Cities Underwater: 2030ಕ್ಕೆ ಭಾರತದ 1 ನಗರ ಸೇರಿ ವಿಶ್ವದ ಒಟ್ಟು 7 ಸಿಟಿ ಮುಳುಗಡೆ; ತಜ್ಞರ ವರದಿ!
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಗ್ಲಾಸ್ಗೋದಲ್ಲಿ ಹವಾಮಾನ ಬದಲಾವಣೆ ಕುರಿತು ಗಂಭೀರ ವಿಷಗಳನ್ನು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಮಾಲಿನ್ಯ ತಗ್ಗಿಸುವ, ಪರಿಸರ ಬೆಳೆಸುವ ಬಹುದೊಡ್ಡ ಜವಾಬ್ದಾರಿ ಇದೆ. ಆದರೆ ನಿಯಮ ರೂಪುರೇಶೆಗಳು ಜಾರಿಗೆ ಬಂದು ಮಾಲಿನ್ಯ ಕಡಿಮೆಯಾಗುವ ಮೊದಲೇ ಹಲವು ನಗರಗಳು ಮುಳುಗಡೆಯಾಗಲಿದೆ. ಇದು ಭವಿಷ್ಯವಲ್ಲ, ತಜ್ಞರ ವರದಿ. ಹೌದು 2030ಕ್ಕೆ ಅಂದರೆ ಕೇವಲ 9 ವರ್ಷಗಳಲ್ಲಿ 7 ನಗರಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಭಾರತದ ಒಂದು ನಗರವೂ ಸೇರಿಕೊಂಡಿದೆ.
ಗ್ಲೋಬಲ್ ವಾರ್ಮಿಂಗ್(Global Warming), ಹವಾಮಾನ ಬದಲಾವಣೆಗಳಿಂದ(Climate Change) ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಪ್ರಾಕೃತಿಕ ವಿಕೋಪ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಇದರ ಪರಿಣಾಮ ಇನ್ನು ಕೇವಲ 9 ವರ್ಷಗಳಲ್ಲಿ ಅಂದರೆ 2030ರಲ್ಲಿ ಭಾರತದ 1 ನಗರ ಸೇರಿದಂತ ವಿಶ್ವದ 7 ಪ್ರಮುಖ ನಗರಗಳು ನೀರಿನಲ್ಲಿ ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದೆ.
ಆ್ಯಮ್ಸ್ಟರ್ಡಾಮ್, ನೆದರ್ಲೆಂಡ್: ಸಮುದ್ರ, ಸಾಗರ ಸೇರಿದಂತೆ ಹೆಚ್ಚು ನೀರಿನಿಂದ ಆವೃತವಾಗಿರುವ ಸುಂದರ ನಗರ ನದರ್ಲೆಂಡ್‌ನ ಆ್ಯಮ್ಸ್ಟರ್ಡಾಮ್. ಉತ್ತರ ಸಮುದ್ರಕ್ಕೆ ಹೊಂದಿಕೊಂಡಿರುವ ಈ ನಗರದಲ್ಲಿ ಈಗಾಗಲೇ ನೀರಿ ಮಟ್ಟ ಏರಿಕೆಯಾಗುತ್ತಿದೆ. ಹೀಗಾಗಿ ಬಹುತೇಕ ಕಡೆಗಳಲ್ಲಿ ಫ್ಲಡ್‌ಗೇಟ್, ಡ್ಯಾಮ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ 2030ರ ವೇಳೆ ಮುಳುಗಡೆ ಸಾಧ್ಯತೆ ಇರುವ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ.
ಬಸ್ರಾ, ಇರಾಕ್: ಬಂದರು ನಗರ ಎಂದೇ ಹೆಸರುವಾಸಿಯಾಗಿರುವ ಇರಾಕ್‌ನ ಬಸ್ರಾ ನಗರ, ಶಟ್ ಅಲ್ ಅರಬ್ ಅನ್ನೋ ಅತೀ ದೊಡ್ಡ ನದಿಗೆ ಹೊಂದಿಕೊಂಡಿದೆ. ಈಗಾಗಲೇ ಸಮುದ್ರದ ನೀರಿ ಮಟ್ಟ ಏರಕೆಯಾಗಿರುವ ಕಾರಣ ತೀರ ಪ್ರದೇಶಗಳು ಕಡಲು ಅವರಿಸಿಕೊಳ್ಳುತ್ತಿದೆ. ಇತ್ತ ನದಿಯಲ್ಲೂ ನೀರಿ ಮಟ್ಟ ಏರಿಕೆಯಾಗುತ್ತಿರುವ ಕಾರಣ ನದೀ ಪಾತ್ರದ ಪ್ರದೇಶ ಕೊಚ್ಚಿ ಹೋಗಿ ನದಿ ವಿಸ್ತರಣೆಯಾಗಿದೆ. ಪ್ರವಾಹಕ್ಕೂ ತುತ್ತಾಗುತ್ತಿದೆ. ಈ ನಗರ ಕೂಡ ಮುಳುಗಡೆ ನಗರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ವೆನಿಸ್, ಇಟಲಿ: ಹವಾಮಾನ ಬದಲಾವಣೆಯಿಂದ ಇಟಲಿಯ ವೆನಿಸ್ ನಗರ, ಪದೇ ಪದೆ ಪ್ರವಾಹಕ್ಕೆ ತುತ್ತಾಗುತ್ತಿದೆ. ಇತ್ತೀಚೆಗಿನ ಪ್ರವಾಹದಲ್ಲಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ವೆನಿಸ್ ನಗರ ನೀರಿನೊಳಗಡೆ ಮುಳುಗಡೆಯಾಗಲಿದೆ.
