ಸಿಂಧೂರ ಸುಮಂಗಲಿಯ ಸಂಕೇತ, ಸೌಭಾಗ್ಯ, ಸಮೃದ್ಧಿ ತರುತ್ತದೆ. ಬೈತಲೆಯ ಉದ್ದಕ್ಕೂ ಹಚ್ಚುವುದು ಸರಿಯಾದ ವಿಧಾನ. ಕಮಿಲಾ ಬೀಜದಿಂದ ತಯಾರಿಸುವ ಸಿಂಧೂರಕ್ಕೆ ಧಾರ್ಮಿಕ ಮಹತ್ವವಿದೆ. ವೈವಾಹಿಕ ಆನಂದ, ಸ್ತ್ರೀ ಶಕ್ತಿ ವೃದ್ಧಿಸುತ್ತದೆ, ಸುಷುಮ್ನ ನಾಡಿಯನ್ನು ಸಕ್ರಿಯಗೊಳಿಸುತ್ತದೆ. ನೈಸರ್ಗಿಕ ಕುಂಕುಮ ಆರೋಗ್ಯಕರ.

ಬೈತಲೆಗೆ ಸಿಂಧೂರ ಇಡುವುದು ಸುಮಂಗಲಿಯರ ಸಂಕೇತ ಎಂದೇ ತಲೆತಲಾಂತರಗಳಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಸನಾತನ ಧರ್ಮದಲ್ಲಿ ಹಣೆಗೆ ಇಡುವ ಸಿಂಧೂರಕ್ಕೆ ವಿಶೇಷ ಮಹತ್ವವಿದೆ. ಸಿಂಧೂರ ಹಚ್ಚುವುದರಿಂದ ಸೌಭಾಗ್ಯ ಮತ್ತು ಸಮೃದ್ಧಿಯು ಪ್ರಾಪ್ತವಾಗುತ್ತದೆ. ನಾವು ಪ್ರತಿದಿನವೂ ತಿಳಿದೋ, ತಿಳಿದೆಯೋ ಮಾಡಿದ ಪಾಪಗಳಿಂದ ಸಿಂಧೂರವು ಮುಕ್ತಿ ನೀಡುತ್ತದೆ. ತಂತ್ರ, ಮಂತ್ರಗಳಲ್ಲಿ ಕೂಡ ಸಿಂಧೂರವನ್ನು ಬಳಸಲಾಗುತ್ತದೆ. ಇದು ವಿವಾಹಿತೆಯರಿಗೆ ಭೂಷಣ ಎನ್ನುವುದು ನಿಜವಾದರೂ, ಸಿಂಧೂರ ಇಡುವ ಹಿಂದೆ ಹಲವಾರು ಪ್ರಯೋಜನಗಳು ಜೊತೆಗೆ ಇದಕ್ಕೆ ಅದರದ್ದೇ ಆದ ಕಾರಣಗಳೂ ಇವೆ. ಇದನ್ನು ಕೇವಲ ಮಹಿಳೆಯರು ಹಚ್ಚುವುದು ಅಲ್ಲದೇ ಸಿಂಧೂರ ಅರ್ಥಾತ್​ ಕುಂಕುವ ಹಿಂದೂಗಳಿಗೆ ಸರ್ವಶ್ರೇಷ್ಠವಾದದ್ದು. ಇದೇ ಕಾರಣಕ್ಕೆ ಸಿಂಧೂರವನ್ನು ಸೌಭಾಗ್ಯ ವರ್ಧನಂ ಎಂದೂ ವಿವರಿಸಲಾಗಿದೆ. ಹಿಂದೂ ಧರ್ಮದಲ್ಲಿ ಸಿಂಧೂರ ಅಥವಾ ಕುಂಕುಮವಿಲ್ಲದೆ ಪೂಜೆಯು ಅಪೂರ್ಣವೇ ಸರಿ. ಇದರಿಂದ ಹಲವಾರು ಪ್ರಯೋಜನಗಳು ಇವೆ. ಆದರೆ ಇದೀಗ ಮಾರುಕಟ್ಟೆಯಲ್ಲಿ ಸಿಗುವ ಕೆಂಪಗಿನ ರಾಸಾಯನಿಕಯುಕ್ತ ಪುಡಿಯಿಂದಾಗಿ ಚರ್ಮದ ಸಮಸ್ಯೆಗಳು ಕಾಡಬಹುದು. ಆದರೆ, ನಿಸರ್ಗದತ್ತವಾಗಿ ಮಾಡಿರುವ, ಗ್ರಂಥಿಗೆ ಅಂಗಡಿಗಳಲ್ಲಿ ಸಿಗುವ ನೈಜ ಕುಂಕುಮಗಳಿಂದ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳೂ ಇವೆ. 

