MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Open 2026
Today's Horoscope in Kannada
Bengaluru Rains
Cricketer Rohit Sharma
BDA Building Redevelopment
Koppal Farmers
Karnataka KPS Schools
Vande Mataram Row
Banashankari Bus Terminal
Mangaluru Airport Land Donation
  • Home
  • News
  • India News
  • ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ 27 ಕೆಜಿ ಚಿನ್ನ,1116 ಕೆಜಿ ಬೆಳ್ಳಿ ಆಭರಣ ವಾಪಸ್ ಕೊಟ್ಟ ಕರ್ನಾಟಕ!

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ 27 ಕೆಜಿ ಚಿನ್ನ,1116 ಕೆಜಿ ಬೆಳ್ಳಿ ಆಭರಣ ವಾಪಸ್ ಕೊಟ್ಟ ಕರ್ನಾಟಕ!

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿನ್ನಾಭರಣ, ಬೆಳ್ಳಿ ಹಾಗೂ ರತ್ನ ಖಚಿತ ವಜ್ರಾಭರಣಗಳನ್ನು ಕರ್ನಾಟಕ ಸರ್ಕಾರದಿಂದ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಒಟ್ಟು 27 ಕೆಜಿ ಚಿನ್ನಾಭರಣ, ವಜ್ರಾಭರಣಗಳನ್ನು ವಾಪಸ್ ನೀಡಲಾಗಿದ್ದು, ಇದರಲ್ಲಿ 1.2 ಕೆಜಿ ತೂಕದ ಸೊಂಟದ ಡಾಬು, 1 ಕೆಜಿ ತೂಕದ ಕಿರೀಟ ಸೇರಿದಂತೆ ಹಲವು ಅಮೂಲ್ಯ ಆಭರಣಗಳಿವೆ.

2 Min read
Author : Sathish Kumar KH
| Updated : Feb 15 2025, 04:41 PM IST
Share this Photo Gallery
  • FB
  • TW
  • Linkdin
  • Whatsapp
18

ಕರ್ನಾಟಕ ಸರ್ಕಾರದ ಸುಪರ್ದಿಯಲ್ಲಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೇರಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ ರತ್ನ ಖಚಿತ ವಜ್ರಾಭರಣಗಳನ್ನು ಇದೀಗ ತಮಿಳುನಾಡು ಸರ್ಕಾರಕ್ಕೆ ಒಪ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಖಜಾನೆಯಲ್ಲಿದ್ದ ಚಿನ್ನಾಭರಣವನ್ನು ತೆಗೆದಿದ್ದು, ಅದರಲ್ಲಿದ್ದ ಕೆಲವು ಆಭರಣಗಳ ಮಾದರಿ ಇಲ್ಲಿವೆ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ಹಾಗೂ ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದ್ದ ಆಸ್ತಿ ಹಾಗೂ ಚಿನ್ನಾಭರಣವನ್ನು ಇದೀಗ ಸಂಬಂಧಪಟ್ಟವರಿಗೆ ಒಪ್ಪಿಸಲಾಗುತ್ತಿದೆ. 

38

ಜಯಲಲಿತಾ ಫೋಟೋ ಇರುವ ಚಿನ್ನದ ತಟ್ಟೆ:

ಕರ್ನಾಟಕದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಕಿರಣ್ ಜವಳಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತಮಿಳುನಾಡು ಅಧಿಕಾರಿಗಳ ಸಮಕ್ಷಮದಲ್ಲಿ ಆಭರಣ ಓಪನ್ ಮಾಡಲಾಗಿದೆ. ಒಟ್ಟು 27ಕೆಜಿ ಚಿನ್ನಾಭರಣ, ವಜ್ರಾಭರಣ ವಾಪಸ್ ನೀಡಲಾಗಿದೆ ಎಂದು ತಿಳಿಸಿದರು.

48

ಬರೋಬ್ಬರಿ 1.2 ಕೆ.ಜಿ ಬಂಗಾರದಿಂದ ಮಾಡಿದ ಸೊಂಟದ ಡಾಬು: 

1.2 ಕೆಜಿ ತೂಕದ ಸೊಂಟದ ಡಾಬು, 1 ಕೆ ಜಿ ತೂಕದ ಕಿರೀಟ, 1.5 ಕೆಜಿ ತೂಕ ಚೈನ್, ಜಯಲಲಿತಾ ಅವರ ಚಿನ್ನದ ಪೋಟೊ ಸೇರಿ ಹಲವು ಚಿನ್ನದ ಆಭರಣಗಳು ಇದರಲ್ಲಿವೆ. ಚಿನ್ನದ ಖತ್ತಿ ಹಾಗೂ ಕಿರೀಟಗಳು ಕೂಡ ಇದರಲ್ಲಿವೆ.
 

