09:45 AM (IST) Dec 25

Karnataka news liveಶೇ.75ರಷ್ಟಿರುವ ದಲಿತರು, ಮುಸ್ಲಿಮರು ಅಧಿಕಾರ ನಡೆಸಬೇಕು - ಸಚಿವ ಆರ್‌.ಬಿ.ತಿಮ್ಮಾಪೂರ

ಎಲ್ಲರೂ ಸಮಾನರಾಗಿ ಬಾಳುವೆ ನಡೆಸಬೇಕು. ಡಾ.ಅಂಬೇಡ್ಕರ್‌ ಅವರು ನೀಡಿರುವ ಮತದಾನ ಹಕ್ಕನ್ನು ಸರಿಯಾರಿ ಬಳಸಿಕೊಂಡು ನಮಗೆ ಬೇಕಾದ ನಾಯಕರನ್ನು ಆರಿಸಿ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಕರೆ ನೀಡಿದರು.

Read Full Story
09:31 AM (IST) Dec 25

Karnataka news liveಸಿಎಂ ದೆಹಲಿ ಪ್ರಯಾಣದ ನಂತರ ಸಂಪುಟ ಪುನಾರಚನೆ - ಮಾಜಿ ಸಚಿವ ಕೆ.ಎನ್.ರಾಜಣ್ಣ

ಸಚಿವ ಸಂಪುಟ ಪುನಾರಚನೆಯನ್ನು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ಅನುಮತಿ ತಗೊಂಡು ಮಾಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Read Full Story
09:20 AM (IST) Dec 25

Karnataka news liveಮಂಡ್ಯದಿಂದ ಬೆಂಗಳೂರಿಗೆ ಮದುವೆಯಾಗಿ ಬಂದ ಐಶ್ವರ್ಯಾ; ಗಂಡನ ಕಿರುಕುಳಕ್ಕೆ ಬೇಸತ್ತು, ತಿಂಗಳೊಳಗೆ ನವವಿವಾಹಿತೆ ಸಾವು!

ಮದುವೆಯಾಗಿ ತಿಂಗಳು ಕಳೆಯುವ ಮುನ್ನವೇ ಬೆಂಗಳೂರಿನ ಬಾಗಲಗುಂಟೆಯಲ್ಲಿ ನವವಿವಾಹಿತೆ ಐಶ್ವರ್ಯ (24) ನೇಣಿಗೆ ಶರಣಾಗಿದ್ದಾರೆ. ಗಂಡ ಮತ್ತು ಅತ್ತೆಯ ಕಿರುಕುಳವೇ ಸಾವಿಗೆ ಕಾರಣ ಎಂದು ಮೃತಳ ಪೋಷಕರು ಆರೋಪಿಸಿದ್ದು, ಇದೊಂದು ಕೊಲೆ ಎಂದು ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story
09:13 AM (IST) Dec 25

Karnataka news live500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ 500 ಬೀದಿ ನಾಯಿಗಳಿಗೆ ಒಂದು ವರ್ಷ ಪ್ರತಿನಿತ್ಯ ಎರಡು ಬಾರಿ ಚಿಕನ್‌ ರೈಸ್‌ ಆಹಾರ ನೀಡುವುದು ಸೇರಿದಂತೆ ಆಶ್ರಯ ಕಲ್ಪಿಸಲು 1.83 ಕೋಟಿ ರು. ವೆಚ್ಚ ಮಾಡಲು ಮುಂದಾಗಿದೆ.

Read Full Story
08:59 AM (IST) Dec 25

Karnataka news liveಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ

ಇಲ್ಲಿನ ಯಲಹಂಕದಲ್ಲಿ ಚೀನಾದ ಹ್ಯಾಂಗ್‌ಝೌ ಮಾದರಿಯಲ್ಲಿ ಎಲಿವೆಟೆಡ್‌ ರೈಲ್ವೆ ಟರ್ಮಿನಲ್‌ ನಿರ್ಮಿಸಲು ರೈಲ್ವೆ ಮಂಡಳಿಗೆ ನೈಋತ್ಯ ರೈಲ್ವೆ ವಲಯವು ಪ್ರಸ್ತಾವನೆ ಸಲ್ಲಿಸಿದೆ. 20 ಎಕರೆ ಜಾಗದಲ್ಲಿ ಅಂದಾಜು ₹6,000 ಕೋಟಿ ವೆಚ್ಚದಲ್ಲಿ ನಿರ್ಮಿಸಲು ರೂಪುರೇಷೆ

