ಶ್ರೀಗನರದ ತುಲಿಪ್ ಗಾರ್ಡನ್ ಏಷ್ಯಾದ ಅತೀ ದೊಡ್ಡ ತುಲಿಪ್ ಹೂವುಗಳ ಗಾರ್ಡನ್ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಇದೀಗ ಇದೇ ಗಾರ್ಡನ್‌ನಲ್ಲಿ 17 ಲಕ್ಷ ತುಲಿಪ್ ಹೂವು ಅರಳುವ ಮೂಲಕ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.
ಶ್ರೀನಗರ(ಏ.14) ಭಾರತದ ಮುಕುಟ ಮಣಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ತುಲಿಪ್ ಗಾರ್ಡನ್ ಈಗಾಗಲೇ ಹಲವು ದಾಖಲೆ ಬರೆದಿದೆ. ಈ ವರ್ಷದ ತುಲಿಪ್ ಗಾರ್ಡನ್ ಭೇಟಿ ಕಳೆದ 17 ದಿನಗಳಿಂದ ಆರಂಭಗೊಂಡಿದೆ. ಪ್ರವಾಸಿಗರು ಕಳೆದ 17 ದಿನಗಳಿಂದ ತುಲಿಪ್ ಗಾರ್ಡನ್‌ಗೆ ಬೇಟಿ ನೀಡುತ್ತಿದ್ದಾರೆ. ದಾಖಲೆ ಪ್ರಮಾಣದ ಪ್ರವಾಸಿಗರ ಭೇಟಿ ಜೊತೆಗೆ ಇದೀಗ ಬರೋಬ್ಬರಿ 17 ಲಕ್ಷ ತುಲಿಪ್ ಹೂವುಗಳು ಅರಳುವು ಮೂಲಕ ಹೊಸ ದಾಖಲೆ ನಿರ್ಮಾಣಗೊಂಡಿದೆ.
ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ
ಈ ಬಾರಿ ತುಲಿಪ್ ಗಾರ್ಡನ್‌ನಲ್ಲಿ ಬರೋಬ್ಬರಿ 17 ಲಕ್ಷ ತುಲಿಪ್ ಹೂವುಗಳು ಅರಳಿದೆ. ಎಲ್ಲಿ ನೋಡಿದರೂ ತುಲಿಪ್ ಹೂವುಗಳಿಂದ ಕಂಗೊಳಿಸುತ್ತಿದೆ. ಬಣ್ಣ ಬಣ್ಣ, ಅಷ್ಟೇ ಅಚ್ಚುಕಟ್ಟಾಗಿ, ಸಾಲು ಸಾಲಾಗಿರುವ ಹೂವುಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದೇ ಕಾರಣದಿಂದ 17 ದಿನಗಳಲ್ಲಿ ಬರೋಬ್ಬರಿ 6 ಲಕ್ಷ ಪ್ರವಾಸಿಗರು ತುಲಿಪ್ ಗಾರ್ಡನ್‌ಗೆ ಬೇಟಿ ನೀಡಿದ್ದಾರೆ.
ಶ್ರೀನಗರದ ಸೌಂದರ್ಯಕ್ಕೆ ಕಳಶವಿಟ್ಟ ಟುಲಿಪ್ ಹೂಗಳು: ಈ ಬಾರಿಗೆ ಅತೀ ಹೆಚ್ಚು ಪ್ರವಾಸಿಗರ ನಿರೀಕ್ಷೆ
ತುಲಿಪ್ ಗಾರ್ಡನ್‌ನಲ್ಲಿದೆ 74 ಬಗೆ ಹೂವು
ಶ್ರೀನಗರದ ತುಲಿಪ್ ಗಾರ್ಡನ್‌ನಲ್ಲಿ ಈ ಬಾರಿ ಬರೋಬ್ಬರಿ 74 ಬಗೆಯ ತುಲಿಪ್ ಹೂವುಗಳಿದೆ. ಕಳೆದ ವರ್ಷ 72 ಬಗೆಯ ತುಲಿಪ್ ಹೂವುಗಳಿತ್ತು. ಆದರೆ ಈ ಬಾರಿ ನೆದರ್ಲೆಂಡ್‌ನಿಂದ ವಿಶೇಷ 2 ಬಗೆಯ ತುಲಿಪ್ ಹೂವುಗಳನ್ನು ತರಿಸಲಾಗಿದೆ. ಹೀಗಾಗಿ ಶ್ರೀನಗರದ ತುಲಿಪ್ ಗಾರ್ಡನ್‌ನಲ್ಲಿ ಈ ಬಾರಿ ಒಟ್ಟು 74 ಬಗೆಯ ಹೂವುಗಳಿದೆ.
ದಾಖಲೆ ಪ್ರವಾಸಿಗರು
2008ರಲ್ಲಿ ತುಲಿಪ್ ಗಾರ್ಡನ್ ಉದ್ಘಾಟನೆಗೊಂಡಿತ್ತು. ಆದರೆ ಭಯೋತ್ಪಾದನೆ, ಉಗ್ರರ ದಾಳಿ, ಹೋರಾಟ, ಪ್ರತಿಭಟನೆ ಸೇರಿದಂತೆ ಹಲವು ಆತಂಕದ ಕಾರಣಗಳಿಂದ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರಲಿಲ್ಲ. ಸರಾಸರಿ 50,000 ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ 2019ರಲ್ಲಿ ಆರ್ಟಿಕಲ್ 370 ರದ್ದು ಮಾಡಿ, ಕೇಂದ್ರ ಸರ್ಕಾರ ಸಂಪೂರ್ಣ ನಿಯಂತ್ರಣ ಸಾಧಿಸಿತ್ತು. ಬಳಿಕ ಕಾಶ್ಮೀರದಲ್ಲಿ ಭಯೋತ್ಪಾದನೆ ಆತಂಕ ಕಡಿಮೆಯಾಗಿತ್ತು. ಇದರ ಪರಿಣಾಮ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲು ಆರಂಭಿಸಿದ್ದರು. ಈ ವರ್ಷ 17 ದಿನಗಳಲ್ಲಿ 6 ಲಕ್ಷ ಪ್ರವಾಸಿಗರು ಭೇಟಿ ನೀಡಿ ದಾಖಲೆ ಬರೆದಿದ್ದರೆ.
ಏಷ್ಯಾದ ಅತೀ ದೊಡ್ಡ ತುಲಿಪ್ ಗಾರ್ಡನ್
ಹಲವು ದೇಶಗಳಲ್ಲಿ ತುಲಿಪ್ ಗಾರ್ಡನ್‌ಗಳಿವೆ. ಆದರೆ ಶ್ರೀನಗರದ ತುಲಿಪ್ ಗಾರ್ಡನ್ ಏಷ್ಯಾದ ಅತೀ ದೊಡ್ಡ ತುಲಿಪ್ ಗಾರ್ಡನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
24 ಗಂಟೆಯೂ ನೀರಿನಲ್ಲಿರೋ ಭಾರತದ ಏಕೈಕ ತೇಲುವ ಅಂಚೆ ಕಚೇರಿ ಬಗ್ಗೆ ನಿಮಗೆಷ್ಟು ಗೊತ್ತು?
