Karnataka News Live: 'ಬೆಂಗಳೂರು ಬಿಡುವ ಸಮಯ..' ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾದ ಬೆಂಗಳೂರು vs ಹೈದರಾಬಾದ್!
ಸಾರಾಂಶ
ಬೆಂಗಳೂರು: ಬಸ್, ಮೆಟ್ರೋ ರೈಲು ಪ್ರಯಾಣ ದರದ ನಂತರ ಇದೀಗ ನಗರದಲ್ಲಿ ಸಂಚರಿಸುವ ಆಟೋ ಪ್ರಯಾಣ ದರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮೊದಲ 2 ಕಿಮೀಗೆ (ಕನಿಷ್ಠ ದರ) 30 ರು. ಇದ್ದ ಪ್ರಯಾಣ ದರವನ್ನು 36 ರು.ಗೆ ಹೆಚ್ಚಿಸಲಾಗಿದೆ. ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15 ರು.ನಿಂದ 18ರು.ಗೆ ಏರಿಸಲಾಗಿದೆ. ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರು.ನಿಂದ 10 ರು.ಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20 ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರು.ನಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಪರಿಷ್ಕೃತ ದರದ ಮೂಲಪಟ್ಟಿಯನ್ನು ಪ್ರತಿ ಆಟೋಗಳು ಪ್ರದರ್ಶಿಸಬೇಕು.
ಹಾಗೆಯೇ, ಅ. 10ರೊಳಗೆ (90 ದಿನ) ಮೀಟರ್ನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
11:15 PM (IST) Jul 15
Karnataka News Live 'ಬೆಂಗಳೂರು ಬಿಡುವ ಸಮಯ..' ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾದ ಬೆಂಗಳೂರು vs ಹೈದರಾಬಾದ್!
ಬೆಂಗಳೂರಿನಲ್ಲಿರುವ ತಮ್ಮ ಕಚೇರಿಯನ್ನು ತಲುಪಲು ಪ್ರಯತ್ನಿಸುವಾಗ ಎದುರಿಸಿದ ಸಂಚಾರ ತೊಂದರೆಗಳ ಬಗ್ಗೆ ಸೋಶಿಯಲ್ ಮೀಡಿಯಾ ಯೂಸರ್ ಒಬ್ಬರು ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಇದರ ಬಗ್ಗೆ ಚರ್ಚೆ ಆರಂಭವಾಗಿದೆ.
Karnataka News Live ಜಿಎಸ್‌ಟಿ ಭಾರ - ಗುಟ್ಕಾ, ಸಿಗರೇಟ್ ಸಿಗಲ್ಲ, ಈ ದಿನದಿಂದ ಎಲ್ಲವೂ ಬಂದ್ ಎಂದ ಅಂಗಡಿ ಮಾಲೀಕರು!
ಯುಪಿಐ ಮೂಲಕ ₹40 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿದ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಾಲು, ಗುಟ್ಕಾ, ಸಿಗರೇಟ್, ಕಾಂಡಿಮೆಂಟ್ಸ್, ಬೇಕರಿ ಅಂಗಡಿಗಳನ್ನು ಬಂದ್ ಮಾಡಿ ಹೋರಾಟ ನಡೆಸಲು ವರ್ತಕರು ತೀರ್ಮಾನಿಸಿದ್ದಾರೆ.
Karnataka News Live ಬೆಂಗಳೂರು ಇಲ್ಲದಿದ್ರೆ ಏನಂತೆ, 8 ಸಾವಿರ ಎಕರೆ ಜಾಗ ಕೊಡ್ತೇವೆ ನಮ್ಮಲ್ಲೇ ಏರೋಸ್ಪೇಸ್ ಪಾರ್ಕ್ ಮಾಡಿ ಎಂದ ಆಂಧ್ರ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
Karnataka News Live Breaking - ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಕ್ಕೆ ಏಕರೂಪ ದರ ಜಾರಿ, ಸಿನಿಮಾ ಟಿಕೆಟ್‌ಗೆ ಇನ್ನು 200 ರೂಪಾಯಿ!