Read Full Story
08:57 AM (IST) Dec 25

Karnataka news liveಬೆಂಗಳೂರಿಂದ ಗೋಕರ್ಣ ಹೊರಟಿದ್ದ ಬಸ್ ಅಗ್ನಿದುರಂತ - 9 ಮಂದಿ ಸಜೀವ ದಹನ, ಕರಕಲು ಹಿಡಿದ ಮೃತರ ಪತ್ತೆಗೆ DNA ಮೊರೆ

ಚಿತ್ರದುರ್ಗದ ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್ ಸಂಪೂರ್ಣ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ 9 ಮಂದಿ ಸಜೀವ ದಹನವಾಗಿದ್ದು, ಸುಟ್ಟು ಕರಕಲಾದ ಮೃತದೇಹ ಪತ್ತೆಗೆ ಪೊಲೀಸರು ಪರದಾಡುತ್ತಿದ್ದಾರೆ.

Read Full Story
07:43 AM (IST) Dec 25

Karnataka news liveಲಾಟರಿ ಮೂಲಕ ವೀಸಾ ವಿತರಣೆಗೆ ಟ್ರಂಪ್‌ ಬ್ರೇಕ್‌

ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುವವರಿಗೆ ಕೊಡಲಾಗುವ ಎಚ್‌-1ಬಿ ವೀಸಾ ಅರ್ಜಿಗಳಲ್ಲಿ 85,000 ಅರ್ಜಿಗಳನ್ನು ಆರಿಸಲು ಬಳಸಲಾಗುತ್ತಿದ್ದ ‘ರ್‍ಯಾಂಡಮ್‌ ಲಾಟರಿ ವ್ಯವಸ್ಥೆ’ಗೆ ಪೂರ್ಣವಿರಾಮ ಇಟ್ಟಿರುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸರ್ಕಾರ ಘೋಷಿಸಿದೆ.

Read Full Story
07:43 AM (IST) Dec 25

Karnataka news liveಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ - 9 ಮಂದಿ ಸಜೀವ ದಹನ, ಪ್ರಯಾಣಿಕರ ಲಿಸ್ಟ್ ಬಿಡುಗಡೆ ಮಾಡಿದ ಪೊಲೀಸರು!

ಚಿತ್ರದುರ್ಗದಲ್ಲಿ ಬೆಂಗಳೂರು-ಗೋಕರ್ಣ ಸೀ ಬರ್ಡ್ ಬಸ್ ಲಾರಿಗೆ ಡಿಕ್ಕಿಯಾಗಿ ಹೊತ್ತಿ ಉರಿದಿದೆ. ಈ ಭೀಕರ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯ ಸಂಪೂರ್ಣ ವಿವರ ತಿಳಿಯಿರಿ.

Read Full Story
07:32 AM (IST) Dec 25

Karnataka news liveಚಿತ್ರದುರ್ಗ ಭೀಕರ ಬಸ್ ಅಪಘಾತ

ಘಟನೆಯ ವಿವರ: ಗುರುವಾರ ಮುಂಜಾನೆ ಈ ಭೀಕರ ದುರಂತ ಸಂಭವಿಸಿದೆ. ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟಿದ್ದ ಕೆಎ 01-ಎಇ 5217 ನಂಬರಿನ ಸೀ ಬರ್ಡ್ ಬಸ್, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಲಾರಿಯೊಂದು ವೇಗವಾಗಿ ಬಂದು ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬಸ್‌ಗೂ ಆವರಿಸಿದೆ.

ಸಜೀವ ದಹನ: ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಡೀಸೆಲ್ ಟ್ಯಾಂಕ್ ಬಳಿಯೇ ಲಾರಿ ಗುದ್ದಿದ್ದರಿಂದ ಬೆಂಕಿ ತೀವ್ರವಾಗಿ ಹರಡಿದ್ದು, ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗಿಲ್ಲ. ಈ ಪೈಕಿ 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನವಾಗಿದ್ದಾರೆ. ಉಳಿದ 23 ಪ್ರಯಾಣಿಕರು ಕಿಟಕಿ ಹಾಗೂ ಎಮರ್ಜೆನ್ಸಿ ಡೋರ್ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.