ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಅವರು ಸಿದ್ದರಾಮಯ್ಯ ಮತ್ತು ದೇವೇಗೌಡರ ಬಳಿ ರಾಜಕೀಯ ಕಲಿಯುವ ಬಯಕೆ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಕಾಂಗ್ರೆಸ್ ವಕ್ತಾರೆಯಾಗಿರುವ ಭವ್ಯಾ ನರಸಿಂಹಮೂರ್ತಿ ಸಂದರ್ಶನದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯಂತೆ ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿಗಳಾದ ಹೆಚ್‌ ಡಿ ದೇವೇಗೌಡರ ಬಗ್ಗೆ ಭವ್ಯಾ ನರಸಿಂಹಮೂರ್ತಿ ಮಾತನಾಡಿದ್ದಾರೆ. ಈ ಹಿಂದೆ ತಾವ ಯಾವ ಜಾತಿಗೆ ಸೇರಿದ್ದವರು ಎಂಬ ಪ್ರಶ್ನೆಗೆ ಭವ್ಯಾ ನರಸಿಂಹಮೂರ್ತಿ ನೀಡಿದ ಉತ್ತರ ವೈರಲ್ ಆಗಿತ್ತು. ಇದೀಗ ರಾಜಕೀಯ ಹೇಗೆ ಮತ್ತು ಯಾರಿಂದ ಕಲಿಯಬೇಕು ಎಂದು ಭವ್ಯಾ ನರಸಿಂಹಮೂರ್ತಿ ಹೇಳಿದ್ದಾರೆ. ಭವ್ಯಾ ನರಸಿಂಹಮೂರ್ತಿ ವೈರಲ್ ಆಗಿರುವ ವಿಡಿಯೋದಲ್ಲಿ ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ.

ನಮಗೆ ಸಿದ್ದರಾಮಯ್ಯ ಅವರ ಬಳಿ ರಾಜಕೀಯ ಕಲಿಯಬೇಕು ಅನ್ನೋದು ನಮಗಿಷ್ಟ. ಆದ್ರ ಅವರು ಮುಖ್ಯಮಂತ್ರಿಗಳಾಗಿದ್ದು, ಬ್ಯುಸಿಯಾಗಿರುತ್ತಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯವರ ಬಳಿ ಅಷ್ಟೊಂದು ಸಮಯ ಇರಲ್ಲ. ಈ ಹಿಂದೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರ ಬಳಿಯಲ್ಲಿ ಕುಳಿತುಕೊಂಡು, ಸರ್ ನೀವು ಯಾವ ಪುಸ್ತಕ ಓದುತ್ತೀರಿ ಅಂತೆಲ್ಲಾ ಕೇಳುತ್ತಿದ್ದೆ ಎಂದು ಭವ್ಯಾ ನರಸಿಂಹಮೂರ್ತಿ ಹೇಳಿದ್ದಾರೆ.

ಈ ಇಬ್ಬರು ನಾಯಕರಿಂದ ರಾಜಕೀಯ ಕಲಿತುಕೊಳ್ಳಬೇಕು!

ನನಗೆ ಗಾಂಧಿ, ಅಂಬೇಡ್ಕರ್ ಮತ್ತು ಲೋಹಿಯಾ ಅವರ ಈ ಮೂರು ಪುಸ್ತಕಗಳನ್ನು ಓದಮ್ಮ ಎಂದು ಸಿದ್ದರಾಮಯ್ಯ ಸರ್ ಹೇಳುತ್ತಿದ್ದರು. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರದಿಂದ ಟಿಕೆಟ್ ಕೇಳಿದಾಗಲೂ, ಮನೆ ಮನೆಗೆ ಹೋಗಬೇಕು ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದಾರೆ. ಇಂದು ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರ ಬಳಿ ರಾಜಕೀಯ ಕಲಿತರೆ ಅದು ನೆಕ್ಷ್ಟ್ ಲೆವೆಲ್ ಎಂದು ಭವ್ಯಾ ನರಸಿಂಹಮೂರ್ತಿ ಹೇಳುತ್ತಾರೆ.

ಸಾಮಾಜಿಕ ಬದ್ದತೆ ನನಗಿಷ್ಟ!

