08:12 PM (IST) Apr 24

Karnataka News Liveಬಿಜೆಪಿ ಶುದ್ಧೀಕರಣವಾಗಲೆಂದು ಹೊರ ಬಂದೆ, ಇನ್ನೂ ಶುದ್ಧೀಕರಣವಾಗಿಲ್ಲ - ಕೆ.ಎಸ್.ಈಶ್ವರಪ್ಪ

ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಪಕ್ಷದಿಂದ ಹೊರಗೆ ಬಂದೆ. ಆದರೆ, ಇನ್ನೂ ಶುದ್ಧೀಕರಣವಾಗಿಲ್ಲ. ನಾನು ಯಾವ ಪಕ್ಷಕ್ಕೂ ಹೋಗಲ್ಲ. ಹೊಸ ಪಕ್ಷ ಕಟ್ಟಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

Read Full Story
08:00 PM (IST) Apr 24

Karnataka News Liveಬಿಪಿಸಿಎಲ್ ನೇಮಕಾತಿ - ಆಯ್ಕೆಯಾದವರಿಗೆ ಭರ್ಜರಿ ಜಾಕ್‌ಪಾಟ್‌ , ತಿಂಗಳಿಗೆ ₹1.40 ಲಕ್ಷ ಸಂಬಳ!

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) 250ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಅಸೋಸಿಯೇಟ್ ಎಕ್ಸಿಕ್ಯೂಟಿವ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿದ್ದು, ಆಯ್ಕೆಯಾದವರಿಗೆ ಗರಿಷ್ಠ ₹1.40 ಲಕ್ಷದವರೆಗೆ ಆಕರ್ಷಕ ವೇತನ ದೊರೆಯಲಿದೆ. ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
Read Full Story
07:46 PM (IST) Apr 24

Karnataka News Liveಸಿಇಟಿ ಪರೀಕ್ಷಾ ವಿವಾದ - ಸಿದ್ದರಾಮಯ್ಯಗೆ ನಾಮ, ಜನಿವಾರ, ಕಂಡ್ರೆ ಆಗಲ್ಲ, ಆರ್.ಅಶೋಕ್ ತೀವ್ರ ಆಕ್ರೋಶ

ಕರ್ನಾಟಕ ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ವಿಪಕ್ಷ ನಾಯಕ ವ್ಯಕ್ತಪಡಿಸಿದ್ದಾರೆ. ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Read Full Story
07:39 PM (IST) Apr 24

Karnataka News Liveಕೋಲ್ಡ್ ಡ್ರಿಂಕ್ಸ್ ಕ್ಯಾನ್‌ ಬಿಸಾಡಬೇಡಿ, ಈ ಟ್ರಿಕ್ಸ್ ಬಳಸಿ ಮನೆಯಲ್ಲೇ ಅದರಿಂದ ಈ ಉಪಯೋಗ ಪಡೆದುಕೊಳ್ಳಿ!

ಬೇಸಿಗೆಯಲ್ಲಿ ಬಳಸಿದ ಕೋಲ್ಡ್ ಡ್ರಿಂಕ್ ಕ್ಯಾನ್‌ಗಳನ್ನು ಎಸೆಯುವ ಬದಲು, ಮನೆಯಲ್ಲಿಯೇ 4 ಉಪಯುಕ್ತ ವಸ್ತುಗಳನ್ನು ತಯಾರಿಸಿ. ಪ್ಲಾಸ್ಟಿಕ್ ಮತ್ತು ಮೆಟಲ್ ತ್ಯಾಜ್ಯವನ್ನು ಮರುಬಳಕೆ ಮಾಡಲು ಸುಲಭವಾದ DIY ಐಡಿಯಾಗಳನ್ನು ತಿಳಿಯಿರಿ.

Read Full Story
07:27 PM (IST) Apr 24

Karnataka News Liveಯಶ್ 'ಟಾಕ್ಸಿಕ್' ಬಳಗ ಸೇರಿದ ಹಾಲಿವುಡ್ ಸಾಹಸ ನಿರ್ದೇಶಕ - ರಾಕಿಂಗ್ ಸ್ಟಾರ್ ಗಡ್ಡದ ಬಗ್ಗೆ ಹೇಳಿದ್ದೇನು?

ಯಶ್ ನಟನೆಯ 'ಟಾಕ್ಸಿಕ್' ಚಿತ್ರತಂಡಕ್ಕೆ ಸೇರ್ಪಡೆಯಾಗಿರುವ ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಜೆಜೆ ಪೆರ್ರಿ, ಇಡೀ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

Read Full Story
07:14 PM (IST) Apr 24

Karnataka News LiveSBI Report - ಈ UPI ಯುಗದಲ್ಲೂ ಭಾರತೀಯರು ಹೆಚ್ಚು 'ಕ್ಯಾಶ್' ಇಟ್ಟುಕೊಳ್ಳಲು ಕಾರಣವೇನು? ಈ ಸೀಕ್ರೆಟ್ ರಿವೀಲ್ ಆಯ್ತು!

