ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ ನಡೆದಿದೆ. ಕರ್ತವ್ಯ ಮುಗಿಸಿ ಮರಳುತ್ತಿದ್ದ ಬೀದಿ ಕಾಮಕ ವೈದ್ಯ ಅಡ್ಡಗಟ್ಟಿ ಮುಟ್ಟಲು ಯತ್ನಿಸಿದ್ದಾನೆ. ವೈದ್ಯೆ ಕಿರುಚಾಡಿದ್ದಾರೆ.
ಬೆಂಗಳೂರು (ಡಿ.19) ಬೆಂಗಳೂರಿನಲ್ಲಿ ಬೀದಿ ಕಾಮುಕನೊಬ್ಬ ವೈದ್ಯೆಗೆ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಚಿಕ್ಕಬಾಣಾವಾರದ ಎಜಿಬಿ ಲೇಔಟ್ ನಲ್ಲಿ ಘಟನೆ ನಡದಿದೆ. ನಿನ್ನೆ (ಡಿ.18) ತಡ ರಾತ್ರಿ ಮಹಿಳಾ ಡಾಕ್ಟರ್ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ಮುಗಿಸಿ ಪಿಜಿಗೆ ಮರಳುತ್ತಿದ್ದ ವೇಳೆ ಕಾಮುಕ ವೈದ್ಯ ಹಿಂಬಾಸಿ ಅಡ್ಡಗಡ್ಡಿದ್ದಾನೆ. ಬಳಿಕ ಸಹಾಯ ಕೇಳುವ ನೆಪದಲ್ಲಿ ವೈದ್ಯೆಯನ್ನು ಮುಟ್ಟಲು ಪ್ರಯತ್ನಿಸಿದ್ದಾನೆ. ಇಷ್ಟೇ ಅಲ್ಲ ಅಸಭ್ಯವಾಗಿ ವರ್ತಿಸಿದ್ದಾನೆ. ವೈದ್ಯ ಕಿರುಚಾಡಿ ಸಹಾಯಕ್ಕಾಗಿ ಕೂಗಿದ ಘಟನೆ ನಡೆದಿದೆ.
ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯಿಂದ ಕೃತ್ಯ
ಹೆಸರಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯ ವೈದ್ಯೆ ಕರ್ತವ್ಯ ನಿರ್ವಹಿಸಿ ತಡರಾತ್ರಿ 12.49ರ ವೇಳೆಗೆ ಪಿಜಿಗೆ ಮರಳುತ್ತಿದ್ದಾಗ ಘಟನೆ ನಡೆದಿದೆ. ಬೈಕ್‌ನಲ್ಲಿ ಅಡ್ಡಬಂದ ಈ ಅಸಾಮಿ, ವೈದ್ಯೆ ಬಳಿಕ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದ ಕುರಿತು ಕೇಳಿದ್ದಾನೆ. ಆಕೆ ಉತ್ತರ ನೀಡುತ್ತಿದ್ದಂತೆ ಅಸಭ್ಯವಾಗಿ ಮುಟ್ಟಲು ಯತ್ನಿಸಿದ್ದಾನೆ. ಆತನಿಂದ ದೂರ ಸರಿಯುತ್ತಿದ್ದಂತೆ ಕಾಮುಕ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಕಿರುಕುಳ ಹೆಚ್ಚಾಗುತ್ತಿದ್ದಂತೆ ವೈದ್ಯೆ ಕಿರುಚಾಡಿದ್ದಾರೆ. ಕಿರುಚಾಟದಿಂದ ಕಾಮುಕ ಎಸ್ಕೇಪ್ ಆಗಿದ್ದಾನೆ.
ಪ್ರಕರಣ ದಾಖಲಿಸಿದ ಪೊಲೀಸ್
ಬೀದಿ ಕಾಮುಕನ ಕಿರುಕುಳ ಕುರಿತು ಮಹಿಳಾ ಡಾಕ್ಟರ್ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಸೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾಡಿದ್ದಾರೆ.
ಮಹಿಳಾ ಐಟಿ ಉದ್ಯೋಗಿಗೆ ಲೈ*ಗಿಕ ಕಿರುಕುಳ
ಬೆಂಗಳೂರಿನ ಮಹಿಳಾ ಐಟಿ ಉದ್ಯೋಗಿಗೆ ಕಿರುಕುಳ ನೀಡಿದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಕಾಡುಬಿಸನಹಳ್ಳಿಯ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವಾಗ ಲೈ*ಗಿಕ ಕಿರುಕುಳ ನೀಡಲಾಗಿದೆ. ರಾತ್ರಿ ತಮ್ಮ ಲೇಔಟ್ ನ ಗೇಟ್ ಬಳಿ ಬೀದಿ ನಾಯಿಗಳಿಗೆ ಊಟ ಹಾಕುತ್ತಿರುವಾಗ ಹಿಂಬದಿಯಿಂದ ಬಂದ ಅಪರಿಚಿತ ವ್ಯಕ್ತಿ ಮಹಿಳೆಯನ್ನು ತಬ್ಬಿಕೊಂಡು ಕಿರುಕುಳ ನೀಡಿದ್ದಾನೆ. ಮರು ದಿನವೂ ಮಹಿಳಾ ಉದ್ಯೋಗಿಯನ್ನು ಹಿಂಬಾಲಿಸಿದ್ದಾನೆ. ಹೀಗಾಗಿ ಮಹಿಳೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


