11:11 PM (IST) Feb 19

Karnataka News Live 19 February 2026Tumkur - ಪ್ರೀತಿಯಿಂದ ಸಾಕಿದ ಮಗ, ಒಡಹುಟ್ಟಿದ ತಂಗಿಯೇ ಹಂತಕರು; ಚಿಕ್ಕನಾಯಕನಹಳ್ಳಿಯ ಜಯಲಕ್ಷ್ಮಿ ಸಾವಿನ ರಹಸ್ಯ ಬಯಲು!

ಚಿಕ್ಕನಾಯಕನಹಳ್ಳಿಯ ಎಫ್‌ಡಿಎ ಅಧಿಕಾರಿ ಜಯಲಕ್ಷ್ಮಿ ಅವರ ಅನುಮಾನಾಸ್ಪದ ಸಾವು ಕೊಲೆ ಎಂದು ಸಾಬೀತಾಗಿದೆ. ಆಸ್ತಿಗಾಗಿ ಆಕೆಯ ಸ್ವಂತ ಸಹೋದರಿ ಮತ್ತು ದತ್ತು ಪುತ್ರನೇ ಉಸಿರುಗಟ್ಟಿಸಿ ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದರು. 

Read Full Story
10:40 PM (IST) Feb 19

Karnataka News Live 19 February 2026ಡೀಲ್‌ ಮಾಡಿಕೊಳ್ಳಿ ಇಲ್ಲವೇ ಅನುಭವಿಸಿ, ಇರಾನ್‌ಗೆ ಅಮೆರಿಕ ಕೊನೇ ವಾರ್ನಿಂಗ್‌; ಶನಿವಾರದಿಂದ ಯುದ್ಧ ಶುರು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ಗೆ ಅರ್ಥಪೂರ್ಣ ಅಣು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಅಥವಾ ಕೆಟ್ಟ ಪರಿಣಾಮಗಳನ್ನು ಎದುರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಒಂದೆಡೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಅಮೆರಿಕ ಇರಾನ್ ಗಡಿಯ ಸುತ್ತಮುತ್ತ ಭಾರಿ ಸೇನಾ ಜಮಾವಣೆ ಮಾಡಿದೆ.

Read Full Story
09:38 PM (IST) Feb 19

Karnataka News Live 19 February 2026Udupi - ಫೇಸ್‌ಬುಕ್ ಫ್ರೆಂಡ್ ಕಳುಹಿಸಿದ 'ಡಾಲರ್‌' ನಂಬಿ ₹7.10 ಲಕ್ಷ ಕಳೆದುಕೊಂಡ ಕುಂದಾಪುರ ಮಹಿಳೆ; ನೀವೂ ಹುಷಾರ್!

ಉಡುಪಿಯ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ವ್ಯಕ್ತಿಯ ಮಾತು ನಂಬಿ, ಬೆಲೆಬಾಳುವ ಉಡುಗೊರೆಯ ಆಮಿಷಕ್ಕೆ ಒಳಗಾಗಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು, ಪಾರ್ಸೆಲ್ ಬಿಡುಗಡೆ ನೆಪದಲ್ಲಿ ಅವರಿಂದ ಹಂತ ಹಂತವಾಗಿ ₹7.10 ಲಕ್ಷ ರೂಪಾಯಿಗಳನ್ನು ಪಡೆದು ಮೋಸ ಮಾಡಿದ್ದಾರೆ.
Read Full Story
09:16 PM (IST) Feb 19

Karnataka News Live 19 February 2026ಜೈಲಲ್ಲಿ ಅಣ್ಣ ದರ್ಶನ್ ಕಣ್ಣೀರು, ಹೊರಗಡೆ ಕಿತ್ತಾಡಿದ ತಮ್ಮಂದಿರು; ದಾಸನ ಬಂಟರ ಮಧ್ಯೆ ಮಾತಿನ ಸಮರ!