ಭಾರತದಲ್ಲಿ ಯುಪಿಐ ಬಳಕೆ ಗಣನೀಯವಾಗಿ ಹೆಚ್ಚಾಗಿದ್ದರೂ, ಜನರು ಕೈಯಲ್ಲಿ ನಗದು ಇಟ್ಟುಕೊಳ್ಳುವುದು ಕೂಡ ಹೆಚ್ಚಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಿಡುಗಡೆ ಮಾಡಿದ ಇತ್ತೀಚಿನ ವರದಿ ಹೇಳಿದೆ.SBI Report Reveals Why Indians Prefer Cash Despite UPI Boom to know here.

Read Full Story
07:12 PM (IST) Apr 24

Karnataka News Liveಬೆಂಗಳೂರು ಉದ್ಯಮಿಗೆ ₹1.81 ಕೋಟಿ ವಂಚಿಸಿದ ಸಿಎ! ನಕಲಿ ಚಲನ್‌ಗಳನ್ನು ಸೃಷ್ಟಿಸಿ ಹಣ ದೋಚಿದ

ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಅವರ ಚಾರ್ಟರ್ಡ್ ಅಕೌಂಟೆಂಟ್ ₹1.81 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿ ಹೆಸರಿನಲ್ಲಿ ನಕಲಿ ಚಲನ್‌ಗಳನ್ನು ಸೃಷ್ಟಿಸಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story
07:06 PM (IST) Apr 24

Karnataka News Liveನಿಜವಾದ ಪ್ರೀತಿ ಎಂದ್ರೆ ಇದೇನೆ ಎನ್ನುತ್ತಲೇ ಭಾವಿ ಪತ್ನಿ ಬಗ್ಗೆ Chandan Shetty ರಿವೀಲ್​

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರಿಂದ ವಿಚ್ಛೇದನ ಪಡೆದ ನಂತರ ಇದೀಗ ತಮ್ಮ ಎರಡನೇ ಮದುವೆ ಹಾಗೂ ನಿಜವಾದ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಮುಂದಿನ ವರ್ಷ ಮದುವೆಯಾಗುವ ಯೋಜನೆ ಇದ್ದು, ಈ ಬಾರಿ ತರಾತುರಿ ಮಾಡದೆ, ಪೋಷಕರ ಒಪ್ಪಿಗೆಯೊಂದಿಗೆ ಹೊಸ ಜೀವನ ಆರಂಭಿಸುವುದಾಗಿ ತಿಳಿಸಿದ್ದಾರೆ.
Read Full Story
06:53 PM (IST) Apr 24

Karnataka News LiveDr Raj Bday - 3 ಇಡ್ಲಿ ಕೊಡ್ತಾರೆಂದು ಚಿತ್ರ ಒಪ್ಪಿಕೊಂಡಿದ್ದ ಡಾ.ರಾಜ್​ - ಅ ಘಟನೆ ನೆನೆದ ನಟ ರಾಘವೇಂದ್ರ

ವರನಟ ಡಾ.ರಾಜ್‌ಕುಮಾರ್ ಅವರ 97ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಮಗ ರಾಘವೇಂದ್ರ ರಾಜ್‌ಕುಮಾರ್ ಒಂದು ನೋವಿನ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರು ತಮ್ಮ ಕಡುಬಡತನದ ದಿನಗಳಲ್ಲಿ ಕೇವಲ ಒಂದು ಹೆಚ್ಚುವರಿ ಇಡ್ಲಿಗಾಗಿ ಸಿನಿಮಾ ಒಪ್ಪಿಕೊಂಡಿದ್ದರು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
Read Full Story
06:43 PM (IST) Apr 24

Karnataka News Liveಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡದಿರುವುದರಿಂದ ನಿರಾಸೆಯಾಗಿದೆ - ಸಂಸದ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಆಗ ಸಕಾರಾತ್ಮವಾಗಿ ಸ್ಪಂದನೆ ಮಾಡಿದ್ದ ಅವರು, ಬಜೆಟ್‌ನಲ್ಲಿ ಘೋಷಣೆ ಮಾಡದ್ದಕ್ಕೆ ನಿರಾಸೆಯಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

Read Full Story
06:04 PM (IST) Apr 24

Karnataka News Liveಬೀದರ್‌ನಲ್ಲಿ ಅಚ್ಚರಿ - ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ, ಅಮ್ಮನಿಗಿದು ಎರಡನೇ ಹೆರಿಗೆ

