ವಿದೇಶಿ ಪ್ರವಾಸಿಗ ಜಾರ್ಜ್ ಬಕ್ಲಿಗೆ ಹೇರ್ ಕಟ್ ಮತ್ತು ಶೇವಿಂಗ್‌ಗೆ ₹೧೮೦೦ ಬೇಡಿಕೆ ಇಡಲಾಗಿತ್ತು. ಚೌಕಾಸಿ ನಂತರ ₹೧೨೦೦ ಪಾವತಿಸಿದ ಜಾರ್ಜ್, ಸ್ಥಳೀಯರಿಗೆ ₹೭೦೦-೮೦೦ ವಿಧಿಸಲಾಗುತ್ತದೆ ಎಂದು ತಿಳಿದು ವಂಚನೆಗೊಳಗಾದ ಬಗ್ಗೆ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಹಲವರು ಇದಕ್ಕೆ ಪ್ರತಿಕ್ರಿಯಿಸಿ, ₹೧೦೦-೨೦೦ ಸಾಮಾನ್ಯ ದರ ಎಂದಿದ್ದಾರೆ.
ವಿದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ಕೆಲವರು ವ್ಯಾಪಾರ, ವ್ಯವಹಾರದಲ್ಲಿ ಮೋಸ ವಂಚನೆ ಮಾಡುವುದನ್ನೇ ರೂಢಿ ಮಾಡಿಕೊಂಡಿದ್ದಾರೆ. ಇಲ್ಲೊಬ್ಬ ವಿದೇಶ ಪ್ರವಾಸಿಗನಿಗೆ ಕೇವಲ ಹೇರ್ ಕಟ್ ಮಾಡುವುದಕ್ಕೆ 1,800 ರೂ. ಹಣ ಕೇಳಿದ್ದಾನೆ. ಇದಕ್ಕೆ ವಿದೇಶಿ ಪ್ರವಾಸಿಗನ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಡಿಯೋ ವೈಲ್ ಆಗಿದೆ.
ಭಾರತವನ್ನು ಜಾಗತಿಕ ಮಟ್ಟದಲ್ಲಿ ಅತಿಥಿಗಳನ್ನು ಸತ್ಕಾರ ಮಾಡುವ ರಾಷ್ಟ್ರ ಎಂದು ಹೇಳಲಾಗುತ್ತದೆ. ಆದ್ದರಿಂದ ಭಾರತಕ್ಕೆ ಬರುವ ಬಹುತೇಕ ಪ್ರವಾಸಿಗರನ್ನು ಕೆಲವರು ಅತಿಥಿ ದೇವೋಭವ ಎಂಬಂತೆ ಕಾಣಲಾಗುತ್ತದೆ. ಆದರೆ, ಕೆಲವರು ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಅವರಿಂದ ಹೆಚ್ಚಿನ ಹಣ ವಸೂಲಿ ಮಾಡುವುದಕ್ಕೆ ಮುಂದಾಗುತ್ತಾರೆ. ಈ ಬಗ್ಗೆ ಕೆಲವು ಪ್ರವಾಸಿಗರು ಪ್ರಶ್ನೆ ಮಾಡಿದರೆ, ಮತ್ತೆ ಕೆಲವರು ಕೇಳಿದಷ್ಟು ಹಣ ಕೊಟ್ಟು ಹೋಗುತ್ತಾರೆ. ಆದರೆ, ಇಲ್ಲೊಬ್ಬ ವಿದೇಶಿ ಪ್ರವಾಸಿಗನಿಗೆ ತಲೆಕೂದಲು ಕತ್ತರಿಸಲು (Hair Cut) ಬರೋಬ್ಬರಿ 1,800 ರೂ. ಕೇಳಿದ್ದಾನೆ. ಈ ಬೆಲೆ ಕೇಳಿ ಪ್ರವಾಸಿಗ ಬೆಚ್ಚಿ ಬಿದ್ದಿದ್ದು, ಕಡಿಮೆ ಹಣ ತೆಗೆದುಕೊಳ್ಳುವಂತೆ ಚೌಕಾಸಿ ಮಾಡಿದ್ದಾನೆ.
