ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯದಲ್ಲಿ ಕೆಲವು ಐಎಎಸ್ ಅಧಿಕಾರಿಗಳು 8-9 ತಿಂಗಳಿಂದ ಕಚೇರಿಗೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸದನಕ್ಕೆ ಅಗೌರವ ತೋರುವ ಇಂತಹ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

 ವಿಧಾನಸಭೆ (ಮಾ.17): ಸರ್ಕಾರದಲ್ಲಿ 8-9 ತಿಂಗಳಿಂದ ಕಚೇರಿಗೆ ಬಾರದ ಐಎಎಸ್ ಅಧಿಕಾರಿಗಳು ಇದ್ದಾರೆ. ಅವರ ಬಗ್ಗೆ ಹಾಜರಾತಿ ಸಹಿತ ದಾಖಲೆ ನೀಡುತ್ತೇನೆ. ಅಂತಹವರ ಮೇಲೆ ಕ್ರಮ ಆಗಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಉತ್ತರ ಸಿಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿ, ಇವರಿಗೆ ಗಾಲ್ಫ್ ಆಡೋಕೆ ಸಮಯ ಇರುತ್ತದೆ. ಆದರೆ ಕಚೇರಿಗೆ ಬರಲು ಆಗಲ್ಲ. 8-9 ತಿಂಗಳಿಂದಲೂ ಕಚೇರಿಗೆ ಬಾರದ ಐಎಎಸ್‌ ಅಧಿಕಾರಿಗಳು ಇದ್ದಾರೆ. ಆ ಬಗ್ಗೆ ದಾಖಲೆ ಒದಗಿಸುತ್ತೇನೆ ಎಂದು ಹೇಳಿದರು.

ಅಧಿವೇಶನದಲ್ಲಿ ಕಳೆದ ಒಂದು ವಾರದಿಂದ ಎಚ್ಚರಿಕೆ ನೀಡುತ್ತಿದ್ದೀರಿ. ಅಂತಿಮವಾಗಿ ಇಂದು ಬಿಸಿ ಮುಟ್ಟಿಸಿದ್ದೀರಿ. 2-3 ಮಂದಿಯನ್ನು ಅಮಾನತು ಮಾಡಬೇಕು. ಆಗ ಮಾತ್ರ ಇವರಿಗೆ ಬುದ್ದಿ ಬರುತ್ತದೆ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.

ಐಎಎಸ್‌ ಎಂದರೆ ಐಯಮ್‌ ಸಾರಿ ಎಂಬಂತಾಗಿದೆ. ನೀವು ಪೀಠದ ಗೌರವ ಕಾಪಾಡಬೇಕು. ಸದನಕ್ಕೆ ಅಗೌರವ ತೋರುವವರು. ಕಚೇರಿಗೆ ಬಾರದವರಿಗೆ ಶಿಕ್ಷೆ ಹಾಕಬೇಕು ಎಂದು ಮನವಿ ಮಾಡಿದರು.