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಬಸಮ್ಮ ಎಂಬ ಮಹಿಳೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಮ್ಮ ಎರಡನೇ ಹೆರಿಗೆಯಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಸದ್ಯ ನವಜಾತ ಶಿಶುಗಳನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Read Full Story
05:38 PM (IST) Apr 24

Karnataka News Liveಝಿರೋಧಾ ನಿರ್ಧಾರಕ್ಕೆ ಬೆಚ್ಚಿಬಿದ್ದ ಜನ, ಝಿರೋ1 ಕಂಪನಿ ಮುಚ್ಚಿದ ಕಾಮತ್ ಬ್ರದರ್ಸ್

ಝಿರೋಧಾ ನಿರ್ಧಾರಕ್ಕೆ ಬೆಚ್ಚಿಬಿದ್ದ ಜನ, ಝಿರೋ1 ಕಂಪನಿ ಮುಚ್ಚಿದ ಕಾಮತ್ ಬ್ರದರ್ಸ್, ಷೇರುಮಾರುಕಟ್ಟೆಯ ಬ್ರೋಕರೇಜ್ ಕಂಪನಿ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಕಾಮತ್ ಸಹೋದರರು ಇದೀಗ ಝೀರೋ1 ಕಂಪನಿ ಸ್ಥಗಿತಗೊಳಿಸಿದ್ದಾರೆ.

Read Full Story
05:23 PM (IST) Apr 24

Karnataka News Liveಧ್ರುವ ಸರ್ಜಾ 'ಕೆಡಿ' ಸಿನಿಮಾದ ನಿಜವಾದ ಹೀರೋ ಕೆವಿಎನ್ - ಜೋಗಿ ಪ್ರೇಮ್‌ ಹೇಳಿದ್ದೇನು?

ಪ್ರತಿಯೊಬ್ಬ ನಿರ್ಮಾಪಕರು ಸಿನಿಮಾ ಮಾಡುವಾಗ ಇಂತಿಷ್ಟು ಸಮಯ, ಬಜೆಟ್ ಇಟ್ಟಿರುತ್ತಾರೆ. ಆದರೆ ಈ ಚಿತ್ರಕ್ಕೆ ಎಲ್ಲವೂ ಮೀರಿ ಹೋಗಿದೆ. ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕರಾದ ಕೆ. ವೆಂಕಟ್‌ ನಾರಾಯಣ್‌ ಹೀಗೆ ಹೇಳಿದ್ದು ಜೋಗಿ ಪ್ರೇಮ್‌.

Read Full Story
05:10 PM (IST) Apr 24

Karnataka News Liveಯುವ ರಾಜ್‌ಕುಮಾರ್‌ ಜನ್ಮದಿನದಂದೇ ಶ್ರೀದೇವಿ ಕಟುನುಡಿ - ಮಹಿಳಾ ಹಕ್ಕುಗಳ ಬಗ್ಗೆ ಗಟ್ಟಿಯಾದ ಮಾತು

ಯುವ ರಾಜ್‌ಕುಮಾರ್‌ ಜನ್ಮದಿನದಂದೇ ಅವರ ಪತ್ನಿ ಶ್ರೀದೇವಿ ಭೈರಪ್ಪ ಮೌನ ಮುರಿದಿದ್ದಾರೆ. ಯುವ ಜೊತೆಗಿನ ಆಪ್ತ ಕ್ಷಣಗಳ ಫೋಟೋ ಹಂಚಿಕೊಂಡು ಅವರಿಗೆ ಟಾಂಗ್‌ ಕೊಡುವಂತೆ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ..

Read Full Story
05:02 PM (IST) Apr 24

Karnataka News Liveಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಪ್ರಕರಣ, ಆರೋಪಿ ತಿಂಗಳಿಗೆ 75,000 ರೂ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಪುತ್ತೂರಿನಲ್ಲಿ ಯುವತಿಯನ್ನು ಪ್ರೀತಿಸಿ ವಂಚಿಸಿದ ಪ್ರಕರಣದಲ್ಲಿ, ಕರ್ನಾಟಕ ಹೈಕೋರ್ಟ್ ಆರೋಪಿ ಕೃಷ್ಣ ಜೆ. ರಾವ್‌ಗೆ ತಿಂಗಳಿಗೆ 75 ಸಾವಿರ ರೂಪಾಯಿ ಮಾಸಿಕ ಪರಿಹಾರ ಪಾವತಿಸಲು ಆದೇಶಿಸಿದೆ. ನ್ಯಾಯಾಲಯವು ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರಾಕರಿಸಿದ್ದು, ಸಂತ್ರಸ್ತೆ ಮತ್ತು ಮಗುವಿನ ಹಿತದೃಷ್ಟಿಯಿಂದ ಷರತ್ತುಬದ್ಧ ಮಧ್ಯಂತರ ತಡೆ ನೀಡಿದೆ.
Read Full Story
04:49 PM (IST) Apr 24

