Asianet Suvarna News Asianet Suvarna News

Mens Javelin Throw: ಇದೇ ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಭಾರತದ ನೀರಜ್‌ ಚೋಪ್ರಾ!

ಒಲಿಂಪಿಕ್‌ ಚಾಂಪಿಯನ್ ನೀರಜ್ ಚೋಪ್ರಾ ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಸಾಧಿಸಿ ಪುರುಷರ ಜಾವೆಲಿನ್ ಎಸೆತದಲ್ಲಿ ಹೊಸ ವಿಶ್ವದ ನಂಬರ್ ಒನ್ ಆಗಿದ್ದಾರೆ,
 

Olympic Champion Neeraj Chopra Becomes New World Number 1 in Mens Javelin Throw First time san
Author
First Published May 22, 2023, 8:32 PM IST

ನವದೆಹಲಿ (ಮೇ.22): ಒಲಿಂಪಿಕ್‌ ಚಾಂಪಿಯನ್‌ ಭಾರತದ ನೀರಜ್‌ ಚೋಪ್ರಾ ಸೋಮವಾರ ಬಿಡುಗಡೆಯಾದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಮಿತಿಯ ಪುರುಷರ ಜಾವೆಲಿನ್‌ ಥ್ರೋ ವಿಭಾಗದ ವಿಶ್ವ ಶ್ರೇಯಾಂಕದಲ್ಲಿ ಇದೇ ಮೊದಲ ಬಾರಿಗೆ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಆ ಮೂಲಕ ನೀರಜ್‌ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮುಡಿಗೇರಿಸಿಕೊಂಡಿದ್ದಾರೆ. 2020ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಟ್ರ್ಯಾಕ್‌ ಆಂಡ್‌ ಫೀಲ್ಡ್‌ ಅಥ್ಲೆಟಿಕ್ಸ್‌ ವಿಭಾಗದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದರು. ಈಗ ವಿಶ್ವ ಅಥ್ಲೆಟಿಕ್ಸ್‌ನ ಟ್ರ್ಯಾಕ್‌ ಆಂಡ್‌ ಫೀಲ್ಟ್‌ ವಿಭಾಗದ ವಿಶ್ವ ಶ್ರೇಯಾಂಕದಲ್ಲಿ ನಂ.1 ಎನಿಸಿಕೊಂಡ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಆಗಿರುವ ಗ್ರನೆಡಾದ ಆಂಡರ್ಸನ್‌ ಪೀಟರ್ಸ್‌ ಅವರನ್ನು ಕೆಳಗಿಳಿಸಿ ನೀರಜ್‌ ಚೋಪ್ರಾ ಅಗ್ರಸ್ಥಾನಕ್ಕೇರಿದ್ದಾರೆ.

ಭಾರತದ ನೀರಜ್‌ ಚೋಪ್ರಾ 1455 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆಂಡರ್ಸನ್‌ ಪೀಟರ್ಸ್‌ 1433 ಅಂಕದೊಂದಿಗೆ 2ನೆ ಸ್ಥಾನಕ್ಕೆ ಕುಸಿದಿದ್ದಾರೆ. ಜೆಕ್‌ ಗಣರಾಜ್ಯದ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಜಾಕುಬ್‌ ವಾಡ್ಲಚ್ 1416 ಅಂಕದೊಂದಿಗೆ ಮೂರನೇ ಸ್ಥಾನ, ಜರ್ಮನಿಯ ಜೂಲಿಯನ್‌ ವೆಬರ್‌ 1385 ಅಂಕದೊಂದಿಗೆ 4ನೇ ಸ್ಥಾನ, ಪಾಕಿಸ್ತಾನದ ಆರ್ಶದ್‌ ನದೀಮ್‌ 1306 ಅಂಕದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

25 ವರ್ಷದ ನೀರಜ್‌ ಚೋಪ್ರಾ, ಪ್ರತಿಷ್ಠಿತ ಡೈಮಂಡ್‌ ಲೀಗ್‌ ಸರಣಿಯ ದೋಹಾ ಚರಣದಲ್ಲಿ ಚಿನ್ನ ಗೆಲ್ಲುವ ಮೂಲಕ 2023ರ ಆರಂಭಿಕ ಇವೆಂಟ್‌ನಲ್ಲಿಯೇ ಭರ್ಜರಿ ನಿರ್ವಹಣೆ ತೋರಿದ್ದಾರೆ. ಹಾಲಿ ಋತುವಿನ ಮೊದಲ ಪ್ರಯತ್ನದಲ್ಲಿಯೇ ವರ್ಲ್ಡ್‌ ಲೀಡಿಂಗ್‌ನೊಂದಿಗೆ 88.67 ಮೀಟರ್‌ ದೂರ ಎಸೆದಿದ್ದಾರೆ. ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಮತ್ತು ರಾಷ್ಟ್ರೀಯ ಜಾವೆಲಿನ್ ದಾಖಲೆಯ 89.94 ಮೀಟರ್‌ಗಳನ್ನು ಮುಟ್ಟುವ ಅಂತರದ ಸನಿಹ ಬಂದಿದ್ದರು.

'ವರ್ಷದ ಮೊದಲ ಸ್ಪರ್ಧೆ, ಮೊದಲ ಸ್ಥಾನ': ಚಿನ್ನ ಗೆದ್ದ ನೀರಜ್ ಚೋಪ್ರಾ ಅಭಿನಂದಿಸಿದ ಪ್ರಧಾನಿ ಮೋದಿ

ನೀರಜ್ ಮುಂದಿನ ಜೂನ್ 4 ರಂದು ನೆದರ್‌ಲ್ಯಾಂಡ್ಸ್‌ನ ಹೆಂಗೆಲೋದಲ್ಲಿ ನಡೆಯುವ ಫ್ಯಾನಿ ಬ್ಲಾಂಕರ್ಸ್-ಕೋಯೆನ್ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದಾರೆ, ನಂತರ ಜೂನ್ 13 ರಂದು ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

Doha Diamond League: ಘಟಾನುಘಟಿಗಳನ್ನು ಹಿಂದಿಕ್ಕಿ ಚಿನ್ನ ಗೆದ್ದ ನೀರಜ್ ಚೋಪ್ರಾ

Follow Us:
Download App:
  • android
  • ios