ಕೆಡಿ ವೆಂಕಟೇಶ್‌ ಅವರು 400 ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ. ಅವರ ಅನಾರೋಗ್ಯದ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. Beyond Limits ಯುಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ಮಾತನಾಡಿದ್ದಾರೆ. 

400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಕೆಡಿ ವೆಂಕಟೇಶ್‌ ಅವರಿಗೆ ಅನಾರೋಗ್ಯವಾಗಿದೆ ಎಂಬ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈಗ ಹಿರಿಯ ಪತ್ರಕರ್ತ ಗಣೇಶ್‌ ಕಾಸರಗೋಡು ಅವರು ಕೆಡಿ ವೆಂಕಟೇಶ್‌ ಸಂದರ್ಶನ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಿಲ್ಲರ್‌ ವೆಂಕಟೇಶ್‌ ಎಂದೇ ಹೆಸರು

ಕೆಡಿ ವೆಂಕಟೇಶ್‌ ಅವರು ಆರೋಗ್ಯವಾಗಿದ್ದಾರೆ, ಆದರೆ ಸಣ್ಣ ಆಗಿದ್ದಾರೆ ಅಷ್ಟೇ. 1980, 1990 ರಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ, ಬಹುತೇಕ ವಿಲನ್‌ ಆಗಿ ನಟಿಸಿದ್ದರು.ಕೆಡಿ ವೆಂಕಟೇಶ್‌ ಅವರು ಕಿಲ್ಲರ್‌ ವೆಂಕಟೇಶ್‌ ಎಂದು ಹೆಸರು ಮಾಡಿದ್ದಾರೆ.

ಹಣ ಯಾಕೆ ಮಾಡಿಲ್ಲ?

ನಿರ್ಮಾಪಕರ ಬಳಿ ತಲೆ ಕೆರದುಕೊಂಡು ಹೋಗಿ ನಿಂತಿರುತ್ತಿದ್ದೆ, ಆದರೆ ಯಾರ ಹತ್ತಿರವೂ ದುಡ್ಡು ಕೇಳುತ್ತಿರಲಿಲ್ಲ. ಹಣ ಕೊಟ್ಟರೆ ಅಷ್ಟೇ ತಗೊಳ್ತಿದ್ದೆ, ಇದನ್ನು ಬಿಟ್ಟು ಬೇರೆ ಏನೂ ಕೆಲಸ ಮಾಡುತ್ತಿರಲಿಲ್ಲ.

ದರ್ಶನ್‌ ಹಣ ಕೊಟ್ಟರು

ಜಗ್ಗೇಶ್‌ ಮೂಲಕ ದರ್ಶನ್‌ ಅವರು ಒಂದು ಲಕ್ಷ ರೂಪಾಯಿ ಹಣ ನೀಡಿದರು. ಸೃಜನ್‌ ಲೋಕೇಶ್‌ ಐವತ್ತು ಸಾವಿರ ರೂಪಾಯಿ ನೀಡಿದರು. ಆಮೇಲೆ ಅವರು, ಇವರು ಎಂದು ಹತ್ತು, ಇಪ್ಪತ್ತು ಸಾವಿರ ರೂಪಾಯಿ ನೀಡಿದರು. ಕೊರೊನಾ ಟೈಮ್‌ನಲ್ಲಿ ಕೆಲವರು ಹಣ ನೀಡಿದರು, ಇದು ತುಂಬ ಸಹಾಯ ಆಯ್ತು ಎಂದು ಕೆಡಿ ವೆಂಕಟೇಶ್‌ ಹೇಳಿದ್ದಾರೆ.

ಈಗ ಸಿನಿಮಾ ಯಾಕೆ ಮಾಡ್ತಿಲ್ಲ?

ಕೆಡಿ ವೆಂಕಟೇಶ್‌ ಅವರಿಗೆ ಅನಾರೋಗ್ಯ ಆಯ್ತು, ಪೀಳಿಗೆ ಕೂಡ ಬದಲಾಗಿದೆ. ಹೀಗಾಗಿ ಸಿನಿಮಾವನ್ನು ಮಾಡುತ್ತಿಲ್ಲ, ಅವಕಾಶಗಳು ಕೂಡ ಕಡಿಮೆ ಆಗಿದೆ. ಆರೋಗ್ಯ ಸರಿಹೋದ ಬಳಿಕ ಮತ್ತೆ ನಾನು ಸಿನಿಮಾವನ್ನು ಮಾಡ್ತೀನಿ ಎಂದು ಕೆಡಿ ವೆಂಕಟೇಶ್‌ ಅವರು ಹೇಳಿದ್ದಾರೆ.

ಅಂದಹಾಗೆ ಕೆಡಿ ವೆಂಕಟೇಶ್‌ ಅವರು ರವಿಚಂದ್ರನ್‌ ನಟನೆಯ ರಣಧೀರ ಸಿನಿಮಾದಲ್ಲಿ ನಟಿಸಿದ್ದಾರೆ. ಇವರಿಗೆ ರಣಧೀರ ವೆಂಕಟೇಶ್‌ ಎಂದು ಕೂಡ ಕರೆಯಲಾಗುತ್ತಿತ್ತಂತೆ. ಅಂದಿನ ಸಿನಿಮಾ ಶೂಟಿಂಗ್‌, ವೀಕ್ಷಕರು ಎಲ್ಲವೂ ಚೆನ್ನಾಗಿತ್ತು, ಈಗ ಕಾಲ ಬದಲಾಗಿದೆ ಎಂದು ವೆಂಕಟೇಶ್‌ ಅವರು ಬೇಸರ ಹೊರಹಾಕಿದ್ದಾರೆ. 

YouTube video player