ರೈತರು ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯ ವಿಮೆ ತುಂಬುವಾಗ ಏಜೆಂಟರು ಮಧ್ಯಸ್ಥಿಕೆ ವಹಿಸಿ ತಮಗೆ ಪರ್ಸೆಂಟೇಜ್ ನೀಡಬೇಕು ಎಂದು ರೈತರಿಗೆ ಮೋಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಹಣ ನೀಡಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
- Home
- News
- State
- Karnatata Latest News Live: ರೈತರ ಏಜೆಂಟರಿಗೆ ಬೆಳೆ ವಿಮೆ ಹಣ ನೀಡಬೇಡಿ - ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Karnatata Latest News Live: ರೈತರ ಏಜೆಂಟರಿಗೆ ಬೆಳೆ ವಿಮೆ ಹಣ ನೀಡಬೇಡಿ - ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಬೆಂಗಳೂರು (ಜು.12): ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಡಿಕೆ ಶಿವಕುಮಾರ್ ಯಾವುದೇ ಪ್ರತ್ಯುತ್ತರ ನೀಡಿಲ್ಲ. ಈ ನಡುವೆ ಡಿಕೆಶಿ ಸಂಯಮದ ನುಡಿ ನುಡಿದಿದ್ದಾರೆ. ಪಕ್ಷ ಇದ್ದರಷ್ಟೇ ನಾನು, ಇಲ್ಲದಿದ್ರೆ ನಾನಿಲ್ಲ. ಯಾವ ವಿಚಾರಕ್ಕೂ ನಾನು ಪ್ರತಿಕ್ರಿಯೆ ನೀಡಲ್ಲ. ಕೆಪಿಸಿಸಿ ಅಧ್ಯಕ್ಷ ಹುದ್ದೆ. ಡಿಸಿಎಂ ಹೊಣೆಗಾರಿಕೆ ನನ್ನ ಮೇಲಿದೆ ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 12th July:ರೈತರ ಏಜೆಂಟರಿಗೆ ಬೆಳೆ ವಿಮೆ ಹಣ ನೀಡಬೇಡಿ - ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Karnataka News Live 12th July:ಗುಹೆಯಲ್ಲಿ ಮಕ್ಕಳೊಂದಿಗೆ ವಾಸವಿದ್ದ ರಷ್ಯಾ ಮಹಿಳೆ - ಪತ್ತೆ ಹಚ್ಚಿ ರಕ್ಷಿಸಿದ ಗೋಕರ್ಣ ಪೊಲೀಸರು
ಜಿಲ್ಲೆಯ ಗೋಕರ್ಣದ ಕಾಡಿನ ಮಧ್ಯ ಗುಡ್ಡದ ಗುಹೆಯಲ್ಲಿ ಸಣ್ಣ ಸಣ್ಣ ಮಕ್ಕಳೊಂದಿಗೆ ವಾಸಿಸುತ್ತಿದ್ದ 40 ವರ್ಷದ ರಷ್ಯಾದ ಮಹಿಳೆಯನ್ನು ಗಸ್ತು ತಿರುಗುತ್ತಿದ್ದ ಗೋಕರ್ಣ ಪೊಲೀಸರು ರಕ್ಷಿಸಿದ್ದಾರೆ.
Karnataka News Live 12th July:ಮುರಿದ ಸೇತುವೆ ಮೇಲೆ ಬ್ಯಾಲೆನ್ಸ್ ನಡಿಗೆ - ನಿತ್ಯ ಜೀವ ಕೈಯಲ್ಲಿಡಿದು ನಡೆಯುವ ವಿದ್ಯಾರ್ಥಿಗಳು
ಏಳು ವರ್ಷಗಳ ಹಿಂದೆ ನುಗ್ಗಿದ ಪ್ರವಾಹ ಇದೀಗ ನೂರಾರು ಜನರು ನಿತ್ಯ ಜೀವ ಕೈಯಲ್ಲಿ ಹಿಡಿದು ಓಡಾಡುವಂತೆ ಆಗಿದೆ. ಜನರ ಸಂಕಷ್ಟ ಪರಿಹರಿಸುವ ಸೇತುವೆ ಜೀವಕ್ಕೆ ಕುತ್ತು ತಂದಿರುವುದಾದರೂ ಏಕೆ ಅಂತೀರಾ ಅದನ್ನು ನೀವೇ ಓದಿ.
