ಸಿಎಂ ಸಿದ್ದರಾಮಯ್ಯ ಅವರ ಒಳ್ಳೆಯ ಕಾರ್ಯವನ್ನು ಕೆಲವರಿಗೆ ತಡೆದುಕೊಳ್ಳಲಾಗ್ತಿಲ್ಲ, ಆದ ಕಾರಣ ಅವರ ವಿರುದ್ಧ ಟೀಕೆ ಮಾಡ್ತಿದ್ದಾರೆ. ದೇಶಭಕ್ತಿ ಬಗ್ಗೆ ಸಿಎಂ ಅವರು ಮತ್ತೊಬ್ಬರಿಂದ ತಿಳಿದುಕೊಂಡು ಮಾತಾಡುವಂತದ್ದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಬಾಗಲಕೋಟೆ (ಮೇ.01): ಸಿಎಂ ಸಿದ್ದರಾಮಯ್ಯ ಅವರ ಒಳ್ಳೆಯ ಕಾರ್ಯವನ್ನು ಕೆಲವರಿಗೆ ತಡೆದುಕೊಳ್ಳಲಾಗ್ತಿಲ್ಲ, ಆದ ಕಾರಣ ಅವರ ವಿರುದ್ಧ ಟೀಕೆ ಮಾಡ್ತಿದ್ದಾರೆ. ದೇಶಭಕ್ತಿ ಬಗ್ಗೆ ಸಿಎಂ ಅವರು ಮತ್ತೊಬ್ಬರಿಂದ ತಿಳಿದುಕೊಂಡು ಮಾತಾಡುವಂತದ್ದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು. ಕೂಡಲಸಂಗಮದ ಬಸವಾದಿ ಶರಣರ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಬಗ್ಗೆ ಬಹಳ ಜನ ಭಾಷಣ ಮಾಡ್ತಾರೆ. ಆದರೆ ಅವರ ತತ್ವ ಕಾರ್ಯರೂಪಕ್ಕೆ ತಂದವರು ಸಿದ್ದರಾಮಯ್ಯ ಮಾತ್ರ. ಬಸವ ಜಯಂತಿ ದಿವಸ ಧರ್ಮ ಪ್ರಚಾರಕ್ಕೆ ಮುಂದಾದವರು ಸಿದ್ದರಾಮಯ್ಯ. ಹೀಗಾಗಿ ಸಿದ್ದರಾಮಯ್ಯ ಅವರೇ ನೀವು ಮುಂದುವರೆಯಿರಿ. ನಿಮ್ಮ ಜೊತೆಗೆ ನಾವು ಸದಾ ಇರುತ್ತೇವೆ ಎಂದು ತಂಗಡಗಿ ತಿಳಿಸಿದರು.
ಸಾಮರಸ್ಯ-ಸೌಹಾರ್ದತೆ ಹೆಚ್ಚಿಸುವ ಸಾಮೂಹಿಕ ವಿವಾಹ: ಸಾಮೂಹಿಕ ವಿವಾಹಗಳಿಂದ ಸಾಮರಸ್ಯದ ಜತೆಗೆ ಸೌಹಾರ್ದತೆ ಬೆಳೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು. ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಅಮೋಘ ಸಿದ್ದೇಶ್ವರ ನೂತನ ಗೋಪುರ, ದ್ವಾರಬಾಗಿಲು ಲೋಕಾರ್ಪಣೆ ಹಾಗೂ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಆರ್ಥಿಕ ಹೊರೆ ತಪ್ಪಿಸಬಹುದಾಗಿದೆ. ಪ್ರಜ್ಞಾಪೂರ್ವಕವಾಗಿ ಸರಳತೆಗೆ ಸಾಮೂಹಿಕ ವಿವಾಹ ಮಾದರಿಯಾಗಿದೆ. ಸಮಾಜದಲ್ಲಿನ ಎಲ್ಲ ಸಮುದಾಯಗಳು ಒಗ್ಗೂಡಿ ನಡೆಸುವ ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯದ ಬಾಂಧವ್ಯ ಬೆಳೆಯಲಿದೆ ಎಂದರು.
ಇಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳೇನ್ನದೆ ಒಂದೇ ಎನ್ನುವ ಭಾವನೆಯೊಂದಿಗೆ ಸತ್ಕಾರ್ಯ ಮಾಡಬೇಕು ಎಂದು ಕರೆ ನೀಡಿದರು. ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವರರು ಪುಣ್ಯವಂತರು. ಇಲ್ಲಿ ಅನೇಕ ಶ್ರೀಗಳ ಆಶೀರ್ವಾದವೂ ಸಿಗುತ್ತದೆ. ಇಂತಹ ಅವಕಾಶಗಳು ಇಲ್ಲಿ ಮಾತ್ರ ಸಿಗಲಿದ್ದು ಉತ್ತಮ ಜೀವನ ನಡೆಸುವಂತೆ ನೂತನ ವಧು-ವರರಿಗೆ ಹಾರೈಸಿದರು.
ಅರ್ಹರ ಮನೆ ಬಾಗಿಲಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: ಸಚಿವ ಶಿವರಾಜ ತಂಗಡಗಿ
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ, ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ವಧು-ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು. ತಿಂಥಣಿಯ ಕನಕಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಕರಿಬಸವಶಿವಾಚಾರ್ಯರು, ಚನ್ನಬಸವ ಶಿವಾಚಾರ್ಯರು, ಸಿದ್ದಯ್ಯಸ್ವಾಮಿ ಗುರುವಿನ್, ಸಿದ್ದರಾಮಯ್ಯ ತಾತ, ಸಿದ್ದಯ್ಯತಾತ ಗುರುವಿನ, ತೇಜಯ್ಯ ಗುರುವಿನ, ಸಿದ್ದಯ್ಯ ಗುರುವಿನ, ಕಳಕಯ್ಯ ಗುರುವಿನ, ಶಿವಾನಂದಯ್ಯ ಗುರುವಿನ ಸೇರಿದಂತೆ ಹಾಲುಮತ ಸಮಾಜದ ಗುರುಗಳು ಪಾಲ್ಗೊಂಡಿದ್ದರು.


