ಇತ್ತೀಚೆಗಷ್ಟೇ ಪಂಚಾಯತ್ ಸೀಸನ್ 4 ಬಿಡುಗಡೆಯಾಗಿದೆ. ಭಾರಿ ಜನಪ್ರಿಯತೆ ಹಾಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಪಂಚಾಯತ್ ಸೀರಿಸ್‌ನ ನಟ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ.

ಮುಂಬೈ (ಜು.15) ಪಂಚಾಯತ್ ಸೀರಿಸ್ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇತ್ತೀಚೆಗೆ ಪಂಚಾಯತ್ ಸಿರೀಸ್ 4 ಬಿಡುಗಡೆಯಾಗಿದೆ. ನಾಲ್ಕು ಸೀರಿಸ್ ಭಾರಿ ಜನ ಮನ್ನಣೆ ಪಡೆದುಕೊಂಡಿದೆ. ಕಲೆಕ್ಷನ್‌ನಲ್ಲೂ ಪಂಚಾಯತ್ ದಾಖಲೆ ಬರೆದಿದೆ. ಪಂಚಾಯತ್ ಸಿರೀಸ್‌ನಲ್ಲಿ ನಟಿಸಿದ ಎಲ್ಲಾ ನಟ ನಟಿಯರು ಬಾಲಿವುಡ್ ಸೆಲೆಬ್ರೆಟಿ ರೀತಿ ಸ್ಟಾರ್ ಆಗಿದ್ದಾರೆ. ಈ ಪೈಕಿ ಪಂಚಾಯತ್‌ ಸಿರೀಸ್‌ನಲ್ಲಿ ಜನರ ಪ್ರೀತಿಗೆ ಪಾತ್ರವಾಗಿರುವ ಪಾತಾಳ ಲೋಕ ನಟ ಆಸಿಫ್ ಖಾನ್ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಮುಂಬೈನ ಕೊಕಿಲಾ ಬೆನ್ ಆಸ್ಪತ್ರೆಯಲ್ಲಿ ಸದ್ಯ ಚಿಕತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಅಸಿಫ್ ಖಾನ್‌ಗೆ ಚಿಕಿತ್ಸೆ

ಹೃದಯಾಘಾತದಿಂದ ಆಸಿಫ್ ಖಾನ್ ಆಸ್ಪತ್ರೆ ದಾಖಲಾಗಿದ್ದಾರೆ. ದಿಢೀರ್ ಎದೆನೋವಿನಿಂದ ಬಳಲಿದ ಆಸಿಫ್ ಖಾನ್‌ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಪಡೆಯುತ್ತಿರುವ ಆಸಿಫ್ ಖಾನ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ದಿಢೀರ್ ಎದುರಾದ ಆರೋಗ್ಯ ಸಮಸ್ಯೆ ಕುರಿತು ನಟ ಆಸಿಫ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಒಂದು ಕ್ಷಣದಲ್ಲಿ ಎಲ್ಲವು ಬದಲಾಗಲಿದೆ

ಕಳೆದ 36 ಗಂಟೆ ಎದುರಿಸಿದ ಸಮಸ್ಯೆ ಹಾಗೂ ಸವಾಲು ನೋಡಿದಾಗ ಜೀವನ ಅದೆಷ್ಟು ಚಿಕ್ಕದು ಎಂದು ಅನಿಸುತ್ತಿದೆ. ಜೀವನ ಒಂದು ದಿನವನ್ನೂ ಲಘುವಾರಿ ಪರಿಗಣಿಸಬೇಡಿ. ಒಂದು ಕ್ಷಣದಲ್ಲಿ ಎಲ್ಲವೂ ಬದಲಾಗಬಹುದು. ಹೀಗಾಗಿ ನೀವೇನಾಗಿದ್ದೀರಿ, ನಿಮಗಿರುವ ಎಲ್ಲದರ ಬಗ್ಗೆ ಕೃತಜ್ಞರಾಗಿರಿ. ನಿಮ್ಮ ಆತ್ಮೀಯರು ಅಥವಾ ಆಪ್ತರ ಬಗ್ಗೆ ಕಾಳಜಿ ಇರಲಿ, ಅವರ ಬೆಂಬಲಕ್ಕೆ, ಅವರ ನಗುವಿಗೆ ಕಾರಣರಾಗಿ. ಜೀವನ ಅನ್ನೋದು ಒಂದು ಉಡುಗೊರೆ, ನಾವು ದೇವರ ಆಶೀರ್ವಾದದಿಂದ ಇದ್ದೇವೆ ಎಂದು ಅಸಿಫ್ ಖಾನ್ ಹೇಳಿದ್ದಾರೆ.

ಕಳೆದ ಕೆಲ ಗಂಟೆಗಳಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ. ಹೀಗಾಗಿ ಆಸ್ಪತ್ರೆ ದಾಖಲಾಗಿದ್ದೇನೆ. ಇದೀಗ ನಾನು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಸದ್ಯ ಆರೋಗ್ಯ ಸುಧಾರಿಸುತ್ತಿದೆ. ನಿಮ್ಮ ಎಲ್ಲಾ ಪ್ರೀತಿ, ಹಾರೈಕೆಗೆ ಆಭಾರಿಯಾಗಿದ್ದೇನೆ. ನಿಮ್ಮ ಬೆಂಬಲ ನನ್ನ ಶಕ್ತಿ ಇಮ್ಮಡಿಗೊಳಿಸಿದೆ. ಶೀಘ್ರದಲ್ಲೇ ನಾನು ಮರಳುತ್ತೇನೆ. ನಿಮ್ಮ ಪ್ರಾರ್ಥನೆ, ಪ್ರೀತಿ ಹೀಗೆ ಇರಲಿ ಎಂದು ಆಸಿಫ್ ಖಾನ್ ಹೇಳಿದ್ದಾರೆ.

ಪಂಚಾಯತ್ ಸೀರಿಸ್‌ನಲ್ಲಿ ಗಣೇಶ್ ಅನ್ನೋ ಪಾತ್ರ ನಿಭಾಯಿಸಿ ಭಾರಿ ಮೆಚ್ಚುಗೆ ಗಳಿಸಿರುವ ಆಸಿಫ್ ಖಾನ್ ಇದೀಗ ಚೇತರಿಸಿಕೊಂಡಿದ್ದಾರೆ. ಪಂಚಾಯತ್ ಸಿರೀಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಜೀತೇಂದ್ರ ಕುಮಾರ್, ರಘುಬೀರ್ ಯಾದವ್, ನೀನಾ ಗುಪ್ತಾ, ಚಂದನ್ ರಾಯ್, ಫೈಸಲ್ ಮಲಿಕ್, ಸಾನ್ವಿಕಾ, ದುರ್ಗೇಶ್ ಕುಮಾರ್, ಅಶೋಕ್ ಪಾಠಕ್, ಸುನಿತಾ ರಾಜ್ವಾರ್, ಪಂಕಜ್ ಝಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.