ಈ ಅಕ್ಷರಗಳಿಂದ ಹೆಸರು ಶುರುವಾಗುವ ಗಂಡ ಸಿಕ್ಕರೆ ಸಂಸಾರ ಸುಖ ಸಾಗರ; ಸ್ವರ್ಗಕ್ಕೆ ಮೂರೇ ಗೇಣು!
ಇತ್ತೀಚೆಗಿನ ದಿನಗಳಲ್ಲಿ 'ನೇಮ್ ಆಸ್ಟ್ರಾಲಜಿ' ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ. ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಅಂದಾಜಿಸಲಾಗುತ್ತೆ. ಜ್ಯೋತಿಷ್ಯದ ಪ್ರಕಾರ, ಈ ಅಕ್ಷರಗಳಿಂದ ಹೆಸರು ಶುರುವಾಗುವ ಗಂಡ ಸಿಕ್ಕರೆ, ಹೆಣ್ಣುಮಕ್ಕಳ ಜೀವನ ಚೆನ್ನಾಗಿರುತ್ತಂತೆ.

ನೇಮ್ ಆಸ್ಟ್ರಾಲಜಿ
ನೇಮ್ ಆಸ್ಟ್ರಾಲಜಿ ಪ್ರಕಾರ, ವ್ಯಕ್ತಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅಂದಾಜಿಸಲಾಗುತ್ತೆ. ಅವರು ಜೀವನದಲ್ಲಿ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ? ಅವರ ಭವಿಷ್ಯ ಹೇಗಿರುತ್ತೆ? ಅನ್ನೋ ವಿಚಾರಗಳನ್ನು ಹೆಸರಿನ ಮೊದಲ ಅಕ್ಷರವೇ ಹೇಳುತ್ತಂತೆ. ಜ್ಯೋತಿಷಿಗಳು ನಮ್ಮ ಹುಟ್ಟಿದ ದಿನ, ಸಮಯ, ಗ್ರಹಗತಿಗಳನ್ನು ಆಧರಿಸಿ ಹೆಸರನ್ನು ಸೂಚಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಅಕ್ಷರಗಳಿಂದ ಶುರುವಾಗುವ ಹುಡುಗರನ್ನು ಮದುವೆಯಾದರೆ, ಹೆಣ್ಣುಮಕ್ಕಳ ಜೀವನವೇ ಬದಲಾಗುತ್ತೆ. ಆ ಅಕ್ಷರಗಳು ಯಾವುವು ಅಂತ ನೋಡೋಣ ಬನ್ನಿ.
'V' ಅಕ್ಷರದಿಂದ ಶುರುವಾದರೆ:
ಈ ಅಕ್ಷರದ ಹೆಸರಿರುವ ಪುರುಷರು ತಮ್ಮ ಸಂಗಾತಿಯ ಆಸೆಯನ್ನು ಎಂದಿಗೂ ಇಲ್ಲ ಅನ್ನೋದಿಲ್ಲ. ಇವರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. ಹೆಂಡತಿಯ ಜೀವನದ ಪ್ರಮುಖ ವಿಚಾರಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಆಗಾಗ ಸರ್‌ಪ್ರೈಸ್ ಕೊಡಲು ಇಷ್ಟಪಡುತ್ತಾರೆ.
'K' ಅಕ್ಷರದಿಂದ ಶುರುವಾದರೆ:
K ಅಕ್ಷರದಿಂದ ಹೆಸರು ಶುರುವಾಗುವ ಗಂಡಂದಿರು ತಮ್ಮ ಸಂಗಾತಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಹೆಂಡತಿಯ ಜೊತೆ ಎಲ್ಲಾ ವಿಷಯಗಳಲ್ಲೂ ಪ್ರಾಮಾಣಿಕವಾಗಿರುತ್ತಾರೆ. ಯಾವುದೇ ಮುಚ್ಚುಮರೆ ಇಲ್ಲದೆ ಜೀವನ ನಡೆಸುತ್ತಾರೆ.
'A' ಅಕ್ಷರದಿಂದ ಶುರುವಾದರೆ:
'A' ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು ತಮ್ಮ ಹೆಂಡತಿಯನ್ನು ಅಕ್ಷರಶಃ ಕಣ್ಮಣಿಯಂತೆ ನೋಡಿಕೊಳ್ಳುತ್ತಾರೆ. ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಪ್ರತಿಯೊಂದು ವಿಷಯದಲ್ಲೂ ಅರ್ಥಮಾಡಿಕೊಳ್ಳುತ್ತಾರೆ.
'S' ಅಕ್ಷರದಿಂದ ಶುರುವಾದರೆ:
'S' ಅಕ್ಷರದಿಂದ ಹೆಸರು ಶುರುವಾಗುವ ಹುಡುಗರು ಜೀವನದಲ್ಲಿ ಬಂದರೆ, ಆ ಮಹಿಳೆಯರಿಗೆ ಹಬ್ಬವೇ ಸರಿ. ಇವರು ತಮ್ಮ ಜೀವನ ಸಂಗಾತಿಯೊಂದಿಗೆ ತುಂಬಾ ಪ್ರಾಮಾಣಿಕವಾಗಿರುತ್ತಾರೆ. ಹೆಂಡತಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ.
'R' ಅಕ್ಷರದಿಂದ:
R ಅಕ್ಷರದಿಂದ ಹೆಸರು ಶುರುವಾಗುವವರು ತಮ್ಮ ಹೆಂಡತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ಆದರೆ, ಈ ಪ್ರೀತಿಯನ್ನು ಎಲ್ಲರೆದುರು ಪ್ರದರ್ಶಿಸುವುದಿಲ್ಲ. ಇಬ್ಬರೇ ಏಕಾಂತವಾಗಿದ್ದಾಗ ಮಾತ್ರ ತಮ್ಮ ಕಾಳಜಿಯನ್ನು ತೋರಿಸುತ್ತಾರೆ.
ಗಮನಿಸಿ: ಮೇಲೆ ತಿಳಿಸಿದ ವಿಷಯಗಳು ಕೇವಲ ಕೆಲವು ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಆಧರಿಸಿವೆ. ಇವುಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.

