- Home
- Entertainment
- TV Talk
- ಸತ್ತರೂ ಮುಖ ನೋಡಲ್ಲ-14 ವರ್ಷದಿಂದ ಬೀದಿಗೆ ಬಂದು ಜಗಳ ಆಡಿದ್ದ ಸ್ಟಾರ್ ನಟನ ಮನೆ ಸಮಸ್ಯೆ ಬಗೆಹರಿತು!
ಸತ್ತರೂ ಮುಖ ನೋಡಲ್ಲ-14 ವರ್ಷದಿಂದ ಬೀದಿಗೆ ಬಂದು ಜಗಳ ಆಡಿದ್ದ ಸ್ಟಾರ್ ನಟನ ಮನೆ ಸಮಸ್ಯೆ ಬಗೆಹರಿತು!
Actor Govinda News: ಬಾಲಿವುಡ್ ನಟ ಗೋವಿಂದ ಮತ್ತು ಅವರ ಅಳಿಯ ಕೃಷ್ಣ ಅಭಿಷೇಕ್ ಕುಟುಂಬದ ನಡುವಿನ ಮುನಿಸು ಕೊನೆಗೂ ಮುಗಿದಿದೆ. ತಮ್ಮ ಅತ್ತೆ ಸುನೀತಾ ಜೊತೆ ಕಾಣಿಸಿಕೊಂಡ ಕೃಷ್ಣ ಮತ್ತು ಪತ್ನಿ ಕಾಶ್ಮೀರಾ, ನಮ್ಮ ವನವಾಸ ಮುಗಿಯಿತು ಎಂದು ಹೇಳಿದ್ದಾರೆ.

ಕುಟುಂಬದಲ್ಲಿ ಏನಾಗಿತ್ತು?
ಬಾಲಿವುಡ್ ನಟ ಗೋವಿಂದ (Govinda) ಮತ್ತು ಅವರ ಅಳಿಯ, ಖ್ಯಾತ ಹಾಸ್ಯನಟ ಕೃಷ್ಣ ಅಭಿಷೇಕ್ (Krushna Abhishek) ನಡುವಿನ ಮುನಿಸು ಕೊನೆಗೂ ಮುಗಿಯುವ ಲಕ್ಷಣ ಕಾಣಿಸುತ್ತಿದೆ. ಸುಮಾರು 7 ವರ್ಷಗಳಿಂದ ಈ ಇಬ್ಬರ ಕುಟುಂಬಗಳ ನಡುವೆ ಜಗಳವಿತ್ತು. ಈ ಬೆಳವಣಿಗೆಯಿಂದ ಅಭಿಮಾನಿಗಳಿಗೂ ಬೇಸರವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಗೋವಿಂದ ಪತ್ನಿ ಸುನೀತಾ ಅಹುಜಾ (Sunita Ahuja) ಕಾಣಿಸಿಕೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಕೃಷ್ಣ ಅಭಿಷೇಕ್ ಮತ್ತು ಅವರ ಪತ್ನಿ ಕಾಶ್ಮೀರಾ ಶಾ (Kashmera Shah) ಕೂಡ ಇದ್ದರು. ಈ ವೇಳೆ ಮೂವರ ನಡುವಿನ ಬಾಂಧವ್ಯ ನೋಡಿದರೆ, ಕುಟುಂಬದಲ್ಲಿ ಎಲ್ಲವೂ ಸರಿಹೋದಂತಿದೆ.
ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡ್ರು
ಕಾರ್ಯಕ್ರಮದ ವೇಳೆ ಕೃಷ್ಣ ಮತ್ತು ಕಾಶ್ಮೀರಾ, ತಮ್ಮ ಮಾಮಿ ಸುನೀತಾರನ್ನು ಪಾಪರಾಜಿಗಳ ಮುಂದೆ ಕರೆತಂದು ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟರು. ಈ ಸಂದರ್ಭದಲ್ಲಿ ಅವರ ನಡುವೆ ನಗು, ತಮಾಷೆ ಮತ್ತು ಆತ್ಮೀಯತೆ ಎದ್ದು ಕಾಣುತ್ತಿತ್ತು. ಇದು ಅಭಿಮಾನಿಗಳ ಮನಗೆದ್ದಿದೆ. ಈ ವೇಳೆ ಮಾತನಾಡಿದ ಸುನೀತಾ ಅಹುಜಾ, "ಇವರ 14 ವರ್ಷದ ವನವಾಸ ಈಗ ಮುಗೀತು" ಎಂದು ಹೇಳಿದರು. ಅವರ ಈ ಹೇಳಿಕೆ, ಸಂಬಂಧದಲ್ಲಿನ ಬಿರುಕು ಮಾಯವಾಗಿದೆ ಎಂಬುದರ ಸ್ಪಷ್ಟ ಸಂಕೇತ ನೀಡಿತು.
ಅಷ್ಟರಲ್ಲೇ, ಕಾಶ್ಮೀರಾ ಶಾ ತಮಾಷೆಯಾಗಿ, "ನಮ್ಮ ವನವಾಸ ಮುಗೀತು, ಇನ್ನೊಬ್ಬರದ್ದು ಶುರುವಾಯ್ತು" ಎಂದರು. ಆದರೆ ತಕ್ಷಣವೇ ತಮ್ಮ ಮಾತನ್ನು ಸರಿಪಡಿಸಿಕೊಂಡು ನಗುತ್ತಾ ಸುನೀತಾರನ್ನು ಅಪ್ಪಿಕೊಂಡರು.
ಗೋವಿಂದ ಸುನಿತಾ ದೂರ ಆದ್ರಾ?
ಇನ್ನೊಂದೆಡೆ, ಗೋವಿಂದ ಮತ್ತು ಸುನೀತಾ ದಾಂಪತ್ಯದ ಬಗ್ಗೆಯೂ ಕಳೆದ ಕೆಲವು ಸಮಯದಿಂದ ಹಲವು ವದಂತಿಗಳು ಹರಿದಾಡುತ್ತಿವೆ. ಮಾಧ್ಯಮ ವರದಿಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ವಿಚ್ಛೇದನದ ಮಾತುಕತೆ ನಡೆಯುತ್ತಿದೆ ಎನ್ನಲಾಗಿತ್ತು. ಅಷ್ಟೇ ಅಲ್ಲ, ಗೋವಿಂದ ಅವರ ಅಫೇರ್ ಬಗ್ಗೆಯೂ ಚರ್ಚೆಗಳು ಜೋರಾಗಿದ್ದವು. ಆದರೆ, ಈ ಸುದ್ದಿಗಳು ಇದುವರೆಗೂ ಅಧಿಕೃತವಾಗಿ ದೃಢಪಟ್ಟಿಲ್ಲ. ಸದ್ಯಕ್ಕೆ, ಕೃಷ್ಣ ಅಭಿಷೇಕ್ ಮತ್ತು ಅವರ ಮಾಮಿ ಸುನೀತಾ ನಡುವಿನ ಸಂಬಂಧ ಮತ್ತೆ ಸಿಹಿಯಾಗಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.
ಡಿವೋರ್ಸ್ ಆಗಿದ್ಯಾ?
ಇಷ್ಟು ದಿನಗಳ ನಂತರ ಕುಟುಂಬವನ್ನು ಮತ್ತೆ ಒಟ್ಟಾಗಿ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ. ಈಗ ಎಲ್ಲರ ಕಣ್ಣು ಗೋವಿಂದ ಮತ್ತು ಸುನೀತಾ ಸಂಬಂಧದ ಬಗ್ಗೆ ಹಬ್ಬಿರುವ ವದಂತಿಗಳ ಮೇಲಿದೆ. ಈ ಬಗ್ಗೆ ಯಾವಾಗ ಸತ್ಯಾಂಶ ಹೊರಬೀಳಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
