Cyclone Alert | ಕರ್ನಾಟಕ ಸೇರಿ 4 ರಾಜ್ಯಕ್ಕೆ ಮತ್ತೆ ಮಹಾಮಳೆ : ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ

  • ಬಂಗಾಳ ಕೊಲ್ಲಿಯಲ್ಲಿ ಮುಂದಿನ ನಾಲ್ಕೈದು ದಿನಗಳಲ್ಲಿ ಸೃಷ್ಟಿಯಾಗಲಿರುವ  ಮತ್ತೊಂದು ಚಂಡಮಾರುತ
  •  ಚಂಡಮಾರುತದ ಪರಿಣಾಮ ಪುನಃ ರಾಜ್ಯಾದ್ಯಂತ ಮಳೆ ಆರ್ಭಟಿಸುವ ಸಂಭವ
IMD Issues Cyclone alerts To 4 States including Karnataka snr

 ಬೆಂಗಳೂರು (ನ.23):  ಹಲವು ದಿನಗಳಿಂದ ಭಾರೀ ಮಳೆಯಿಂದ (Heavy Rain) ತತ್ತರಿಸಿರುವ ರಾಜ್ಯದಲ್ಲಿ (karnataka) ಸದ್ಯ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದರೂ, ಬಂಗಾಳ ಕೊಲ್ಲಿಯಲ್ಲಿ (Bea Of Bengal) ಮುಂದಿನ ನಾಲ್ಕೈದು ದಿನಗಳಲ್ಲಿ ಸೃಷ್ಟಿಯಾಗಲಿರುವ ಚಂಡ ಮಾರುತದ (Cyclone) ಪರಿಣಾಮ ಪುನಃ ರಾಜ್ಯಾದ್ಯಂತ ಮಳೆ ಆರ್ಭಟಿಸುವ ಸಂಭವವಿದೆ. ಈಗಾಗಲೇ ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದ ಜನರು ಮತ್ತೆ ಮಳೆಯಾಗುವ ಸುದ್ದಿಯಿಂದ ಬೆಚ್ಚಿ ಬೀಳುವಂತಾಗಿದೆ.  ಕರ್ನಾಟಕ (Karnataka) ಮಾತ್ರವಲ್ಲ ತಮಿಳುನಾಡು (Tamilnadu), ಆಂಧ್ರ ಪ್ರದೇಶ (Andhra Pradesh), ಪುದುಚೇರಿಯಲ್ಲೂ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.

ಬಂಗಾಳ ಕೊಲ್ಲಿ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ (ಸ್ಟ್ರಫ್‌) ನ.26ರ ವೇಳೆಗೆ ವಾಯುಭಾರ ಕುಸಿತ ಇಲ್ಲವೇ ಚಂಡ ಮಾರುತವಾಗಿ ಬದಲಾಗುವ ಸಾಧ್ಯತೆ ಇರುವುದರಿಂದ ರಾಜ್ಯಾದ್ಯಂತ ಮತ್ತೆ ಭಾರಿ ಮಳೆಯಾಗುವ (Heavy Rain) ಸಂಭವವಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ( KSNDMC - Karnataka State Natural Disaster Monitoring Centre) ತಿಳಿಸಿದೆ.

ನಿರಂತರ ಹವಾಮಾನ ವೈಪರೀತ್ಯಗಳಿಂದ ಕಳೆದೆರಡು ವಾರದಿಂದ ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ದಾಖಲಾಗಿದೆ. ಸದ್ಯ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದರೂ ನ.26ರಿಂದ ವಾಯುಭಾರ ಕುಸಿತದ ಕಾರಣ ಕರಾವಳಿ (Coastal), ಮಲೆನಾಡು (Malnad) ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ವರುಣ ಆರ್ಭಟಿಸುವ ಸಾಧ್ಯತೆ ಇದೆ.

