Personality Test: ನೀವು ಹೀಗೆಲ್ಲ ಕಾಲು ಮೇಲೆ ಕಾಲು ಹಾಕಿ ಕೂರ್ತೀರಾ? ನಿಮ್ಮ ವ್ಯಕ್ತಿತ್ವ ಬಯಲಾಗುತ್ತೆ!
Personality Test: ನಾವು ಮಾಡುವ ಕೆಲಸಗಳು, ಕೂರುವ ರೀತಿ ನಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಇಲ್ಲಿ ನಾವು ಕಾಲು ಕ್ರಾಸ್ ಮಾಡಿ ಕೂರುವವರ ವ್ಯಕ್ತಿತ್ವ ಹೇಗಿರುತ್ತೆ ಅಂತ ತಿಳಿಯೋಣ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಕ್ರಾಸ್ ಲೆಗ್ ಸಿಟ್ಟಿಂಗ್ ಪೊಸಿಷನ್
ಕುರ್ಚಿಯಲ್ಲಿ ಕಾಲು ಮೇಲೆ ಕಾಲು ಹಾಕಿ ಕೂರುವವರ ವ್ಯಕ್ತಿತ್ವ ತುಂಬಾ ಸ್ನೇಹಪರವಾಗಿರುತ್ತದೆ. ನೋಡಲು ಸ್ವಲ್ಪ ಗರ್ವದಿಂದ ಕಂಡರೂ, ಇವರು ಇತರರೊಂದಿಗೆ ಬೆರೆಯಲು ಹೆಚ್ಚು ಇಷ್ಟಪಡುತ್ತಾರೆ. ಯಾರೊಂದಿಗಾದರೂ ಬೇಗನೆ ಸಂಬಂಧ ಬೆಳೆಸುತ್ತಾರೆ.
ಹೊಸದಾದ ಯೋಚನೆ
ಈ ವ್ಯಕ್ತಿಗಳು ಯಾವುದೇ ವಿಷಯವನ್ನು ಹೊಸದಾಗಿ ಯೋಚಿಸುತ್ತಾರೆ. ಹೊಸ ದಾರಿಗಳನ್ನು ಹುಡುಕಲು ಇಷ್ಟಪಡುತ್ತಾರೆ. ಇವರ ಆಲೋಚನೆಗಳು ಕೂಡ ವಿಭಿನ್ನವಾಗಿರುತ್ತವೆ. ಇವರದ್ದು ವಿಶಾಲ ಹೃದಯ ಎನ್ನಬಹುದು.
ಮಾತಿನಲ್ಲಿ ಚುರುಕು
ಇವರು ಮಾತಿನಲ್ಲಿ ಚುರುಕಾಗಿದ್ದು, ತಮ್ಮ ಮಾತಿನಿಂದಲೇ ಇತರರನ್ನು ಆಕರ್ಷಿಸುತ್ತಾರೆ. ಆದರೆ, ಇತರರನ್ನು ಸುಲಭವಾಗಿ ನಂಬುವುದಿಲ್ಲ. ತಮ್ಮ ಮೇಲೆನೇ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ. ಬೇರೆಯವರ ಮೇಲೆ ಅವಲಂಬಿತರಾಗಿ ನಿರ್ಧಾರ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.
ಪ್ರಯಾಣ ಇಷ್ಟ
ಹೀಗೆ ಕಾಲು ಕ್ರಾಸ್ ಮಾಡಿ ಕೂರುವವರಿಗೆ ಹೊಸ ಸ್ಥಳಗಳಿಗೆ ಪ್ರಯಾಣ ಮಾಡುವುದು ಅಂದ್ರೆ ತುಂಬಾ ಇಷ್ಟ. ಇವರಿಗೆ ಆತ್ಮವಿಶ್ವಾಸ ಕೂಡ ಹೆಚ್ಚು. ತಮ್ಮನ್ನು ತಾವು ನಂಬುತ್ತಾರೆ ಮತ್ತು ಗುಂಪಿನಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

