09:56 PM (IST) Feb 15

ಪರಂ ಎದುರಲ್ಲೇ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ ಕಾಂಗ್ರೆಸ್ ಶಾಸಕ

Scroll to load tweet…
08:54 PM (IST) Feb 15

ಸಿದ್ದರಾಮಯ್ಯ ಅವ್ರೆ ಏನು ಸುಧಾರಣೆ ತಂದ್ರಿ? HD Kumaraswamy

YouTube video player

08:35 PM (IST) Feb 15

ಸಚಿವ ಸತೀಶ್ ಜಾರಕಿಹೊಳಿ ಕರೆ

ನಮ್ಮ ಸಮಾಜದಲ್ಲಿ ಒಬ್ಬರನ್ನು ಒಬ್ಬರು ತುಳಿಯುವುದು ಎಂದರೆ ಖುಷಿ. ಎಸ್‌ಸಿ ಗಳಿಗೆ ತುಳಿದರೆ ಎಸ್‌ಟಿ ಅವರಿಗೆ ಖುಷಿ. ಎಸ್‌ಟಿ ಯವರಿಗೆ ತುಳಿದರೆ ಒಬಿಸಿಯವರಿಗೆ ಖುಷಿ. ಒಬಿಸಿಯವರನ್ನ ಇನ್ನೊಬ್ಬರು ತುಳಿದರೆ ಅವರಿಗೆ ಖುಷಿ. ನನ್ನ ಕೆಳಗೆ ಇನ್ನೊಬ್ಬರಿದ್ದಾರೆ ಎನ್ನುವ ಖುಷಿ ನಮಗೆ. ಇದರಿಂದ ನಾವು ಹೊರಬರಬೇಕಿದೆ. ನಾವೆಲ್ಲ ಒಂದಾಗಿ ಬದುಕಬೇಕು. ಮಹಾನ್ ನಾಯಕರು ನಮಗೆ ಹೋರಾಟದ ದಾರಿ ತೋರಿಸಿದ್ದಾರೆ. ಅನಿಷ್ಟ ಪದ್ದತಿ ಆಚರಣೆಗಳಲ್ಲಿ ಉತ್ತರ ಭಾರತಕ್ಕೆ ಹೋಲಿಸಿದಲ್ಲಿ ನಮ್ಮ ದಕ್ಷಿಣ ಭಾರತ ಉತ್ತಮವಾಗಿದೆ. ಅಲ್ಲಿ ದಲಿತರು ಮದುವೆ ದಿನ ಕುದುರೆ ಏರುವ ಹಾಗಿಲ್ಲ,ಇಲ್ಲೆಲ್ಲ ಡಿ ಜೆ ಹಚ್ಚುತ್ತೀರ. ಪಂಜಾಬ್ ,ಯುಪಿ,ಬಿಹಾರ ಗಳ ನಂತಹ ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಇವೆಲ್ಲದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದ್ದಾರೆ.

08:11 PM (IST) Feb 15

ಬಿಜೆಪಿ ರೀತಿಯ ಕೆಟ್ಟ ಪರಿಸ್ಥಿತಿಗೆ ನಾವು ಹೋಗಿಲ್ಲ

ನಮ್ಮ ಪಕ್ಷದ ನಾಯಕರನ್ನ ಭೇಟಿ ಮಾಡೋಕೆ ಯಾವ ನಿರ್ಬಂಧವೂ ಇಲ್ಲ. ನಾನೂ ಮೊನ್ನೆ ದೆಲ್ಲಿಗೆ ಹೋಗಿದ್ದೆ ,ಇದೆಲ್ಲ ನಮ್ಮ ಆಂತರಿಕ ವಿಚಾರ. ರಾಜಕೀಯ ಪಕ್ಷದಲ್ಲಿ ಇದೆಲ್ಲ ಇದ್ದಿದ್ದೆ,ಸಾಧ್ಯತೆಗಳ ನಡೆಯೇ ರಾಜಕಾರಣ. ಪೈಪೋಟಿ ಇರಬೇಕು ಆದರೆ ಆರೋಗ್ಯಕರವಾಗಿರಬೇಕು. ನಮ್ಮದು ಆರೋಗ್ಯಕರ ಪೈಪೋಟಿ ಆದರೆ ಬಿಜೆಪಿದ್ದು ಅನಾರೋಗ್ಯಕರ ಪೈಪೋಟಿ. ಬಿಜೆಪಿಯಲ್ಲಿ ಒಬ್ಬರ ಮೇಲೊಬ್ಬರು ಕೆಸರೆರೆಚಾಟ ,ಆಪಾದನೆ ,ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ. ಬಿಜೆಪಿ ರೀತಿಯ ಕೆಟ್ಟ ಪರಿಸ್ಥಿತಿಗೆ ನಾವು ಹೋಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

