ರಾಂಚಿ(ಆ.18): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ,ಎಸ್,ಧೋನಿ ಯಾವ ಭಾರತೀಯ  ಕ್ರಿಕೆಟಿಗನೂ ಮಾಡದ ಸಾಧನೆ ಮಾಡಿದ್ದಾರೆ. 106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್‌ನಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದ ಧೋನಿ, ರಾಂಚಿಗೆ ಮರಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕಣಿವೆ ರಾಜ್ಯದಲ್ಲಿ ಧೋನಿ ಭಾರತೀಯ ಸೈನಿಕರ ಜೊತೆ ಗಸ್ತು ತಿರುಗಿದ್ದರು. ಇದೀಗ ವಿಶ್ರಾಂತಿಗೆ ಜಾರಿರುವ ಧೋನಿ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಇದನ್ನೂ ಓದಿ: ಲೇಹ್ ಮಕ್ಕಳ ಜೊತೆ ಕ್ರಿಕೆಟ್ ಆಡಿದ ಧೋನಿ!

ವಿಶ್ವಕಪ್ ಟೂರ್ನಿ ಬಳಿಕ ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸಕ್ಕೂ ಮುನ್ನ ಧೋನಿ ನಿವೃತ್ತಿ ಊಹಾಪೋಹಗಳಿಗೆ ತೆರೆಎಳೆದಿದ್ದರು. ಸೇನೆಯಲ್ಲಿ ಸೇವೆ ಸಲ್ಲಿಸುವ ಕಾರಣದಿಂದ ವಿಂಡೀಸ್ ಪ್ರವಾಸಕ್ಕೆ ಲಭ್ಯವಿಲ್ಲ ಎಂದು ಆಯ್ಕೆ ಸಮಿತಿಗೆ ತಿಳಿಸಿದ್ದರು. ಇದೀಗ ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಧೋನಿ ಲಭ್ಯರಿದ್ದಾರಾ? ಅಥವಾ ವಿದಾಯಕ್ಕೆ ನಿರ್ಧರಿಸಿದ್ದಾರ? ಅನ್ನೋ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ; ಲಡಾಕ್‌ಗೆ ಧೋನಿ ಭೇಟಿ; ಕೇಂದ್ರಾಡಳಿತದಲ್ಲಿ ಹೊಸ ಸಂಚಲನ!

ಈಗಾಗಲೇ ಧೋನಿ ನಿವೃತ್ತಿ ಕುರಿತು ಹಲವು ಬಾರಿ ಸ್ಪಷ್ಟಡಿಸಿದ್ದಾರೆ. ನಿವೃತ್ತಿ ಬಳಿಕ ಸೇನೆಯಲ್ಲಿ ಸೇವೆ ಸಲ್ಲಿಸಲು ಇಷ್ಟಪಡುತ್ತೇನೆ ಎಂದಿದ್ದರು. ಇದೀಗ ಸೇನೆಯಲ್ಲಿ ಮೊದಲ ಹಂತದ ಸೇವೆ ಸಲ್ಲಿಸಿರುವ ಧೋನಿ ಮತ್ತೆ ಕ್ರಿಕೆಟ್‌ಗೆ ಮರಳುತ್ತಾರಾ? ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.