12:01 AM (IST) May 02

ಛತ್ರಪತಿ ಶಿವಾಜಿ ಮಹಾರಾಜರ ರೂಪಕಗಳ ಭವ್ಯ ಮೆರವಣಿಗೆಗೆ ಚಾಲನೆ

ಛತ್ರಪತಿ ಶಿವಾಜಿ ಮಹಾರಾಜರ ರೂಪಕಗಳ ಭವ್ಯ ಮೆರವಣಿಗೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಶಿವಾಜಿ ಇತಿಹಾಸದ ಗತವೈಭವ ಬಿಂಬಿಸುವ ಐತಿಹಾಸಿಕ ಪಾರಂಪರಿಕ ಮೆರವಣಿಗೆಗೆ ಬೆಳಗಾವಿ ನರಗುಂದಕರ್ ಬಾವಿ ಚೌಕ್ ಗಲ್ಲಿಯಲ್ಲಿ ಅದ್ಧೂರಿ ಚಾಲನೆ ದೊರಕಿದೆ. 

ಪೂರ್ತಿ ಓದಿ
11:39 PM (IST) May 01

ಸುಹಾಸ್ ಶೆಟ್ಟಿ ಹತ್ಯೆ, ಕಾಂಗ್ರೆಸ್ ಸರ್ಕಾರದ ವಿಫಲತೆ: ಯತ್ನಾಳ ವಾಗ್ದಾಳಿ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿರುವುದು ಆಘಾತ ಹಾಗೂ ದಿಗ್ಭ್ರಮೆ ತಂದಿದೆ.

ಪೂರ್ತಿ ಓದಿ
11:33 PM (IST) May 01

GST Collection: ಏಪ್ರಿಲ್‌ನಲ್ಲಿ ಭರ್ಜರಿ ಜಿಎಸ್‌ಟಿ ಕಲೆಕ್ಷನ್‌, ದೇಶದ ಖಜಾನೆ ಭರ್ತಿ!

ಏಪ್ರಿಲ್ 2025 ರಲ್ಲಿ GST ಕಲೆಕ್ಷನ್ ಹೊಸ ದಾಖಲೆ ನಿರ್ಮಿಸಿದೆ. ಸರ್ಕಾರದ ಖಜಾನೆಗೆ ₹2.37 ಲಕ್ಷ ಕೋಟಿ ಬಂದಿದ್ದು, ಕಳೆದ ವರ್ಷಕ್ಕಿಂತ 12.6% ಹೆಚ್ಚಾಗಿದೆ. ಆಮದು ಮಾಡಿದ ವಸ್ತುಗಳಿಂದಲೂ GST ಕಲೆಕ್ಷನ್ ಹೆಚ್ಚಳ ಕಂಡಿದೆ.

ಪೂರ್ತಿ ಓದಿ
11:14 PM (IST) May 01

ಜಾತಿ ಸಮೀಕ್ಷೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದೆ: ಸಚಿವ ಕೃಷ್ಣ ಬೈರೇಗೌಡ

ಜಾತಿ ಸಮೀಕ್ಷೆ ಕುರಿತು ಈಗಾಗಲೇ ಕ್ಯಾಬಿನೆಟ್‌ನಲ್ಲಿ ಒಂದೂ ಸುತ್ತು ಚರ್ಚೆ ಆಗಿದೆ. ಎಲ್ಲರ ಅಭಿಪ್ರಾಯ ಪಡೆದು ಸಿಎಂ ಸಿದ್ದರಾಮಯ್ಯ ಚರ್ಚೆ ಮುಂದುವರೆಸುತ್ತಾರೆ.

ಪೂರ್ತಿ ಓದಿ
11:08 PM (IST) May 01

ಪ್ರೇಮ ನಿವೇದನೆ ಮಾಡಿದ ಧನುಶ್ರೀ; ಮಂಕುಬೂದಿ ಎರಚಿದ ಬಿಗ್‌ ಬಾಸ್‌ ಕನ್ನಡ ಸ್ಪರ್ಧಿ ಮೇಲೆ ವೀಕ್ಷಕರು ಗರಂ!

ಬಿಗ್‌ ಬಾಸ್‌ ಖ್ಯಾತಿಯ ಧನುಶ್ರೀ ಅವರು ಭರತ್‌ಗೆ ಫ್ರಾಂಕ್‌ ಪ್ರಪೋಸ್‌ ಮಾಡಿದ ವಿಡಿಯೋ ವೈರಲ್‌ ಆಗಿದ್ದು, ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಡೆಕೋರೇಶನ್‌, ಭರತ್‌ ಪ್ರತಿಕ್ರಿಯೆ ಹಾಗೂ ಧನುಶ್ರೀ ವಿವರಣೆಯನ್ನು ಒಳಗೊಂಡಿದೆ.

ಪೂರ್ತಿ ಓದಿ
10:38 PM (IST) May 01

ಭಾರತದಲ್ಲಿ ಪ್ರತಿಯೊಬ್ಬರು ಸಂಗೀತ ಕಲಿತಿದ್ದರೆ ದೇಶ ವಿಭಜನೆ ಆಗ್ತಿರಲಿಲ್ಲ: ಬಡೇ ಗುಲಾಂ ಅಲಿಖಾನ್‌

ಮುಘಲ್ ಎ ಆಜಮ್ ಚಿತ್ರದ ಪ್ರೇಮ್ ಜೋಗನ್ ಬನ್ನೆ ಹಾಡಿನ ಹಿಂದಿನ ರೋಚಕ ಕಥೆ. ಬಡೇ ಗುಲಾಮ್ ಅಲಿ ಖಾನ್ ಅವರ ಹಾಡಿನ ಸಂಭಾವನೆ, ಷರತ್ತುಗಳು ಮತ್ತು ನೌಷಾದ್ ಅವರ ಪಟ್ಟು ಹಿಡಿದ ಪ್ರಯತ್ನಗಳನ್ನು ಒಳಗೊಂಡಿದೆ.

ಪೂರ್ತಿ ಓದಿ
10:37 PM (IST) May 01

'ಶೇ.100ರಷ್ಟು ಹಣ್ಣಿನ ಜ್ಯೂಸ್‌..' ಡಾಬರ್‌ ಕಂಪನಿಯ ಜಾಹೀರಾತಿಗೆ ಕೇಂದ್ರ ಆಕ್ಷೇಪ

FSSAI ದೆಹಲಿ ಹೈಕೋರ್ಟ್‌ಗೆ ಹಣ್ಣಿನ ರಸಗಳನ್ನು "100% ಹಣ್ಣಿನ ರಸ" ಎಂದು ಜಾಹೀರಾತು ಮಾಡುವುದು ದಾರಿತಪ್ಪಿಸುವ ಮಾರ್ಕೆಟಿಂಗ್ ಅಭ್ಯಾಸ ಎಂದು ತಿಳಿಸಿದೆ. 'ಶೇಕಡಾ 100' ನಂತಹ ಸಂಖ್ಯಾತ್ಮಕ ಹಕ್ಕುಗಳ ಬಳಕೆಯು ಗ್ರಾಹಕರನ್ನು ಗೊಂದಲಕ್ಕೀಡುಮಾಡುತ್ತದೆ ಮತ್ತು ನ್ಯಾಯಯುತ ಬಹಿರಂಗಪಡಿಸುವಿಕೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು FSSAI ಹೇಳಿದೆ.

ಪೂರ್ತಿ ಓದಿ
10:30 PM (IST) May 01

ವಿದೇಶಿ ಪ್ರವಾಸಿಗನ ಹೇರ್ ಕಟ್‌ಗೆ ₹1800 ಕೇಳಿ ಭಾರತದ ಮರ್ಯಾದೆ ಕಳೆದ ಕ್ಷೌರಿಕ!

ವಿದೇಶಿ ಪ್ರವಾಸಿಗನಿಗೆ ಹೇರ್ ಕಟ್ ಮಾಡಲು ₹1800 ಕೇಳಿದ ಘಟನೆ ವೈರಲ್ ಆಗಿದೆ. ಬ್ರಿಟಿಷ್ ಪ್ರವಾಸಿಗ ಜಾರ್ಜ್ ಬಕ್ಲಿ ಭಾರತದಲ್ಲಿ ಹೇರ್ ಕಟಿಂಗ್ ಸಲೂನ್‌ನಲ್ಲಿ ಈ ಅನುಭವಕ್ಕೆ ಒಳಗಾಗಿದ್ದು, ಸ್ಥಳೀಯರಿಗಿಂತ ಹೆಚ್ಚಿನ ಹಣ ಕೇಳಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
09:59 PM (IST) May 01

