10:38 PM (IST) Feb 12

Karnataka News Live 12 February 2026ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ

ರಿಷಬ್ ಶೆಟ್ಟಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ರಂಜನ್, ಅನಿರೀಕ್ಷಿತವಾಗಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ನಾಯಕನಾದರು. ನಟನೆಯಲ್ಲಿ ಆಸಕ್ತಿ ಇಲ್ಲದಿದ್ದರೂ, ಒಂದು ಸೆಲ್ಫಿ ಅದೃಷ್ಟವನ್ನೇ ಬದಲಿಸಿ, 'ದಡ್ಡ ಪ್ರವೀಣ' ಪಾತ್ರದ ಮೂಲಕ ಸಿನಿಮಾ ಹೀರೋ ಆಗಿ ರೂಪಿಸಿತು.

Read Full Story
09:47 PM (IST) Feb 12

Karnataka News Live 12 February 2026Bigg Boss ಗಿಲ್ಲಿ ನಟನ ಜತೆ ಹನಿಮೂನ್​ - ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!

ಕಲರ್ಸ್ ಕನ್ನಡದ 'ದೊಡ್ಮನೆ ಹಬ್ಬ' ಕಾರ್ಯಕ್ರಮದಲ್ಲಿ ಬಿಗ್​ಬಾಸ್​ 12ರ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದ ಪ್ರೊಮೋವೊಂದರಲ್ಲಿ, ಗಿಲ್ಲಿ ನಟನ ಜೊತೆ ಹನಿಮೂನ್‌ಗೆ ಹೋಗುವ ಬಗ್ಗೆ ಕಾವ್ಯಾ ಶೈವ ಬಾಯ್ತಪ್ಪಿ ಹೇಳಿದ್ದು ವೈರಲ್ ಆಗಿದೆ.
Read Full Story
09:18 PM (IST) Feb 12

Karnataka News Live 12 February 2026Bigg Boss ನನಗೊಂದು ಅಮೂಲ್ಯ ರತ್ನ ಕೊಟ್ಟಿದೆ - ಮೊದಲ ಬಾರಿಗೆ ಬಹಿರಂಗಗೊಳಿಸಿದ ಅಶ್ವಿನಿ ಗೌಡ

ಬಿಗ್​ಬಾಸ್​ 12ರ 2ನೇ ರನ್ನರ್​ ಅಪ್​ ಆದ ಅಶ್ವಿನಿ ಗೌಡ, ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ನೋವಿನ ನಡುವೆಯೂ ಬಿಗ್​ಬಾಸ್​​ ತಮಗೊಂದು ಅಮೂಲ್ಯ ರತ್ನ ನೀಡಿದೆ ಎಂದು ಹೇಳಿದ್ದಾರೆ. ಏನದು ರತ್ನ? 

Read Full Story
09:02 PM (IST) Feb 12

Karnataka News Live 12 February 2026ದ್ರಾಕ್ಷಿ ಕೃಷಿಯಲ್ಲಿ ವಿಜಯಪುರ ರೈತನ ಕ್ರಾಂತಿ; 4 ಎಕರೆ ಜಮೀನಿನಲ್ಲಿ 40-45 ಲಕ್ಷ ಆದಾಯ

ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ರೈತ ಎತ್ತರದ ಪ್ರದೇಶದಲ್ಲಿ ವೈಜ್ಞಾನಿಕವಾಗಿ ದ್ರಾಕ್ಷಿ ಬೆಳೆದು ಯಶಸ್ಸು ಕಂಡಿದ್ದಾರೆ. ತಮ್ಮ 4 ಎಕರೆ ಜಮೀನಿನಲ್ಲಿ ಸುಮಾರು 40-45 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದು, ಅವರ ಈ ಸಾಧನೆಯನ್ನು ಸಚಿವ ಎಂ.ಬಿ. ಪಾಟೀಲ್ ಶ್ಲಾಘಿಸಿದ್ದಾರೆ.

Read Full Story
08:50 PM (IST) Feb 12

Karnataka News Live 12 February 2026ಬೆಂಗಳೂರಲ್ಲಿ ಪಿಕ್‌ಅಪ್‌ ಕಿರಿಕ್ ಮಾಡಿದ ಡ್ರೈವರ್‌ಗೆ, ಆಂಧ್ರದಲ್ಲಿ ಗೂಂಡಾಗಳನ್ನ ಕರೆಸಿ ಹೊಡೆಸಿದ ಮಹಿಳೆ!

