ಮಾದಕತೆಯಿಂದಲೇ ಸದ್ದು ಮಾಡ್ತಿರೋ ನಟಿ ನೇಹಾ ಧೂಪಿಯಾ, ನಗ್ನ ದೇಹ ಹಾಗೂ ಲೈಂ*ಗಿಕ ಕ್ರಿಯೆಯನ್ನು ಶಾರುಖ್ ಖಾನ್ಗೆ ಹೋಲಿಸಿದ್ದಾರೆ. ಅವರು ಹೇಳಿದ್ದೇನು ನೋಡಿ!
ಹಾಟ್ ಲುಕ್ ಹಾಗೂ ಮಾದಕ ಡ್ಯಾನ್ಸ್‌ನಿಂದಲೇ ಚಿತ್ರಗಳ ಯಶಸ್ಸಿಗೆ ಕಾರಣರಾದವರು ನಟಿ ನೇಹಾ ಧೂಪಿಯಾ. ಮದುವೆಗೂ ಮುನ್ನವೇ ಪ್ರೆಗ್ನೆಂಟ್ ಆಗಿ ಸಕತ್ ಸದ್ದು ಮಾಡಿದ್ದ ನಟಿ ಸದ್ಯ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಅಂಗದ್ ಬೇಡಿ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ನೇಹಾ ಧೂಪಿಕಾ ಸಕತ್ ಸದ್ದು ಮಾಡಿದ್ದು, 2004ರಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಬಾಲಿವುಡ್ನ 'ಜೂಲಿ' (Julie) ಚಿತ್ರದಲ್ಲಿ. ವೇ*ಶ್ಯೆ ಜೂಲಿಯ ಪಾತ್ರದಲ್ಲಿ ಇವರು ನಟಿಸಿದ್ದಾರೆ. ಬಹುತೇಕ ನಗ್ನ ರೀತಿಯಲ್ಲಿ ಈಕೆಯನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ಆಗ ಟ್ರೋಲ್ಗೆ ಒಳಗಾಗಿದ್ದ ನಟಿ, ನನಗೆ ಲೈಂ*ಗಿಕತೆಯ ಟ್ಯಾಗ್ ಕೊಡಲಾಗಿದೆ. ಇದಕ್ಕೆ ನನಗೆ ಸ್ವಲ್ಪವೂ ಬೇಜಾರಿಲ್ಲ ಎಂದಿದ್ದರು. ಇದೇ ಸಮಯದಲ್ಲಿ ನಟಿ ಶಾರುಖ್ ಖಾನ್ ಬಗ್ಗೆ ಹೇಳಿದ್ದ ಹೇಳಿಕೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡ್ತಿದೆ.
ತಮ್ಮ ನಗ್ನ ದೇಹದ ಪ್ರದರ್ಶನವನ್ನು ಶಾರುಖ್ ಖಾನ್ ಜೊತೆ ಹೋಲಿಸಿದ್ದ ನಟಿ, 'ಈಗಿನ ಕಾಲದ ಸಿನಿಮಾಗಳಲ್ಲಿ ಶಾರುಖ್ ಖಾನ್ ಇರಬೇಕು ಇಲ್ಲವೇ ಚಿತ್ರದಲ್ಲಿ ಸೆ*ಕ್ಸ್ ಇರಬೇಕು. ಶಾರುಖ್ ಖಾನ್ ಇಲ್ಲವೆಂದರೆ ಸೆ*ಕ್ಸ್ ಇರಬೇಕು. ಅದಕ್ಕಾಗಿ ನಾನು ಬೇಕಾದರೆ ಮುಂದಿನ 5 ಸಿನಿಮಾಗಳಲ್ಲಿ ನಾನು ಗ್ಲಾಮರ್ ಪಾತ್ರಗಳಿಗೆ ಸೀಮಿತ ಆಗಬಹುದು' ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ಆಗ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅದು ಮತ್ತೀಗ ವೈರಲ್ ಆಗ್ತಿದೆ.
