MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಉತ್ತರ ಕರ್ನಾಟಕ ಜನರಿಗೆ ಸಿಹಿ ಸುದ್ದಿ: ಬೆಳಗಾವಿ - ಚರ್ಲಪಲ್ಲಿ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಖಾಯಂ!

ಉತ್ತರ ಕರ್ನಾಟಕ ಜನರಿಗೆ ಸಿಹಿ ಸುದ್ದಿ: ಬೆಳಗಾವಿ - ಚರ್ಲಪಲ್ಲಿ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಖಾಯಂ!

ಉತ್ತರ ಕರ್ನಾಟಕ ಮತ್ತು ತೆಲಂಗಾಣ ನಡುವಿನ ಸಂಪರ್ಕವನ್ನು ಬಲಪಡಿಸಲು, ಚರ್ಲಪಲ್ಲಿ – ಬೆಳಗಾವಿ ನಡುವೆ ಸಂಚರಿಸುತ್ತಿದ್ದ ವಿಶೇಷ ವಾರಕ್ಕೊಮ್ಮೆ ಎಕ್ಸ್‌ಪ್ರೆಸ್ ರೈಲನ್ನು ರೈಲ್ವೆ ಮಂಡಳಿ ಖಾಯಂಗೊಳಿಸಿದೆ. ಈ ರೈಲು (17075/17076) ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದೆ.

1 Min read
Author : Sathish Kumar KH
Published : May 14 2026, 08:21 PM IST
Share this Photo Gallery
  • FB
  • TW
  • Linkdin
  • Whatsapp
15
ಚರ್ಲಪಲ್ಲಿ – ಬೆಳಗಾವಿ – ಚರ್ಲಪಲ್ಲಿ ರೈಲು ಖಾಯಂ
Image Credit : Asianet News

ಚರ್ಲಪಲ್ಲಿ – ಬೆಳಗಾವಿ – ಚರ್ಲಪಲ್ಲಿ ರೈಲು ಖಾಯಂ

ಬೆಳಗಾವಿ/ಹುಬ್ಬಳ್ಳಿ (ಮೇ 14): ಉತ್ತರ ಕರ್ನಾಟಕದ ಜನತೆಗೆ ತೆಲಂಗಾಣ ರಾಜಧಾನಿ ಹೈದರಾಬಾದ್ ಸಮೀಪದ ಚರ್ಲಪಲ್ಲಿಗೆ ಸಂಚರಿಸಲು ಈಗ ರೈಲ್ವೆ ಇಲಾಖೆಯು ಸುಗಮ ಹಾದಿ ಮಾಡಿಕೊಟ್ಟಿದೆ. ಇದುವರೆಗೆ ವಿಶೇಷ ರೈಲಾಗಿ ಸಂಚರಿಸುತ್ತಿದ್ದ ಚರ್ಲಪಲ್ಲಿ – ಬೆಳಗಾವಿ – ಚರ್ಲಪಲ್ಲಿ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು (Weekly Express) ರೈಲ್ವೆ ಮಂಡಳಿಯು ಅಧಿಕೃತವಾಗಿ ಖಾಯಂಗೊಳಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದಾಗಿ ಉಭಯ ರಾಜ್ಯಗಳ ನಡುವಿನ ರೈಲು ಸಂಪರ್ಕ ಮತ್ತಷ್ಟು ಬಲಗೊಂಡಿದೆ.

Add Asianetnews Kannada as a Preferred SourcegooglePreferred
25
ರೈಲು ಸಂಖ್ಯೆ ಮತ್ತು ಸಂಚಾರದ ವಿವರ:
Image Credit : Indian Railway

ರೈಲು ಸಂಖ್ಯೆ ಮತ್ತು ಸಂಚಾರದ ವಿವರ:

ರೈಲ್ವೆ ಇಲಾಖೆಯ ಮಾಹಿತಿಯ ಪ್ರಕಾರ, ರೈಲು ಸಂಖ್ಯೆ 17075 (ಚರ್ಲಪಲ್ಲಿ - ಬೆಳಗಾವಿ) ಮೇ 16, 2026 ರಿಂದ ಜಾರಿಗೆ ಬರುವಂತೆ ವಾರಕ್ಕೊಮ್ಮೆ ಸಂಚರಿಸಲಿದೆ. ಹಾಗೆಯೇ, ರೈಲು ಸಂಖ್ಯೆ 17076 (ಬೆಳಗಾವಿ - ಚರ್ಲಪಲ್ಲಿ) ಮೇ 17, 2026 ರಿಂದ ಖಾಯಂ ಆಗಿ ಸಂಚರಿಸಲಿದೆ. ಈ ರೈಲು ಒಟ್ಟು 24 ಬೋಗಿಗಳನ್ನು (Coaches) ಹೊಂದಿರಲಿದ್ದು, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Related Articles

Related image1
ಶಿವಮೊಗ್ಗ ಜನತೆಯ ಬೇಡಿಕೆ ಈಡೇರಿಕೆ: ಯಶವಂತಪುರ-ತಾಳಗುಪ್ಪ ರೈಲು ಪ್ರಯಾಣಿಕರಿಗೆ ಹ್ಯಾಪಿ ನ್ಯೂಸ್
Related image2
ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಿಸಿದ ಭಾರತೀಯ ರೈಲ್ವೇ
35
ಪ್ರಮುಖ ನಿಲ್ದಾಣಗಳು ಮತ್ತು ವೇಳಾಪಟ್ಟಿ:
Image Credit : Indian Railway

