Asianet Suvarna News Asianet Suvarna News
breaking news image

Video ಕುತ್ತಿಗೆಗೆ ಬಂತು ಲೈಂಗಿಕ ಹಗರಣ , ಜರ್ಮನಿಯಿಂದ ಕಾನೂನು ಹೋರಾಟಕ್ಕೆ ಮುಂದಾದ ಪ್ರಜ್ವಲ್ ರೇವಣ್ಣ!

ಪ್ರಜ್ವಲ್ ರೇವಣ್ಣ, ತಂದೆ ರೇವಣ್ಣ ವಿರುದ್ಧವೂ ಸಂತ್ರಸ್ತ ಮಹಿಳೆ ದೂರು, ಜರ್ಮನಿಯಿಂದ ಬರ್ತಾರಾ ಪ್ರಜ್ವಲ್ ರೇವಣ್ಣ? ಕರ್ನಾಟಕ ಸೇರಿ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ಪ್ರಜ್ವಲ್ ಹಗರಣ, ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ದೇಶದ ರಾಜಕೀಯ ಇತಿಹಾಸದಲ್ಲಿ ನಡೆದಿರುವ ಅತೀ ದೊಡ್ಡ ಲೈಂಗಿಕ ಹಗರಣ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಜ್ವಲ ರೇವಣ್ಣ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದೆ. ಜೊತೆಗೆ ದೂರು ಕೂಡ ದಾಖಲಾಗಿದೆ. ಪ್ರಜ್ವಲ್ ರೇವಣ್ಣ ಜೊತೆಗೆ ತಂದೆ ಹೆಚ್‌ಡಿ ರೇವಣ್ಣ ವಿರುದ್ಧವೂ ದೂರು ದಾಖಲಾಗಿದೆ. ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ.ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಈ ಸೆಕ್ಸ್ ಪ್ರಕರಣ ಕೋಲಾಹಲ ಸೃಷ್ಟಿಸಿದೆ. ಇತ್ತ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹಾರಿದ್ದು, ವಿದೇಶದಿಂದ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. 
 

Video Top Stories