Karnataka News Live 12th July:ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಮಂಕುಬೂದಿ ಎರಚಿದ ಕಾಂಗ್ರೆಸ್ - ನಿಖಿಲ್ ಕುಮಾರಸ್ವಾಮಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸತ್ತ ಸರ್ಕಾರವಾಗಿದ್ದು ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಜನರಿಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆಯನ್ನು ಹಿಡಿದಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
Karnataka News Live 12th July:ರೋಲ್ಸ್ ರಾಯ್ಸ್‌ನಲ್ಲಿ 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಉದ್ಯೋಗ ಪಡೆದ ಕನ್ನಡದ ಮೊದಲ ಹೆಣ್ಣುಮಗಳು!
Karnataka News Live 12th July:ಕುಳಿತಿದ್ರೂ ಅದು ಬೆಂಕಿನೇ ಅಂತೀರಾ?.. ಚೈತ್ರಾ ಆಚಾರ್ 'ಜೀನ್ಸ್-ವೈಟ್' ಲುಕ್‌ಗೆ ಹಾರ್ಟ್‌ಬೀಟ್ ಕಂಟ್ರೋಲ್ ತಪ್ತಿದ್ಯಾ?
ಟೋಬಿ ನಟಿ ಚೈತ್ರಾ ಆಚಾರ್ ಸಿನಿರಂಗದ ಜತೆ ಸಾಮಾಜಿಕ ಜಾಲತಾಣದಲ್ಲೂ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಆಗಾಗ ಹೊಸ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡು ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ.
Karnataka News Live 12th July:2027ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ - ಕೆ.ಎಚ್.ಮುನಿಯಪ್ಪ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆ ಯೋಜನೆಯು 2027ಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಹೇಳಿದರು.
Karnataka News Live 12th July:Bhagyalakshmi Tanvi - ಚಿಕ್ಕಿ ಪೂಜಾಳ ಮದ್ವೆ ಖುಷಿಯಲ್ಲಿ ಸಕತ್ ಫೋಟೋಶೂಟ್ ಮಾಡಿಸಿಕೊಂಡ ಭಾಗ್ಯಲಕ್ಷ್ಮಿ ತನ್ವಿ
ಭಾಗ್ಯಲಕ್ಷ್ಮಿ ತನ್ವಿ ಉರ್ಫ್ ಅಮೃತಾ ಗೌಡ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
Karnataka News Live 12th July:ಜು.13ರಂದು ನಟ ದರ್ಶನ್ ‘ಡೆವಿಲ್’ ಹಾಡಿನ ಶೂಟಿಂಗ್ ಥೈಲ್ಯಾಂಡ್‌ನಲ್ಲಿ ಶುರು!
ನಟ ದರ್ಶನ್ ನಟನೆಯ ಡೆವಿಲ್ ಚಿತ್ರದ ಬಾಕಿ ಇರುವ ಒಂದೇ ಒಂದು ಹಾಡಿನ ಶೂಟಿಂಗ್‌ಗಾಗಿ ಥೈಲ್ಯಾಂಡ್ ದೇಶಕ್ಕೆ ಹಾರಲಿದ್ದಾರೆ.
Karnataka News Live 12th July:ಅಸಂಘಟಿತ ಕಾರ್ಮಿಕರಿಗೆ ಭದ್ರತೆ, ಮಹಿಳೆ-ಮಂಗಳಮುಖಿಯರಿಗೆ ಹೊಸ ಅವಕಾಶ - ಶೋಭಾ ಕರಂದ್ಲಾಜೆ
ಸಂಘಟಿತ ಕಾರ್ಮಿಕರಂತೆಯೇ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಮಿಕ ನೀತಿಗಳನ್ನು ಸಂಯೋಜಿಸಿ 'ನಾಲ್ಕು ಕೋಡ್'ಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
Karnataka News Live 12th July:ಧಾರವಾಡದಲ್ಲಿ ಲೋಕ ಅದಾಲತ್, 10 ಕೋಟಿಗೂ ಹೆಚ್ಚು ಮೊತ್ತಕ್ಕೆ ಪ್ರಕರಣ ಇತ್ಯರ್ಥ
Karnataka News Live 12th July:Bhagyalakshmi Serial - ಪೂಜಾ-ಕಿಶನ್ ಮದ್ವೆ ಜೊತೆ ಭಾಗ್ಯ-ಆದಿ ಮದುವೆ! ಆಹಾ ಇದೆಂಥ ಟ್ವಿಸ್ಟು?
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಸದ್ಯ ಪೂಜಾ ಮತ್ತು ಕಿಶನ್ ಮದುವೆಯ ಸಂಭ್ರಮ ನಡೆಯುತ್ತಿದೆ. ಅದರ ನಡುವೆಯೇ ಭಾಗ್ಯ ನೇರಪ್ರಸಾರದಲ್ಲಿ ಬಂದು ಹೇಳಿದ್ದೇನು? ಇದೇನಿದು ಆದಿ-ಭಾಗ್ಯ ಮದುವೆ ಕಾನ್ಸೆಪ್ಟ್?