58

1.5 ಕೆಜಿ ತೂಕವಿರುವ ಚಿನ್ನದ ಸರ: 

ಜಯಲಲಿತಾ ಅವರ ಕೇಸ್ ಅನ್ನು ಕರ್ನಾಟಕದಲ್ಲಿ ವಿಚಾರಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ ಅಲ್ಲಿನ ಜನರಿಂದ ಉಂಟಾದ ಆಸ್ತಿಪಾಸ್ತಿ ನಷ್ಟ, ಭದ್ರತೆ ಸೇರಿದಂತೆ ಎಲ್ಲ ಉದ್ದೇಶಗಳಿಗೆ ಕರ್ನಾಟಕಕ್ಕೆ ತಮಿಳುನಾಡು ಸರ್ಕಾರವು 5 ಕೋಟಿ ನೀಡುವಂತೆ ಆದೇಶ ಮಾಡಲಾಗಿತ್ತು.
 

68

ಜಯಲಲಿತಾ ಬಳಿಯಿದ್ದ ಚಿನ್ನದ ಖಡ್ಗ:  

ಶಶಿಕಲಾ ಅವರ ನೀಡಿದ್ದ 20.02 ಕೋಟಿ ರೂ.ದಂಡದಲ್ಲಿ 8 ಕೋಟಿ ರೂ. ನೀಡುವಂತೆ ಆದೇಶ ಮಾಡಲಾಗಿದೆ. ಅಂದರೆ, ಜಯಲಲಿತಾಗೆ ಸಂಬಂಧಿಸಿದ ಅಕ್ರಮ ಆಸ್ತಿ ಗಳಿಕೆಯ ಕೇಸ್ ನಡೆಸಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಒಟ್ಟು 13 ಕೋಟಿ ರೂ. ನೀಡುವಂತೆ ಆದೇಶ ಮಾಡಲಾಗಿದೆ.

78

ಜಯಲಲಿತಾ ಅವರ ಚಿನ್ನದ ಸರ:

ಜಯಲಲಿತಾ ಅವರಿಗೆ ಸಂಬಂಧಿಸಿದ ಎಲ್ಲ ಆಸ್ತಿ ಮತ್ತು ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಜಯಲಲಿತಾ ಅವರ ಅಣ್ಣನ ಮಗಳು ದೀಪಾ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ.

88

ಗಟ್ಟಿ ಚಿನ್ನದಿಂದ ಮಾಡಲಾದ ಜಯಲಲಿತಾ ಮೂರ್ತಿ:
ತಮಿಳುನಾಡು ಸರ್ಕಾರ ಇದನ್ನು ಹರಾಜು ಮಾಡಬಹುದು. ಅಥವಾ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನೀಡಬಹುದು ಎಂದು ಕೋರ್ಟ್ ಹೇಳಿದೆ. ಕಾಂಚೀಪುರ, ತೂತುಕುಡಿ ಸೇರಿ ಹಲವೆಡೆ ಜಯಲಲಿತಾ ಹೆಸರಿನಲ್ಲಿದ್ದ ಒಟ್ಟು 1526 ಎಕರೆ ಜಮೀನು ಪತ್ರಗಳು ಇದರಲ್ಲಿವೆ. ಒಟ್ಟು 6 ಪೆಟ್ಟಿಗೆಯಲ್ಲಿದ್ದ ಚಿನ್ನದ 1600 ಆಭರಣಗಳನ್ನ ವಾಪಸ್ ನೀಡಲಾಗಿದೆ.
 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ತಮಿಳುನಾಡು
ಆಭರಣಗಳು
ಬೆಳ್ಳಿ
 

Latest Videos
Recommended Stories
Recommended image1
UPI Payment: ಯಾರೇ ವಿರೋಧಿಸಿದ್ರೂ ಯುಪಿಐ ಮೇಲಿನ ಶುಲ್ಕ ವಾಪಸ್ ಇಲ್ಲ: ಹೊರಬಿತ್ತು ಅಚ್ಚರಿಯ ಸತ್ಯ! ಯಾವಾಗ ಜಾರಿ?
Recommended image2
ಭಾರತದ ಫಲವತ್ತತೆ ದರ ಕುಸಿತ, ಜನಸಂಖ್ಯೆ ನಿಯಂತ್ರಣ ಕ್ರಮ ಸಾಕು: ಪಿಎಂ ಸಲಹಾ ಮಂಡಳಿ!
Recommended image3
ಪ್ರಧಾನಿ ಮೋದಿಗೆ 75 ವರ್ಷ: ಇಂದು ಜನ್ಮದಿನದ ಪ್ರಯುಕ್ತ ಕಾಶಿಯಲ್ಲಿ ಹೇಗೆ ಆಚರಿಸಲಿದ್ದಾರೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved