Asianet Suvarna News Asianet Suvarna News

MS ಧೋನಿ ಭವಿಷ್ಯ ಇನ್ನೂ ಸಸ್ಪೆನ್ಸ್‌!

ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಎಂ.ಎಸ್ ಧೋನಿಯನ್ನು ಬಿಸಿಸಿಐ ಆಯ್ಕೆ ಸಮಿತಿ ನಿರ್ಲಕ್ಷಿಸುತ್ತಿದೆಯಾ..? ಧೋನಿ ಮುಂದಿನ ಭವಿಷ್ಯ ಏನು..? ಈ ಕುರಿತಾದ ವರದಿ ಇಲ್ಲಿದೆ ನೋಡಿ...

Team India Cricketer MS Dhoni Likely To Be Ignored For T20Is Against South Africa
Author
New Delhi, First Published Aug 29, 2019, 12:30 PM IST
  • Facebook
  • Twitter
  • Whatsapp

ನವ​ದೆ​ಹ​ಲಿ(ಆ.29): ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆ​ಯುವ ನಿರ್ಧಾರವನ್ನು ಎಂ.ಎಸ್‌.ಧೋನಿ ಸದ್ಯಕ್ಕೆ ಕೈಬಿ​ಟ್ಟಿದ್ದರೂ, ಅವ​ರಿಗೆ ಭಾರತ ತಂಡದಲ್ಲಿ ಮತ್ತೆ ಸ್ಥಾನ ಸಿಗುವುದು ಸುಲ​ಭ​ವಿಲ್ಲ. ಮುಂಬ​ರುವ ದಕ್ಷಿಣ ಆಫ್ರಿಕಾ ವಿರು​ದ್ಧದ ಟಿ20 ಸರ​ಣಿಗೆ ಧೋನಿ ಆಯ್ಕೆ ಅನು​ಮಾನವೆನಿ​ಸಿದೆ. ಸೆ.15ರಿಂದ 3 ಪಂದ್ಯ​ಗಳ ಟಿ20 ಸರಣಿ ನಡೆ​ಯ​ಲಿದ್ದು, ಸೆ.4ರಂದು ಸರ​ಣಿಗೆ ಬಿಸಿ​ಸಿಐ ತಂಡ ಆಯ್ಕೆ ಮಾಡುವ ನಿರೀಕ್ಷೆ ಇದೆ.

ಸೇನಾ ಸೇವೆ ಬಳಿಕ ಹೊಸ ಅವತಾರದಲ್ಲಿ ಧೋನಿ!

ವೆಸ್ಟ್‌ಇಂಡೀಸ್‌ ವಿರುದ್ಧ 3-0 ಅಂತ​ರ​ದಲ್ಲಿ ಸರಣಿ ಗೆದ್ದ ತಂಡ​ದ​ಲ್ಲಿದ್ದ ಆಟ​ಗಾ​ರ​ರನ್ನೇ ದ.ಆ​ಫ್ರಿಕಾ ವಿರುದ್ಧದ ಸರ​ಣಿಗೂ ಉಳಿ​ಸಿ​ಕೊ​ಳ್ಳುವ ಸಾಧ್ಯತೆ ಹೆಚ್ಚಿದೆ. ಯಾರಾದರೂ ಗಾಯ​ಗೊಂಡ​ರಷ್ಟೇ ತಂಡ​ದಲ್ಲಿ ಬದ​ಲಾ​ವಣೆ ಮಾಡ​ಬ​ಹುದು ಎಂದು ಬಿಸಿ​ಸಿ​ಐ ಮೂಲ​ಗಳು ತಿಳಿ​ಸಿವೆ.

ಪಾಕಿ​ಸ್ತಾನ ಕ್ರಿಕೆಟ್‌ ತಂಡ​ಕ್ಕೆ ಮಿಸ್ಬಾ ಉಲ್‌ ಹಕ್‌ ಕೋಚ್‌?

