ಅನೇಕ ಶಾಸಕರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಎರಡೂವರೆ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಶಾಸಕರು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
- Home
- News
- State
- Karnataka News Live: ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ - ಶಾಸಕ ಲಕ್ಷ್ಮಣ ಸವದಿ
Karnataka News Live: ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ - ಶಾಸಕ ಲಕ್ಷ್ಮಣ ಸವದಿ

ದಾವಣಗೆರೆ: ಕಾರು ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬೇವಿನ ಮರಕ್ಕೆ ಡಿಕ್ಕಿ ಹೊಡೆದು ಪೊಲೀಸ್ ಇನ್ಸ್ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಚಿತ್ರದುರ್ಗ-ಜಗಳೂರು ತಾಲೂಕುಗಳ ಗಡಿ ಗ್ರಾಮ ಕಡಬನಕಟ್ಟೆ ಬಳಿ ಸಂಭವಿಸಿದೆ. ಪೊಲೀಸ್ ಇನ್ಸ್ಪೆಕ್ಟರ್ ರಘುನಾಥ ಮೃತರು. ಚಿತ್ರದುರ್ಗ ಜಿಲ್ಲೆ ಆಯಿಕಲ್ ಗ್ರಾಮದಲ್ಲಿದ್ದ ತಮ್ಮ ಪತ್ನಿ ತವರು ಮನಗೆ ಮೂರು ದಿನ ರಜೆ ಹಾಕಿ, ರಘುನಾಥ ಬಂದಿದ್ದರು. ಬುಧವಾರ ಮಧ್ಯಾಹ್ನ ಕಾರಿನಲ್ಲಿ ಹೊಸಪೇಟೆ ಕಡೆ ಹೊರಟಿದ್ದಾಗ ಚಿತ್ರದುರ್ಗ-ಜಗಳೂರು ಗಡಿ ಗ್ರಾಮವಾದ ಕಡಬನಕಟ್ಟೆ ಬಳಿ ರಸ್ತೆ ಬದಿಯ ಬೇವಿನ ಮರಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Karnataka News Live 16 April 2026ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ - ಶಾಸಕ ಲಕ್ಷ್ಮಣ ಸವದಿ
Karnataka News Live 16 April 2026ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರಹಾವು ಕಡಿತ - ಚಿಕಿತ್ಸೆ ಫಲಿಸದೆ ಸಾವು!
ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸಾಗರ ಪಟ್ಟಣದ ಎಸ್‌ಎನ್ ನಗರದಲ್ಲಿ ನಡೆದಿದೆ. ಭವೀನ್ (2.5) ಮೃತಪಟ್ಟ ಬಾಲಕ.
Karnataka News Live 16 April 2026ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ - ಸಿಎಂ ಸಿದ್ದರಾಮಯ್ಯ
ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ಗುಣಗಳು ನಮ್ಮಲ್ಲಿ ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
Karnataka News Live 16 April 2026ಮಂಗಳೂರು-ಸುಬ್ರಹ್ಮಣ್ಯ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ರದ್ದಾಗಿದ್ದ ಪ್ಯಾಸೆಂಜರ್ ರೈಲು ಮತ್ತೆ ಆರಂಭ
Karnataka News Live 16 April 2026ರಾಜ್ಯದ 12 ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' - ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸಾಧ್ಯತೆ!
Karnataka News Live 16 April 2026ರಾಜ್ಯದಲ್ಲಿ ಬಿಸಿಗಾಳಿ ಆರ್ಭಟ - 12 ಜಿಲ್ಲೆಗಳಿಗೆ 4 ದಿನ ಕಾಲ ಹೀಟ್‌ವೇವ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ!
Karnataka News Live 16 April 2026ಎಚ್‌ಡಿಕೆ ಚನ್ನಪಟ್ಟಣದಿಂದ ಸ್ಪರ್ಧಿಸಬೇಕೆಂಬುದು ಜನರ ಅಭಿಲಾಷೆ - ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿಯವರು ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಬೇಡಿಕೆ ಇಟ್ಟಿದ್ದಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
Karnataka News Live 16 April 2026ಭದ್ರಾ ಅರಣ್ಯದಲ್ಲಿ 'ಬೆಂಗಾಲ್ ಟೈಗರ್' ರಾಜ ಗಾಂಭೀರ್ಯದ ನಡಿಗೆ - ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾದ ಶಾರ್ದೂಲ
Bhadra Wildlife Sanctuary tiger sighting: ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯ ದರ್ಶನವಾಗಿದೆ. ಕೆಮ್ಮಣ್ಣುಗುಂಡಿಯ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದ ಹುಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.