‘ಸದ್ಯ ಸಣ್ಣ ಸ್ವರೂಪದಲ್ಲಿರುವ ಬಂಗಾಳ ಕೊಲ್ಲಿಯಲ್ಲಿನ ಸ್ಟ್ರಫ್‌ ಮತ್ತಷ್ಟು ತೀವ್ರಗೊಂಡು ವಾಯುಭಾರ ಕುಸಿತ ಜತೆಗೆ ಚಂಡ ಮಾರುತವಾಗುವ ಲಕ್ಷಣಗಳು ದಟ್ಟವಾಗಿವೆ. ಒಂದು ವೇಳೆ ನಿರೀಕ್ಷೆ ನಿಜವಾದರೆ ನ. 26 ಇಲ್ಲವೇ ನ.27ರಂದು ಪುದುಚೇರಿ, ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗಕ್ಕೆ ಬಂದಪ್ಪಳಿಸಲಿರುವ ಸ್ಟ್ರಫ್‌ ರಾಜ್ಯಾದ್ಯಂತ ಅತ್ಯಧಿಕ ಭಾರಿ ಮಳೆ ಸುರಿಸಲಿದೆ’ ಎಂದು ಕೆಎಸ್‌ಎನ್‌ಡಿಎಂಸಿ (KSNDMC) ವಿಜ್ಞಾನಿ ಸುನೀಲ್‌ ಗವಾಸ್ಕರ್‌ ಮಾಹಿತಿ ನೀಡಿದ್ದಾರೆ.

 ಬೆಂಗಳೂರಲ್ಲಿ ಅತ್ಯಧಿಕ 12 ಸೆಂ.ಮೀ. ಮಳೆ

ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು (Bengaluru) ಜಿಲ್ಲೆಯ ಜಿಕೆವಿಕೆ (GKVK), ಕೆಎಸ್‌ಎನ್‌ಡಿಎಂಸಿ ಮತ್ತು ಹೆಬ್ಬಾಳದಲ್ಲಿ ತಲಾ 12 ಸೆಂ.ಮೀ. ಮಳೆ ಬಿದ್ದಿದೆ. ರಾಮನಗರದ (Ramnagar) ಮಾಗಡಿ, ಬೆಂಗಳೂರಿನ ಹೆಸರಘಟ್ಟ, ಹಾಸನ (Hassan) ಜಿಲ್ಲೆಯ ಬೇಲೂರು 6 ಸೆಂ.ಮೀ., ಬೆಂಗಳೂರಿನ ಹೊಸಕೋಟೆ 5 ಸೆಂ.ಮೀ. ಮಳೆ ದಾಖಲಾಗಿದ್ದು, ಕರಾವಳಿ ಭಾಗದಲ್ಲೂ ಉತ್ತಮ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಹವಾಮಾನ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ.

ಶತಮಾನದ ದಾಖಲೆ ಮಳೆ : 

ಬೆಂಗಳೂರಿನಲ್ಲಿ (Bengaluru) ಕಳೆದ ಭಾನುವಾರ ರಾತ್ರಿ ಧಾರಾಕಾರವಾಗಿ ಸುರಿದು ಜನ ಜೀವನ ಅಸ್ತವ್ಯಸ್ತಗೊಳಿಸಿದ ಮಳೆ (Rain) ಒಂದು ಶತಮಾನದ ನಂತರ ಸುರಿದ ದಾಖಲೆಯ ಮಳೆಯಾಗಿದೆ. ನವೆಂಬರ್‌ ತಿಂಗಳಲ್ಲೆ 24 ಗಂಟೆಯಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ ಎಂಬುದು ಭಾರತೀಯ ಹವಾಮಾನ ಇಲಾಖೆಯ (Imd) ವರದಿ ದೃಢಪಡಿಸಿದೆ.