ನೇಹಾರ ಮಾತು ಪಠಾಣ್ ಸಮಯದಲ್ಲಿ ದೀಪಿಕಾ ಪಡುಕೋಣೆಯವರ ಕೇಸರಿ ಡ್ರೆಸ್ ಸಾಕಷ್ಟು ಸದ್ದು ಮಾಡಿದ್ದಾಗ ಕೇಳಿಬಂದಿತ್ತು. ದೀಪಿಕಾ ಪಡುಕೋಣೆಯ ಡ್ರೆಸ್ ನೋಡಿದ ನೆಟ್ಟಿಗರೊಬ್ಬರು, ನೇಹಾ ಅವರು ಈ ಮಾತನ್ನು ಟ್ವಿಟರ್ನಲ್ಲಿ ನೆನಪು ಮಾಡಿಕೊಂಡಿದ್ದರು. ಪಠಾಣ್ ಚಿತ್ರದ ದೃಶ್ಯದ ಜೊತೆಗೆ ನೇಹಾ ಅವರ ಮಾತನ್ನು ಟ್ವೀಟ್ನಲ್ಲಿ ಹೇಳಿರುವ ಅವರು, 'ಸಿನಿಮಾದಲ್ಲಿ ಶಾರುಖ್ ಇರಬೇಕು ಇಲ್ಲವೇ ಲೈಂಗಿಕತೆ ಇರಬೇಕು ಎನ್ನುವ ಮಾತು ಇವತ್ತಿಗೂ ನಿಜ" ಎಂದಿದ್ದರು. ಈ ಟ್ವಿಟ್ ಗಮನಿಸಿದ ನೇಹಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, 'ನಾನು ಆ ಹೇಳಿಕೆ ನೀಡಿ 20 ವರ್ಷವಾಗಿದೆ. ಇಂದಿಗೂ ನನ್ನ ಹೇಳಿಕೆ ಸತ್ಯವಾಗಿಯೇ ಉಳಿದುಕೊಂಡಿದೆ. ಇದು ಕಲಾವಿದನ ವೃತ್ತಿ ಅಲ್ಲ, ಈಗೇನಿದ್ದರೂ ಕಿಂಗ್ ಆಳ್ವಿಕೆ' ಎಂದಿದ್ದಾರೆ.
ಪಠಾಣ್ ಸಿನಿಮಾದ ಶಾರುಖ್ ಖಾನ್ ಅವರ ಅರೆನಗ್ನ ದೇಹದ ಫೋಟೋ ಹಂಚಿಕೊಂಡ ನೇಹಾ ಧೂಪಿಯಾ ಅವರು, 'ಶಾರುಖ್ ಖಾನ್ ಅವರೇ, ನಾವು ನಿಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಬರಿಯ ಮಾತಿನಲ್ಲಿ ಹೇಳುವುದು ತೀರಾ ಕಷ್ಟ. ದೀಪಿಕಾ ಪಡುಕೋಣೆ (Deepika Padukone) ಅವರೇ... ನಿಮ್ಮ ತಂತ್ರ ಮತ್ತು ಕಾಂತಿಯಿಂದ ನೀವು ಪಠಾಣ್ ಚಿತ್ರಕ್ಕೆ ಕಿಚ್ಚು ಹಚ್ಚಿದ್ದೀರಿ. ಜಾನ್ ಅಬ್ರಹಾಂ ಅವರೇ ಕೆಟ್ಟ ಲುಕ್‌ನಲ್ಲಿಯೂ ಸೂಪರ್ ಕಾಣಿಸುತ್ತಿದ್ದೀರಿ. ಚಿತ್ರರಂಗದ ಇತಿಹಾಸದಲ್ಲಿಯೇ ಅದ್ಭುತವಾದ ಅತಿಥಿ ಪಾತ್ರ ಮಾಡಿದ್ದಾರೆ ಸಲ್ಮಾನ್ ಖಾನ್ (Salman Khan). ಅವರನ್ನು ನೋಡಲು ಥಿಯೇಟರಿಗೆ ಹೋಗಬೇಕು' ಎಂದು ನೇಹಾ ಹೇಳಿದ್ದಾರೆ.
