Asianet Suvarna News Asianet Suvarna News

ಮಾಜಿ ಉಪಮುಖ್ಯಮಂತ್ರಿ ದಿ. ಎಂಪಿ ಪ್ರಕಾಶ್ ಪತ್ನಿ ರುದ್ರಾಂಬ ನಿಧನ

ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಜನಪ್ರಿಯ ನಾಯಕರಾಗಿದ್ದ ದಿ.ಎಂಪಿ ಪ್ರಕಾಶ್ ಅವರ ಪತ್ನಿ ಎಂಪಿ ರುದ್ರಾಂಬ(83) ಪ್ರಕಾಶ್ ಸೊಮವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 

Former karnataka deputy CM MP Prakash wife MP Rudramba dies in vijayanagar district rav
Author
First Published Apr 29, 2024, 11:17 PM IST

ವಿಜಯನಗರ (ಏ.29): ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಜನಪ್ರಿಯ ನಾಯಕರಾಗಿದ್ದ ದಿ.ಎಂಪಿ ಪ್ರಕಾಶ್ ಅವರ ಪತ್ನಿ ಎಂಪಿ ರುದ್ರಾಂಬ(83) ಪ್ರಕಾಶ್ ಸೊಮವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 

ಹೂವಿನ ಹಡಗಲಿ ಪಟ್ಟಣದಲ್ಲಿ ನೆಲೆಸಿದ್ದ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಎಂಪಿ ರುದ್ರಾಂಬ ಅವರಿಗೆ ಮೂವರು ಪುತ್ರಿಯರಿದ್ದಾರೆ. ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ, ವೀಣಾ ಹಾಗೂ ಸುಮಾ ಎಂಬ ಮೂವರು ಪುತ್ರಿಯರನ್ನ ಅಗಲಿದ್ದಾರೆ. ಹರಪನಹಳ್ಳಿ ಕ್ಷೇತ್ರದ ಶಾಸಕರಾಗಿದ್ದ ಅವರ ಪುತ್ರ ಎಂ.ಪಿ.ರವೀಂದ್ರ ಕೆಲ ವರ್ಷದ ಹಿಂದೆಯಷ್ಟೇ ತೀರಿಕೊಂಡಿದ್ದರು. ಇನ್ನು 'ಜಂಟಲ್ ಮನ್ ರಾಜಕಾರಣಿ' ಎಂದೇ ಖ್ಯಾತರಾಗಿದ್ದ ಪತಿ ಮಾಜಿ ಉಪಮುಖ್ಯಮಂತ್ರಿ ಎಂಪಿ ಪ್ರಕಾಶ್ ಅವರು ದಶಕಗಳ ಹಿಂದೆಯೇ ಕರುಳಿನ ಕ್ಯಾನ್ಸರ್‌ನಿಂದ ನಿಧನರಾಗಿದ್ದರು.

ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ನಾಳೆ ಸರ್ಕಾರಿ ‌ರಜೆ

ಅಂತ್ಯಕ್ರಿಯೆ: ನಾಳೆ ಮಂಗಳವಾರು ಮಧ್ಯಾಹ್ನ 3 ಗಂಟೆಗೆ ದಿ.ಎಂಪಿ ಪ್ರಕಾಶ್ ಸಮಾಧಿ ಬಳಿಯೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ:

Latest Videos
Follow Us:
Download App:
  • android
  • ios