ಬೆಂಗಳೂರಿನಲ್ಲಿ ಬಸ್ ಪಿಕ್‌ಅಪ್ ವಿಚಾರವಾಗಿ ನಡೆದ ಸಣ್ಣ ವಾಗ್ವಾದ, ಆಂಧ್ರಪ್ರದೇಶದಲ್ಲಿ ಹಲ್ಲೆಗೆ ಕಾರಣವಾಗಿದೆ. ತಡವಾಗಿ ಬಂದ ಮಹಿಳಾ ಪ್ರಯಾಣಿಕರೊಬ್ಬರು, ತಿರುಪತಿ ಬಳಿ ತನ್ನ ಸಂಬಂಧಿಕರು ಮತ್ತು ಸ್ಥಳೀಯರಿಂದ ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿಸಿದ್ದಾರೆ.

Read Full Story
08:43 PM (IST) Feb 12

Karnataka News Live 12 February 2026ಬೆಂಗಳೂರಲ್ಲಿ ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್ - ದಿಢೀರ್ ಆಗಿ 1.50 ರೂಪಾಯಿ ಇಳಿಕೆಯಾದ ಬೆಲೆ!

ಚಳಿಗಾಲದ ನಂತರ ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆಗಳು ಪ್ರತಿ ಮೊಟ್ಟೆಗೆ 1.5 ರೂ.ಗಳಷ್ಟು ಇಳಿಕೆಯಾಗಿವೆ. ಹೆಚ್ಚುತ್ತಿರುವ ತಾಪಮಾನ ಮತ್ತು ಬೇಡಿಕೆ ಕಡಿಮೆಯಾಗಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

Read Full Story
08:30 PM (IST) Feb 12

Karnataka News Live 12 February 2026ಬೆಂಗಳೂರು ದುಬಾರಿ ಬಾಡಿಗೆ - ಕೋರಮಂಗಲದಲ್ಲಿ 2BHK ಫ್ಲ್ಯಾಟ್‌ಗೆ ₹70,000!; ಐಟಿ ಸಿಟಿ ಬೆಲೆಗೆ ವಲಸಿಗರು ಕಂಗಾಲು!

ಬೆಂಗಳೂರಿನ ಕೋರಮಂಗಲದಲ್ಲಿ 2BHK ಫ್ಲ್ಯಾಟ್‌ಗೆ ₹70,000 ಬಾಡಿಗೆ ಕೇಳಿದ್ದಕ್ಕೆ ಯುವತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕಳಪೆ ಮೂಲಸೌಕರ್ಯಗಳ ಬಗ್ಗೆ ಬೆಟ್ಟು ಮಾಡಿ, ಇಷ್ಟೊಂದು ಬಾಡಿಗೆ ಏಕೆ ಎಂದು ಪ್ರಶ್ನಿಸಿರುವ ಅವರ ಪೋಸ್ಟ್ ವೈರಲ್ ಆಗಿದೆ.

Read Full Story
08:16 PM (IST) Feb 12

Karnataka News Live 12 February 2026ಐಲ್ಯಾಂಡ್ ಮಾದರಿಯಲ್ಲಿ ಶಿವಮೊಗ್ಗದ 15 ಕೆರೆಗಳ 'ಹಸಿರು' ರೂಪಾಂತರ - 43 ಕೋಟಿ ಮೀಸಲು

ಶಿವಮೊಗ್ಗ ನಗರವನ್ನು ಹಸಿರಾಗಿಸುವ ಮತ್ತು ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ, ಸೂಡಾ 43 ಕೋಟಿ ರು. ವೆಚ್ಚದಲ್ಲಿ 15 ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಹೂಳು ತೆಗೆಯುವುದು, ಸುತ್ತಲೂ ಗಿಡಗಳನ್ನು ನೆಡುವುದು ಮತ್ತು ಕೆಲವು ಕೆರೆಗಳನ್ನು ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಸೇರಿದೆ. 

Read Full Story
07:46 PM (IST) Feb 12

Karnataka News Live 12 February 2026ಕಲಿಕೇರಿ ಮಣ್ಣಲ್ಲಿ ಅಡಗಿದೆ ಚಾಲುಕ್ಯರ ಕಾಲದ ಚಿನ್ನ! ಲಕ್ಕುಂಡಿ ಬಳಿಕ, ಕೊಪ್ಪಳದಲ್ಲೂ ಉತ್ಖನನಕ್ಕೆ ಹಸಿರು ನಿಶಾನೆ?

ಕೊಪ್ಪಳ ಜಿಲ್ಲೆಯ ಕಲಿಕೇರಿ ಗ್ರಾಮವು ಶಾತವಾಹನರು, ರಾಷ್ಟ್ರಕೂಟರು ಮತ್ತು ಚಾಲುಕ್ಯರ ಕಾಲದ ಐತಿಹಾಸಿಕ ಕುರುಹುಗಳನ್ನು ಹೊಂದಿದೆ. ಇಲ್ಲಿ ನಾಣ್ಯ ಟಂಕಸಾಲೆ ಇದ್ದ ಕುರುಹುಗಳಿದ್ದು, ಉತ್ಖನನ ನಡೆಸಲು ಕಂದಾಯ ಇಲಾಖೆಯು ಪ್ರಾಚ್ಯ ವಸ್ತು ಇಲಾಖೆಗೆ ಪತ್ರ ಬರೆದಿದೆ.

Read Full Story
07:43 PM (IST) Feb 12

Karnataka News Live 12 February 2026ಒಬ್ಬರಿಗೆ ಒಂದೇ ಸೀರೆ ಎಂಬ ಕಂಡೀಷನ್ ಇದ್ದರೂ KSIC ಮುಂದೆ ತಪ್ಪದ ಸರತಿ ಸಾಲು; ಮೈಸೂರು ರೇಷ್ಮೆ ಸೀರೆಗೇಕೆ ಇಷ್ಟೊಂದು ಡಿಮ್ಯಾಂಡ್?

Mysore Silk Craze: Why People Queue at 4 AM for ₹2.5 Lakh Saris ಸೆಲ್ರಬ್ರಿಟಿ ಪ್ರಚಾರ ಅಥವಾ ಇನ್‌ಸ್ಟಾಗ್ರಾಮ್ ಟ್ರೆಂಡ್‌ ಹೊರತಾದ ಫ್ಯಾಶನಲ್‌ ಸೈಕಲ್‌ಗಿಂತ ಭಿನ್ನವಾಗಿ ಮೈಸೂರು ಸಿಲ್ಕ್‌ ಸಂಪೂರ್ಣವಾಗಿ ವಿಭಿನ್ನ ವರ್ಗದಲ್ಲಿ ಅಸ್ತಿತ್ವದಲ್ಲಿದೆ.

Read Full Story
07:13 PM (IST) Feb 12

Karnataka News Live 12 February 2026ಪ್ರೇಮಿಗಳ ದಿನದ ಮುನ್ನವೇ ಗುಡ್​ನ್ಯೂಸ್​ ಕೊಟ್ಟ Brahmagantu ಜೋಡಿ! ಫ್ಯಾನ್ಸ್​ ಫುಲ್​ ಖುಷ್​

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಬಂದಿದ್ದು, ಚಿರು ದೀಪಾಗೆ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ಇಬ್ಬರೂ ಒಂದಾಗಿದ್ದಾರೆ. ಆದರೆ, ಸೌಂದರ್ಯಳ ಕುತಂತ್ರ ಇನ್ನೂ ಬಯಲಾಗಬೇಕಿದ್ದು, ಹೊಸ ಸೀರಿಯಲ್‌ಗಳ ಪ್ರೊಮೋದಿಂದಾಗಿ ಬ್ರಹ್ಮಗಂಟು ಅಂತ್ಯವಾಗುವ ಸೂಚನೆ ಸಿಕ್ಕಿದೆ.
Read Full Story
07:12 PM (IST) Feb 12

Karnataka News Live 12 February 2026ಪ್ರಜ್ವಲ್ ರೇವಣ್ಣ ಬಳಿಕ ಏರ್ಪೋರ್ಟ್‌ನಲ್ಲೇ ಅರೆಸ್ಟ್ ಆದ ಕರ್ನಾಟಕ ರಾಜಕಾರಣಿ! ಬೈರತಿ ಬಸವರಾಜ್ ವಶಕ್ಕೆ ಪಡೆದ ಸಿಐಡಿ!

'ಬಿಕ್ಲು ಶಿವ' ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಅಹಮದಾಬಾದ್‌ನಿಂದ ಆಗಮಿಸುತ್ತಿದ್ದ ಅವರನ್ನು, ಹತ್ಯೆಯ ಆರೋಪಿಗಳೊಂದಿಗಿನ ನಂಟಿನ ಶಂಕೆಯ ಮೇಲೆ ವಿಚಾರಣೆಗಾಗಿ ಕರೆದೊಯ್ಯಲಾಗಿದೆ.