Karnataka News Live 16 April 2026ಸಂಪುಟ ಪುನಾರಚನೆ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತೆ - ಸಚಿವ ರಾಮಲಿಂಗಾರೆಡ್ಡಿ
ಸಂಪುಟ ಪುನಾರಚನೆಯಾಗಿ ಈಗ ಮೂರು ವರ್ಷಗಳಾಗುತ್ತಿದ್ದು, ಶಾಸಕರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
Karnataka News Live 16 April 2026ಅನಾಥ ಕಂದಮ್ಮಗಳಿಗೆ ಆಧಾರ್ ಕೂಡ ಸಿಗದೇ ಸಂಕಷ್ಟ - ಚಾಮರಾಜನಗರದಲ್ಲಿ ಕರುಣಾಜನಕ ಘಟನೆ
ಚಾಮರಾಜನಗರದ ಮೂಡಲ ಅಗ್ರಹಾರದ ಮಹದೇವ ಕುಡಿತದ ದಾಸನಾಗಿದ್ದ. ಎರಡು ತಿಂಗಳ ಹಿಂದೆ ಕುಡಿದ ಅಮಲಿನಲ್ಲಿ ತನ್ನ ಪತ್ನಿ ಸುಮತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದ. ಸುಟ್ಟಗಾಯಗಳಿಂದ ಸುಮತಿ ಮೃತಪಟ್ಟಿದ್ದಳು.
Karnataka News Live 16 April 2026Curry Leaves - ಈ ರಹಸ್ಯ ಟಿಪ್ಸ್ ಫಾಲೋ ಮಾಡಿದ್ರೆ ಕರಿಬೇವಿನ ಸೊಪ್ಪು ಪೊದೆ ಥರ ವರ್ಷ ಪೂರ್ತಿ ಬೆಳೆಯುತ್ತೆ!
Curry Leaves Plant: ಕರಿಬೇವಿನ ಗಿಡ ಸೊಂಪಾಗಿ, ದಟ್ಟವಾಗಿ ಬೆಳೆಯಲು ಸಹಾಯ ಮಾಡುವ 5 ಪ್ರಮುಖ ರಹಸ್ಯ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ. ನೈಸರ್ಗಿಕ ಗೊಬ್ಬರಗಳು ಮತ್ತು ಸರಿಯಾದ ಆರೈಕೆಯ ವಿಧಾನಗಳು ಇಲ್ಲಿವೆ.
Karnataka News Live 16 April 2026ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ - ಮಾಳವಿಕಾ ಅವಿನಾಶ್
ಮುಂದಿನ ಲೋಕಸಭೆ ಚುನಾವಣೆಯೊಳಗೆ ಜನಗಣತಿ ಮುಗಿಯುವುದು ಕಷ್ಟವಾಗುತ್ತಿರುವ ಕಾರಣ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ ಎಂದು ಮಾಳವಿಕಾ ಅವಿನಾಶ್ ತಿಳಿಸಿದರು.
Karnataka News Live 16 April 2026ಕಾರವಾರ - ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ, ಚಾಲಕ ನಾಪತ್ತೆ
Karnataka News Live 16 April 2026ಯೋಗೇಶ ಗೌಡ ಹತ್ಯೆ - ಕುಲಕರ್ಣಿಗೆ ಪರಮಾಪ್ತನೇ ತಿರುಗಿ ಬಿದ್ದ! ಮಾತು ಬದಲಿಸಿ ಕಾಂಗ್ರೆಸ್ ಸೇರಿದ್ದ ಯೋಗೇಶ್ ಪತ್ನಿ!
ವರದಿ: ಶಿವಾನಂದ ಗೊಂಬಿ
ಬರೋಬ್ಬರಿ 10 ವರ್ಷಗಳ ಬಳಿಕಯೋಗೇಶಗೌಡ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿ ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಯು ಸಿಬಿಐ ತನಿಖೆಯಿಂದಾಗಿ ತಾರ್ಕಿಕ ಅಂತ್ಯ ಕಂಡಿದೆ.
Karnataka News Live 16 April 2026Night Shift - ರಾತ್ರಿ ಪಾಳಿಯಲ್ಲಿ ಕೆಲಸ ಮಾಡ್ತೀರಾ? ಎಚ್ಚರ.. ಈ ಕಾಯಿಲೆ ಬರೋ ರಿಸ್ಕ್ ಹೆಚ್ಚು!