ರಾಜ್ಯ ಸರ್ಕಾರವು ಎಲ್ಲಾ ಚಿತ್ರಮಂದಿರಗಳಿಗೆ ಏಕರೂಪ ಟಿಕೆಟ್ ದರ ಘೋಷಿಸಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳ ಟಿಕೆಟ್ ದರ 200 ರೂಪಾಯಿ ಮೀರಬಾರದು ಎಂದು ಆದೇಶ ಹೊರಡಿಸಿದೆ.
Karnataka News Live ಮಂಗಳೂರು ಜೈಲಿನೊಳಗೆ ರೌಡಿಸಂ - ಹಣಕ್ಕಾಗಿ ಸಹ ಕೈದಿಗಳಿಂದ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ!
ಮಂಗಳೂರು ಸಬ್ ಜೈಲಿನಲ್ಲಿ ಹಣಕ್ಕಾಗಿ ಸಹ ಕೈದಿಗಳಿಂದ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ. ಜುಲೈ 9 ರಂದು ನಡೆದ ಈ ಘಟನೆಯಲ್ಲಿ ಕೈದಿಗಳಿಂದ 50 ಸಾವಿರ ರೂ. ಪೀಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Karnataka News Live ವರ್ಕ್ ಫ್ರಮ್ ಹೋಂ ರೀಲ್ ನೋಡಿ ₹20 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ!
ಮನೆಯಿಂದಲೇ ಕೆಲಸ ಮಾಡುವ ಆಮಿಷವೊಡ್ಡಿ ಇನ್‌ಸ್ಟಾಗ್ರಾಂ ಮೂಲಕ ಮಹಿಳೆಯೊಬ್ಬರಿಗೆ ₹20,62,713 ವಂಚಿಸಲಾಗಿದೆ. ಟೆಲಿಗ್ರಾಂ ಖಾತೆಗಳ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
Karnataka News Live ಕಾಶಿ ಯಾತ್ರೆಗೆ ಹೋಗಿಬರುವ ಕನ್ನಡಿಗರಿಗೆ ಸರ್ಕಾರದಿಂದ ₹5,000 ಸಹಾಯಧನ; ಇಂದಿನಿಂದ ಅರ್ಜಿ ಆಹ್ವಾನ!
ಕರ್ನಾಟಕದಿಂದ ಕಾಶಿ ಯಾತ್ರೆ ಕೈಗೊಂಡ 30,000 ಯಾತ್ರಿಕರಿಗೆ ರಾಜ್ಯ ಸರ್ಕಾರ ₹5,000 ಸಹಾಯಧನ ಘೋಷಿಸಿದೆ. ಜುಲೈ 15 ರಿಂದ ನವೆಂಬರ್ 15 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹ ಯಾತ್ರಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದು.
Karnataka News Live ಕೇವಲ 21,000 ರೂಗೆ ಭಾರತದಲ್ಲಿ ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಾರು ಬುಕಿಂಗ್ ಆರಂಭ
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಾರು ಈಗಾಗಲೇ ಭಾರತಕ್ಕೆ ಎಂಟ್ರಿಕೊಟ್ಟಿದೆ. ಇದೀಗ ವಿನ್‌ಫಾಸ್ಟ್ VF 6 ಹಾಗೂ VF 7 ಕಾರಿನ ಬುಕಿಂಗ್ ಆರಂಭಗೊಂಡಿದೆ. ಕೇವಲ 21,000 ರೂಪಾಯಿಗೆ ವಿನ್‌ಫಾಸ್ಟ್ ಕಾರು ನಿಮ್ಮದಾಗಿಸಿಕೊಳ್ಳಬಹುದು.
Karnataka News Live ಶ್ರೀರಂಗಪಟ್ಟಣದ ದೇಗುಲದ ಬಳಿಯ ನಿರ್ಜನ ಪ್ರದೇಶದಲ್ಲಿ ಪಾರ್ಶ್ವವಾಯು ಪತ್ನಿಗೆ ಹೆರಿಗೆ ಮಾಡಿಸಿದ ಪತಿ!