07:36 PM (IST) Feb 15

ಉಗ್ರರ ಜೊತೆ ಸಂಪರ್ಕಆರೋಪ, ಜಮ್ಮು-ಕಾಶ್ಮೀರ ಗವರ್ನರ್‌ ನಿಂದ 3 ಸರ್ಕಾರಿ ನೌಕರರ ವಜಾ

ಜಮ್ಮು-ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಉಗ್ರರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಮೂವರು ಸರ್ಕಾರಿ ನೌಕರರನ್ನು ವಜಾಗೊಳಿಸಿದ್ದಾರೆ. ಪೊಲೀಸ್, ಶಿಕ್ಷಣ ಮತ್ತು ಅರಣ್ಯ ಇಲಾಖೆಯ ಈ ನೌಕರರ ಮೇಲೆ ತನಿಖಾ ಸಂಸ್ಥೆಗಳು ಉಗ್ರರ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪ ಹೊರಿಸಿವೆ.

ಉಗ್ರರ ಜೊತೆ ಸಂಪರ್ಕಆರೋಪ, ಜಮ್ಮು-ಕಾಶ್ಮೀರ ಗವರ್ನರ್‌ ನಿಂದ 3 ಸರ್ಕಾರಿ ...

06:16 PM (IST) Feb 15

ಯುಜಿಸಿಇಟಿ ಅರ್ಜಿ ಸಲ್ಲಿಕೆ ಫೆ.24ರವರೆಗೆ ವಿಸ್ತರಣೆ, ಕೆಇಎ ಸ್ಪಷ್ಟನೆ

ಪ್ರಸಕ್ತ ಸಾಲಿನ ಯುಜಿಸಿಇಟಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಫೆಬ್ರವರಿ 24 ರವರೆಗೆ ವಿಸ್ತರಿಸಲಾಗಿದೆ. ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೆಇಎ ಫೆಬ್ರವರಿ 25 ರವರೆಗೆ ಶುಲ್ಕ ಪಾವತಿಸಲು ಅವಕಾಶ ನೀಡಿದೆ.

05:31 PM (IST) Feb 15

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ 27 ಕೆಜಿ ಚಿನ್ನ,1116 ಕೆಜಿ ಬೆಳ್ಳಿ ಆಭರಣ ವಾಪಸ್ ಕೊಟ್ಟ ಕರ್ನಾಟಕ!

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿನ್ನಾಭರಣ, ಬೆಳ್ಳಿ ಹಾಗೂ ರತ್ನ ಖಚಿತ ವಜ್ರಾಭರಣಗಳನ್ನು ಕರ್ನಾಟಕ ಸರ್ಕಾರದಿಂದ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಒಟ್ಟು 27 ಕೆಜಿ ಚಿನ್ನಾಭರಣ, ವಜ್ರಾಭರಣಗಳನ್ನು ವಾಪಸ್ ನೀಡಲಾಗಿದ್ದು, ಇದರಲ್ಲಿ 1.2 ಕೆಜಿ ತೂಕದ ಸೊಂಟದ ಡಾಬು, 1 ಕೆಜಿ ತೂಕದ ಕಿರೀಟ ಸೇರಿದಂತೆ ಹಲವು ಅಮೂಲ್ಯ ಆಭರಣಗಳಿವೆ.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ 27 ಕೆಜಿ ಚಿನ್ನ,1116 ಕೆಜಿ ಬೆಳ್ ...

04:52 PM (IST) Feb 15

ಅಧಿಕಾರ ಕಳೆದುಕೊಳ್ತಿದಂತೆಯೇ ಕೇಂದ್ರದಿಂದ ಕೇಜ್ರಿಗೆ ಶಾಕ್‌, ಮನೆ ನವೀಕರಣದ ತನಿಖೆಗೆ ಆದೇಶ

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ₹45 ಕೋಟಿ ನವೀಕರಣದ ಬಗ್ಗೆ ತನಿಖೆಗೆ ಕೇಂದ್ರ ಆದೇಶಿಸಿದೆ. 40,000 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಭವನ ನಿರ್ಮಾಣದಲ್ಲಿ ಕಟ್ಟಡ ನಿಯಮಗಳ ಉಲ್ಲಂಘನೆ ಆರೋಪದ ಬಗ್ಗೆ ಸಿವಿಸಿ ತನಿಖೆಗೆ ಆದೇಶಿಸಿದೆ.