ಪ್ರಮುಖ ನಿಲ್ದಾಣಗಳು ಮತ್ತು ವೇಳಾಪಟ್ಟಿ:

ಈ ರೈಲು ಕರ್ನಾಟಕದ ಪ್ರಮುಖ ನಗರಗಳಾದ ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ ಮತ್ತು ಲೋಂಡಾ ಮಾರ್ಗವಾಗಿ ಸಂಚರಿಸುತ್ತದೆ. ಅಲ್ಲದೆ, ಧಾರ್ಮಿಕ ಕೇಂದ್ರವಾದ ಮಂತ್ರಾಲಯಕ್ಕೂ ಈ ರೈಲಿನ ಸಂಪರ್ಕ ಇರುವುದರಿಂದ ಭಕ್ತಾದಿಗಳಿಗೆ ಭಾರಿ ಅನುಕೂಲವಾಗಲಿದೆ.

45
ರೈಲು ಹೊರಡುವ-ತಲುಪುವ ಸಮಯ
Image Credit : Getty

ರೈಲು ಹೊರಡುವ-ತಲುಪುವ ಸಮಯ

ಚರ್ಲಪಲ್ಲಿಯಿಂದ ಬೆಳಗಾವಿಗೆ (17075): ಸಂಜೆ 4:00 ಗಂಟೆಗೆ ಚರ್ಲಪಲ್ಲಿಯಿಂದ ಹೊರಟು, ಮರುದಿನ ಬೆಳಗ್ಗೆ 10:30ಕ್ಕೆ ಬೆಳಗಾವಿ ತಲುಪಲಿದೆ.

ಬೆಳಗಾವಿಯಿಂದ ಚರ್ಲಪಲ್ಲಿಗೆ (17076): ಮಧ್ಯಾಹ್ನ 1:00 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗ್ಗೆ 08:45ಕ್ಕೆ ಚರ್ಲಪಲ್ಲಿ ತಲುಪಲಿದೆ.

55
ಪ್ರಯಾಣಿಕರಿಗೆ ಅನುಕೂಲಗಳು:
Image Credit : Asianet News

ಪ್ರಯಾಣಿಕರಿಗೆ ಅನುಕೂಲಗಳು:

ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿ ಭಾಗದ ಜನರು ಹೈದರಾಬಾದ್ ಕಡೆಗೆ ಹೋಗಲು ಈ ರೈಲು ಅತ್ಯಂತ ಸಹಕಾರಿಯಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ಸಂಚರಿಸುವವರಿಗೆ ಇದು ವರದಾನವಾಗಲಿದೆ. ವ್ಯಾಪಾರಸ್ಥರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಈ ರೈಲಿನ ಖಾಯಂ ಸೇವೆಯಿಂದಾಗಿ ನಿರಂತರವಾಗಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ದೊರೆಯಲಿದೆ.

ಪ್ರಯಾಣಿಕರು ರೈಲಿನ ಹೆಚ್ಚಿನ ವಿವರಗಳು ಮತ್ತು ನಿಖರವಾದ ವೇಳಾಪಟ್ಟಿಗಾಗಿ ಅಧಿಕೃತ ವೆಬ್‌ಸೈಟ್ www.enquiry.indianrail.gov.in ಅಥವಾ NTES ಆಪ್ ಅನ್ನು ಬಳಸಬಹುದು. ನೈಋತ್ಯ ರೈಲ್ವೆಯ ಈ ಜನಸ್ನೇಹಿ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತೀಯ ರೈಲ್ವೆ
ರೈಲು
ಬೆಳಗಾವಿ
ಧಾರವಾಡ

Latest Videos
Recommended Stories
Recommended image1
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ನಾಳೆ ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Recommended image2
ಕೆಸಿ ವೇಣುಗೋಪಾಲ್‌ಗೆ ತಪ್ಪಿದ ಕೇರಳ ಸಿಎಂ ಪಟ್ಟ: ಕೈ ಹೈಕಮಾಂಡ್ ವಿರುದ್ಧ ದಿನೇಶ್ ಗುಂಡೂರಾವ್ ಪತ್ನಿ ಟಬುರಾವ್ ಆಕ್ರೋಶ!
Recommended image3
ರಾಜ್ಯದ 5.55 ಕೋಟಿ ಮತದಾರರೇ ಗಮನಿಸಿ: ಜೂನ್ 30 ರಿಂದ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯ ಆರಂಭ!
Related Stories
Recommended image1
ಶಿವಮೊಗ್ಗ ಜನತೆಯ ಬೇಡಿಕೆ ಈಡೇರಿಕೆ: ಯಶವಂತಪುರ-ತಾಳಗುಪ್ಪ ರೈಲು ಪ್ರಯಾಣಿಕರಿಗೆ ಹ್ಯಾಪಿ ನ್ಯೂಸ್
Recommended image2
ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಿಸಿದ ಭಾರತೀಯ ರೈಲ್ವೇ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved