Asianet Suvarna News Asianet Suvarna News

Karnataka Rain ಇನ್ನೂ 3 ದಿನ ರಾಜ್ಯಕ್ಕೆ ಎಚ್ಚರಿಕೆ : ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ

  • ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮಂಗಳವಾರದವರೆಗೆ (ನ.23) ವಿವಿಧ ಕಡೆ ಭಾರಿ ಮಳೆ
  • ಹವಾಮಾನ ಇಲಾಖೆ ಮುನ್ಸೂಚನೆ - ರಾಜ್ಯದ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಸಕ್ರಿಯ
Next 3 Days Heavy Rain To Lash In Karnataka snr
Author
Bengaluru, First Published Nov 21, 2021, 6:52 AM IST
  • Facebook
  • Twitter
  • Whatsapp

 ಬೆಂಗಳೂರು (ನ.21) :  ರಾಜ್ಯದಲ್ಲಿ ಮಳೆಯ (Rain) ಅಬ್ಬರ ಮುಂದುವರೆದಿದ್ದು, ಮಂಗಳವಾರದವರೆಗೆ (ನ.23) ವಿವಿಧ ಕಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather) ಮುನ್ಸೂಚನೆ ನೀಡಿದೆ. ರಾಜ್ಯದ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಸಕ್ರಿಯವಾಗಿರುವುದು ಮತ್ತು ಅರಬ್ಬಿ ಸಮುದ್ರದಲ್ಲಿ (Arabian sea) ಕಡಿಮೆ ಒತ್ತಡ ಪ್ರದೇಶ ಹಾಗೂ ಮೇಲ್ಮೈ ಸುಳಿಗಾಳಿ ಇರುವುದರಿಂದ ರಾಜ್ಯದಲ್ಲಿ ಮಳೆಯ (Rain) ವಾತಾವರಣ ಇನ್ನಷ್ಟು ದಿನ ಮುಂದುವರಿಯಲಿದೆ.

ಭಾನುವಾರ ಮಲೆನಾಡಿನ ಚಿಕ್ಕಮಗಳೂರು (Chikkamagaluru), ಹಾಸನ (Hassan), ಕೊಡಗು, ಶಿವಮೊಗ್ಗ (Shivamogga) ಮತ್ತು ಕರಾವಳಿಯ ದಕ್ಷಿಣ ಕನ್ನಡ (Dakshina kannada), ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಯೆಲ್ಲೋ ಅಲರ್ಟ್‌’ (Yellow Alert) ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸೂಚನೆ ನೀಡಲಾಗಿದೆ.

ಸೋಮವಾರ (ನ. 22) ದಕ್ಷಿಣ ಕನ್ನಡ (Dakshina kannada), ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಪ್ರಕಟಿಸಲಾಗಿದೆ. ಉಳಿದಂತೆ ಬುಧವಾರದವರೆಗೂ (ನ. 24) ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಮಂಗಳವಾರದ ಬಳಿಕ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತುಸು ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶೇ.80 ಭಾಗದಲ್ಲಿ ಮಳೆ:  ರಾಜ್ಯದಲ್ಲಿ ಹಿಂಗಾರು ಮಳೆ ಸಾಮಾನ್ಯವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿ ಸುರಿಯುತ್ತದೆ. ಆದರೆ ಈ ಬಾರಿ ರಾಜ್ಯ ವ್ಯಾಪಿ ಮಳೆಯಾಗುತ್ತಿದ್ದು ಶನಿವಾರ ರಾಜ್ಯದ ಶೇ.81ರಷ್ಟು ಗ್ರಾಮಗಳಲ್ಲಿ (village) ಮಳೆಯಾಗಿದೆ.

ಶುಕ್ರವಾರ ಬೆಳಗ್ಗೆ 8-30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಅತಿ ಹೆಚ್ಚು ಮಳೆ ಹಾವೇರಿಯ (haveri) ಕೆಲವರಕೊಪ್ಪ 19 ಸೆಂ.ಮೀ., ಬೆನಕನಕೊಂಡ 16.4 ಸೆಂ.ಮೀ, ದಕ್ಷಿಣ ಕನ್ನಡದ ಮಂಗಳೂರು, ಚಿಕ್ಕಮಗಳೂರಿನ ಕಡೂರು ತಲಾ 16 ಸೆಂ.ಮೀ, ಹಾವೇರಿಯ ಹಲಗೇರಿ 15.2 ಸೆಂ.ಮೀ., ಉತ್ತರಕನ್ನಡದ ಬಿಸಲಕೊಪ್ಪ 13.9 ಸೆಂ.ಮೀ., ಶಿವಮೊಗ್ಗದ ಕುಪ್ಪಗದ್ದೆ 12.85 ಸೆಂ.ಮೀ. ಹಾಗೂ ಚಿತ್ರದುರ್ಗದ ಮುದ್ದಾಪುರ 11.2 ಸೆಂ.ಮೀ. ಮಳೆಯಾಗಿದೆ.

ಒಟ್ಟಾರೆಯಾಗಿ ಹಾವೇರಿ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ,. ಧಾರವಾಡ, ಬೆಂಗಳೂರು ಗ್ರಾಮಾಂತರ, ವಿಜಯನಗರ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದರೆ, ಉಳಿದ ಕಡೆ ವಾಡಿಕೆ ಮಳೆಯಾಗಿದೆ.