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಡುತ್ತದೆ. ಯಾಕಂದ್ರೆ, ಅವರು ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಅಥವಾ ಮನೆಯೊಳಗೆ ಹೆಚ್ಚು ಸಮಯ ಕಳೆಯುವುದರಿಂದ ಸೂರ್ಯನ ಬೆಳಕಿಗೆ ಮೈಯೊಡ್ಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
Karnataka News Live 16 April 2026Personality Test - ನೀವು ಹೀಗೆಲ್ಲ ಕಾಲು ಮೇಲೆ ಕಾಲು ಹಾಕಿ ಕೂರ್ತೀರಾ? ನಿಮ್ಮ ವ್ಯಕ್ತಿತ್ವ ಬಯಲಾಗುತ್ತೆ!
Personality Test: ನಾವು ಮಾಡುವ ಕೆಲಸಗಳು, ಕೂರುವ ರೀತಿ ನಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಇಲ್ಲಿ ನಾವು ಕಾಲು ಕ್ರಾಸ್ ಮಾಡಿ ಕೂರುವವರ ವ್ಯಕ್ತಿತ್ವ ಹೇಗಿರುತ್ತೆ ಅಂತ ತಿಳಿಯೋಣ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka News Live 16 April 2026Late Night Eating - ರಾತ್ರಿ ಹೊತ್ತು ತಡವಾಗಿ ಊಟ ಮಾಡ್ತೀರಾ? ಹಾಗಿದ್ರೆ ಲಿವರ್‌ಗೆ ಕಾದಿದೆ ಅಪಾಯ!
ರಾತ್ರಿ ಹೊತ್ತು ತಡವಾಗಿ ಊಟ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು ನಿಮ್ಮ ಲಿವರ್ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರಿಂದ 'ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್' ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
Karnataka News Live 16 April 2026ಸತ್ತರೂ ಮುಖ ನೋಡಲ್ಲ-14 ವರ್ಷದಿಂದ ಬೀದಿಗೆ ಬಂದು ಜಗಳ ಆಡಿದ್ದ ಸ್ಟಾರ್ ನಟನ ಮನೆ ಸಮಸ್ಯೆ ಬಗೆಹರಿತು!
Actor Govinda News: ಬಾಲಿವುಡ್ ನಟ ಗೋವಿಂದ ಮತ್ತು ಅವರ ಅಳಿಯ ಕೃಷ್ಣ ಅಭಿಷೇಕ್ ಕುಟುಂಬದ ನಡುವಿನ ಮುನಿಸು ಕೊನೆಗೂ ಮುಗಿದಿದೆ. ತಮ್ಮ ಅತ್ತೆ ಸುನೀತಾ ಜೊತೆ ಕಾಣಿಸಿಕೊಂಡ ಕೃಷ್ಣ ಮತ್ತು ಪತ್ನಿ ಕಾಶ್ಮೀರಾ, ನಮ್ಮ ವನವಾಸ ಮುಗಿಯಿತು ಎಂದು ಹೇಳಿದ್ದಾರೆ.
Karnataka News Live 16 April 2026ಬ್ಯಾಚುಲರ್ ಬಾಯ್ಸ್, ಹಾಸ್ಟೆಲ್ ಹುಡುಗ್ರು & ವರ್ಕಿಂಗ್ ವುಮೆನ್‌ಗೆ ಬೆಸ್ಟ್ ಈ ಹುಣುಸೇಹುಳಿ; ಆದ್ರೆ ಈ ಸೀಕ್ರೆಟ್ ಗೊತ್ತಿರ್ಲಿ!
ಅನೇಕರಿಗೆ ಹುಣಸೇಹಣ್ಣಿನಿಂದ ಕೇವಲ ಸಾಂಬಾರ್ ಮಾಡುವುದು ಮಾತ್ರ ತಿಳಿದಿದೆ. ಆದರೆ, ಅತ್ಯಂತ ಸರಳವಾಗಿ ಮತ್ತು ಬೇಗನೆ ಮಾಡಬಹುದಾದ 'ಹುಣಸೇಹುಳಿ' (ಒಂದು ರೀತಿಯ ರಸಂ ರೆಸಿಪಿ) ರುಚಿಯೇ ಬೇರೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಇದು ಅರ್ಜೆಂಟ್ ಅಡುಗೆ ಮಾತ್ರವಲ್ಲ, ವಾರಗಟ್ಟಲೆ ಉಪಯೋಗಿಸಬಹುದು.