Asianet Suvarna News Asianet Suvarna News

Tata Motors: ಬೆಂಗಳೂರಿನಲ್ಲಿ ಟಾಟಾ ಮೋಟಾರ್ಸ್ ಅತೀ ದೊಡ್ಡ EXPO,ಏಸ್ ಮಹೋತ್ಸವ!

  • ಟಾಟಾ ಮೋಟಾರ್ಸ್ ಏಸ್ ಶ್ರೇಣಿಯ ವಾಹನಗಳ ಪ್ರದರ್ಶನ
  • ಬೆಂಗಳೂರಿನಲ್ಲಿ ಟಾಟಾದಿಂದ ಬೃಹತ್ ಬ್ರಾಂಡ್ ಎಕ್ಸ್ ಪೋ  
  • 23 ಲಕ್ಷ ಗ್ರಾಹಕರನ್ನು ಹೊಂದಿದೆ ಟಾಟಾ ಏಸ್
Tata Motors to exhibit expanded range of Tata Ace at  Ace Mahotsav in Bengaluru ckm
Author
Bengaluru, First Published Nov 22, 2021, 9:29 PM IST
  • Facebook
  • Twitter
  • Whatsapp

ಬೆಂಗಳೂರು(ನ.22):  ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್(Tata Motors) ಇದೇ ನವೆಂಬರ್ 23 ಮತ್ತು 24ರಂದು ಬೆಂಗಳೂರಿನಲ್ಲಿ(Bengaluru) ಬೃಹತ್ ಬ್ರಾಂಡ್ ಎಕ್ಸ್ ಪೋ(Brand Expo)   ಏಸ್ ಮಹೋತ್ಸವವನ್ನು ಆಯೋಜಿದೆ.  6 ವಿಭಿನ್ನ ವೇರಿಯಂಟ್ ಗಳು ಸೇರಿದಂತೆ ಏಸ್ ಮಿನಿ ಟ್ರಕ್ ನ ಸಂಪೂರ್ಣ ಶ್ರೇಣಿಯ ವಾಹನಗಳನ್ನು ಬೆಂಗಳೂರಿನ ಎಂಇಎಸ್(MES) ಮೈದಾನದಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.  ಇತರ ಚಟುವಟಿಕೆಗಳೊಂದಿಗೆ ಸಣ್ಣ ವಾಣಿಜ್ಯ ವಾಹನ (Commercial Vehicle) ಸ್ಥಳದಲ್ಲಿ ವಿವಿಧ ಅಪ್ಲಿಕೇಶನ್ ವಿಭಾಗಗಳ ಉದಯೋನ್ಮುಖ ಅಗತ್ಯಗಳು ಮತ್ತು ಬದಲಾಗುತ್ತಿರುವ ವ್ಯಾಪಾರ ಅವಶ್ಯಕತೆಗಳನ್ನು ಪರಿಹರಿಸುವುದನ್ನು ಇಲ್ಲಿ ಪ್ರದರ್ಶಿಸಲಿದೆ. ಬ್ರಾಂಡ್ ಎಕ್ಸ್ ಪೋ ದಕ್ಷಿಣ ಭಾರತದಲ್ಲಿ ಇದೇ ಮೊದಲನೆಯದು. ಏಸ್ ಶ್ರೇಣಿಯು, ಪ್ರದರ್ಶನದಲ್ಲಿರುವ ಪೇಲೋಡ್ ಗಳಲ್ಲಿ ಮತ್ತು ಡೀಸೆಲ್, ಪೆಟ್ರೋಲ್(Petrol and Diesel) ಮತ್ತು ಸಿಎನ್ ಜಿ ಪವರ್ ಟ್ರೈನ್ ಗಳಲ್ಲಿ ಲಭ್ಯವಿರುವ ವಾಹನಗಳನ್ನು ಒಳಗೊಂಡಿದೆ.