Read Full Story
07:07 PM (IST) Feb 12

Karnataka News Live 12 February 2026ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ಸುಚಿತ್ರಾ! ಗ್ರಾಮಸ್ಥರಿಗೆ ಅನುಮಾನ ಬಂದಿದ್ದೇಗೆ?

ತುಮಕೂರು ಜಿಲ್ಲೆಯ ಅನುಪನಹಳ್ಳಿ ಗ್ರಾಮದಲ್ಲಿ, ಜ್ಯೋತಿಷಿಯೊಬ್ಬನ ಮಾತು ನಂಬಿದ ಮಗಳು ತನ್ನ ತಾಯಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದರೂ, ಗ್ರಾಮಸ್ಥರ ಅನುಮಾನದಿಂದಾಗಿ ಪೊಲೀಸರು ಆರೋಪಿಯನ್ನು ಬಂಧಿಸಿ ಸತ್ಯವನ್ನು ಬಯಲಿಗೆಳೆದಿದ್ದಾರೆ.
Read Full Story
06:48 PM (IST) Feb 12

Karnataka News Live 12 February 2026ಸರ್ಕಾರಿ ಸೇವಕನಾಗಿ 'ಜನರ ಧನ ನುಂಗಿದ ಜನಾರ್ಧನ' ₹4.42 ಕೋಟಿ ಒಡೆಯ; ಆದಾಯಕ್ಕಿಂತ 216% ಹೆಚ್ಚು ಆಸ್ತಿ ಪತ್ತೆ!

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರ ಮೇಲೆ ನಡೆದ ಲೋಕಾಯುಕ್ತ ದಾಳಿಯಲ್ಲಿ, ಅವರ ಆದಾಯಕ್ಕಿಂತ ಶೇ. 216ರಷ್ಟು ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ. ಕೋಟ್ಯಂತರ ರೂ. ನಗದು, 34 ಎಕರೆ ಜಮೀನು, ಐಷಾರಾಮಿ ಮನೆಗಳು, ವಾಹನಗಳು ವಶಪಡಿಸಿಕೊಳ್ಳಲಾಗಿದೆ

Read Full Story
06:35 PM (IST) Feb 12

Karnataka News Live 12 February 2026ಬೆಳಗಾವಿ - ಮಲಪ್ರಭಾ ನದಿಯಲ್ಲಿ ಸಿಕ್ಕಿದ್ದು ಹೆಣಗಳಲ್ಲ 3 ಬೈಕ್‌ಗಳು! ಜನರಿಗೆ ಗಾಬರಿ, ಖಾಕಿಗೆ ಇವರ ಮೇಲೆಯೇ ಅನುಮಾನ

ಬೆಳಗಾವಿಯ ಬೈಲಹೊಂಗಲ ಬಳಿ ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಸವದತ್ತಿ ಚಿನ್ನದಂಗಡಿ ಕಳ್ಳತನ ಪ್ರಕರಣಕ್ಕೆ ಈ ಬೈಕ್‌ಗಳು ಸಂಬಂಧಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಸಾಕ್ಷ್ಯ ನಾಶಪಡಿಸಲು ನದಿಗೆ ಎಸೆದಿರುವ ಸಾಧ್ಯತೆ ಇದೆ.
Read Full Story
06:26 PM (IST) Feb 12

Karnataka News Live 12 February 2026ಗರ್ಲ್‌ಫ್ರೆಂಡ್‌ಗೆ 'ದುಬಾರಿ' ಅಪ್ಪುಗೆ - ಪ್ರೇಯಸಿಯ ಪ್ರೀತಿಗೆ ಹಾರಿ ಹೋಯ್ತು ಯುವಕನ ಇಡೀ ತಿಂಗಳ ಸಂಬಳ, ಬಳಿಕ ಕಣ್ಣೀರಿಟ್ಟ!

$2,000 Flying Heartbreak: Valentine's Surprise Turns Into Financial Disaster ವ್ಯಾಲಂಟೈನ್ಸ್‌ ಡೇ ದಿನದಂದು ಪ್ರೇಯಸಿಗೆ ಸರ್‌ಪ್ರೈಸ್‌ ನೀಡಲು ಯುವಕನೊಬ್ಬ ತನ್ನ ಒಂದು ತಿಂಗಳ ಸಂಬಳವಾದ ₹1.6 ಲಕ್ಷವನ್ನು ಬಲೂನ್‌ಗಳಿಗೆ ಕಟ್ಟಿ ನೀಡುತ್ತಾನೆ. 