ಬ್ರಿಟಿಷ್ ಪ್ರವಾಸಿ ವ್ಲಾಗರ್ ಮತ್ತು ಕಂಟೆಂಟ್ ಕ್ರಿಯೇಟರ್ ಜಾರ್ಜ್ ಬಕ್ಲಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಆ ಪ್ರವಾಸದ ಸಮಯದಲ್ಲಿ, ಹೇರ್ ಕಟಿಂಗ್ ಸಲೂನ್‌ಗೆ ಹೋದಾಗ, ಕಟಿಂಗ್ ಮತ್ತು ಶೇವಿಂಗ್ ಮಾಡಿದ್ದಕ್ಕೆ ಹೆಚ್ಚಿನ ಹಣವನ್ನು ಕೇಳಲಾಗಿದೆ ಎಂದು ಜಾರ್ಜ್ ಹೇಳುತ್ತಾರೆ. ಈ ಬಗ್ಗೆ ವಿಡಿಯೋ ಮಾಡಿ ಜಾರ್ಜ್ ಬಕ್ಲಿ ತಮಗೆ ಅತಿಹೆಚ್ಚು ಶುಲ್ಕ ವಿಧಿಸಿದ್ದರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಜಾರ್ಜ್ ಬಕ್ಲಿಗೆ ಹೇರ್ ಕಟಿಂಗ್ ಮಾಡುವುದಕ್ಕೆ ಕೇಳಲಾದ ಹಣವನ್ನು ಕೇಳಿದ ನೆಟ್ಟಿಗರು ಭಾರೀ ಶಾಕ್ ಆಗಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ದೊಡ್ಡ ಶಾಪ್ ಆದರೆ ಮ್ಯಾಕ್ಸಿಮಮ್ 500 ರೂ. ಸಣ್ಣ ಶಾಪ್ ಆಗಿದ್ದರೆ 100 ರೂ. ಕೊಡಬೇಕು ಎಂದು ಹೇಳಿದ್ದಾರೆ.
ಹೌದು, ಹೇರ್ ಕಟ್ ಮತ್ತು ತಲೆ ಮಸಾಜ್‌ಗೆ ಆರಂಭದಲ್ಲಿ 1,800 ರೂ. ಕೇಳಲಾಗಿದೆ ಎಂದು ಜಾರ್ಜ್ ಹೇಳುತ್ತಾರೆ. ಆದರೆ, ಈ ಮೊತ್ತವನ್ನು ಪಾವತಿಸಲು ಅವರು ಹಿಂಜರಿದಾಗ, ಅದು 1,500 ರೂ. ಕೊಡುವಂತೆ ಕೇಳಿದ್ದಾರೆ. ಇದರ ನಂತರತ ಮತ್ತಷ್ಟು ಚೌಕಾಸಿ ಮಾಡಿ ₹1,200 ಕೊಟ್ಟು ಬಂದಿದ್ದೇನೆ ಎಂದು ಜಾರ್ಜ್ ಹೇಳುತ್ತಾರೆ. ಇಲ್ಲಿ ಏನೋ ತಪ್ಪಾಗಿದೆ ಎಂದು ಭಾವಿಸಿದ ಜಾರ್ಜ್, ಅಂಗಡಿಗೆ ಬಂದ ಇತರ ಗ್ರಾಹಕರನ್ನು ಸಾಮಾನ್ಯವಾಗಿ ಹೇರ್ ಕಟ್ ಮತ್ತು ಇತರ ಸೇವೆಗಳಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂದು ಕೇಳಿದರು. ಆದರೆ, ಅಲ್ಲಿದ್ದ ಸ್ಥಳೀಯ ಗ್ರಾಹಕರು ಮೊದಲು ಉತ್ತರಿಸಲು ಅವರು ನಿರಾಕರಿಸಿದರು. ಆದರೆ, ನಂತರ ಸಾಮಾನ್ಯವಾಗಿ ₹700 - ₹800 ವಿಧಿಸಲಾಗುತ್ತದೆ ಎಂದು ಒಪ್ಪಿಕೊಂಡರು. ಕೊನೆಗೆ ಜಾರ್ಜ್ ₹1200 ಪಾವತಿಸಬೇಕಾಯಿತು ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಜಾರ್ಜ್ ಬಕ್ಲಿ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. 