11:13 PM (IST) Mar 14

Karnataka News Live 14 March 2026ಅನುದಾನ ಕೊರತೆ ಸ್ಥಗಿತವಾದ ₹21 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆ - ಕೆಲಸವೇ ಇಲ್ಲದೆ ಕಚೇರಿ ಕಾಯೋಕೆ ನೂರೆಂಟು ಮಂದಿ!

₹21 ಸಾವಿರ ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ಕೊರತೆಯಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಚೇರಿ ಸಿಬ್ಬಂದಿ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದು, ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಕೇಂದ್ರ ,ರಾಜ್ಯ ಸರ್ಕಾರಗಳ ನಡುವಿನ ಜಟಾಪಟಿಯಿಂದಾಗಿ ಭವಿಷ್ಯ ಅತಂತ್ರವಾಗಿದೆ.

Read Full Story
10:48 PM (IST) Mar 14

Karnataka News Live 14 March 2026ಟ್ರೆಂಡ್ ಆದ ಕೆಡಿ ಸಿನಿಮಾದ ಸೆರಗು ಹಾಡು, ಬಾಲಿವುಡ್‌ನ ನೋರಾ ಹಾಗೂ ಸಂಜಯ್ ದತ್ ಮೋಡಿ

ಟ್ರೆಂಡ್ ಆದ ಕೆಡಿ ಸಿನಿಮಾದ ಸೆರಗು ಹಾಡು, ಬಾಲಿವುಡ್‌ನ ನೋರಾ ಹಾಗೂ ಸಂಜಯ್ ದತ್ ಮೋಡಿ, ಧ್ರುವ ಸರ್ಜ ಬಹುನಿರೀಕ್ಷಿತ ಸಿನಿಮಮಾದಲ್ಲಿ ಬಾಲಿವುಡ್ ರಂಗು ಕಳೆಗಟ್ಟಿದೆ. ಸೆರಗಿನ ಹಾಡು ಇದೀಗ ಭಾರಿ ಸದ್ದು ಮಾಡುತ್ತಿದೆ.

Read Full Story
10:32 PM (IST) Mar 14

Karnataka News Live 14 March 2026ಬೆಂಗಳೂರಿನ ರಸ್ತೆಬದಿ ಕೇಳಿದ ಆ ಕಂದನ ಕೂಗು! ಆಗಷ್ಟೇ ಹುಟ್ಟಿದ ಹೆಣ್ಣುಮಗುವನ್ನು ರೋಡಲ್ಲಿ ಬಿಟ್ಟು ಹೋದ ಪೋಷಕರು!

ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ, ಹೆಣ್ಣು ಮಗು ಜನಿಸಿದ್ದ ಕಾರಣಕ್ಕೆ ಪೋಷಕರು ನವಜಾತ ಶಿಶುವನ್ನು ರಸ್ತೆಬದಿಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ. ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಮಗು ಆರೋಗ್ಯವಾಗಿದೆ. ಸದ್ಯ ಪೋಷಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Read Full Story
10:00 PM (IST) Mar 14

Karnataka News Live 14 March 2026ಬೆಂಗಳೂರಲ್ಲಿ ಫೋಟೋಗ್ರಫಿ ದುರಂತ - ಪಾಳು ಬಿದ್ದ ರೆಸಾರ್ಟ್‌ಗೆ ಶೂಟಿಂಗ್‌ಗೆ ಹೋದ ಬಾಲಕ ಆಯತಪ್ಪಿ ಬಿದ್ದು ಸಾವು!