ನಮಗೆಲ್ಲಾ ರಾಜಕೀಯ ಪಾಠ ಮಾಡಲು ಇಬ್ಬರು ಗಣ್ಯರ ಬಳಿ ಸಮಯವಿಲ್ಲ ಅಂತ ನನಗೆ ಗೊತ್ತು. ಆದ್ರೆ ನಾನು ಸಿದ್ದರಾಮಯ್ಯ ಅವರ ಭಾಷಣ ಮತ್ತು ಮಾಧ್ಯಮಗಳೊಂದಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನನ್ನು ನಾನು ಗಮನಿಸುತ್ತಿರುತ್ತೇನೆ. ವಿಧಾನಸಭೆಯಲ್ಲಿ ಹೇಗೆ ಮಾತಾಡ್ತಾರೆ ಎಂಬುದನ್ನು ಸಹ ನೋಡುತ್ತಿರುತ್ತೇನೆ. ಸಾಮಾಜಿಕ ನ್ಯಾಯದ ಬಗ್ಗೆ ಸಿದ್ದರಾಮಯ್ಯ ಸರ್‌ಗಿರುವ ಬದ್ಧತೆ ನನಗಿಷ್ಟ. ನಾನು ಸಹ ಪುಸ್ತಕಗಳನ್ನು ಓದಿ ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಂಡಿದ್ದೇನೆ.

ಸಿದ್ದರಾಮಯ್ಯ ಪತ್ನಿಯವರನ್ನು ನೋಡಿಲ್ಲ!

ನಾನು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮರನ್ನು ನೋಡಿಲ್ಲ. ಪಾವರ್ತಮ್ಮ ಅವರ ಗಂಡ ಸಿದ್ದರಾಮಯ್ಯ ಸರ್ ರಾಜ್ಯದ ಪವರ್‌ಫುಲ್ ವ್ಯಕ್ತಿ. ಇಷ್ಟಾದ್ರು ಪಾರ್ವತಮ್ಮ ಮುಖ್ಯ ಭೂಮಿಕೆಗೆ ಬರಲು ಇಷ್ಟಪಡಲ್ಲ ಅನ್ನೋದೇ ಅವರ ವಿಶೇಷತೆ ಎಂದು ಹೇಳಿದರು.

ಡಿಕೆಶಿ ಬಗ್ಗೆ ಹೇಳಿದ್ದೇನು?

ಡಿಸಿಎಂ ಡಿಕೆ ಶಿವಕುಮಾರ್ ಸರ್ ಬಳಿ ಸಂಘಟನೆ ಹೇಗೆ ಮಾಡಬೇಕು ಅನ್ನೋದನ್ನು ಕಲಿಯಬೇಕು. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಅವರ ಸಂಘಟನೆಯನ್ನು ನೋಡುತ್ತಿದ್ದೇನೆ. ಪ್ರತಿಯೊಬ್ಬರ ಮಾತನ್ನು ಸಹ ಕೇಳಿಸಿಕೊಳ್ಳುತ್ತಾರೆ. ನಮ್ಮನ್ನು ಕರೆದು ಏನಾದ್ರೂ ಐಡಿಯಾ ಇದ್ರೆ ಹೇಳು ಅಂತ ಕೇಳ್ತಾರೆ. ಸಂಘಟನೆ ಹೇಗೆ ಮಾಡಬೇಕು ಅನ್ನೋ ಟ್ಯಾಲೆಂಟ್ ಡಿಕೆ ಶಿವಕುಮಾರ್ ಅವರ ಬಳಿಯಲ್ಲಿರೋದನ್ನು ಕಂಡಿದ್ದೇನೆ. ನಮ್ಮ ಐಡಿಯಾ ಸ್ವೀಕರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮನ್ನು ಕರೆದು ಸಲಹೆ ಕೇಳಿದಾಗ ನಮಗೆ ನಾವು ಸ್ಪೆಷಲ್ ಅನ್ನೋ ಫೀಲ್ ಬರುತ್ತೆ ಎಂದು ಭವ್ಯಾ ನರಸಿಂಹಮೂರ್ತಿ ಹೇಳುತ್ತಾರೆ. 

ಸಂಘಟನೆಯಲ್ಲಿ ದೊಡ್ಡವರಿದ್ದರೂ ಸಣ್ಣ ಕಾರ್ಯಕರ್ತರ ಮಾತುಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ಕೇಳಿಸಿಕೊಳ್ಳುತ್ತಾರೆ. ಇದರಿಂದ ಎಲ್ಲರಿಗೂ ತಮ್ಮ ಮಾತನ್ನು ಕೇಳಿಸಿಕೊಳ್ಳುವ ವ್ಯಕ್ತಿ ಇದ್ದಾರೆ ಎಂಬ ಭರವಸೆಯನ್ನು ಡಿಕೆ ಶಿವಕುಮಾರ್ ಮೂಡಿಸುತ್ತಾರೆ ಎಂದು ಭವ್ಯಾ ನರಸಿಂಹಮೂರ್ತಿ ಹೇಳುತ್ತಾರೆ.