2020ರ ಅಕ್ಟೋ​ಬರ್‌ನಲ್ಲಿ ಆಸ್ಪ್ರೇ​ಲಿ​ಯಾ​ದಲ್ಲಿ ನಡೆ​ಯ​ಲಿ​ರುವ ಟಿ20 ವಿಶ್ವ​ಕಪ್‌ಗೆ ಬಲಿಷ್ಠ ತಂಡ ಸಿದ್ಧ​ಪ​ಡಿ​ಸುವ ಹೊಣೆ ಆಯ್ಕೆ ಸಮಿತಿ ಮೇಲಿದೆ. ‘ಟಿ20 ವಿಶ್ವ​ಕಪ್‌ಗೂ ಮುನ್ನ ಭಾರ​ತಕ್ಕೆ ಕೇವಲ 22 ಅಂತಾ​ರಾ​ಷ್ಟ್ರೀಯ ಟಿ20 ಪಂದ್ಯ​ಗಳು ಮಾತ್ರ ಸಿಗ​ಲಿವೆ. ಹೀಗಾಗಿ ಸಿದ್ಧತೆ ಆರಂಭಿ​ಸಲು ಇದು ಸೂಕ್ತ ಸಮಯ ಎಂದು ಆಯ್ಕೆಗಾರರು ನಿರ್ಧ​ರಿ​ಸಿ​ದ್ದಾರೆಂದು’ ಬಿಸಿ​ಸಿಐ ಅಧಿ​ಕಾ​ರಿ​ಯೊ​ಬ್ಬರು ಬುಧ​ವಾರ ಮಾಹಿತಿ ನೀಡಿ​ದ್ದಾರೆ.

ಬಿಸಿ​ಸಿಐ ಹಿರಿಯ ಅಧಿ​ಕಾ​ರಿ​ಗಳು ಇಲ್ಲವೇ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.​ಪ್ರ​ಸಾದ್‌, ಧೋನಿ​ಯನ್ನು ತಮ್ಮ ಮುಂದಿನ ಯೋಜನೆ ಬಗ್ಗೆ ವಿಚಾರಿಸು​ತ್ತಾ​ರೆಯೇ ಇಲ್ಲವೇ ಎನ್ನುವ ಬಗ್ಗೆ ಇನ್ನೂ ಮಾಹಿತಿ ಇಲ್ಲ. ವಿಂಡೀಸ್‌ ಪ್ರವಾಸಕ್ಕೆ ತಂಡ ಆಯ್ಕೆ ಮಾಡುವ ಮೊದಲು ಆಯ್ಕೆಗಾರರು ಧೋನಿ​ಯಿಂದ ಮಾಹಿತಿ ಪಡೆ​ದು​ಕೊಂಡಿ​ದ್ದರು. ‘ನಿವೃತ್ತಿ ಪ್ರತಿ​ಯೊಬ್ಬ ಆಟ​ಗಾರನ ವೈಯ​ಕ್ತಿಕ ವಿಚಾರ. ಆದರೆ 2020ರ ವಿಶ್ವ​ಕಪ್‌ಗೆ ಮಾರ್ಗಸೂಚಿ ರಚಿ​ಸುವ ಹಕ್ಕು ಆಯ್ಕೆಗಾರ​ರಿ​ಗಿದೆ. ಈ ನಿಟ್ಟಿ​ನಲ್ಲಿ ರಿಷಭ್‌ ಪಂತ್‌ಗೆ ಹೆಚ್ಚಿನ ಅವ​ಕಾಶಗಳನ್ನು ನೀಡಲು ಆಯ್ಕೆ ಸಮಿತಿ ನಿರ್ಧ​ರಿ​ಸಬ​ಹು​ದು’ ಎಂದು ಅಧಿ​ಕಾರಿ ಹೇಳಿ​ದ್ದಾರೆ.

ಸೇನಾ ಡ್ಯೂಟಿ ಮುಗಿಸಿ ಧೋನಿ ತವರಿನತ್ತ; ಎಲ್ಲರ ಚಿತ್ತ ಮಾಜಿ ನಾಯಕನತ್ತ!