ಶ್ರೀರಂಗಪಟ್ಟಣದಲ್ಲಿ ಕುಟುಂಬದಿಂದ ತಿರಸ್ಕೃತ ದಂಪತಿಗೆ ನಿರ್ಜನ ಪ್ರದೇಶದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಪತಿಯೇ ಹೆರಿಗೆ ಮಾಡಿಸಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
Karnataka News Live ಮೊಬೈಲ್ ನೋಡಿ ಕುರುಡಾದ ವಿದ್ಯಾರ್ಥಿನಿ ವಿಡಿಯೋ ಮಾಡಿ ಕ್ಷಮೆ ಕೇಳಿದ ಶಿಕ್ಷಕಿ ವಂದನಾ ರೈ ಕಾರ್ಕಳ!
ಮೊಬೈಲ್ ಬಳಕೆಯಿಂದ ಮಕ್ಕಳ ಕಣ್ಣು ಕುರುಡಾಗುವ ಬಗ್ಗೆ ವಂದನಾ ರೈ ಟೀಚರ್ ಮಾಡಿದ್ದ ವಿಡಿಯೋಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ. ವಿಡಿಯೋವನ್ನು ಡಿಲೀಟ್ ಮಾಡಿದ್ದು, ಅವರ ಮುಂದಿನ ಹೇಳಿಕೆ ದಾಖಲಿಸಿದ್ದಾರೆ.
Karnataka News Live ಟೀಕೆಗಳಿಗೆ ಬಗ್ಗದ ಸರ್ಕಾರ, 17,700 ಕೋಟಿ ವೆಚ್ಚದ ಸುರಂಗ ರಸ್ತೆಗೆ ಜಾಗತಿಕ ಬಿಡ್ ಆಹ್ವಾನಿಸಿದ ಬೆಂಗಳೂರು ಸಂಸ್ಥೆ!
ಸುರಂಗ ರಸ್ತೆ ಯೋಜನೆಯ ವಿರುದ್ಧ ಸಾರ್ವಜನಿಕ ಟೀಕೆಗಳು ಹೆಚ್ಚುತ್ತಿರುವ ನಡುವೆಯೇ, ಕಾಂಗ್ರೆಸ್ ನೇತೃತ್ವದ ಸರ್ಕಾರವು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೆಚ್ಚಿನ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.
Karnataka News Live ಜನಪ್ರಿಯ ಪಂಚಾಯತ್ ಸಿರೀಸ್ ನಟನಿಗೆ ಹೃದಯಾಘಾತ, ಆಸ್ಪತ್ರೆ ದಾಖಲು
ಇತ್ತೀಚೆಗಷ್ಟೇ ಪಂಚಾಯತ್ ಸೀಸನ್ 4 ಬಿಡುಗಡೆಯಾಗಿದೆ. ಭಾರಿ ಜನಪ್ರಿಯತೆ ಹಾಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಪಂಚಾಯತ್ ಸೀರಿಸ್‌ನ ನಟ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ.
Karnataka News Live Shower Bath - ಶವರ್ನಲ್ಲಿ ಸ್ನಾನ ಮಾಡ್ತೀರಾ? ನೀವು ಮಾಡೋ ಈ ಒಂದು ತಪ್ಪು ಜೀವಕ್ಕೆ ಕುತ್ತು! ವೈದ್ಯೆ ಮಾತು ಕೇಳಿ
ನಾವು ಪ್ರತಿನಿತ್ಯ ಮಾಡುವ ಸ್ನಾನದ ಕ್ರಮದಿಂದಲೂ ಅನಾರೋಗ್ಯ ಸಮಸ್ಯೆ ತಂದುಕೊಳ್ಳುತ್ತಿದ್ದೇವೆ ಎನ್ನುವುದು ಗೊತ್ತಿದ್ಯಾ? ಶವರ್ನಲ್ಲಿ ಸ್ನಾನ ಮಾಡುವ ಪ್ರತಿಯೊಬ್ಬರೂ ಈ ವೈದ್ಯೆಯ ಮಾತು ಕೇಳಲೇಬೇಕು.
Karnataka News Live ಅತೀ ಕಡಿಮೆ ಬೆಲೆ ಎಸ್‌ಯುವಿ ನಿಸ್ಸಾನ್ ಮ್ಯಾಗ್ನೈಟ್ ಕಾರಿಗೆ 86,000 ರೂ ಡಿಸ್ಕೌಂಟ್
ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ 2 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಈ ಸಂಭ್ರಮದಲ್ಲಿರುವ ನಿಸ್ಸಾನ್ ಇಂಡಿಯಾ ಇದೀಗ ಬರೋಬ್ಬರಿ 86,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ.