ನಟ ದರ್ಶನ್ ಜೈಲಿನಲ್ಲಿದ್ದರೆ, ಹೊರಗಡೆ ಅವರ ಆಪ್ತ ಬಳಗದ ಯುವ ನಟರಾದ ಧನ್ವೀರ್ ಮತ್ತು ಝೈದ್ ಖಾನ್ ನಡುವೆ ಮನಸ್ತಾಪ ಶುರುವಾಗಿದೆ. ದರ್ಶನ್‌ಗೆ ಕಷ್ಟಕಾಲದಲ್ಲಿ ಝೈದ್ ಖಾನ್ ಸಹಾಯ ಮಾಡಿಲ್ಲ ಮತ್ತು ಸಿನಿಮಾ ಪ್ರಚಾರಕ್ಕೆ ಮಾತ್ರ ಅವರ ಹೆಸರು ಬಳಸಿಕೊಂಡಿದ್ದಾರೆ ಎಂದು ಧನ್ವೀರ್ ಮಾತಿನಲ್ಲೇ ತಿವಿದಿದ್ದಾರೆ.

Read Full Story
09:08 PM (IST) Feb 19

Karnataka News Live 19 February 2026ನಂದಿನಿ ಉತ್ಪನ್ನ 'ವಿಷ' ಎಂದ ವೈದ್ಯೆಗೆ ಶಾಕ್ - ಡಾ. ಶರಣ್ಯಾ ಪದ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಎಂಎಫ್!

ಬೆಂಗಳೂರಿನ ಚರ್ಮರೋಗ ತಜ್ಞೆ ಡಾ.ಶರಣ್ಯಾ ಪದ್ಮಾ ಅವರು ನಂದಿನಿ ಉತ್ಪನ್ನಗಳು ವಿಷಕಾರಿ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ರೀಲ್ಸ್ ಪೋಸ್ಟ್ ಮಾಡಿದ್ದರು. ಈ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದ ಕೆಎಂಎಫ್, ತಮ್ಮ ಉತ್ಪನ್ನಗಳು ಸುರಕ್ಷಿತವೆಂದು ಹೇಳಿದೆ.

Read Full Story
09:05 PM (IST) Feb 19

Karnataka News Live 19 February 2026ಹಗಲು ಬ್ಯೂಟಿ ಪಾರ್ಲರ್ ರಾತ್ರಿ ಬೇರೆಯದೇ ಕೆಲಸ - ಮಹಿಳೆಯ ಬಂಧಿಸಿದ ದೆಹಲಿ ಪೊಲೀಸರು

ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ಸೋಗಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಲೇಡಿ ಡಾನ್ ಖುಸ್ನುಮಾ ಅನ್ಸಾರಿ ಅಲಿಯಾಸ್ ನೇಹಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗಾಗಿ ಮಾದಕವಸ್ತು ಜಾಲವನ್ನು ನಿರ್ವಹಿಸುತ್ತಿದ್ದಳು.

Read Full Story
09:01 PM (IST) Feb 19

Karnataka News Live 19 February 2026ಗುಡ್ಡದ ದುರುಗಮ್ಮ ದೇವರ ಮೇಲಿನ ಹಕ್ಕಿಗಾಗಿ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಸ್ಥರ ಹೊಡೆದಾಟ; 10 ಮಂದಿಗೆ ಗಾಯ!

ಹಾವೇರಿ ಜಿಲ್ಲೆಯಲ್ಲಿ 'ಗುಡ್ಡದ ದುರಗಮ್ಮ' ದೇವಸ್ಥಾನದ ಹಕ್ಕಿಗಾಗಿ ಹಿರೇ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಗಳ ನಡುವೆ ಭೀಕರ ಸಂಘರ್ಷ ನಡೆದಿದೆ. ಹೊಸ ದೇವಸ್ಥಾನ ನಿರ್ಮಾಣದ ವಿಚಾರವಾಗಿ ನಡೆದ ಕಲ್ಲು ತೂರಾಟದಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವು ವಾಹನಗಳು ಜಖಂಗೊಂಡಿವೆ.

Read Full Story
08:36 PM (IST) Feb 19

Karnataka News Live 19 February 2026ಪಿಡಿಓಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ? ಇನ್ನು ಮುಂದೆ ಇವರು 'ಗ್ರೂಪ್-ಬಿ' ಅಧಿಕಾರಿಗಳು!

Karnataka PDOs to be Upgraded to Group-B Officers: Big Relief for RDPR Staff ದಶಕಗಳ ಬೇಡಿಕೆಯಂತೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಹುದ್ದೆಯನ್ನು 'ಗ್ರೂಪ್-ಬಿ'ಗೆ ಉನ್ನತೀಕರಿಸಲು ಸರ್ಕಾರ ಮುಂದಾಗಿದೆ. ಈ ಬದಲಾವಣೆಯು ಪಿಡಿಓಗಳ ಅಧಿಕಾರವನ್ನು ಹೆಚ್ಚಿಸಲಿದೆ.