ಭಾರತದ ನೆಚ್ಚಿನ "ಛೋಟಾ ಹಾಥಿ"  ಆಗಿರುವ  ಅಪ್ರತಿಮ ಟಾಟಾ ಏಸ್ ಅನ್ನು 2005 ರಲ್ಲಿ ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ 23 ಲಕ್ಷ ಗ್ರಾಹಕರಿಗೆ ಸಂತೋಷ ಮತ್ತು ಸಮೃದ್ಧಿಯ ವಾಹಕವಾಗಿ ಹೊರಹೊಮ್ಮಿದೆ . ಬದಲಾಗುತ್ತಿರುವ  ವ್ಯವಹಾರದ ಅವಶ್ಯಕತೆ ಮತ್ತು ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಕೊಡುಗೆಗಳನ್ನು ಈ ಶ್ರೇಣಿಯು ಈಗ ಒಳಗೊಂಡಿದೆ.  ಟಾಟಾ ಮೋಟಾರ್ಸ್ ವಿವಿಧ ವರ್ಗದ ಗ್ರಾಹಕರೊಂದಿಗೆ ವ್ಯಾಪಕವಾಗಿ ಸಂಶೋಧನೆ ನಡೆಸಿದ ನಂತರ ಹೊಸ ವಾಹನಗಳನ್ನು ಅಭಿವೃದ್ಧಿಪಡಿಸಿದೆ. ಮಾರುಕಟ್ಟೆ ಲೋಡ್ ಆಪರೇಟರ್ ಗಳಿಂದ ಹಿಡಿದು ಕ್ಯಾಪ್ಟೀವ್ ವ್ಯವಹಾರಗಳವರೆಗೆ, ಎಂಜಿನಿಯರಿಂಗ್, ಉತ್ಪನ್ನ ಅಭಿವೃದ್ಧಿ ಮತ್ತು ಸಂಪೂರ್ಣವಾಗಿ ನಿರ್ಮಿಸಲಾದ ವಾಹನ ಪರಿಹಾರ ತಂಡಗಳನ್ನು ಒಳಗೊಂಡ ಗುತ್ತಿಗೆ ಸಂಘಟಿತ ಸರಕು ಸಾಗಣೆದಾರರು ಇಂಧನ ಪ್ರಕಾರಗಳಲ್ಲಿ ಮಾರುಕಟ್ಟೆ ಬೇಡಿಕೆಯನ್ನು ಪೂರೈಸುವುದಕ್ಕಿಂತ ಹೆಚ್ಚಿನ ಸಮಗ್ರ ಎಸ್ ಸಿವಿ ಉತ್ಪನ್ನ ಶ್ರೇಣಿಯನ್ನು ಪ್ರಸ್ತುತಪಡಿಸುತ್ತದೆ,  ಲೀಡ್-ಲೋಡ್ ಮ್ಯಾಟ್ರಿಕ್ಸ್, ಬಾಡಿ ಆಯ್ಕೆಗಳು ಮತ್ತು ಬೆಲೆ ಬ್ಯಾಂಡ್ ಇದಾಗಿದೆ.

ಕಡಿಮೆ EMI, ಸುಲಭ ಸಾಲ, ಸರಳ ಡೌನ್‌ಪೇಮೆಂಟ್; ಟಾಟಾ ವಾಣಿಜ್ಯ ವಾಹನ ಖರೀದಿಗೆ ಭರ್ಜರಿ ಆಫರ್!

"ಟಾಟಾ ಏಸ್ ಯಾವಾಗಲೂ ಭಾರತದ ಲಾಸ್ಟ್ ಮೈಲ್ ಟ್ರಾನ್ಸ್ ಪೋರ್ಟ್  ವಲಯಕ್ಕೆ ಪ್ರವರ್ತಕ ಪರಿಹಾರಗಳಲ್ಲಿ ಮುಂಚೂಣಿಯಲ್ಲಿದೆ.  ಏಸ್ ಮಹೋತ್ಸವದಲ್ಲಿ, ನಾವು ಅಸ್ತಿತ್ವದಲ್ಲಿರುವ ಸಣ್ಣ ವಾಣಿಜ್ಯ ವಾಹನ ವ್ಯಾಪಾರ ಜಗತ್ತಿಗೆ ಮತ್ತು ಹೊಸ ಇನ್ ಟೆಂಡರ್ ಗಳು ಮತ್ತು ಮೊದಲ ಬಾರಿಗೆ ಸಿವಿ ಬಳಕೆದಾರರಿಗೆ, ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ, ಇದು ಮಾರುಕಟ್ಟೆಯಲ್ಲಿ ಬಳಕೆದಾರರ ಪ್ರತಿಯೊಂದು ಅಗತ್ಯಕ್ಕೆ ಸರಿಹೊಂದುತ್ತದೆ, ಇದು ಅವರ ಹೊಸ ಮತ್ತು ಅಸ್ತಿತ್ವದಲ್ಲಿರುವ  ವ್ಯವಹಾರವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುಲು ಅವಕಾಶ ಮಾಡಿಕೊಡುತ್ತದೆ  ಎಂದು ಟಾಟಾ ಮೋಟಾರ್ಸ್  ಪ್ರಾಡಕ್ಟ್ ಲೈನ್ ನ  ಉಪಾಧ್ಯಕ್ಷ   ವಿನಯ ಪಾಥಕ್ ಹೇಳಿದರು.