ಮೆಣಸಿನ ಬೆಳೆ ಸರ್ವನಾಶ : 

ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಶನಿವಾರ ಸಂಜೆ ಮಳೆ(Rain) ಸುರಿದಿದ್ದು, ಅಕಾಲಿಕ ಮಳೆಯಿಂದಾಗಿ ಕುರುಗೋಡು(Kurugodu) ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ(APMC) ಮೆಣಸಿನಕಾಯಿ ಕಟಾವು ಮಾಡಿ ಒಣಗಿಸಲು ಹಾಕಿದ್ದ 760 ಕ್ವಿಂಟಲ್‌ ಫಸಲು ಹಾನಿಯಾಗಿದೆ.

ತಾಲೂಕಿನ ವಿವಿಧೆಡೆ 70 ಎಕರೆಯಲ್ಲಿ ಬೆಳೆಯಲಾಗಿದ್ದ ಮೆಣಸಿನಕಾಯಿ(Chilli) ಫಸಲನ್ನು ತಂದು ರೈತರು(Farmers) ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಒಣಗಿಸಲು ಹಾಕಿದ್ದರು. ಆದರೆ ಅಕಾಲಿಕ ಮಳೆಯಿಂದ(Premature Rain) 12 ಕೋಟಿಯಷ್ಟು ಫಸಲು ಹಾನಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಫಸಲು ಸಂಗ್ರಹಿಸಿಡಲು ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ಪ್ರತಿವರ್ಷ ಮಳೆ ಬಂದರೆ ಅಪಾರ ಪ್ರಮಾಣದಷ್ಟು ನಷ್ಟ ಸಂಭವಿಸುತ್ತದೆ. ಅಲ್ಲದೆ ಮಾರುಕಟ್ಟೆಗೆ ತಡೆಗೋಡೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಮುಖ್ಯರಸ್ತೆ ಮತ್ತು ರಸ್ತೆ ಪಕ್ಕದ ಚರಂಡಿ ನೀರು ಹರಿದು ಬಂದು ಬೆಳೆಹಾನಿಯಾಗುತ್ತದೆ.

ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ : 2 ದಿನ 13 ಜಿಲ್ಲೆಗಳಿಗೆ ಎಚ್ಚರಿಕೆ

ಮಾರುಕಟ್ಟೆಗೆ(Market) ತಡೆಗೋಡೆ, ಗೋದಾಮು ವ್ಯವಸ್ಥೆ, ಶೌಚಾಲಯ, ಮಳಿಗೆ ಸೇರಿದಂತೆ ಇತರೆ ಸೌಲಭ್ಯ ಮರೀಚಿಕೆಯಾಗಿದ್ದು, ರೈತರು ಮಳೆ ಬಂದರೆ ಪ್ರತಿವರ್ಷ ಕಷ್ಟಪಟ್ಟು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ.
ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ಮೆಣಸಿನಕಾಯಿ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಹಾಗೂ ಉತ್ತಮ ಇಳುವರಿ ಇಲ್ಲದೆ ನಷ್ಟದ ಹಾದಿ ಹಿಡಿದಿರುವ ರೈತರಿಗೆ ಮಳೆಯ ಪರಿಣಾಮದಿಂದ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತಾಗಿದೆ.

ಕುರುಗೋಡು ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಹಲವಾರು ರೈತರು ನೂರು ಎಕರೆಯಲ್ಲಿ ಬೆಳೆದ ಮೆಣಸಿನಕಾಯಿ ಬೆಳೆ ಬೆಳೆದು ಹಾಕಿದ್ದರು. ಮಾರುಕಟ್ಟೆಯಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲದೆ ಕಾರಣ ಮಳೆಗೆ ಅಪಾರ ಪ್ರಮಾಣದಷ್ಟು ನಷ್ಟ ಸಂಭವಿಸಿದೆ. ಮಾರುಕಟ್ಟೆ ಒಳಗೆ ಮುಖ್ಯರಸ್ತೆ ನೀರು ಹಾಗೂ ಚರಂಡಿ ನೀರು ಹರಿದು ಮೆಣಸಿಕಾಯಿ ಹಾಳಾಗಿವೆ. ಇದರಿಂದ ಬಹಳಷ್ಟು ನಷ್ಟ ಉಂಟಾಗಿದೆ ಎಂದು ಮೆಣಸಿನಕಾಯಿ ಬೆಳೆಗಾರರಾದ ಶ್ರೀಕಾಂತ್‌, ನರಸಪ್ಪ ತಿಳಿಸಿದ್ದಾರೆ. 
ಮಾರುಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ 15 ಲಕ್ಷ ವೆಚ್ಚ ಮಂಜೂರಾಗಿ ಕಾಮಗಾರಿ ಕೂಡ ಟೆಂಡರ್‌ ಅಗಿದೆ. ಸ್ವಲ್ಪ ದಿನದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅದರಂತೆ ಮಾರುಕಟ್ಟೆ ಅವರಣದಲ್ಲಿ ಸೋಲಾರ್‌ ಲೈಟ್‌ಗಳು ಹಾಳಾಗಿವೆ. ಕೂಡಲೇ ಹಾಕುವ ವ್ಯವಸ್ಥೆ ಮಾಡುತ್ತೇವೆನ ಅಂತ ಕುರುಗೋಡು ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಸೂಪರ್‌ವೈಜರ್‌ ಶುಕ್ರುಸ್ವಾಮಿ ಹೇಳಿದ್ದಾರೆ. 

Follow Us:
Download App:
  • android
  • ios