ಕರ್ನಾಟಕದಲ್ಲಿ ಮತ್ತೊಬ್ಬ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆ

ಮಂಗಳೂರಿನಲ್ಲಿ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ ಮೇಲೆ ತಲವಾರು ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಹಲವು ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಪೂರ್ತಿ ಓದಿ
08:57 PM (IST) May 01

ಕೃಷಿ ವಿವಿಗೆ ಜೆಡಿಎಸ್ ವಿರೋಧ ಲೆಕ್ಕಕ್ಕಿಲ್ಲ: ಸಚಿವ ಚಲುವರಾಯಸ್ವಾಮಿ

ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ಮತ್ತು ರಾಜ್ಯಪಾಲರಿಂದ ಅನುಮೋದನೆ ದೊರಕಿದೆ. ಇಲ್ಲಿ ಜೆಡಿಎಸ್ ಶಾಸಕರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಅದು ಲೆಕ್ಕಕ್ಕೆ ಇಲ್ಲದಂತಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. 

ಪೂರ್ತಿ ಓದಿ
08:49 PM (IST) May 01

ಸಿದ್ದರಾಮಯ್ಯನವರ ಒಳ್ಳೆಯ ಕಾರ್ಯ ಸಹಿಸಲಾಗ್ತಿಲ್ಲ: ಸಚಿವ ಶಿವರಾಜ ತಂಗಡಗಿ

ಸಿಎಂ ಸಿದ್ದರಾಮಯ್ಯ ಅವರ ಒಳ್ಳೆಯ ಕಾರ್ಯವನ್ನು ಕೆಲವರಿಗೆ ತಡೆದುಕೊಳ್ಳಲಾಗ್ತಿಲ್ಲ, ಆದ ಕಾರಣ ಅವರ ವಿರುದ್ಧ ಟೀಕೆ ಮಾಡ್ತಿದ್ದಾರೆ. ದೇಶಭಕ್ತಿ ಬಗ್ಗೆ ಸಿಎಂ ಅವರು ಮತ್ತೊಬ್ಬರಿಂದ ತಿಳಿದುಕೊಂಡು ಮಾತಾಡುವಂತದ್ದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. 

ಪೂರ್ತಿ ಓದಿ
08:48 PM (IST) May 01

WAVES 2025: ಭಾರತದ ಕಂಟೆಂಟ್‌ ಕ್ರಿಯೇಟರ್‌ಗೆ 21 ಸಾವಿರ ಕೋಟಿ ಪಾವತಿ ಮಾಡಿರುವ YouTube

ಭಾರತದಲ್ಲಿ ಮುಂದಿನ ಪೀಳಿಗೆಯ ಕ್ರಿಯೇಟರ್‌ಗಳನ್ನು ಬೆಂಬಲಿಸಲು YouTube ಬದ್ಧವಾಗಿದೆ ಎಂದು ಸಿಇಒ ನೀಲ್‌ ಮೋಹನ್ ಹೇಳಿದ್ದಾರೆ.

ಪೂರ್ತಿ ಓದಿ
08:48 PM (IST) May 01

ಯೂನಿಯನ್ ಬ್ಯಾಂಕ್‌ 500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ ₹85 ಸಂಬಳ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 20, 2025 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ
08:39 PM (IST) May 01

80% ಮಹಿಳೆಯರು ಸಿಂಧೂರ ತಪ್ಪಾಗಿ ಹಚ್ತಾರೆ! ಸರಿಯಾದ ವಿಧಾನ ಹೇಗೆ? ಏನಿದರ ಮಹತ್ವ?

ಸಿಂಧೂರವನ್ನು ಬೈತಲೆಗೆ ಹಚ್ಚುವಾಗ ಹಲವಾರು ಮಹಿಳೆಯರು ತಪ್ಪಾದ ಕ್ರಮ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಸರಿಯಾದ ಕ್ರಮ ಯಾವುದು? ಇಲ್ಲಿದೆ ನೋಡಿ.. 

ಪೂರ್ತಿ ಓದಿ
08:14 PM (IST) May 01

ರಾಜ್ಯದಲ್ಲಿ ಮೇ 9ರಂದು ಜಾತಿಗಣತಿ ಅಂಗೀಕಾರ ನಿರ್ಣಯ; ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೇ 9 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹಿಂದಿನ ಸರ್ಕಾರ ನಡೆಸಿದ ಸಮೀಕ್ಷೆಯ ವರದಿಯನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪೂರ್ತಿ ಓದಿ
07:40 PM (IST) May 01

ಕಾಫಿನಾಡಿನಲ್ಲಿ ಮಹಿಳೆಯ ಸಾವು ಸಹಜ ಅಲ್ಲ: ಸಾವಿನ ರಹಸ್ಯವನ್ನು ಭೇದಿಸಿದ ಪೊಲೀಸರು!

