Asianet Suvarna News Asianet Suvarna News

ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!

ಭಾರತ ವಿರುದ್ದದ ಟೆಸ್ಟ್ ಹಾಗೂ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ. ಸೆಪ್ಟೆಂಬರ್ 15 ರಿಂದ ಸರಣಿ ಆರಂಭಗೊಳ್ಳಲಿದ್ದು, ತಂಡದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.  

South Africa announces t20 test cricket squad for India tour
Author
Bengaluru, First Published Aug 13, 2019, 10:34 PM IST
  • Facebook
  • Twitter
  • Whatsapp

ಜೋಹಾನ್ಸ್‌ಬರ್ಗ್(ಆ.13): ಭಾರತ ವಿರುದ್ಧದ ಸರಣಿಗೆ ಸೌತ್ ಆಫ್ರಿಕಾ ತಂಡ ಪ್ರಕಟಿಸಲಾಗಿದೆ. ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿದ ಬಳಿಕ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಸರಣಿ ಆರಂಭಗೊಳ್ಳಲಿದೆ. ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಲಿರುವ ಟೆಸ್ಟ್ ಹಾಗೂ ಟಿ20 ಸರಣಿಗಾಗಿ ಸೌತ್ ಆಫ್ರಿಕಾ ತಂಡ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಭಾರತ ಕೋಚ್‌ ರೇಸ್‌ನಲ್ಲಿ ಶಾಸ್ತ್ರಿ ಸೇರಿ 6 ಮಂದಿ!

ಭಾರತ ಪ್ರವಾಸ ಕೈಗೊಳ್ಳಲಿರುವ ಸೌತ್ ಆಫ್ರಿಕಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಕ್ವಿಂಟನ್ ಡಿಕಾಕ್‌ಗೆ ಟಿ20 ನಾಯಕತ್ವ ನೀಡಲಾಗಿದೆ. 3 ಪಂದ್ಯಗಳ ಚುಟುಕು ಸರಣಿಯಲ್ಲಿ ಡಿಕಾಕ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಫಾಫ್ ಡುಪ್ಲೆಸಿಸ್ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದು, ತೆಂಬಾ ಬವುಮಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಕರೀನಾ ಕಪೂರ್ ಬೇಡಿಕೆ ಈಡೇರಿಸಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್!

ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 23ರ ವರೆಗೆ ಸೌತ್ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 3 ಟಿ20 ಹಾಗೂ 3 ಟೆಸ್ಟ್ ಪಂದ್ಯದ ಸರಣಿ ಆಡಲಿದೆ. ಕ್ರಿಕೆಟ್ ಸೌತ್ ಆಫ್ರಿಕಾ ಪ್ರಕಟಿಸಿದ ತಂಡ ಇಲ್ಲಿವೆ.

ಟೆಸ್ಟ್ ತಂಡ: ಫಾಫ್ ಡುಪ್ಲೆಸಿಸ್(ನಾಯಕ), ತೆಂಬಾ ಬುವುಮಾ(ಉಪನಾಯಕ), ಥೆನಿಸ್ ಡೆ ಬ್ರುಯನ್,  ಕ್ವಿಂಟನ್ ಡಿಕಾಕ್, ಡೀನ್ ಎಲ್ಗರ್, ಜುಬ್ಯರ್ ಹಂಝಾ, ಕೇಶವ್ ಮಹರಾಜ್, ಆ್ಯಡಿನ್ ಮಕ್ರಂ, ಸೆನುರನ್ ಮುಥುಸಾಮಿ, ಲುಂಗಿ ಎನ್‌ಗಿಡಿ,  ಅನಿರಿಚ್ ನೊರ್ಜೆ, ವರ್ನಾನ್ ಫಿಲಾಂಡರ್, ಡೇನ್ ಪೀಡೆಟ್, ಕಾಗಿಸೋ ರಬಾಡ, ರುಡಿ ಸೆಕಂಡ್

ಟಿ20 ತಂಡ: ಕ್ವಿಂಟನ್ ಡಿಕಾಕ್(ನಾಯಕ), ರಸ್ಸಿ ವ್ಯಾಂಡರ್ ಡಸೆನ್, ತೆಂಬಾ ಬವುಮಾ, ಜುನಿಯರ್ ಡಾಲ, ಬಿಜಾರ್ನ್ ಫೂರ್ಚುನಿ, ಬ್ಯುರನ್ ಹೆಂಡ್ರಿಕ್ಸ್, ರೀಝ್ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಅನಿರಿಚ್ ನೊರ್ಜೆ, ಆ್ಯಂಡಿಲೆ ಫೆಲುಕ್‌ವಾಯೊ, ಡ್ವೈನಿ ಪ್ರೆಟ್ರೋರಿಯಸ್, ಕಾಗಿಸೋ ರಬಾಡ, ತಬ್ರೈಝ್ ಶಂಶಿ, ಜಾನ್ ಜಾನ್ ಸ್ಮಟ್ಸ್
 

Follow Us:
Download App:
  • android
  • ios