ಆದರೆ ನಿಮಗೆ ಗೊತ್ತೆ? ಬಹುತೇಕ ಮಹಿಳೆಯರು ಸಿಂಧೂರ ಬೈತಲೆಗೆ ಇಟ್ಟರೂ ಅದನ್ನು ಇಡುವ ವಿಧಾನ ಸರಿಯಿಲ್ಲ ಎಂದೇ ಹೇಳಲಾಗುತ್ತದೆ. ಸಾಮಾನ್ಯವಾಗಿ ಹಣೆಯ ಮೇಲೆ ಕುಂಕುಮ ಇಡುತ್ತಾರೆ. ಇದನ್ನು ವಿವಾಹಿತೆಯರು ಮಾತ್ರವಲ್ಲದೇ ಎಲ್ಲರೂ ಇಡುವುದು ಸಹಜ. ಆದರೆ ವಿವಾಹಿತೆಯರು ಬೈತಲೆಗೆ ಕುಂಕುಮ ಇಡುತ್ತಾರೆ. ಆದರೆ ಬಲಗೈಯಲ್ಲಿನ ಉಂಗುಷ್ಠದ ಬೆರಳು ಮತ್ತು ಹೆಬ್ಬೆರಳಿನಿಂದ ಬೈತಲೆಗೆ ಕುಂಕುಮ ಇಡಬೇಕು. ಆದರೆ ಇದನ್ನು ನಮ್ಮ ಬೈತಲೆಯ ತುದಿಗೆ ಇಡುವುದು ಸಾಮಾನ್ಯವಾಗಿ ಮಹಿಳೆಯರು ಮಾಡುವ ತಪ್ಪು ಎನ್ನಲಾಗಿದೆ. ಸಿಂಧೂರವನ್ನು ಬೈತಲೆಯ ಉದ್ದಕ್ಕೂ ಹಚ್ಚುವುದು ಸರಿಯಾದ ವಿಧಾನ. ಇಲ್ಲಿ ಕಮೇಲೆ ಇರುವ ಫೋಟೋಗಳಲ್ಲಿ ಅಥವಾ ಕೆಳಗೆ ಇರುವ ವಿಡಿಯೋಗಳಲ್ಲಿ ನಟಿಯರು ಹೇಗೆ ಸಿಂಧೂರ ಸರಿಯಾದ ರೀತಿಯಲ್ಲಿ ಇಟ್ಟಿದ್ದಾರೆ ಎನ್ನುವುದನ್ನು ನೋಡಬಹುದಾಗಿದೆ.

ಈ 6 ನಕ್ಷತ್ರಗಳ ಯುವತಿಯರ ಮದ್ವೆಯಾದ್ರೆ ಯಶಸ್ಸು, ಸಂಪತ್ತು ವೃದ್ಧಿ ಕಟ್ಟಿಟ್ಟದ್ದೇ!