Read Full Story
08:20 PM (IST) Feb 19

Karnataka News Live 19 February 2026ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ - ಮುಸ್ಲಿಂ ಹುಡುಗಿ ಜೊತೆಗಿದ್ದ ಯುವಕನಿಗೆ ಹಲ್ಲೆ; ಕೇಳಿದ ತಾಯಿ ಮೇಲೂ ಹಲ್ಲೆ ಯತ್ನ!

ಚಿಕ್ಕಮಗಳೂರಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮುಸ್ಲಿಂ ಸ್ನೇಹಿತೆಯನ್ನು ಮನೆಗೆ ಬಿಡಲು ಹೋದ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಹಲ್ಲೆ ನಡೆಸಿದೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.

Read Full Story
08:18 PM (IST) Feb 19

Karnataka News Live 19 February 2026400 ಸಿನಿಮಾದಲ್ಲಿ ನಟಿಸಿದ್ರೂ ದುಡ್ಡು ಮಾಡ್ಲಿಲ್ಲ; KD Venkatesh ಇಷ್ಟು ಸೊರಗಿರೋದ್ಯಾಕೆ? ಆರೋಗ್ಯ ಏನಾಯ್ತು?

ಕೆಡಿ ವೆಂಕಟೇಶ್‌ ಅವರು 400 ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ. ಅವರ ಅನಾರೋಗ್ಯದ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. Beyond Limits ಯುಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ಮಾತನಾಡಿದ್ದಾರೆ.

Read Full Story
08:04 PM (IST) Feb 19

Karnataka News Live 19 February 2026ಚಪ್ಪಲಿ ಹೊಲೆಯುವನ ಮಗಳು ಈಗ ಸಿವಿಲ್ ಜಡ್ಜ್! ಬಡತನ ಸೀಳಿ ಸಾಧನೆಯ ಶಿಖರಕ್ಕೇರಿದ ದಾಂಡೇಲಿಯ ಪದ್ಮಾವತಿ!

ದಾಂಡೇಲಿಯ ಅತ್ಯಂತ ಬಡ ಚರ್ಮಕಾರ ಕುಟುಂಬದಲ್ಲಿ ಜನಿಸಿದ ಪದ್ಮಾವತಿ ನಾಗಣ್ಣ ಮಾದಿಗ, ಎಲ್ಲಾ ಅಡೆತಡೆಗಳನ್ನು ಮೀರಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ದಾಂಡೇಲಿ ತಾಲ್ಲೂಕಿನ ಮೊಟ್ಟಮೊದಲ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಾದಿಗ ಸಮಾಜದ ಪ್ರಥಮ ನ್ಯಾಯಾಧೀಶೆ ಎನಿಸಿದ್ದಾರೆ.

Read Full Story
07:52 PM (IST) Feb 19

Karnataka News Live 19 February 2026ಈ ಅಕ್ಷರಗಳಿಂದ ಹೆಸರು ಶುರುವಾಗುವ ಗಂಡ ಸಿಕ್ಕರೆ ಸಂಸಾರ ಸ್ವರ್ಗಕ್ಕೆ ಮೂರೇ ಗೇಣು!

ಇತ್ತೀಚೆಗಿನ ದಿನಗಳಲ್ಲಿ 'ನೇಮ್ ಆಸ್ಟ್ರಾಲಜಿ' ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ. ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಅಂದಾಜಿಸಲಾಗುತ್ತೆ. ಜ್ಯೋತಿಷ್ಯದ ಪ್ರಕಾರ, ಈ ಅಕ್ಷರಗಳಿಂದ ಹೆಸರು ಶುರುವಾಗುವ ಗಂಡ ಸಿಕ್ಕರೆ, ಹೆಣ್ಣುಮಕ್ಕಳ ಜೀವನ ಚೆನ್ನಾಗಿರುತ್ತಂತೆ.

Read Full Story
07:51 PM (IST) Feb 19

Karnataka News Live 19 February 2026ವಾಲ್ಮೀಕಿ ಶ್ರೀಗಳಿಗೆ ಲಘು ಹೃದಯಾಘಾತ, ಇಲ್ಲಿದೆ ಈಗಿನ ಹೆಲ್ತ್ ಅಪ್ಡೇಟ್; ಫೋನಲ್ಲಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ!