Read Full Story
06:09 PM (IST) Feb 12

Karnataka News Live 12 February 2026ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗಿನ ಸಿದ್ದು ಸರ್ಕಾರದಲ್ಲೇ ಭ್ರಷ್ಟಾಚಾರ ಹೆಚ್ಚು, ಗುತ್ತಿಗೆದಾರರ ಸಂಘದ ಗಂಭೀರ ಆರೋಪ

ಬಿಜೆಪಿ ಸರ್ಕಾರಕ್ಕಿಂತ ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್ಚು ಭ್ರಷ್ಟಾಚಾರವಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ. ರಾಜ್ಯಾದ್ಯಂತ 37 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಮಾರ್ಚ್ 5 ರಂದು ಬೃಹತ್ ಹೋರಾಟ ಎಂದಿದ್ದಾರೆ

Read Full Story
05:25 PM (IST) Feb 12

Karnataka News Live 12 February 2026ಪ್ರೇಮಿಗಳ ದಿನದ ಖುಷಿಯಲ್ಲೇ ಗರ್ಲ್‌ಫ್ರೆಂಡ್‌ ರಿವೀಲ್‌ ಮಾಡಿದ ಯುಟ್ಯೂಬರ್‌ ಸ್ಯಾಮ್‌ ಸಮೀರ್!

Sameer Sm Youtube: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಅವರು ಹುಡುಗಿಯ ಜನ್ಮದಿನವನ್ನು ಆಚರಿಸಿದ್ದರು. ಆ ವಿಡಿಯೋವನ್ನು ಅವರು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದರೂ ಕೂಡ ಮುಖವನ್ನು ತೋರಿಸಿಲ್ಲ. ಇದಕ್ಕೆ ಕಾರಣ ಏನು ಎಂದು ಹೇಳಿದ್ದಾರೆ.

Read Full Story
05:09 PM (IST) Feb 12

Karnataka News Live 12 February 2026ಮೈಸೂರು-ಮಾಗಡಿ ರಸ್ತೆ ಸಂಪರ್ಕಿಸುವ 10 ಲೇನ್ ರಸ್ತೆಗೆ ಎಸ್‌.ಎಂ. ಕೃಷ್ಣ ಹೆಸರು; ಮಾರ್ಚ್ ಅಂತ್ಯಕ್ಕೆ ಉದ್ಘಾಟನೆ!

SM Krishna's Name for Mysore-Magadi Road Link (MAR) ಮಾರ್ಚ್ ಅಂತ್ಯದ ವೇಳೆಗೆ MAR ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಇದು PRR-2 ಅನ್ನು ಸಂಪರ್ಕಿಸುತ್ತದೆ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೆಸರನ್ನು ಇದಕ್ಕೆ ಇಡುವ ತೀರ್ಮಾನ ಮಾಡಲಾಗಿದೆ.

Read Full Story
05:05 PM (IST) Feb 12

Karnataka News Live 12 February 2026ಬೆಂಗಳೂರು - ಬೀದಿನಾಯಿ ರಾಕಿ ಅಲಿಯಾಸ್ ಕರಿಯನನ್ನು ಕಾರು ಹತ್ತಿಸಿ ಕೊಂದ ಚಾಲಕ, ಮಹಿಳೆಯಿಂದ ದೂರು, ಎಫ್‌ಐಆರ್ ದಾಖಲು

ಬೆಂಗಳೂರಿನ ಸಂಜಯನಗರದಲ್ಲಿ, ನಿರ್ಲಕ್ಷ್ಯದ ಚಾಲನೆಯಿಂದ ಕಾರಿನ ಚಕ್ರಕ್ಕೆ ಸಿಲುಕಿ ರಾಕಿ ಅಲಿಯಾಸ್ ಕರಿಯಾ ಎಂಬ ಬೀದಿ ನಾಯಿ ಸಾವನ್ನಪ್ಪಿದೆ. ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ, ಸ್ಥಳೀಯರ ದೂರಿನ ಮೇರೆಗೆ ಕಾರು ಚಾಲಕನ ವಿರುದ್ಧ ಸಂಜಯನಗರ ಸಂಚಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Read Full Story