್ನು ಸೂಚಿಸುತ್ತದೆ ಎಂದು ಹೆಚ್ಚಿನವರು ಕಾಮೆಂಟ್ ಮಾಡಿದ್ದಾರೆ.
ಇನ್ನು ಜಿಪ್‌ಲೈನ್‌ನಲ್ಲಿ ಸಾಗಿದ ಪ್ರವಾಸಿಗನಿಗೆ ಕೆಳಗೆ ಏನಾಗುತ್ತಿದೆ ಅನ್ನೋ ಅಂದಾಜೇ ಇಲ್ಲ. ಸಾಕಷ್ಟು ಬಾರಿ ಗನ್‌ಶಾಟ್‌ಗಳು ಕೇಳಿದರೂ ಅವರು ನಗುತ್ತಲೇ ಪ್ರಯಾಣ ಮಾಡಿದ್ದಾರೆ. ಜಿಪ್‌ಲೈನ್‌ನ ಕೊನೆಗೆ ಬರುವಾಗ ಬಹುಶಃ ಸ್ಥಳದಲ್ಲಿ ಶೂಟ್ ಆಗುತ್ತಿದೆ ಅನ್ನೋದು ಗೊತ್ತಾಗಿ ಅವರ ಮುಖಭಾವ ಬದಲಾಗಿದೆ.
ಅಫ್ರಿದಿ ಮೇಲೆ ತಿರುಗಿಬಿದ್ದ ಅಸಾದುದ್ದೀನ್ ಒವೈಸಿ! ಅವನೊಬ್ಬ ಜೋಕರ್ ಎಂದ AIMIM ಮುಖ್ಯಸ್ಥ
ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಇಂದಿನ ನಾಲ್ಕು ಅಪ್‌ಡೇಟ್‌ಗಳು
-ಪಹಲ್ಗಾಮ್ ದಾಳಿಯ ವರದಿ ಮಾಡಿದ್ದಕ್ಕಾಗಿ ಕೇಂದ್ರವು 17 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ. ಇವುಗಳಲ್ಲಿ ಕ್ರಿಕೆಟಿಗ ಶೋಯೆಬ್ ಅಖ್ತರ್, ಡಾನ್ ನ್ಯೂಸ್, ಸಮಾ ಟಿವಿ ಮತ್ತು ಜಿಯೋ ನ್ಯೂಸ್ ಸೇರಿವೆ. ಈ ಚಾನೆಲ್‌ಗಳು ಭಾರತ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಸುಳ್ಳು ಮತ್ತು ದಾರಿತಪ್ಪಿಸುವ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಸರ್ಕಾರ ಹೇಳಿದೆ.
- ಕೇಂದ್ರವು ಬಿಬಿಸಿಗೆ ಎಚ್ಚರಿಕೆ ನೀಡಿದೆ. ವಾಸ್ತವವಾಗಿ, ಪಹಲ್ಗಾಮ್ ದಾಳಿಯ ವರದಿ ಮಾಡುವಾಗ ಬಿಬಿಸಿ ಭಯೋತ್ಪಾದಕರನ್ನು ಮಿಲಿಟೆಂಟ್ಸ್ ಎಂದು ಕರೆಯುತ್ತಿತ್ತು. ಗೃಹ ಸಚಿವಾಲಯದ ಶಿಫಾರಸಿನ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ.
- ಜಮ್ಮು ಮತ್ತು ಕಾಶ್ಮೀರ ಪೊಲೀಸರು 15 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಕಾರ್ಯನಿರ್ವಹಿಸುತ್ತಿರುವ ಮತ್ತು ಪಹಲ್ಗಾಮ್ ದಾಳಿಯೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕರ ಅಡಗುತಾಣಗಳ ಮೇಲೆ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
- ಪಹಲ್ಗಾಮ್ ದಾಳಿಯ ಕುರಿತು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಪಹಲ್ಗಾಮ್ ದಾಳಿಯ ಕುರಿತು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವಂತೆ ಒತ್ತಾಯಿಸಿವೆ. ಆರ್‌ಜೆಡಿ ಸಂಸದ ಮನೋಜ್ ಝಾ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ ಮತ್ತು ಸಿಪಿಐ ರಾಜ್ಯಸಭಾ ಸಂಸದ ಪಿ ಸಂತೋಷ್ ಕುಮಾರ್ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜುಗೆ ಪತ್ರ ಬರೆದಿದ್ದಾರೆ.