ಬೆಂಗಳೂರಿನ ಅನ್ನಪೂರ್ಣೇಶ್ವರಿನಗರದಲ್ಲಿ, ಫೋಟೋಶೂಟ್ ಮಾಡಲು ಸ್ನೇಹಿತರೊಂದಿಗೆ ಪಾಳುಬಿದ್ದ ರೆಸಾರ್ಟ್‌ಗೆ ತೆರಳಿದ್ದ 15 ವರ್ಷದ ಬಾಲಕ ನಿಶಾಂತ್, ಹಳೆಯ ಕಟ್ಟಡದ ಮೇಲಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಆತ, ಗಂಭೀರ ಗಾಯಗಳಿಂದಾಗಿ ಮೃತಪಟ್ಟಿದ್ದಾನೆ.
Read Full Story
09:47 PM (IST) Mar 14

Karnataka News Live 14 March 2026ಯುದ್ಧದಿಂದ ರಾಜ್ಯದಲ್ಲಿ ಸಿಲುಕಿರುವ ಪ್ರವಾಸಿಗರ ಆತಿಥ್ಯಕ್ಕೆ ಕ್ರಮ - ಸಚಿವ ಎಚ್‌.ಕೆ.ಪಾಟೀಲ್‌

ಅಂತಾರಾಷ್ಟ್ರೀಯ ಪ್ರವಾಸಿಗರ ಆತಿಥ್ಯ ವಹಿಸಿಕೊಳ್ಳಲು ರಾಜ್ಯ ಸರ್ಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಅವರು ರಾಜ್ಯದಲ್ಲಿ ಸುರಕ್ಷಿತವಾಗಿ ಉಳಿಯಬಹುದಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

Read Full Story
09:32 PM (IST) Mar 14

Karnataka News Live 14 March 2026ಅನುದಾನದ ಲೆಕ್ಕವನ್ನು ಜಿಲ್ಲೆಯ ಜನರು ಕೇಳಬೇಕೆ ಹೊರತು ಸಂಸದರಲ್ಲ - ಸಚಿವ ಚಲುವರಾಯಸ್ವಾಮಿ

ರಾಜ್ಯ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನರು ಕೇಳಬೇಕೆ ಹೊರತು ಸಂಸದರಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.

Read Full Story
09:22 PM (IST) Mar 14

Karnataka News Live 14 March 2026ಆನ್‌ಲೈನ್‌ನಲ್ಲಿ ಆಂಧ್ರದಿಂದ ಅಕ್ಕಿ ಖರೀದಿಸಲು ಬಿಎಂಟಿಸಿ ಚಾಲಕನ ಹುಡುಕಾಟ, 1 ಲಿಂಕ್, 10 ನಿಮಿಷ ಖಾತೆ ಸಂಪೂರ್ಣ ಖಾಲಿ!

ಬೆಂಗಳೂರಿನ ಬಿಎಂಟಿಸಿ ಚಾಲಕರೊಬ್ಬರು ಆಂಧ್ರದಿಂದ ಅಕ್ಕಿ ಸಾಗಿಸಲು ಆನ್‌ಲೈನ್‌ನಲ್ಲಿ ಸಾರಿಗೆ ಸೇವೆ ಹುಡುಕುವಾಗ ವಂಚಕರ ಬಲೆಗೆ ಬಿದ್ದಿದ್ದಾರೆ. ಅಪರಿಚಿತರು ಕಳುಹಿಸಿದ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಅವರು ತಮ್ಮ ಬ್ಯಾಂಕ್ ಖಾತೆಯಿಂದ ಸುಮಾರು 2.3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
Read Full Story
08:57 PM (IST) Mar 14

Karnataka News Live 14 March 2026ಒಡಿಶಾ ಕಾಂಗ್ರೆಸ್ ಶಾಸಕರಿಗೆ ಆಪರೇಷನ್ ಕಮಲದ ಭೀತಿ ಇಲ್ಲ - ಶಾಸಕ ಎಚ್.ಸಿ. ಬಾಲಕೃಷ್ಣ

ಒಡಿಶಾ ಶಾಸಕರು ಬಂದಿದ್ದಾರೆ. ಇದರಲ್ಲಿ ಆಪರೇಷನ್ ಕಮಲದ ಭೀತಿ ಏನೂ ಇಲ್ಲ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಅದನ್ನು ಸರಿ ಮಾಡುತ್ತೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.

Read Full Story
08:36 PM (IST) Mar 14

Karnataka News Live 14 March 2026ಯುಕೆಪಿ ಸಂತ್ರಸ್ತರಿಗೆ ಪರಿಹಾರ ಸಮಸ್ಯೆ ಇಲ್ಲ - ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದಿಷ್ಟು..