ಅಧಿಕಾರ ಕಳೆದುಕೊಳ್ತಿದಂತೆಯೇ ಕೇಂದ್ರದಿಂದ ಕೇಜ್ರಿಗೆ ಶಾಕ್‌, ಮನೆ ನವೀಕರಣದ ತನಿಖೆಗೆ ಆದೇಶ

03:32 PM (IST) Feb 15

ಬೆಳಗಾವಿಗೆ ಬಂದ ಗೋವಾ ಮಾಜಿ ಶಾಸಕನ ಮೇಲೆ ಆಟೋ ಡ್ರೈವರ್ ಹಲ್ಲೆ; ಕೆಲವೇ ಕ್ಷಣಗಳಲ್ಲಿ ಸಾವು!

ಬೆಳಗಾವಿಯಲ್ಲಿ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಆಟೋ ಚಾಲಕ ಹಲ್ಲೆ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಲಾಡ್ಜ್‌ನಲ್ಲಿ ಕುಸಿದುಬಿದ್ದು ನಿಗೂಢವಾಗಿ ಸಾವಿಗೀಡಾಗಿದ್ದಾರೆ.

ಬೆಳಗಾವಿಗೆ ಬಂದ ಗೋವಾ ಮಾಜಿ ಶಾಸಕನ ಮೇಲೆ ಆಟೋ ಡ್ರೈವರ್ ಹಲ್ಲೆ; ಕೆಲವೇ ...

02:58 PM (IST) Feb 15

ಇತ್ತ ಪ್ರಧಾನಿ ಮೋದಿ ಜಾತಿ ಬಗ್ಗೆ ವಾಕ್ಸಮರ! ಅತ್ತ ರಾಹುಲ್​ ಧರ್ಮದ ಬಗ್ಗೆ ಕದನ: ರಾಜಕೀಯದಲ್ಲಿ ಕೋಲಾಹಲ

ಪ್ರಧಾನಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ ಎಂದಿರುವ ತೆಲಂಗಾಣ ಸಿಎಂ ಮಾತಿಗೆ ರಾಜಕೀಯದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಏನಿದು ವಿಷ್ಯ? 

02:36 PM (IST) Feb 15

ಉಡುಪಿ: ಕರಾವಳಿ ಕಾವಲು ಪಡೆಗೆ ಇಂಧನ ಕಡಿತ - ಭದ್ರತೆಗೆ ಆತಂಕ!

ಕರಾವಳಿ ಭದ್ರತೆಗೆ ಇಂಧನ ಕಡಿತದಿಂದ ತೊಂದರೆಯಾಗಿದೆ. ಕರಾವಳಿ ಕಾವಲು ಪಡೆಯ ಇಂಧನ ಪೂರೈಕೆಯಲ್ಲಿ ರಾಜ್ಯ ಸರ್ಕಾರ ಕಡಿತ ಮಾಡಿದೆ. ಇದರಿಂದ ಗಸ್ತು ತಿರುಗುವ ಅವಧಿ ಕಡಿಮೆಯಾಗಿದ್ದು, ಡ್ರಗ್ಸ್, ಭಯೋತ್ಪಾದನೆಗೆ ಅವಕಾಶವಾಗುವ ಆತಂಕವಿದೆ. ಆರ್ಥಿಕ ಮಿತವ್ಯಯದ ನೆಪದಲ್ಲಿ ಭದ್ರತೆಗೆ ಹಿನ್ನಡೆಯುಂಟಾಗಿದೆ.

01:53 PM (IST) Feb 15

ರಾಜ್ಯದ ಜನತೆಗೆ 5 ಲಕ್ಷ ಗೆಲ್ಲುವ ಬಂಪರ್ ಆಫರ್ ಕೊಟ್ಟ ಸರ್ಕಾರ!

ಬೀದರ್‌ನಲ್ಲಿ ನಡೆದ 93 ಲಕ್ಷ ರೂ. ದರೋಡೆ ಪ್ರಕರಣದ ಆರೋಪಿಗಳ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಜನವರಿ 16 ರಂದು ನಡೆದ ಈ ಘಟನೆಯಲ್ಲಿ ಭದ್ರತಾ ಸಿಬ್ಬಂದಿಗೆ ಗುಂಡು ಹಾರಿಸಿ ಹಣದ ಪೆಟ್ಟಿಗೆಯನ್ನು ದೋಚಿದ್ದರು.

ರಾಜ್ಯದ ಜನತೆಗೆ 5 ಲಕ್ಷ ಗೆಲ್ಲುವ ಬಂಪರ್ ಆಫರ್ ಕೊಟ್ಟ ಸರ್ಕಾರ!

01:07 PM (IST) Feb 15

ವಿಲೇಜ್ ಅಕೌಂಟೆಂಟ್ ಮುಷ್ಕರ; ಜಾತಿ/ಆದಾಯ ಪ್ರಮಾಣ ಪತ್ರ ಪಡೆಯಲು ಸಹಾಯವಾಣಿ ಆರಂಭ

ಬೆಂಗಳೂರಿನಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಜಾತಿ/ಆದಾಯ ಪ್ರಮಾಣ ಪತ್ರ ಪಡೆಯಲು ವಿಳಂಬವಾಗುತ್ತಿದೆಯೇ? ಚಿಂತಿಸಬೇಡಿ! ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳಿಗಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ. 9019913319 ಸಂಖ್ಯೆಗೆ ಕರೆ ಮಾಡಿ.

ಇಲ್ಲಿದೆ ಹೆಚ್ಚಿನ ಮಾಹಿತಿ: ವಿಲೇಜ್ ಅಕೌಂಟೆಂಟ್ ಮುಷ್ಕರ; ಜಾತಿ/ಆದಾಯ ಪ್ರಮಾಣ ಪತ್ರ ಪಡೆಯಲು ಸಹಾಯವಾಣಿ

12:32 PM (IST) Feb 15

ಮಹಾಕುಂಭಕ್ಕೆ ಹೋಗೋದು ಈಗ ಸುಲಭ, ವಂದೇ ಭಾರತ್ ಸ್ಪೆಷಲ್ ಟ್ರೈನ್!

ಮಹಾಕುಂಭ ಮೇಳಕ್ಕೆ ಹೋಗಿ ಬರೋ ಭಕ್ತರಿಗೆ ಅನುಕೂಲವಾಗೋಕೆ ಫೆಬ್ರವರಿ 15, 16 ಮತ್ತು 17 ರಂದು ದೆಹಲಿಯಿಂದ ವಾರಣಾಸಿಗೆ ಪ್ರಯಾಗ್‌ರಾಜ್ ಮೂಲಕ ಸ್ಪೆಷಲ್ ವಂದೇ ಭಾರತ್ ರೈಲು ಓಡಿಸಲು ರೈಲ್ವೆ ನಿರ್ಧರಿಸಿದೆ. ಭಕ್ತರಿಗೆ ಇದು ತುಂಬಾ ಅನುಕೂಲವಾಗಲಿದೆ

ಮಹಾಕುಂಭಕ್ಕೆ ಹೋಗೋದು ಈಗ ಸುಲಭ, ವಂದೇ ಭಾರತ್ ಸ್ಪೆಷಲ್ ಟ್ರೈನ್!

12:10 PM (IST) Feb 15

ರೇಷನ್ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ, ಪಡಿತರ ಬದಲು ಹಣ, ಯಾವಾಗ ಜಾರಿ?

ದೇಶಾದ್ಯಂತ ರೇಷನ್ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ. ರೇಷನ್ ಬದಲು ನಗದು ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಹೊಸ ನಿಯಮಗಳು ಯಾರಿಗೆ ಅನ್ವಯಿಸುತ್ತವೆ, ಯಾವಾಗ ಜಾರಿಗೆ ಬರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ರೇಷನ್ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ, ಪಡಿತರ ಬದಲು ಹಣ, ಯಾವಾಗ ಜಾರಿ? ಯಾರಿಗೆ ಅನ್ವಯಿಸುತ್ತೆ? ನಿಯಮಗಳೇನು? ತಿಳಿಯಿರಿ

11:27 AM (IST) Feb 15

ಗ್ಯಾರಂಟಿ ಯೋಜನೆಯಿಂದ ಖಜಾನೆ ಖಾಲಿ ಆಯ್ತಾ?

ಖಜಾನೆ ಖಾಲಿ ಇರುವುದರಿಂದ ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹೋರಾಟದ ಎಚ್ಚರಿಕೆ ನೀಡಲಾಗಿದೆ.

ಗ್ಯಾರಂಟಿ ಯೋಜನೆಯಿಂದ ಖಜಾನೆ ಖಾಲಿ ಆಯ್ತಾ? ಕೇವಲ ಐದು ವರ್ಷದ ಹಿಂದಷ್ಟೇ ಸ್ಥಾಪನೆಯಾಗಿದ್ದ ಮಂಡ್ಯ ವಿವಿ ಮುಚ್ಚಲು ಮುಂದಾದ ಸರ್ಕಾರ?