ಐಸಿಸಿ ಏಕ​ದಿನ ವಿಶ್ವ​ಕಪ್‌ ಬಳಿಕ ಧೋನಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿ​ಸ​ಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಧೋನಿ ನಿವೃತ್ತಿ ವಿಚಾರಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಕೆಲ​ವರ ಪ್ರಕಾರ 2020ರ ಟಿ20 ವಿಶ್ವ​ಕಪ್‌ ವರೆಗೂ ಅವರು ತಂಡ​ದಲ್ಲಿ ಮುಂದು​ವ​ರಿ​ಯಲು ಇಚ್ಛಿ​ಸಿ​ದ್ದಾರೆ ಎನ್ನ​ಲಾ​ಗಿದೆ.

ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!

ಪಂತ್‌ ಜತೆ ಮತ್ತಿ​ಬ್ಬರು: ಇದೇ ವೇಳೆ ಸಂಜು ಸ್ಯಾಮ್ಸನ್‌ ಹಾಗೂ ಇಶಾನ್‌ ಕಿಶನ್‌ರನ್ನು ಆಯ್ಕೆಗಾರರು 2ನೇ ಹಾಗೂ 3ನೇ ಆಯ್ಕೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ಗಳಾಗಿ ಗುರು​ತಿ​ಸಿ​ದ್ದಾರೆ ಎನ್ನ​ಲಾ​ಗಿದೆ. ಸಂಜು, ಪಂತ್‌ರಷ್ಟೇ ಪರಿ​ಣಾ​ಮ​ಕಾ​ರಿ​ಯಾಗಿ ಬ್ಯಾಟ್‌ ಮಾಡ​ಬ​ಲ್ಲರು. ಆದರೆ ಅವರ ವಿಕೆಟ್‌ ಕೀಪಿಂಗ್‌ ಕಲೆ ಮತ್ತಷ್ಟು ಸುಧಾ​ರಿ​ಸ​ಬೇ​ಕಿದೆ. ಕಿಶನ್‌, ಈಗಾ​ಗಲೇ ಭಾರತ ‘ಎ’ ತಂಡ​ದಲ್ಲಿ ಸತತವಾಗಿ ಅವ​ಕಾಶ ಪಡೆ​ಯು​ತ್ತಿದ್ದು, ಉತ್ತಮ ಪ್ರದ​ರ್ಶನ ತೋರು​ತ್ತಿ​ದ್ದಾರೆ. ಪಂತ್‌ ಕೆಲಸದ ಒತ್ತಡವನ್ನು ಗಮನದಲ್ಲಿ​ಟ್ಟು​ಕೊಂಡು, ಸಂಜು ಇಲ್ಲವೇ ಕಿಶನ್‌ಗೂ ಹೆಚ್ಚಿನ ಅವ​ಕಾಶ ಸಿಗ​ಬ​ಹುದು ಎನ್ನುವ ಲೆಕ್ಕಾ​ಚಾರವಿದೆ.

ತಿರು​ವ​ನಂತರಪುರಂನಲ್ಲಿ ಗುರು​ವಾರದಿಂದ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಸೀಮಿತ ಓವರ್‌ ಸರಣಿ ನಡೆ​ಯ​ಲಿದ್ದು, ಸಂಜು ಕೊನೆ 2 ಪಂದ್ಯ​ಗ​ಳಿಗೆ ಆಯ್ಕೆಯಾಗಿ​ದ್ದಾರೆ. ಆಯ್ಕೆ ಸಮಿ​ತಿಯ ಕೆಲ ಸದ​ಸ್ಯರು ಸಂಜು ಆಟ ವೀಕ್ಷಿ​ಸ​ಲು ತೆರ​ಳ​ಲಿ​ದ್ದಾರೆ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿವೆ.
 

Follow Us:
Download App:
  • android
  • ios