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ತಕ್ಷಣಕ್ಕೆ 8 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಈಗ ₹3450 ಕೋಟಿ ಪರಿಹಾರ ನೀಡಲಾಗುವುದು ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

Read Full Story
08:24 PM (IST) Mar 14

Karnataka News Live 14 March 2026ಬಳ್ಳಾರಿಯಲ್ಲಿ ₹55 ಕೋಟಿ ವೆಚ್ಚದಲ್ಲಿ ಇನ್‌ಕ್ಯುಬೇಷನ್‌ ಕೇಂದ್ರ - ಸಚಿವ ಪ್ರಿಯಾಂಕ್‌ ಖರ್ಗೆ

ಬಳ್ಳಾರಿ ಜಿಲ್ಲೆಯಲ್ಲಿ ₹55 ಕೋಟಿ ಇನ್‌ಕ್ಯುಬೇಷನ್‌ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಬಳ್ಳಾರಿಯಲ್ಲಿ 4.74 ಎಕರೆ ಭೂಮಿ ಕಾಯ್ದಿರಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Read Full Story
08:06 PM (IST) Mar 14

Karnataka News Live 14 March 2026ಮಹಿಳಾ ಸಬಲೀಕರಣ ಸಮಾಜದ ಅಭಿವೃದ್ಧಿಗೆ ಮುಖ್ಯ - ಸಚಿವ ರಾಮಲಿಂಗಾರೆಡ್ಡಿ

ಮಹಿಳೆಯರ ಸಬಲೀಕರಣ ಸಮಾಜದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದ್ದು, ಅವರಿಗೆ ಸಮಾನ ಅವಕಾಶ ಮತ್ತು ಸುರಕ್ಷಿತ ವಾತಾವರಣ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Read Full Story
07:26 PM (IST) Mar 14

Karnataka News Live 14 March 2026ಸುಮಲತಾ ಕೌಂಟರ್ ಕೊಟ್ಟಿದ್ದಕ್ಕೆ ಅಂಬರೀಶ್‌ಗೆ ವಾರ್ನಿಂಗ್ ಕೊಟ್ಟ ಮೋಹನ್ ಬಾಬು... ಆಮೇಲೆನಾಯ್ತು?

ಟಾಲಿವುಡ್‌ನ ಡೈಲಾಗ್ ಕಿಂಗ್, ಕಲೆಕ್ಷನ್ ಕಿಂಗ್ ಮೋಹನ್ ಬಾಬು ಅಂದ್ರೆ ಅವರಿಗೊಂದು ಬೇರೆಯೇ ಇಮೇಜ್ ಇದೆ. ಅವರ ಜೊತೆ ಮಾತಾಡೋಕೆ ಹಲವರು ಹೆದರುತ್ತಾರೆ. ಆದರೆ ಮೋಹನ್ ಬಾಬು ಕಾಮೆಂಟ್‌ಗೆ ಶಾಕ್ ಆಗುವಂತಹ ಕೌಂಟರ್ ಕೊಟ್ಟ ಆ ನಟಿ ಯಾರು ಗೊತ್ತಾ?

Read Full Story
06:38 PM (IST) Mar 14

Karnataka News Live 14 March 2026'ನಾಳೆ 10 ಗಂಟೆಗೆ ಒಂದು ಪೋಸ್ಟ್‌ ಮಾಡ್ತೀನಿ, ಮರು ಕ್ಷಣವೇ ಡಿಲೀಟ್‌ ಮಾಡ್ತೀನಿ..' ಜನರ ತಲೆಗೆ ಹುಳಬಿಟ್ಟ ಬುದ್ಧಿವಂತ ಉಪೇಂದ್ರ!

ನಟ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ನಿಗೂಢ ವಾರ್ನಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡಿ, ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡುವುದಾಗಿ ತಿಳಿಸಿದ್ದು, ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.

