ಮುಂಬೈ(ಆ.21): ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಭಾರತೀಯ ಸೇನೆಯಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿ ವಾಪಾಸ್ಸಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಪಾಯಕಾರಿ ಗಡಿ ಪ್ರದೇಶದಲ್ಲಿ ಧೋನಿ ಭಾರತೀಯ ಸೈನಿಕರ ಜೊತೆ ಸೇವೆ ಸಲ್ಲಿಸಿದ್ದರು. ಈ ವೇಳೆ ಲಡಾಕ್‌ಗೂ ಬೇಟಿ ನೀಡಿದ್ದರು. ಸೇನೆಯಿಂದ ಮರಳಿರುವ ಧೋನಿ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಸೇನೆಯಲ್ಲಿ ಸೇವೆ ಸಲ್ಲಿಸಿ ರಾಂಚಿಗೆ ಮರಳಿದ ಸೈನಿಕ ಧೋನಿ!

ಸೋಶಿಯಲ್ ಮೀಡಿಯಾದಲ್ಲಿ ಧೋನಿ ಹೊಸ ಅವತಾರ ಫೋಟೋಗಳು ಹರಿದಾಡುತ್ತಿದೆ. ಖಾಸಗಿ  ಜಾಹೀರಾತಿಗಾಗಿ ನಡೆಸಿದ ಫೋಟೋ ಶೂಟ್ ಎಂದು ಹೇಳಲಾಗುತ್ತಿದೆ. ಆದರೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಇತ್ತ ರಾಜಕಾರಣಿ ವೇಷದಲ್ಲಿರುವ ಧೋನಿ ಫೋಟೋಗೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಲೇಹ್ ಮಕ್ಕಳ ಜೊತೆ ಕ್ರಿಕೆಟ್ ಆಡಿದ ಧೋನಿ!

ಜುಲೈ 31 ರಿಂದ ಆಗಸ್ಟ್ 15ರ ವರೆಗೆ ಧೋನಿ ಇಂಡಿಯನ್ ಟೆರಿಟೋರಿಯಲ್ 106 ಬೆಟಾಲಿಯನ್ ಜೊತೆ ಸೇವೆ ಸಲ್ಲಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಅಪಾಯಕಾರಿ ಪ್ರದೇಶದಲ್ಲಿ ಧೋನಿ, ಸೈನಿಕರ ಜೊತೆ ಗಸ್ತು ತಿರುಗುವ ಮೂಲಕ ಸೇವೆ ಸಲ್ಲಿಸಿದ್ದರು. ಇದಕ್ಕಾಗಿ ಕಠಿಣ ತರಬೇತಿಯಲ್ಲೂ ಧೋನಿ ಪಾಲ್ಗೊಂಡಿದ್ದರು. ಸೇನಾ ಸೇವೆಗೂ ಮೊದಲೇ ಧೋನಿ 5 ಬಾರಿ ಪ್ಯಾರಾ ಜಂಪ್ ಮಾಡೋ ಮೂಲಕ ಸೇನಾ ಪ್ಯಾರಾ ಟ್ರೂಪರ್ ಆಗಿ ಅರ್ಹತೆ ಪಡೆದಿದ್ದರು. ಇಷ್ಟೇ ಅಲ್ಲ, ಧೋನಿಗೆ ಭಾರತೀಯ ಸೇನೆಯ ಪ್ಯಾರಾರೆಜಿಮೆಂಟ್ ವಿಭಾಗ ಲೆಫ್ಟಿನೆಂಟ್ ಕರ್ನಲ್ ಗೌರವ ನೀಡಿ ಸನ್ಮಾನಿಸಿದೆ.