Karnataka News Live 12th July:ಸಿಎಂ ಸ್ಥಾನ ಭದ್ರತೆ, ಡಿಕೆಶಿಗೆ ಶಾಸಕರ ಬೆಂಬಲವಿಲ್ಲ ಎಂದ ಸಿದ್ದರಾಮಯ್ಯ ಹೇಳಿಕೆಗೆ ಯಾರು ಏನಂದ್ರು?
ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಸಿಎಂ ಸ್ಥಾನದ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ, ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
Karnataka News Live 12th July:ನನಗ್ಯಾವುದೇ ತಾರತಮ್ಯ ಇಲ್ಲ - ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಕುರಿತು ನಿಖಿಲ್ ಸ್ಪಷ್ಟ ಮಾತು
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ಹಾಸನ ಕ್ಷೇತ್ರದ ಮೇಲಿನ ತಮ್ಮ ಭಾವನಾತ್ಮಕ ಸಂಬಂಧವನ್ನು ವಿವರಿಸಿದ್ದಾರೆ.
Karnataka News Live 12th July:Seetha Rama Sihi ಸೀರಿಯಲ್ ಬಳಿಕ ಕಾಣೆಯಾಗಿರೋ ಪುಟಾಣಿ ರಿತು ಸಿಂಗ್ ಈಗೇನು ಮಾಡ್ತಿದ್ದಾಳೆ?
ಸೀತಾರಾಮ ಸೀರಿಯಲ್ನಲ್ಲಿ ಸಿಹಿಯಾಗಿ, ಸುಬ್ಬಿಯಾಗಿ ಹವಾ ಸೃಷ್ಟಿಸಿದ್ದ ಪುಟಾಣಿ ರಿತುಸಿಂಗ್ ಈಗ ಏನು ಮಾಡುತ್ತಿದ್ದಾಳೆ? ಬೇರೆ ಸೀರಿಯಲ್ನಲ್ಲಿ ಬರ್ತಿದ್ದಾಳಾ?
Karnataka News Live 12th July:Na Ninna Bidalare ಶರತ್ಗೆ ಹುಟ್ಟುಹಬ್ಬ - ಎಂಜಿನಿಯರಿಂಗ್ ಬಿಟ್ಟು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟನ ಸ್ಟೋರಿ ಇಲ್ಲಿದೆ...
ನಾ ನಿನ್ನ ಬಿಡಲಾರೆ ಶರತ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಗಳು ಹಿತಾಳ ಬಾಯಲ್ಲಿ ಅಪ್ಪಾ ಎಂದು ಕರೆಸಿಕೊಳ್ಳಲು ಕಾಯ್ತಿರೋ ನಟನ ಸ್ಟೋರಿ ಇಲ್ಲಿದೆ...
Karnataka News Live 12th July:ಮೂರು ಪುಸ್ತಕ ಓದಲು ಸಿಎಂ ಸಿದ್ದರಾಮಯ್ಯ ಸಲಹೆ ನೀಡ್ತಾರೆ - ಭವ್ಯಾ ನರಸಿಂಹಮೂರ್ತಿ
ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಅವರು ಸಿದ್ದರಾಮಯ್ಯ ಮತ್ತು ದೇವೇಗೌಡರ ಬಳಿ ರಾಜಕೀಯ ಕಲಿಯುವ ಬಯಕೆ ವ್ಯಕ್ತಪಡಿಸಿದ್ದಾರೆ.
Karnataka News Live 12th July:ಮನೋವೈದ್ಯ ನಾಗರಾಜನ ಮತ್ತೊಂದು ಕರಾಳಮುಖ ಬಯಲು, ಉಗ್ರರಿಗಷ್ಟೇ ಅಲ್ಲ, ಹೈಪ್ರೊಫೈಲ್ ಕೈದಿಗಳಿಗೂ ಮೊಬೈಲ್ ಪೂರೈಕೆ!
ಕೇಂದ್ರ ಕಾರಾಗೃಹದಲ್ಲಿ ಉಗ್ರರಿಗೆ ನೆರವು ನೀಡಿದ ಆರೋಪದಡಿ ಬಂಧಿತರಾದ ಮೂವರ ವಿಚಾರಣೆ ತೀವ್ರಗೊಂಡಿದೆ. ಬಂಧಿತ ಮನೋವೈದ್ಯ ನಾಗರಾಜ್, ಹಣಕ್ಕಾಗಿ ಉಗ್ರರಿಗೆ ಮತ್ತು ಇತರೆ ಆರೋಪಿಗಳಿಗೆ ಮೊಬೈಲ್ ಪೂರೈಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.