Read Full Story
06:08 PM (IST) Mar 14

Karnataka News Live 14 March 2026ತೆರೆಗೆ ಬರಲು ರೆಡಿಯಾದ ರೇಣುಕಾಸ್ವಾಮಿ ಕೊಲೆ ಕೇಸ್‌ ಆಧಾರಿತ ಸಿನಿಮಾ, 'ಬಾಸ್‌' ಸಿನಿಮಾದ ಅಸಲಿ ಬಾಸ್‌ ದರ್ಶನ್ ಅವರಾ?

'ಬಾಸ್' ಎಂಬ ಹೊಸ ಸಿನಿಮಾದ ಟೀಸರ್, ನಟ ದರ್ಶನ್ ಭಾಗಿಯಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಹೋಲುತ್ತಿದೆ ಎಂಬ ಚರ್ಚೆಗೆ ಕಾರಣವಾಗಿದೆ. ನಿರ್ದೇಶಕ ಲವ ಅವರು ಈ ಆರೋಪವನ್ನು ನಿರಾಕರಿಸಿದ್ದು, ಇದು ಸಮಾಜದಲ್ಲಿ ನಡೆದ ಹಲವು ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story
06:04 PM (IST) Mar 14

Karnataka News Live 14 March 2026!ಸೊರಬದಲ್ಲಿ ಅಪರೂಪದ ವೀರಗಲ್ಲು ಪತ್ತೆ! ಚಾಲುಕ್ಯ-ಕದಂಬರ ಕಾಲದ ಶಾಸನದಲ್ಲಿ ವೀರ ಕನ್ನಯ್ಯನ ಕಥೆ!

ಸೊರಬ ತಾಲೂಕಿನ ಕಾನಹಳ್ಳಿ ಗ್ರಾಮದಲ್ಲಿ ಕ್ರಿ.ಶ. ೧೨೦೭ರ ಅವಧಿಗೆ ಸೇರಿದ ಅಪರೂಪದ ವೀರಗಲ್ಲು ಪತ್ತೆಯಾಗಿದ್ದು, ಇದು ಚಾಲುಕ್ಯ ಅರಸ ಜಗದೇಕಮಲ್ಲ ಮತ್ತು ಕದಂಬ ದೊರೆ ಹೆಮ್ಮಾಡಿದೇವನ ಆಳ್ವಿಕೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಶಾಸನವು ಹಡವಳ ಕನ್ನಯ್ಯ ಎಂಬ ವೀರನ ಶೌರ್ಯಗಾಥೆಯನ್ನು ವಿವರಿಸುವುದಲ್ಲದೆ, ಸೊರಬದ ಇತಿಹಾಸಕ್ಕೆ ಹೊಸ ಮಾಹಿತಿಯನ್ನು ಸೇರಿಸಿದೆ.
Read Full Story
04:27 PM (IST) Mar 14

Karnataka News Live 14 March 2026ರಕ್ತದಾನ ಮಹಾದಾನ - ಯಾರು ಮಾಡಬಹುದು? ಏನು ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ

ಹಿಮೋಗ್ಲೋಬಿನ್ ಅಧಿಕವಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರಲ್ಲಿ ಅದು 18ರಿಂದ 23ರ ತನಕವೂ ಹೋಗಿ, ರಕ್ತ ದಪ್ಪವಾಗುತ್ತದೆ. ಇದರಿಂದ, ನರಗಳಲ್ಲಿ ನೀರಂತೆ ಹರಿಯುವ ನೆತ್ತರು ಗಟ್ಟಿಯಾಗಿ, ಗಂಟಾಗಿ ತೊಂದರೆಯಾಗುತ್ತದೆ.

Read Full Story
04:13 PM (IST) Mar 14

Karnataka News Live 14 March 2026ಗಮನಿಸಿ, ಇಂಟರ್ ಲಾಕಿಂಗ್ ಕಾಮಗಾರಿ ಹಿನ್ನೆಲೆ ಹಲವು ರೈಲು ಸಂಚಾರ ರದ್ದು, ಯಾವೆಲ್ಲ ಮಾರ್ಗದಲ್ಲಿ ಸಂಚಾರ ರದ್ದು?

ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗದ ನಾನ್‌ ಇಂಟರ್‌ಲಾಕಿಂಗ್ ಕಾಮಗಾರಿಯ ಕಾರಣ, ಮಾರ್ಚ್ 15, 16 ಮತ್ತು 17 ರಂದು ತುಮಕೂರು ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.
Read Full Story
03:58 PM (IST) Mar 14

Karnataka News Live 14 March 2026Bigg Boss ಇತಿಹಾಸದಲ್ಲೇ ದಾಖಲೆ ಬರೆದ ಲವರ್​ ಬಾಯ್​ ಸೂರಜ್​ ಸಿಂಗ್! ಇದೀಗ ಬಯಲು

ಬಿಗ್​ಬಾಸ್​ 12ರಲ್ಲಿ ಸ್ಪರ್ಧಿಸಿದ್ದ ಸಾಫ್ಟ್​ವೇರ್​ ಎಂಜಿನಿಯರ್​ ಸೂರಜ್​ ಸಿಂಗ್​, ಮನೆಯಿಂದ ಹೊರಬಂದ ನಂತರ 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾದರು. ಸೀರಿಯಲ್ ಪ್ರಮೋಷನ್‌ಗೆ ಬಿಗ್‌ಬಾಸ್ ಮನೆಗೆ ಹೋದರು. ಬಿಗ್‌ಬಾಸ್ ಇತಿಹಾಸದಲ್ಲಿಯೇ ದಾಖಲೆಯೊಂದನ್ನು ಸೃಷ್ಟಿಸಿದ್ದು ಅದರ ಬಗ್ಗೆ ನಟ ಹೇಳಿದ್ದೇನು? 

Read Full Story
02:39 PM (IST) Mar 14

Karnataka News Live 14 March 2026ಕುಂದಾಪುರದಲ್ಲಿ ರಿಷಬ್ ಶೆಟ್ಟಿ ಅವರ ₹12 ಕೋಟಿಯ ಅರಮನೆ - ಮನೆಯೊಳಗಿದೆ 300 ಕೆಜಿಯ ತುಳಸಿ ಕಟ್ಟೆ!

'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ತಮ್ಮ ಹುಟ್ಟೂರಾದ ಕುಂದಾಪುರದಲ್ಲಿ ಸುಮಾರು ₹12 ಕೋಟಿ ಮೌಲ್ಯದ ಭವ್ಯ ಬಂಗಲೆಯನ್ನು ನಿರ್ಮಿಸಿದ್ದಾರೆ. ಪರಂಪರೆ ಮತ್ತು ಆಧುನಿಕತೆಯ ಸಮ್ಮಿಶ್ರಣವಾಗಿರುವ ಈ ಮನೆಯು ಅರೇಬಿಯನ್ ಸಮುದ್ರದ ಸುಂದರ ನೋಟವನ್ನು ಹೊಂದಿದೆ.

Read Full Story
02:28 PM (IST) Mar 14

Karnataka News Live 14 March 2026ಎಲ್ಲರ ಜೊತೆ ಎಲ್ಲರೂ ಮಲಗ್ತಾರೆ; ಬಾಲಿವುಡ್‌ನ ಕರಾಳ ರಿಲೇಶನ್‌ಶಿಪ್‌ ಬಯಲು ಮಾಡಿದ ಖ್ಯಾತ ಪತ್ರಕರ್ತೆ

ತೆರೆ ಮೇಲೆ ಕಾಣಿಸೋದು ಬೇರೆ, ರಿಯಲ್‌ ಆಗಿ ಕಾಣುವುದೇ ಬೇರೆ. ತೆರೆ ಮೇಲೆ ಕಾಣಿಸದಂತೆ ಸೆಲೆಬ್ರಿಟಿಗಳ ಲೈಫ್‌ ಕೂಡ ಇರೋದಿಲ್ಲ. ಖ್ಯಾತ ಪತ್ರಕರ್ತೆ Simi Chandoke ಅವರು ಬಾಲಿವುಡ್‌ನ ರಿಲೇಶನ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ. 

Read Full Story