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳೆ ಸಾವು ಸಹಜ ಅಲ್ಲ ಕೊಲೆ ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. 

ಪೂರ್ತಿ ಓದಿ
07:33 PM (IST) May 01

ಭಾರತದ ಬಾಂಬ್‌ ದಾಳಿಯ ಭಯ, ಖೈಬರ್ ಪಖ್ತುಂಖ್ವಾದಲ್ಲಿ ಎಮರ್ಜೆನ್ಸಿ ಸೈರನ್‌ ಸ್ಥಾಪಿಸಿದ ಪಾಕ್‌ ಸರ್ಕಾರ!

ಗಡಿಯಲ್ಲಿ ಸಂಭಾವ್ಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಖೈಬರ್ ಪಖ್ತುಂಖ್ವಾ ಸರ್ಕಾರವು 29 ಜಿಲ್ಲೆಗಳಲ್ಲಿ ತುರ್ತು ಎಚ್ಚರಿಕೆ ಸೈರನ್‌ಗಳನ್ನು ಅಳವಡಿಸುವುದಾಗಿ ಘೋಷಿಸಿದೆ. ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ, ಇದರಲ್ಲಿ ಪಾಕಿಸ್ತಾನದ ನೇರ ಕೈವಾಡ ಇರುವುದಾಗಿ ಭಾರತ ಆರೋಪಿಸಿದೆ.

ಪೂರ್ತಿ ಓದಿ
07:32 PM (IST) May 01

ವಿರಾಜಪೇಟೆಯ ನೆಹರು ನಗರದ ಬೃಹತ್ ಬೆಟ್ಟ ಕೊರೆತ: ಭೂಕುಸಿತಕ್ಕೆ ಆಹ್ವಾನ

ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಭೂಕುಸಿತ, ಪ್ರವಾಹ ಸಾಮಾನ್ಯ ವಿಷಯಗಳಂತಾಗಿವೆ. ಮಾನವ ಪ್ರಾಕೃತಿಕ ಮೇಲೆ ಮಾಡಿರುವ ದೌರ್ಜನ್ಯವೇ ಕಾರಣ ಎಂದು ವಿಜ್ಞಾನಿಗಳ ತಂಡ ವರದಿಯನ್ನೂ ನೀಡಿದೆ. 

ಪೂರ್ತಿ ಓದಿ
07:13 PM (IST) May 01

ಕಸಾಪ ಬೈಲಾ ತಿದ್ದುಪಡಿ ವಿರೋಧಿಗಳು ಕೋರ್ಟ್‌ಗೆ ಹೋಗಿ; ಅಧ್ಯಕ್ಷ ಡಾ. ಮಹೇಶ್ ಜೋಶಿ!

ಕನ್ನಡ ಸಾಹಿತ್ಯ ಪರಿಷತ್ತಿನ ನಿಭಂಧನೆ (ಬೈಲಾ) ತಿದ್ದುಪಡಿ ಕುರಿತು ಅಧ್ಯಕ್ಷ ಡಾ. ಮಹೇಶ್ ಜೋಶಿ ಸ್ಪಷ್ಟನೆ ನೀಡಿದ್ದಾರೆ. ತಿದ್ದುಪಡಿ ಅವಶ್ಯಕತೆ, ವಿರೋಧಿಗಳಿಗೆ ಸವಾಲು ಮತ್ತು ಕಾನೂನುಬದ್ಧತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೂರ್ತಿ ಓದಿ
06:54 PM (IST) May 01

ಐಪಿಎಲ್‌ನಲ್ಲಿ ಅಬ್ಬರಿಸಿದ್ರೂ 2026ರ ಟಿ20 ವಿಶ್ವಕಪ್‌ನಲ್ಲಿ ವೈಭವ್‌ ಸೂರ್ಯವಂಶಿಗೆ ಸಿಗೋದಿಲ್ಲ ಚಾನ್ಸ್‌ , ಯಾಕೆ ಗೊತ್ತಾ?

ಗುಜರಾತ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರೂ, ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ.

ಪೂರ್ತಿ ಓದಿ