ಭಾಗ್ಯಲಕ್ಷ್ಮಿ ತನ್ವಿ ಉರ್ಫ್ ಅಮೃತಾ ಗೌಡ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಭಾಗ್ಯಲಕ್ಷ್ಮಿಯ ತನ್ವಿ ಸದ್ಯ ಸೀರಿಯಲ್ ಮತ್ತು ರಿಯಲ್ ಜೀವನ ಎರಡರಲ್ಲಿಯೂ ಬಿಜಿಯಾಗಿದ್ದಾಳೆ. ಪಿಯುಸಿಯ ಕಾಮರ್ಸ್ ವಿಭಾಗದಲ್ಲಿ ಶೇಕಡಾ 91 ತೆಗೆಯುವ ಮೂಲಕ ನಟನೆಯ ಜೊತೆಗೆ ಅಭ್ಯಾಸದಲ್ಲಿಯೂ ಜಾಣೆ ಎನ್ನುವುದನ್ನು ಸಾಬೀತು ಮಾಡಿದ್ದಾಳೆ. ಅಂದಹಾಗೆ ತನ್ವಿ ಎಂದೇ ಫೇಮಸ್ ಆಗಿರೋ ಈಕೆಯ ಹೆಸರು ಅಮೃತ ವರ್ಷಿನಿ ಗೌಡ. ಈಗಿನ ಬಹುತೇಕ ಮಕ್ಕಳು ಶೇಕಡಾ 90ರ ಮೇಲೆ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಒಂದೆಡೆ ಶೂಟಿಂಗ್ ಬಿಜಿಯ ನಡುವೆಯೇ, ಇಷ್ಟು ಅಂಕ ಗಳಿಸಿರುವ ಕಾರಣ ತನ್ವಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿತ್ತು. ಅಷ್ಟಕ್ಕೂ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ತನ್ವಿ, ತನ್ನ ಸುಂದರ ಅಭಿನಯದಿಂದ ಒಂದು ಸಲ ಅಮ್ಮನ ಪರ, ಮತ್ತೊಮ್ಮೆ ಅಪ್ಪನ ಪರ, ಮಗದೊಮ್ಮೆ ಗೊಂದಲಗೂಡಾಗಿರುವ ಮನಸ್ಸು... ಹೀಗೆ ಎಲ್ಲಾ ರೀತಿಯ ಅಭಿನಯಕ್ಕೂ ಸೈ ಎನಿಸಿಕೊಂಡಿದ್ದಾಳೆ. ಶಿಕ್ಷಣದ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈಕೆ ಅದೇ ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲೂ (social media) ಸಕತ್ ಆಕ್ಟೀವ್.
ಇದೀಗ ಅಮೃತಾ ಕ್ಯೂಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾಳೆ. ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾಳೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್ ಅಮ್ಮ-ಮಗಳ ರೀಲ್ಸ್ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ತಾನು ಪಿಯುಸಿಯಲ್ಲಿ ಇಷ್ಟೊಂದು ಅಂಕ ತೆಗೆಯುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಡಿಸ್ಟಿಂಕ್ಷನ್ ಬರುತ್ತದೆ ಎಂದು ಗೊತ್ತಿತ್ತು. ಅಮ್ಮ ನನಗೆ ಸಿಕ್ಕಾಪಟ್ಟೆ ಪರೀಕ್ಷೆ ವೇಳೆ ಎಲ್ಲಾ ಅಮ್ಮಂದಿರಂತೆ ಟಾರ್ಚರ್ ಕೊಡ್ತಿದ್ರು. ಓದು ಓದು ಅಂತಿದ್ರು. ಅವರಿಗೂ ನಾನು ಇಷ್ಟು ತೆಗೆಯುತ್ತೇನೆ ಎಂದು ಗೊತ್ತಿರಲಿಲ್ಲ. 90 ಪರ್ಸೆಂಟ್ ಆದ್ರೂ ಬರಬೇಕು ನೋಡು ಎಂದಿದ್ರು. ನಾನು 91 ತೆಗೆದೆ ಎಂದು ಹೇಳಿದಾಗ ಅಮ್ಮ ಕಕ್ಕಾಬಿಕ್ಕಿಯಾಗಿ ಹೋದರು ಎಂದಿದ್ದಳು ಅಮೃತಾ.
ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ತನ್ವಿ ಚಿಕ್ಕಿ ಪೂಜಾಳ ಮದುವೆ ಸಂಭ್ರಮ ನಡೆಯುತ್ತಿದೆ. ಇದೀಗ ರಿಯಲ್ ಮದುವೆಯಂತೆಯೇ ಇದು ನಡೆಯುತ್ತಿದ್ದು, ಇದರಲ್ಲಿ ಅಮೃತಾ ರಿಯಲ್ ಮದುವೆ ಮನೆಯಂತೆಯೇ ಡ್ರೆಸ್ ಮಾಡಿಕೊಂಡಿದ್ದು, ಅದರಲ್ಲಿಯೇ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ.