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ಲಘು ಹೃದಯಾಘಾತವಾಗಿದ್ದು, ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶಸ್ವಿ ಸ್ಟಂಟ್ ಅಳವಡಿಕೆ ನಂತರ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ.

Read Full Story
07:39 PM (IST) Feb 19

Karnataka News Live 19 February 2026ಟಿವಿಗೆ ಬಂತು ಶಿವರಾಜ್‌ಕುಮಾರ್‌, ಉಪೇಂದ್ರ ನಟನೆಯ 45 ಸಿನಿಮಾ; ಗರುಡ ಪುರಾಣದ ಟಚ್‌ ಕೊಟ್ಟ ಅರ್ಜುನ್ ಜನ್ಯ

45 Movie Release Date: ನಟ ಡಾ. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ.ಶೆಟ್ಟಿ ನಟನೆಯ ‘45 ‘ ಚಿತ್ರವು ಟಿವಿಯಲ್ಲಿ ಪ್ರಸಾರ ಆಗಲಿದೆ. 45 ಸಿನಿಮಾವು ಫ್ಯಾಂಟಸಿ ಆಕ್ಷನ್ ಡ್ರಾಮಾ ಆಗಿದ್ದು, ಇಲ್ಲಿ ಫಿಲಾಸಫಿ ಜೊತೆಗೆ ಆಕ್ಷನ್, ಭಾವನಾತ್ಮಕ ಅಂಶಗಳು ಕೂಡ ಇದ್ದು, ಮನಮುಟ್ಟುವಂತಿದೆ.

Read Full Story
07:36 PM (IST) Feb 19

Karnataka News Live 19 February 2026'ಘಂ' ಎನ್ನೋ ಟೇಸ್ಟಿ ಟೇಸ್ಟಿ ಕಾಫಿ ಮಾಡೋ ಸಿಂಪಲ್​ ಟ್ರಿಕ್ಸ್​ ಹೇಳಿದ Karna Serial- ನಿತ್ಯಾ ಕೈಯಿಂದ ರೆಡಿ!

ರಮೇಶ್​ನ ಕುತಂತ್ರದಿಂದ 'ಕರ್ಣ' ಧಾರಾವಾಹಿಯ ನಾಯಕ ಕರ್ಣ ಜೈಲು ಸೇರಿದ್ದಾನೆ. ಆದರೆ ಅದಕ್ಕೂ ಮುನ್ನ, ನಿತ್ಯಾ ತನ್ನ ಕೈಯಾರೆ ಮಾಡಿದ ಮೊದಲ ಕಾಫಿಯನ್ನು ಕರ್ಣ ಮನಸಾರೆ ಹೊಗಳಿದ್ದ. ಆ ರುಚಿಕರ ಕಾಫಿಯ ಹಿಂದಿದ್ದ, ಕೆಲಸದವಳು ಹೇಳಿಕೊಟ್ಟ ಸರಳ ತಂತ್ರವನ್ನು ಇಲ್ಲಿ ಬಹಿರಂಗಪಡಿಸಲಾಗಿದೆ.
Read Full Story
07:33 PM (IST) Feb 19

Karnataka News Live 19 February 2026ಬೆಂಗಳೂರಿನ ಐಟಿಎಫ್‌ ಮಹಿಳಾ ಟೆನಿಸ್ ಪಂದ್ಯದ ವೇಳೆ ಜೇನುಹುಳಗಳ ದಾಳಿ!

Bee Attack Disrupts ITF Women's Open Tennis in Bengaluru ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಐಟಿಎಫ್ ಮಹಿಳಾ ಓಪನ್ ಟೆನ್ನಿಸ್ ಪಂದ್ಯದ ವೇಳೆ ಜೇನು ಹುಳುಗಳ ಹಿಂಡು ದಾಳಿ ಮಾಡಿದೆ. ಈ ಘಟನೆಯಿಂದ ಆಟಗಾರರು ಮತ್ತು ಪ್ರೇಕ್ಷಕರು ಆತಂಕಕ್ಕೊಳಗಾದರು.