ಇನ್ನು ನಮ್ಮ ಪುರಾಣದಲ್ಲಿ ಸಿಂಧೂರದ ಬಗ್ಗೆ ಹೇಳುವುದಾದರೆ, ಕಮಿಲಾ ಎನ್ನುವ ವಿಶೇಷ ಸಸ್ಯದ ಬೀಜದಿಂದ ಸಿಂಧೂರವನ್ನು ತಯಾರಿಸಲಾಗುತ್ತದೆ. ಇದನ್ನು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಸಿಂಧೂರವನ್ನು ಇಡುವುದರಿಂದ ಸುಖ, ಸೌಭಾಗ್ಯವು ಪ್ರಾಪ್ತವಾಗುತ್ತದೆ. ಸಸ್ಯದ ಬೀಜದಿಂದ ತಯಾರಿಸುವ ಸಿಂಧೂರವನ್ನು ಸಾವಯಮ ಸಿಂಧೂರವೆಂದು ಕರೆಯಲಾಗುತ್ತದೆ. ಸೀತಾ ದೇವಿಯು ರಾಮನೊಂದಿಗೆ ವನವಾಸಕ್ಕೆ ಹೋದಾಗ ಕಾಡಿನಲ್ಲಿ ಅವರು ಈ ಬೀಜವನ್ನು ಬಳಸಿ ಸಿಂಧೂರವನ್ನು ಇಟ್ಟುಕೊಳ್ಳುತ್ತಿದ್ದರು. ಭಗವಾನ್‌ ಹನುಮಾನ್‌ ಕೂಡ ಈ ಬೀಜದ ಸಿಂಧೂರವನ್ನು ದೇಹಕ್ಕೆ ಹಚ್ಚಿಕೊಳ್ಳುತ್ತಿದ್ದರು.

ಇನ್ನು ಸಿಂಧೂರಕ್ಕೆ ಇರುವ ಶಕ್ತಿಯ ಬಗ್ಗೆ ಹೇಳುವುದಾದರೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹಿಂದೂ ಸಂಪ್ರದಾಯದ ಪ್ರಕಾರ ಸಿಂಧೂರ ಹಚ್ಚಿದರೆ ವೈವಾಹಿಕ ಆನಂದ ಮತ್ತು ಸ್ತ್ರೀ ಶಕ್ತಿಯೊಂದಿಗೆ ಆಳವಾದ ಸಂಬಂಧ ಉಂಟಾಗುತ್ತದೆ. ಮಹಿಳೆಯ ಜನ್ಮ ಕುಂಡಲಿಯಲ್ಲಿ ಉತ್ಸಾಹ, ಬಾಂಧವ್ಯ ಮತ್ತು ಪತಿಗೆ ಸಂಬಂಧಿಸಿದ ವಿಷಯಗಳನ್ನು ನಿಯಂತ್ರಿಸುವ ಮಂಗಳ ಗ್ರಹದ ಮೇಲೂ ಬಲವಾಗಿ ಪ್ರಭಾವ ಬೀರುತ್ತದೆ. ಕೂದಲು ಬೇರ್ಪಡುವವರೆಗೂ ಸಿಂಧೂರವನ್ನು ಸಂಪೂರ್ಣವಾಗಿ ಹಚ್ಚಿದಾಗ, ಅದು ಸುಷುಮ್ನ ನಾಡಿಯನ್ನು ಸಕ್ರಿಯಗೊಳಿಸುತ್ತದೆ. ಆದ್ದರಿಂದಲೇ ಸಿಂಧೂರವನ್ನು ಸಂಪೂರ್ಣವಾಗಿ ಹಚ್ಚಬೇಕು. ಅಂಥ ಸಮಯದಲ್ಲಿ ಸುಷುಮ್ನ ನಾಡಿಯ ಪ್ರಯೋಜನ ಪಡೆದುಕೊಳ್ಳಬಹುದು. ಅಷ್ಟಕ್ಕೂ ಈ ನಾಡಿಯು ಕೇಂದ್ರ ಶಕ್ತಿಯ ಚಾನಲ್ ಆಗಿದ್ದು ಪ್ರೀತಿ ಮತ್ತು ಮದುವೆಯಲ್ಲಿ ನಿಮ್ಮ ಭಾವನಾತ್ಮಕ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?

View post on Instagram