Karnataka News Live ಸರೋಜಾದೇವಿ ಪ್ರತಿಮೆಗಿಂತ ಹೆಸರುಳಿಸುವ ಕೆಲಸ ಮಾಡ್ತೇವೆ; ರಸ್ತೆಗೆ ಹೆಸರಿಡುವ ಸುಳಿವು ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್!
ದಕ್ಷಿಣ ಭಾರತದ ಖ್ಯಾತ ನಟಿ ಬಿ. ಸರೋಜಾದೇವಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಸರೋಜಾದೇವಿ ಅವರ ಕಲಾ ಸೇವೆಯನ್ನು ಸ್ಮರಿಸಿ, ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
Karnataka News Live ರೈತರ ಪ್ರತಿಭಟನೆಗೆ ಮಣಿದ ಸಿದ್ದು, ಏರೋಸ್ಪೇಸ್ ಪಾರ್ಕ್‌ಗೆ 1777 ಎಕರೆ ಭೂಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ!
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ರೈತರ ವಿರೋಧದ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜಮೀನು ನೀಡಲು ಇಚ್ಛಿಸುವ ರೈತರಿಗೆ ಹೆಚ್ಚಿನ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
Karnataka News Live ಕರ್ನಾಟಕ NEET UG 2025 ಕೌನ್ಸೆಲಿಂಗ್ ದಿನಾಂಕ ವಿಸ್ತರಣೆ, ಇನ್ನೆರಡು ದಿನವಷ್ಟೇ ಅವಕಾಶ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) NEET UG 2025 ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಲು ಜುಲೈ 17 ರವರೆಗೆ ಗಡುವನ್ನು ವಿಸ್ತರಿಸಿದೆ. ದಾಖಲೆ ಪರಿಶೀಲನೆ ಜುಲೈ 18 ರಿಂದ 19 ರವರೆಗೆ ನಡೆಯಲಿದೆ. cetonline.karnataka.gov.in ನಲ್ಲಿ ನೋಂದಾಯಿಸಿ.
Karnataka News Live ಕರ್ನಾಟಕದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹಗರಣ, ಅನರ್ಹ ವಿದ್ಯಾರ್ಥಿಗಳಿಗೆ 1.3 ಕೋಟಿ ಹಣ!
ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಹಗರಣದಲ್ಲಿ ಕರ್ನಾಟಕದ ಲಿಂಕ್ ಪತ್ತೆಯಾಗಿದೆ. 2021 ಮತ್ತು 2023 ರ ನಡುವೆ 1.3 ಕೋಟಿ ರೂ.ಗೂ ಹೆಚ್ಚು ವಂಚನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಹತೆ ಇಲ್ಲದ 643 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ.
Karnataka News Live ಬೆಂಗಳೂರಲ್ಲಿ ರೈಡ್ ದುಬಾರಿ? 175 ರೂ ಆಟೋ ರದ್ದು ಮಾಡಿ ₹12 ಕೊಟ್ಟು ಬಸ್‌ಲ್ಲಿ ಉದ್ಯಮಿ ಪ್ರಯಾಣ
ಬೆಂಗಳೂರಿನ ಎಥರ್ ಸ್ಕೂಟರ್ ಕಂಪನಿ ಸಹ ಸಂಸ್ಥಾಪಕ ಬೆಂಗಳೂರಿನ ಆಟೋ ಹಾಗೂ ಕ್ಯಾಬ್ ಪ್ರಯಾಣ ದರ ಪ್ರಶ್ನಿಸಿದ್ದಾರೆ. ಕಾರಣ 4 ಕಿಲೋಮೀಟರ್ ದೂರದ ಕಚೇರಿಗೆ ತೆರಳಲು ಆಟೋ ಬುಕ್ ಮಾಡಲು 175 ರೂಪಾಯಿ, ಬಿಎಂಟಿಸಿ ಬಸ್‌ನಲ್ಲಿ 12 ರೂಪಾಯಿ .