'ನಾನು ಟಿಪ್ ಕೊಡುತ್ತಿದ್ದೆ ಆದರೆ ಅವನು ಅದನ್ನು ಹಾಳು ಮಾಡಿದನು. ಏಷ್ಯಾ ಪ್ರಯಾಣದ ಸ್ವಲ್ಪ ಅನುಭವದ ನಂತರ, ನಿಮಗೆ ಯಾವಾಗ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ ಎಂದು ನಿಮಗೆ ತಿಳಿಯುತ್ತದೆ. ಮತ್ತು ಇದು ಖಂಡಿತವಾಗಿಯೂ ಅಂತಹ ಕ್ಷಣಗಳಲ್ಲಿ ಒಂದಾಗಿದೆ! ನಾನು ಅವನಿಗೆ ಟಿಪ್ ನೀಡಲು ಯೋಜಿಸುತ್ತಿದ್ದೆ ಆದರೆ ಪ್ರಾಮಾಣಿಕತೆಗೆ ಮೊದಲ ಸ್ಥಾನವಿದೆ. ಆಶಾದಾಯಕವಾಗಿ ಅವನು ಇನ್ನೊಬ್ಬ ಪ್ರಯಾಣಿಕನ ಮೇಲೆ ಅದೇ ತಂತ್ರವನ್ನು ಪ್ರಯತ್ನಿಸುವುದಿಲ್ಲ. ಹೇರ್ ಕಟ್ ಸ್ವಲ್ಪ ಕಹಿಯಾಗಿದ್ದರೂ ಆಸಕ್ತಿದಾಯಕ ಅನುಭವ!' ಎಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ವಿದೇಶಿ ಪ್ರವಾಸಿಗ ಜಾರ್ಜ್ ಬಕ್ಲಿ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಭಾರತೀಯರೂ ಸೇರಿದಂತೆ ಹಲವರು ಜಾರ್ಜ್‌ರನ್ನು ವಂಚಿಸಲಾಗಿದೆ ಎಂದು ಹೇಳಿದ್ದಾರೆ. ಇಲ್ಲಿ ಬಹುತೇಕರು ಹೇರ್ ಮತ್ತು ಶೇವಿಂಗ್ ಮಾಡಿಸಿಕೊಳ್ಳಲು 100 ರಿಂದ 200 ರೂ. ಚಾರ್ಜ್ ಮಾಡಲಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಮ್ಮ ಮನೆಯವರು, ನಮ್ಮ ತಂದೆ 300 ರೂ.ಗಳಿಂದ 400 ರೂ. ಕೊಡಬಹುದು ಎಂದು ಹೇಳಿದ್ದಾರೆ. ನೀವು ಭಾರತದಲ್ಲಿ ಎಂತಹ ದೊಡ್ಡ ಹೈಫೈ ಸೌಲಭ್ಯದ ಹೇರ್ ಕಟಿಂಗ್ ಸಲೂನ್ ಇದ್ದರೂ 500 ರೂ. ಹೆಚ್ಚಿನ ದರ ಆಗಿರುತ್ತದೆ ಎಂದು ಕೆಲವರು ಕಾಮೆಂಟ್ ಮೂಲಕ ಸಲಹೆ ನೀಡಿದ್ದಾರೆ.