ಏಸ್  ಮಹೋತ್ಸವವು 6 ಮಾದರಿಗಳನ್ನು ಬ್ರಾಂಡ್ ಇಕ್ಸ್ ಪೋದಲ್ಲಿ ಪ್ರದರ್ಶನಕ್ಕೆ ಇಡಲಿದೆ. ಬಿಡುಗಡೆ ಮಾಡಲಾದ ಎರಡು ಪ್ರಧಾನ ಮಾದರಿಗಳಲ್ಲಿ ಮೊದಲನೆಯದು ಏಸ್ ಗೋಲ್ಡ್ ಸಿಎನ್ ಜಿ, ಅತ್ಯಂತ ಜನಪ್ರಿಯ ಮತ್ತು ಆದ್ಯತೆಯ ಅನಿಲ ಇಂಧನ ಮಿನಿ ಟ್ರಕ್ ಆಗಿದೆ.  ಅತ್ಯುನ್ನತ ಲಾಭದಾಯಕ ಪ್ರತಿಪಾದನೆಯಿಂದಾಗಿ  ಉದ್ಯಮ-ಅತ್ಯುತ್ತಮ 8.2 ಅಡಿ ಲೋಡ್ ಬಾಡಿ ಮತ್ತು ಅದರ ವಿಭಾಗದಲ್ಲಿ ಅತಿ ಹೆಚ್ಚು ಇಂಧನ ಆರ್ಥಿಕತೆಯನ್ನು ಹೊಂದಿರುವ ಏಸ್ ಗೋಲ್ಡ್ ಸಿಎನ್ ಜಿಯು 694 ಸಿಸಿ 25ಎಚ್ ಪಿ ಎಂಜಿನ್ ನಿಂದ ಚಾಲಿತವಾಗಿದೆ.  28% ಗ್ರೇಡಬಿಲಿಟಿಯೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಮಾದರಿ ಬೆಂಗಳೂರಿನ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ಇಕಾಮರ್ಸ್, ಎಕ್ಸ್ ಪ್ರೆಸ್ ಲಾಜಿಸ್ಟಿಕ್ಸ್, ಎಫ್ ಎಂಸಿಜಿ, ಪಾರ್ಸೆಲ್ ಮತ್ತು ಇತರ ಬೃಹತ್ ರೇಟೆಡ್ ಲೋಡ್ ಅಪ್ಲಿಕೇಶನ್ ಗಳ ಲಾಸ್ಟ್ ಮೈಲ್  ಸಾರಿಗೆ ಅಗತ್ಯಗಳಿಗೆ ಅತ್ಯಂತ ಸೂಕ್ತ ಕಾರ್ಯಕ್ಷಮತೆಯ ಗುಣಲಕ್ಷಣಗಳನ್ನು ಹೊಂದಿದೆ.

Tata Motors ಕಂಪನಿಗೆ ಮಾರುತಿ ಸುಜುಕಿಗಿಂತ ಹೆಚ್ಚು ಲಾಭ

ಬಿಡುಗಡೆಯಾದ ಮತ್ತೊಂದು ಮಾದರಿ,  ಏಸ್ ಗೋಲ್ಡ್ ಡೀಸೆಲ್ +, ಫ್ರೆಶ್ ಅಜುರ್ ಬ್ಲೂ ಕಲ್ಲರ್ ನಲ್ಲಿ ದೊರೆಯಲಿದೆ.  ಏಸ್ ಗೋಲ್ಡ್ ಡೀಸೆಲ್ + ಮಾದರಿಯು , 3+ ಭರವಸೆಯನ್ನು ಹೊಂದಿದೆ. ಆದಾಯ ಗಳಿಕೆ +, ಮೈಲೇಜ್ + ಮತ್ತು ಅಪ್ಟೈಮ್ + ಭರವಸೆ ನೀಡಲಿದೆ. 3 ವರ್ಷ / 75000 ಕಿ.ಮೀ ಫ್ರೀಡಂ ಪ್ಲಾಟಿನಂ ಎಎಂಸಿ ಮತ್ತು ಮೊದಲ-ಇನ್-ಇಂಡಸ್ಟ್ರಿ ಅಪ್ಟೈಮ್ ಗ್ಯಾರಂಟಿ ಮತ್ತು ವರ್ಕ್ ಶಾಪ್ ಟಿಎಟಿ ಗ್ಯಾರಂಟಿಯೊಂದಿಗೆ ದೊರೆಯಲಿದೆ. ಇದು ಅತ್ಯಂತ ವಿಶಾಲವಾದ ಲೋಡ್ ಸಾಮರ್ಥ್ಯ ಶ್ರೇಣಿಯನ್ನು ಒಳಗೊಂಡ ಇಂಟ್ರಾ ಮತ್ತು ಇಂಟರ್-ಸಿಟಿ ಸೆಗ್ಮೆಂಟ್ ಗಳಲ್ಲಿ ಅಪ್ಲಿಕೇಶನ್ ಗಳ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಳ್ಳಲು  ಗ್ರಾಹಕರ ಹೆಚ್ಚಿನ ಅಗತ್ಯಗಳನ್ನು ಪೂರೈಸುವ ಪ್ಯಾಕೇಜ್ ಇದಾಗಿದೆ. 