Karnataka News Liveಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನಲ್ಲಿ ಜಯದೇವ 100 ಹಾಸಿಗೆ ಕಾರ್ಡಿಯಾಕ್ ಹಬ್ ಘಟಕ ಉದ್ಘಾಟನೆ

ಶುಕ್ರವಾರ ಪಶ್ಚಿಮ ಬೆಂಗಳೂರಿನ ಗೋವಿಂದರಾಜನಗರದಲ್ಲಿ 100 ಹಾಸಿಗೆಗಳ ಜಯದೇವ ಘಟಕವನ್ನು ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜೊತೆ ವಿಕಾಸ ಸೌಧದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

Read Full Story
04:17 PM (IST) Apr 24

Karnataka News Liveವರನಟ ಡಾ.ರಾಜ್‌ಕುಮಾರ್‌ ವ್ಯಕ್ತಿತ್ವ, ಚಿತ್ರಗಳಿಂದ ಕಲಿಯಬಹುದಾದ 10 ಪಾಠಗಳು

ಅಣ್ಣಾವ್ರು ಡಾ.ರಾಜ್‌ಕುಮಾರ್‌ ಅವರ 97ನೇ ಹುಟ್ಟುಹಬ್ಬ ಇಂದು. (ಏಪ್ರಿಲ್ 24) ಈ ಸಂದರ್ಭದಲ್ಲಿ ಅವರ ವ್ಯಕ್ತಿತ್ವ, ಸಿನಿಮಾಗಳಿಂದ ಈ ಪೀಳಿಗೆಯ ಚಿತ್ರರಂಗ ಏನೇನು ಕಲಿಯಬಹುದು ಎಂಬುದನ್ನು ನೋಡೋಣ.

Read Full Story
03:20 PM (IST) Apr 24

Karnataka News LiveTCS 10K ಓಟ - ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ, ಭಾನುವಾರ ಬೆಳಗ್ಗೆ 3 ಗಂಟೆಯಿಂದಲೇ ರೈಲು ಸಂಚಾರ

ಬೆಂಗಳೂರಿನಲ್ಲಿ ನಡೆಯಲಿರುವ TCS World 10K ಓಟದ ಪ್ರಯುಕ್ತ, ಭಾನುವಾರ ಮೆಟ್ರೋ ಸೇವೆಯನ್ನು ಮುಂಜಾನೆ 3 ಗಂಟೆಯಿಂದಲೇ ಆರಂಭಿಸಲು BMRCL ನಿರ್ಧರಿಸಿದೆ. ನಗರದ ನಾಲ್ಕೂ ದಿಕ್ಕುಗಳಿಂದ ಓಟಗಾರರ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಆರಂಭದಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ.
Read Full Story
02:41 PM (IST) Apr 24

Karnataka News Liveಪೋಷಕರಿಗೆ ಸಜೆಯಾದ ಬೇಸಿಗೆ ರಜೆ - ಆಟವಾಡುತ್ತಿದ್ದಾಗ ಜೋಕಾಲಿ ಕುಣಿಕೆ ಬಿಗಿದು ಬಾಲಕಿ ಸಾವು

ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ, ಬೇಸಿಗೆ ರಜೆ ಕಳೆಯಲು ಚಿಕ್ಕಮ್ಮನ ಮನೆಗೆ ಹೋಗಿದ್ದ 9 ವರ್ಷದ ಬಾಲಕಿ ಪ್ರಣಮ್ಯ, ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕುಣಿಕೆ ಬಿಗಿದು ಸಾವನ್ನಪ್ಪಿದ್ದಾಳೆ. ರೂಮಿನ ಬಾಗಿಲು ಹಾಕಿಕೊಂಡು ಆಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

Read Full Story
01:38 PM (IST) Apr 24

Karnataka News Liveಕರ್ನಾಟಕದಲ್ಲಿ ಮೇ 5ರ ನಂತರ ಕಾಂಗ್ರೆಸ್‌ ಸರ್ಕಾರ ಪತನ, 'ರಾಷ್ಟ್ರಪತಿ ಆಳ್ವಿಕೆ' ಜಾರಿ; ಶಾಸಕ ಸುರೇಶ್ ಗೌಡ ಹೊಸ ಬಾಂಬ್!

ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರು ಮೇ 5ರ ನಂತರ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಂತರಿಕ ಕಚ್ಚಾಟದಿಂದ ಪತನಗೊಂಡು, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಯಿದೆ ಎಂದು ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
Read Full Story