ಹೌದು, 116 ವರ್ಷಗಳ ನಂತರ ಬೆಂಗಳೂರು ನಗರ ಜಿಲ್ಲೆ ಇದೇ ನವೆಂಬರ್‌ ತಿಂಗಳಲ್ಲಿ ಇಂಥದೊಂದು ದೊಡ್ಡ ಮಳೆ ಕಂಡಂತಾಗಿದೆ. ಭಾನುವಾರ ಸಂಜೆ ನಂತರ ಸುರಿದ ಮಳೆ ಈ ದಾಖಲೆಗೆ ಕಾರಣವಾಗಿದೆ. ಯಲಹಂಕ (yalahanka) ವ್ಯಾಪ್ತಿಯಲ್ಲಿ ನವೆಂಬರ್‌ ತಿಂಗಳ ವಾಡಿಕೆ ಮಳೆ 55 ಮಿ.ಮೀ. ಇದೆ, ಆದರೆ 153 ಮಿ.ಮೀ. ಮಳೆ ಸುರಿದಿದೆ.

1916ರ ನವೆಂಬರ್‌ 9ರಂದು 114.5 ಮಿ.ಮೀ ಬೀಳುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಇದು ಆ ವರ್ಷದ ನವೆಂಬರ್‌ ತಿಂಗಳಲ್ಲಿ ಹಾಗೂ 24 ಗಂಟೆಯಲ್ಲಿ ಬಿದ್ದ ಅತ್ಯಧಿಕ ಮಳೆಯಾಗಿತ್ತು. ಇದು ಭಾರತೀಯ ಹವಾಮಾನ ಇಲಾಖೆ (ಐಎಂಡಿ IMD) ವ್ಯಾಪ್ತಿಯ ಅರಮನೆ ರಸ್ತೆಯಲ್ಲಿ (Palace road) ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ಮಳೆಯಾಗಿದೆ.

ಸದ್ಯ ಕೆಲವು ವರ್ಷಗಳಿಂದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ KSNDmC) ಬೆಂಗಳೂರಿನಲ್ಲಿ ಒಟ್ಟು ಸುಮಾರು 100 ಮಳೆ ಮಾಪನ ಕೇಂದ್ರ ಅಳವಡಿಸಿದ್ದು, ಈ ಪೈಕಿ ಯಲಹಂಕ ಕೇಂದ್ರದಲ್ಲಿ ದಾಖಲಾದ ಅಂಕಿ ಅಂಶ ಪ್ರಕಾರ ಶತಮಾನದ ನಂತರ ನವೆಂಬರ್‌ (ನ 1ರಿಂದ 22ರವರೆಗೆ) ಹೋಲಿಸಿದರೆ ಕೇವಲ 22 ದಿನದಲ್ಲಿ ಸಾರ್ವಕಾಲಿಕ ದಾಖಲೆ ಸರಿಗಟ್ಟುವಂತ ಭಾರಿ ಮಳೆ (153 ಮಿ.ಮೀ.) ಬಿದ್ದಂತಾಗಿದೆ.

ನಗರದಲ್ಲಿ 1916ಕ್ಕೂ ಮುನ್ನ ಇಷ್ಟುಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿರುವ ಬಗ್ಗೆ ಇಲಾಖೆ ಬಳಿ ಖುದ್ದು ಮಾಹಿತಿ ಇಲ್ಲ. ಕಾರಣ ರಾಜ್ಯದಲ್ಲಿ 1901ರ ನಂತರ ಮಳೆ ಮಾಪನ ವ್ಯವಸ್ಥೆ ಆರಂಭವಾಯಿತು. ಸದ್ಯ ಲಭ್ಯ ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ ನವೆಂಬರ್‌ ಮಾಸದಲ್ಲಿ ಸಾರ್ವಕಾಲಿಕ ದಾಖಲೆ ಮಳೆ 116 ವರ್ಷಗಳ ಹಿಂದೆ ಆಗಿದ್ದು ಬಿಟ್ಟರೆ, ಇದೇ (2021) ನವೆಂಬರ್‌ನಲ್ಲಿ ಎನ್ನಬಹುದು.

Latest Videos
Follow Us:
Download App:
  • android
  • ios