ಪ್ರದರ್ಶನದಲ್ಲಿರುವ ಇತರ ಮಾದರಿಗಳಲ್ಲಿ ಏಸ್ ಗೋಲ್ಡ್ ಪೆಟ್ರೋಲ್ ಹೈ ಡೆಕ್, ಎಆರ್ ಎಐ ಪ್ರಮಾಣೀಕೃತ ಸಂಪೂರ್ಣವಾಗಿ ನಿರ್ಮಿಸಲಾದ ವೇರಿಯಂಟ್ 1.5 ವರ್ಷ/50,000 ಕಿ.ಮೀ ಬಾಡಿ ವಾರಂಟಿ ಮತ್ತು ಸಿಂಗಲ್ ಇನ್ ವಾಯ್ಸ್ ಫೈನಾನ್ಸ್ ಅನ್ನು ಹೊಂದಿರುವ ಮೊದಲ ದಿನದಿಂದಲೇ ಗಳಿಕೆಯನ್ನು ಪ್ರಾರಂಭಿಸಲು ಅತ್ಯುತ್ತಮ ಆಯ್ಕೆಯಾಗಿದೆ; ; ಏಸ್ ಗೋಲ್ಡ್ ಪೆಟ್ರೋಲ್ CX, ಭಾರತದ ಅತ್ಯಂತ ಕೈಗೆಟುಕುವ  ನಾಲ್ಕು ಚಕ್ರದ ಎಸ್ ಸಿವಿ ರೂ. 3.99 ಲಕ್ಷದಿಂದ (ಎಕ್ಸ್ ಶೋರೂಮ್) ಪ್ರಾರಂಭವಾಗುತ್ತದೆ, ಇದು ಪ್ರತಿ ಮೊದಲ ಬಾರಿಗೆ ಸಿವಿ ಬಳಕೆದಾರ ಮತ್ತು ಇಂಟ್ರಾ-ಸಿಟಿ ಲೋ ಲೀಡ್-ಹೈ ಟ್ರಿಪ್ಸ್ ಡ್ಯೂಟಿ ಸೈಕಲ್ ನಲ್ಲಿ ಕಾರ್ಯನಿರ್ವಹಿಸುವ ಪ್ರಸ್ತುತ ಗ್ರಾಹಕರಿಗೆ ಸೂಕ್ತ ಆಯ್ಕೆಯಾಗಿದೆ. ಏಸ್ ಗೋಲ್ಡ್ ಪೆಟ್ರೋಲ್ CX ತನ್ನ ವಿಶಿಷ್ಟವಾದ ಬೆಲೆ ದೃಷ್ಟಿಕೋನ ಮತ್ತು  ಸುಲಭ ಹಣಕಾಸು ಆಯ್ಕೆಗಳೊಂದಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮೊದಲ ಬಾರಿಗೆ ವಾಣಿಜ್ಯ ವಾಹನ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. . ಮುಕ್ತ ಖರೀದಿ ಅವಕಾಶಗಳಿಗೆ  ಟಾಟಾ ಮೋಟಾರ್ಸ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಪಾಲುದಾರಿಕೆ ಹೊಂದಿದ್ದು, ತನ್ನ ಗ್ರಾಹಕರಿಗೆ 8,000 ರೂಪಾಯಿ ಇಎಂಐ ಮತ್ತು 90% ವರೆಗೆ ಆನ್-ರೋಡ್ ಫೈನಾನ್ಸ್ ನೊಂದಿಗೆ ಹಿಂದೆಂದಿಗಿಂತಲೂ ಉತ್ತಮವಾದ ಕೊಡುಗೆಯನ್ನು ಪಡೆಯುವಂತೆ ಮಾಡಿದೆ; ಏಸ್ ಗೋಲ್ಡ್ ಪೆಟ್ರೋಲ್ ಮೇಲಿನ 3 ಕಮ್ ಕ್ಲೋಸ್ಡ್ ಬಾಕ್ಸ್ ಟಿಪ್ಪರ್ 60:40 ವಿಭಜನೆಯೊಂದಿಗೆ ಅಗಲದ ಉದ್ದಕ್ಕೂ ಭಾರತದ ಅತಿದೊಡ್ಡ ಮುನ್ಸಿಪಲ್ ಕಾರ್ಪೊರೇಷನ್ ಗಳಿಗೆ ಪೂರೈಕೆಯ ವಾಹನವಾಗಿದ್ದು, ಮುನ್ಸಿಪಲ್ ಕಸ ಸಂಗ್ರಹಣೆಗೆ ಇದು ಸೂಕ್ತವಾಗಿದೆ. 

