೨೦೨೫ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ 19.4 ಕೋಟಿ ರೂ. ಬಹುಮಾನ ಘೋಷಣೆಯಾಗಿದೆ. ಒಟ್ಟು 6.9 ಮಿಲಿಯನ್ ಡಾಲರ್ ಬಹುಮಾನ ಮೀಸಲಿದ್ದು, ರನ್ನರ್-ಅಪ್‌ಗೆ 9.27 ಕೋಟಿ ರೂ. ಸಿಗಲಿದೆ. ಸೆಮಿಫೈನಲ್ ಸೋತವರಿಗೆ ತಲಾ 4.86 ಕೋಟಿ ರೂ. ಇತರ ತಂಡಗಳಿಗೂ ಬಹುಮಾನ ನಿಗದಿ. ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಟೂರ್ನಿ ನಡೆಯಲಿದೆ.
ದುಬೈ: ಈ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡ 2.24 ಮಿಲಿಯನ್ ಯುಎಸ್ ಡಾಲರ್ (ಸುಮಾರು 19.4 ಕೋಟಿ ರು.) ನಗದು ಬಹುಮಾನ ಪಡೆಯಲಿದೆ ಎಂದು ಐಸಿಸಿ ಘೋಷಿಸಿದೆ. ಟೂರ್ನಿಯ ಪ್ರಶಸ್ತಿ ಮೊತ್ತವನ್ನು ಶುಕ್ರವಾರ ಪ್ರಕಟಿಸಲಾಯಿತು. ಒಟ್ಟಾರೆ 6.9 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಐಸಿಸಿ ಮೀಸಲಿಟ್ಟಿದೆ. ಇದು ಕಳೆದ ಬಾರಿಗಿಂತ ಶೇ.53ರಷ್ಟು ಹೆಚ್ಚು. 2017ರಲ್ಲಿ ಒಟ್ಟು 4.5ಮಿಲಿಯನ್
ನಗದು ಯುಎಸ್ ಡಾಲರ್ ಬಹುಮಾನವಿತ್ತು.
ಇನ್ನು, ಈ ಬಾರಿ ರನ್ನರ್-ಅಪ್ ತಂಡಕ್ಕೆ 1.12 ಮಿಲಿಯನ್ ಯುಎಸ್ ಡಾಲರ್ (ಸುಮಾರು 9.72 ಕೋಟಿ ರು.) ನಗದು ಬಹುಮಾನ ಸಿಗಲಿದೆ. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ 4.86 ಕೋಟಿ ರು. ಲಭಿಸಲಿದೆ. 5 ಮತ್ತು 6ನೇ ಸ್ಥಾನ ಪಡೆದ ತಂಡಗಳು ತಲಾ ₹3 ಕೋಟಿ, 7 ಮತ್ತು 8ನೇ ಸ್ಥಾನ ಪಡೆಯುವ ತಂಡಗಳು ತಲಾ 1.2 ಕೋಟಿ ಬಹುಮಾನ ಪಡೆಯಲಿವೆ. ಅಲ್ಲದೆ, ಟೂರ್ನಿಯಲ್ಲಿ ಪಾಲ್ಗೊಂಡಿದ್ದಕ್ಕೆ ಎಲ್ಲಾ ತಂಡಗಳಿಗೆ ಹೆಚ್ಚು ವರಿಯಾಗಿ ತಲಾ 1.08 ಕೋಟಿ ರು. ನಗದು ಬಹುಮಾನ ಸಿಗಲಿದೆ. ಗುಂಪು ಹಂತದಲ್ಲಿ ಗೆಲ್ಲುವ ತಂಡಗಳಿಗೆ 30 ಲಕ್ಷ ದೊರೆಯಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ 8 ವರ್ಷ ಬ್ರೇಕ್ ಬಿದ್ದಿದ್ದು ಏಕೆ? ಇಲ್ಲಿದೆ ಡೀಟೈಲ್ಸ್
2025ರ ಚಾಂಪಿಯನ್ಸ್ ಟ್ರೋಫಿ ಫೆ.19ರಿಂದ ಮಾ.9ರ ವರೆಗೂ ನಿಗದಿಯಾಗಿದೆ. ಪ್ರತಿ ಬಾರಿಯಂತೆ ಈ ಸಲವೂ 8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಕಣದಲ್ಲಿವೆ. ಮಿನಿ ವಿಶ್ವಕಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ಗಳಾದ ವೆಸ್ಟ್‌ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳಿಲ್ಲ. 2017ರಲ್ಲಿ ಕೊನೆಯ ಬಾರಿಗೆ ಆಯೋಜನೆಗೊಂಡಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿದ ಸರ್ಫರಾಜ್ ಅಹಮದ್ ನೇತೃತ್ವದ ಪಾಕಿಸ್ತಾನ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಚಾಂಪಿಯನ್ಸ್ ಟ್ರೋಫಿ ಕಪ್ ಗೆಲ್ಲಬೇಕಿದ್ದರೆ ಭಾರತ ಬುಮ್ರಾ ಇಲ್ಲದೆ ಆಡಲು ಕಲಿಯಬೇಕು: ಹರ್ಭಜನ್
ನವದೆಹಲಿ: ಐಸಿಸಿ ಟೂರ್ನಿಗಳಲ್ಲಿ ಭಾರತ ಟ್ರೋಫಿ ಗೆಲ್ಲಬೇಕಿದ್ದರೆ ಜಸ್‌ಪ್ರೀತ್ ಬುಮ್ರಾ ಇಲ್ಲದೆ ಆಡಲು ಕಲಿಯಬೇಕು ಎಂದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಮಿನಿ ವಿಶ್ವಕಪ್ ಸಮರ; ಇದೇ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ! ಏನಿದರ ವಿಶೇಷ?
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅವರು, ‘ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಫೇವರಿಟ್ ತಂಡ. ಅರ್ಶ್‌ದೀಪ್, ಕುಲ್ದೀಪ್, ಶಮಿ, ಜಡೇಜಾ ಸೇರಿ ಅನುಭವಿ ಆಟಗಾರರು ತಂಡದಲ್ಲಿದ್ದಾರೆ. ವಿರಾಟ್, ರೋಹಿತ್, ಶ್ರೇಯಸ್, ಶುಭ್‌ಮನ್ ಕೂಡಾ ಉತ್ತಮ ಲಯದಲ್ಲಿದ್ದಾರೆ. ಆದರೆ ಬುಮ್ರಾ ಅನುಪಸ್ಥಿತಿ ತಂಡವನ್ನು ಕಾಡಬಹುದು. ಆದರೂ ನಿಮಗೆ ಟ್ರೋಫಿ ಗೆಲ್ಲಲೇಬೇಕಿದ್ದರೆ, ಬುಮ್ರಾ ಇಲ್ಲದೆ ಆಡುವುದನ್ನು ಕಲಿಯಬೇಕು’ ಎಂದು ಸಲಹೆ ನೀಡಿದ್ದಾರೆ.