ಹೊ ಚಿ ಮಿನ್ಹ್, ವಿಯೆಟ್ನಾಂ: ಬಹುತೇಕ ಭಾಗ ನೀರಿನಿಂದಲೇ ಆವೃತವಾಗಿರುವ ಹೋ ಚಿನ್ ಮಿನ್ಹ್ ನಗರ ಬೆಳೆಯುತ್ತಲೇ ಇದೆ. ಹೀಗಾಗಿ ನೀರಿನಿಂದ ಕೂಡಿದ ಪ್ರದೇಶಗಳಲ್ಲಿ ಕಟ್ಟಡಗಳು ತಲೆ ಎತ್ತಿದೆ. ಇದೀಗ ಹಲವು ಬಾರಿ ಪ್ರವಾಹಕ್ಕೆ ತುತ್ತಾಗಿದೆ. ಭೂ ಭಾಗ ಕಡಿಮೆಯಾಗುತ್ತಿದೆ. ನೀರಿನ ಮಟ್ಟ ಹೆಚ್ಚಾಗುತ್ತಿದೆ.
ಕೋಲ್ಕತಾ, ಭಾರತ: 2030ಕ್ಕೆ ಮುಳುಗಡೆಯಾಗುವ ಟಾಪ್ 7 ನಗರಗಳ ಪೈಕಿ ಭಾರತದ ಕೋಲ್ಕತಾ ನಗರ ಸೇರಿಕೊಂಡಿದೆ. ಸಮುದ್ರ ತೀರದಲ್ಲಿರುವ ಈ ನಗರ ಅಪಾಯದಲ್ಲಿದೆ ಎಂದು ಹವಾಮಾನ ವೈಪರಿತ್ಯ ಅಧ್ಯನ ವರದಿ ಹೇಳುತ್ತಿದೆ. ಭೂಕುಸಿತ, ನೀರಿನ ಮಟ್ಟ ಏರಿಕೆ ಅಪಾಯ ಕೋಲ್ಕತಾಗೆ ಕಾಡುತ್ತಿದೆ.
ಬ್ಯಾಂಕಾಕ್, ಥಾಯ್ಲೆಂಡ್: 2020ರ ಅಧ್ಯಯನ ವರದಿ ಪ್ರಕಾರ ಗ್ಲೋಬಲ್ ವಾರ್ಮಿಂಗ್‌ಗೆ ಅತೀ ಹೆಚ್ಚು ತುತ್ತಾಗಿರುವ ನಗರ ಬ್ಯಾಂಕ್‌ಕಾಕ್. ಸಮುದ್ರ ಮಟ್ಟದಿಂದ ಕೇವಲ 1.5 ಮೀಟರ್ ಎತ್ತರದಲ್ಲಿರುವ ಈ ನಗರ ಒಡಲಲ್ಲೇ ಅಪಾಯ ಇಟ್ಟುಕೊಂಡಿದೆ.
ಸವನ್ನಾಹ, ಅಮೆರಿಕ: ಉತ್ತರದ ಸವನ್ನಾಹ ನದಿ ದಕ್ಷಿಣದ ಒಗೀಚೆ ನದಿ ತಟದಲ್ಲಿರುವ ಸವನ್ನಾಹ ನಗರದ ಹೆಚ್ಚಿನ ಭಾಗ ನೀರಿನಿಂದ ಆವೃತವಾಗಿದೆ. ಈ ನಗರ ಚಂಡಮಾರುತ, ಪ್ರವಾಹಕ್ಕೆ ತುತ್ತಾಗುತ್ತಲೇ ಇದೆ. ಪ್ರತಿ ಪ್ರವಾಹದಲ್ಲೂ ದಾಖಲೆ ಪ್ರಮಾಣದ ನೀರು ಹರಿಯುತ್ತಿದೆ. ನಗರ ಕೊಚ್ಚಿ ಹೋಗುತ್ತಿದೆ. ಮುಳುಗಡೆ ಭೀತಿಯಲ್ಲಿ ಈ ನಗರವೂ ಸೇರಿಕೊಂಡಿದೆ.