ಭಾರತದ ಕಾರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಪಂಚ್ ಕಾರಿನ ಟೆಸ್ಟ್ ಡ್ರೈವ್ Review!

ಇದು ಹಸಿ  ಮತ್ತು ಒಣ ಕಸ ಎರಡನ್ನೂ ಪ್ರತ್ಯೇಕ ಕಂಪಾರ್ಟ್ ಮೆಂಟ್ ಗಳಲ್ಲಿ ಸಂಗ್ರಹಿಸಲು ಅವಕಾಶ ಹೊಂದಿದೆ. ಅಂತಿಮವಾಗಿ ಈ ಕಾರ್ಯಕ್ರಮವು ಏಸ್ ಗೋಲ್ಡ್ ಪೆಟ್ರೋಲ್ ನಲ್ಲಿ ಮೊಬೈಲ್ ಡಿಸ್ಪೆನ್ಸಿಂಗ್ ಘಟಕವನ್ನು  ಸಹ  ಪ್ರದರ್ಶಿಸುತ್ತದೆ. ಇದು ಸಿವಿಲ್ ಸಫ್ಲೈಸ್ ಗಳ  ಲಾಸ್ಟ್ ಮೈಲ್ ವಿತರಣೆಯನ್ನು ಹೆಚ್ಚಿಸಲು ವಿವಿಧ  ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗೆ ಪೂರಕವಾಗಿ ವಾಹನಗಳನ್ನು ಪೂರೈಸಲು ಟಾಟಾ ಮೋಟಾರ್ಸ್ ಕಸ್ಟಮ್ನ ವಿಶೇಷ  ಕೊಡುಗೆಯಾಗಿದೆ. ಏಸ್ ಮಹೋತ್ಸವವು ವಿವಿಧ ಮಾದರಿಗಳಿಗೆ ಹಣಕಾಸು ಆಯ್ಕೆಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಸ್ಪಾಟ್ ನಲ್ಲಿ  ಬುಕಿಂಗ್  ಮಾಡಲು ಅವಕಾಶ ಒದಗಿಸುತ್ತದೆ.

ಏಸ್ ಮಹೋತ್ಸವವು ಟಾಟಾ  ಮೋಟಾರ್ಸ್ ನ ಮೊದಲ ಬಾರಿಯ ಬ್ರಾಂಡ್ ಪ್ರದರ್ಶನವಾಗಿದೆ. ಟಾಟಾ ಮೋಟಾರ್ಸ್ ನ ಸಣ್ಣ ವಾಣಿಜ್ಯ ವಾಹನ ಕುಟುಂಬದ ಉನ್ನತ ವಾಹನಗಳು ಮತ್ತು ಮೌಲ್ಯವರ್ಧಿತ ಸೇವೆಗಳ ಪೋರ್ಟ್ ಫೋಲಿಯೊವನ್ನು ನೋಡಲು ಮತ್ತು ಅನುಭವಿಸಲು ಬ್ರಾಂಡ್ ಇಕ್ಸ್ ಪೋ ನೆರವಾಗಲಿದೆ.  ಆ ಮೂಲಕ ವಸ್ತುನಿಷ್ಠವಾಗಿ ತಮ್ಮ ವ್ಯವಹಾರಕ್ಕೆ ಸರಿಯಾದ ಮಾದರಿಯನ್ನು ಆಯ್ಕೆ ಮಾಡಲು ದೊಡ್ಡ ವ್ಯಾಪಾರ ಸಮುದಾಯಕ್ಕೆ ಒಂದು ಅವಕಾಶವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಟಾಟಾ ಮೋಟಾರ್ಸ್  ಬಿಸಿನೆಸ್ ಯುನಿಟ್ ನ ಉಪಾಧ್ಯಕ್ಷ  ರಾಜೇಶ್ ಕೌಲ್  ಹೇಳಿದರು.

Follow Us:
Download App:
  • android
  • ios