10:30 AM (IST) Feb 15

ಮಹಾಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರಿಗೆ ಹೊಸ ಸಂಚಾರ ಮತ್ತು ಸ್ನಾನ ಮಾರ್ಗಸೂಚಿ

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಹೊಸ ಸಂಚಾರ ಮತ್ತು ಸ್ನಾನ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೊರಡಿಸಲಾದ ಸೂಚನೆಗಳ ಪ್ರಕಾರ, ಪರೇಡ್ ಮೇಳ ಪ್ರದೇಶದಿಂದ ಸಂಗಮದ ಕಡೆಗೆ ಸ್ನಾನ ಮಾಡಲು ಬರುವ ಭಕ್ತರು ಸಂಗಮ ಮತ್ತು ಪರೇಡ್ ಪ್ರದೇಶದ ಕಡೆಗೆ ನಿರ್ಮಿಸಲಾದ ಇತರ ಘಾಟ್‌ಗಳಲ್ಲಿ ಸ್ನಾನ ಮಾಡಲು ಸಾಧ್ಯವಾಗುತ್ತದೆ.

09:58 AM (IST) Feb 15

ವಯನಾಡಿನ ಪುನರ್ವಸತಿಗಾಗಿ 529.50 ಕೋಟಿ ರೂ. ಸಾಲ ನೀಡಿದ ಕೇಂದ್ರ

ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳ ಪುನರ್ವಸತಿಗಾಗಿ ಕೇಂದ್ರವು ತನ್ನ ಬಂಡವಾಳ ಹೂಡಿಕೆ ಯೋಜನೆಯಡಿಯಲ್ಲಿ ಸುಮಾರು 529.50 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದೆ, ಮಾರ್ಚ್ 31 ರೊಳಗೆ ಕೇರಳವು ಈ ಮೊತ್ತವನ್ನು ಬಳಸಿಕೊಳ್ಳಬೇಕು ಎಂಬ ಷರತ್ತನ್ನು ಹೊಂದಿದೆ ಎಂದು ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿದ್ದಾರೆ.

09:56 AM (IST) Feb 15

ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತಂಡಕ್ಕೆ ಬಂಪರ್ ನಗದು ಬಹುಮಾನ!

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ $2.24 ಮಿಲಿಯನ್ (₹19.4 ಕೋಟಿ) ನಗದು ಬಹುಮಾನ ಘೋಷಣೆಯಾಗಿದೆ. ರನ್ನರ್-ಅಪ್ ತಂಡಕ್ಕೆ ₹9.72 ಕೋಟಿ ಬಹುಮಾನ ಸಿಗಲಿದ್ದು, ಒಟ್ಟಾರೆ ಬಹುಮಾನ ಮೊತ್ತ ₹6.9 ಮಿಲಿಯನ್.

ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತಂಡಕ್ಕೆ ಬಂಪರ್ ನಗದು ಬಹುಮಾನ ಘೋಷಿಸಿದ ಐಸಿಸಿ! 53% ಕ್ಯಾಷ್‌ ಪ್ರೈಸ್ ಹೈಕ್

09:56 AM (IST) Feb 15

ಪ್ರಯಾಗ್‌ರಾಜ್‌ನಲ್ಲಿ ಕಾರು-ಬಸ್ ಡಿಕ್ಕಿ: ಕುಂಭಮೇಳಕ್ಕೆ ಹೊರಟಿದ್ದ 10 ಭಕ್ತರು ಸಾವು

ಉತ್ತರ ಪ್ರದೇಶದ ಮಿರ್ಜಾಪುರ-ಪ್ರಯಾಗ್‌ರಾಜ್‌ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಹಾಕುಂಭಮೇಳಕ್ಕೆ ತೆರಳುತ್ತಿದ್ದ 10 ಭಕ್ತರು ಸಾವು ಕಂಡಿದ್ದಾರೆ. ಸಾವು ಕಂಡಿರುವ ಭಕ್ತರನ್ನು ಛತ್ತೀಸ್‌ಗಢದವರು ಎಂದು ಗುರುತಿಸಲಾಗಿದೆ. ಭಕ್ತರಿದ್ದ ಬೊಲೊರೋ ಕಾರ್‌, ಮಧ್ಯಪ್ರದೇಶದ ರಾಜ್‌ಗಢದಿಂದ ಬರುತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ 19 ಮಂದಿಗೆ ಗಾಯಗಳಾಗಿವೆ ಎಂದೂ ವರದಿಯಾಗಿದೆ. 

ಪ್ರಯಾಗ್‌ರಾಜ್‌ನಲ್ಲಿ ಕಾರು-ಬಸ್ ಡಿಕ್ಕಿ: ಕುಂಭಮೇಳಕ್ಕೆ ಹೊರಟಿದ್ದ 10 ಭಕ್ತರು ಸಾವು