ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಾರು ಈಗಾಗಲೇ ಭಾರತಕ್ಕೆ ಎಂಟ್ರಿಕೊಟ್ಟಿದೆ. ಇದೀಗ ವಿನ್‌ಫಾಸ್ಟ್ VF 6 ಹಾಗೂ VF 7 ಕಾರಿನ ಬುಕಿಂಗ್ ಆರಂಭಗೊಂಡಿದೆ. ಕೇವಲ 21,000 ರೂಪಾಯಿಗೆ ವಿನ್‌ಫಾಸ್ಟ್ ಕಾರು ನಿಮ್ಮದಾಗಿಸಿಕೊಳ್ಳಬಹುದು.
ನವದೆಹಲಿ (ಜು.15) ಭಾರತದಲ್ಲಿ ಇದೀಗ ಹೊಸ ಹೊಸ ಕಾರು ಬ್ರ್ಯಾಂಡ್ ಎಂಟ್ರಿಕೊಡುತ್ತಿದೆ. ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಾರು ಈಗಾಗಲೇ ಭಾರತಕ್ಕೆ ಎಂಟ್ರಿಕೊಟ್ಟಿದೆ. ಇಂದು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಎಲೆಕ್ಟ್ರಿಕ್ ಅಧಿಕೃತವಾಗಿ ಎಂಟ್ರಿಕೊಟ್ಟಿದೆ. ಈ ಪೈಕಿ ವಿನ್‌ಫಾಸ್ಟ್ ಕಾರು ಈಗಾಗಲೇ ಭಾರತಕ್ಕೆ ಎಂಟ್ರಿಕೊಟ್ಟಿದೆ. ಭಾರತದ ಆಟೋ ಎಕ್ಸ್‌ಪೋದಲ್ಲಿ ವಿನ್‌ಫಾಸ್ಟ್ ಕಾರು ಅನಾವರಣ ಮಾಡಲಾಗಿತ್ತು. ಇದೀಗ ವಿನ್‌ಫಾಸ್ಟ್ ಕಾರು ಪ್ರೀ ಬುಕಿಂಗ್ ಆರಂಭಗೊಡಿದೆ. ಕೇವಲ 21,000 ರೂಪಾಯಿಗೆ ವಿಯೆಟ್ನಾಂ ಮೂಲದ ಕಾರು ಬುಕಿಂಗ್ ಮಾಡಬಹುದು.
ಬುಕಿಂಗ್ ಹಣ ರಿಫೇಂಡೇಬಲ್
ವಿನ್‌ಫಾಸ್ಟ್ ಕಾರು ಬುಕಿಂಗ್ ಮಾಡಲು ಕೇವಲ 21,000 ರೂಪಾಯಿ ಮಾತ್ರ ಸಾಕು. ಇನ್ನು ಯಾವುದೇ ಕ್ಷಣದಲ್ಲಿ ವಿನ್‌ಫಾಸ್ಟ್ ಕಾರು ಬುಕಿಂಗ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ, ಬುಕಿಂಗ್ ಪಾವತಿ ಮೊತ್ತ 21,000 ರೂಪಾಯಿ ಸಂಪೂರ್ಣ ಹಣ ಮರುಪಾವತಿಯಾಗಲಿದೆ.
VF 6 ಹಾಗೂ VF 7 ಎರಡು ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಲಭ್ಯ
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಆರಂಭಿಕ ಹಂತದಲ್ಲಿ 2 ಮಾಡೆಲ್ ಕಾರು ಬಿಡುಗಡೆ ಮಾಡುತ್ತಿದೆ. VF 6 ಹಾಗೂ VF 7 ಎರಡು ಮಾಡೆಲ್ ಲಭ್ಯವಾಗಲಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಎರಡು ಕಾರುಗಳ ಪ್ರದರ್ಶನ ನಡೆದಿತ್ತು. ಬೆಂಗಳೂರಿನ ಲುಲು ಮಾಲ್‌ನಲ್ಲಿ ವಿನ್‌ಫಾಸ್ಟ್ ಕಾರು ಪ್ರದರ್ಶನಕ್ಕಿಡಲಾಗಿತ್ತು.
ಭಾರತದಲ್ಲೇ ಉತ್ಪಾದನೆಗೊಳ್ಳಲಿದೆ ವಿನ್‌ಫಾಸ್ಟ್ ಕಾರು
ವಿನ್‌ಫಾಸ್ಟ್ ಕಾರು ಭಾರತದಲ್ಲೇ ಉತ್ಪಾದನೆಗೊಳ್ಳುತ್ತಿದೆ ಅನ್ನೋದು ಮತ್ತೊಂದು ವಿಶೇಷ. ತಮಿಳುನಾಡಿನ ತೂತುಕುಡಿಯಲ್ಲಿ ಉತ್ಪಾದನಾ ಘಟಕದಲ್ಲಿ ವಿನ್‌ಫಾಸ್ಟ್ ಕಾರು ಉತ್ಪಾದನೆಯಾಗಲಿದೆ. ಭಾರತ ಹಾಗೂ ನೆರೆ ಏಷ್ಯಾ ದೇಶಗಳಿಗೆ ಭಾರತದಿಂದಲೇ ರಫ್ತಾಗಲಿದೆ.
VF 6 ಹಾಗೂ VF 7 ಕಾರಿನ ಮೈಲೇಜ್
VF 6 ಕಾರು 2 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇಕೋ ಹಾಗೂ ಪ್ಲಸ್ ಮಾಡೆಲ್‌ನಲ್ಲಿ ಲಭ್ಯವಿದೆ. ಈ ಕಾರು 178 bhp ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 59.6 kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 399 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಪ್ಲಸ್ ವೇರಿಯೆಂಟ್ ಕಾರು 381 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಕಾರು 204 bhp ಪವರ್ 310 Nm ಟಾರ್ಕ್ ಸಾಮರ್ಥ್ಯ ಹೊಂದಿದೆ.
VF 7 ಕಾರು 75.3 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಪೈಕಿ ಇಕೋ ಟ್ರಿಮ್ ವೇರಿಯೆಂಟ್ ಕಾರು 204 bhp ಪವರ್ ಹಾಗೂ 310 Nm ಸಾಮರ್ಥ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 450 ಕಿಲೋಮೀಟರ್ ಮೈಲೇಜ್ ನೀಡಲಿದೆ. VF 7 ಪ್ಲಸ್ ವೇರಿಯೆಂಟ್ ಕಾರು ಡ್ಯುಯೆಲ್ ಮೋಟಾರ್‌ನಲ್ಲಿ ಲಭ್ಯವಿದೆ.ಹೀಗಾಗಿ ಆಲ್ ವ್ಹೀಲ್ ಡ್ರೈವ್ ಆಯ್ಕೆ ಲಭ್ಯವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ಮೈಲೇಜ್ ನೀಡಲಿದೆ. ಆಗಸ್ಟ್ ತಿಂಗಳಲ್ಲಿ ವಿನ್‌ಪಾಸ್ಟ್ VF 6 ಹಾಗೂ VF ಕಾರು ಬಿಡುಗಡೆಯಾಗಲಿದೆ.