Read Full Story
07:27 PM (IST) Feb 19

Karnataka News Live 19 February 2026ಯಲಹಂಕದಲ್ಲಿ ದೇಶ ಅತಿದೊಡ್ಡ ಮೆಗಾ ರೈಲ್ವೆ ಕೋಚ್ ಟರ್ಮಿನಲ್, ದೇವನಹಳ್ಳಿ ನಿಗದಿಯಾಗಿದ್ದನ್ನು ಕೈಬಿಟ್ಟಿದ್ದೇಕೆ ಕೇಂದ್ರ?

ದೇವನಹಳ್ಳಿ ಬಿಟ್ಟು ಯಲಹಂಕದಲ್ಲಿ ದೇಶದ ಅತೀ ದೊಡ್ಡ ಮೆಗಾ ರೈಲ್ವೆ ಕೋಚ್ ಟರ್ಮಿನಲ್ ನಿರ್ಮಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ₹5754 ಕೋಟಿ ವೆಚ್ಚದ ಈ ಯೋಜನೆಯು 16 ಪ್ಲಾಟ್‌ಫಾರ್ಮ್‌ಗಳೊಂದಿಗೆ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

Read Full Story
07:24 PM (IST) Feb 19

Karnataka News Live 19 February 2026ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟ ಚಂದನ್ ಮಾಜಿ ಪತ್ನಿ ನಿವೇದಿತಾ ಗೌಡ! ದಾಂಪತ್ಯ ಜೀವನ ಮುರಿದು ಬೀಳಲು ಇದೇ ಕಾರಣ!

ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ, ನಟಿ ನಿವೇದಿತಾ ಗೌಡ ಸುಖ ಸಂಸಾರದ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ, ದಾಂಪತ್ಯ ಜೀವನ ಸುಖವಾಗಿರಲು ದಿನಕ್ಕೆ ಕೇವಲ 30 ನಿಮಿಷಗಳ ಗುಣಮಟ್ಟದ ಸಮಯ ಮೀಸಲಿಟ್ಟರೆ ಸಾಕು.
Read Full Story
07:17 PM (IST) Feb 19

Karnataka News Live 19 February 2026Seyon Movie - 'ಅಮರಾನ್‌' ಬಳಿಕ ಕಮಲ್‌ ಹಾಸನ್‌ ಜೊತೆ ಶಿವಕಾರ್ತಿಕೇಯನ್‌ ಸಿನಿಮಾ! ವೀಕ್ಷಕರಿಗೆ ಹಬ್ಬ

Seyon Movie: 'ಅಮರನ್' ಚಿತ್ರದ ಯಶಸ್ಸಿನ ನಂತರ, ಕಮಲ್ ಹಾಸನ್ RKFI ಬ್ಯಾನರ್, ನಟ ಶಿವಕಾರ್ತಿಕೇಯನ್ 'ಸೆಯೋನ್' ಎಂಬ ಹೊಸ ಚಿತ್ರಕ್ಕಾಗಿ ಮತ್ತೆ ಕೈಜೋಡಿಸಿದ್ದಾರೆ. ಶಿವಕುಮಾರ್ ಮುರುಗೇಸನ್ ನಿರ್ದೇಶನದ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದರಲ್ಲಿ ನಟ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story
07:10 PM (IST) Feb 19

Karnataka News Live 19 February 2026ವಿಜಯ್​ ರಾಘವೇಂದ್ರ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ Anchor Anushree - ಅಭಿಮಾನಿಗಳು ಫುಲ್​ ಖುಷ್​

ಆ್ಯಂಕರ್ ಅನುಶ್ರೀ ಹಂಚಿಕೊಂಡ ವಿಡಿಯೋದಲ್ಲಿ, ನಟ ವಿಜಯ ರಾಘವೇಂದ್ರಗೆ ತಮ್ಮ ಸಿನಿಮಾ ಡೈಲಾಗ್ ಹೇಳಲು ಕೇಳುತ್ತಾರೆ, ಆದರೆ ಅವರಿಗೆ ಡೈಲಾಗ್ ನೆನಪಾಗುವುದಿಲ್ಲ. ಈ ತಮಾಷೆಯ ಸಂಭಾಷಣೆಯು ಅಂತಿಮವಾಗಿ ವಿಜಯ ರಾಘವೇಂದ್ರ ಅವರ ಬಗ್ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ ಅನುಶ್ರೀ. ಏನದು? 

Read Full Story