ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ದುರ್ಮರಣ!
ಅವರೆಲ್ಲರೂ ಒಂದೇ ಕಾಲೇಜಿನ ಸ್ನೇಹಿತರು, ಕಾಲೇಜಿಗೆ ರಜೆ ಇದ್ದ ಹಿನ್ನಲೆ ಸ್ನೇಹಿತರೆಲ್ಲರೂ ಕನಕಪುರ ತಾಲ್ಲೂಕಿನ ಸಂಗಮದ ಕಾವೇರಿ ನದಿಗೆ ಪ್ರವಾಸಕ್ಕೆ ಬಂದಿದ್ದರು, ಈಜುಬಾರದೇ ಇದ್ರೂ ನದಿಗೆ ಇಳಿದ ಕಾರಣ 12 ವಿಧ್ಯಾರ್ಥಿಗಳ ಪೈಕಿ ಐವರು ನೀರುಪಾಲಾಗಿ ಸಾವನ್ನಪ್ಪಿದಾರೆ.
ರಾಮನಗರ (ಏ.29): ಅವರೆಲ್ಲರೂ ಒಂದೇ ಕಾಲೇಜಿನ ಸ್ನೇಹಿತರು, ಕಾಲೇಜಿಗೆ ರಜೆ ಇದ್ದ ಹಿನ್ನಲೆ ಸ್ನೇಹಿತರೆಲ್ಲರೂ ಕನಕಪುರ ತಾಲ್ಲೂಕಿನ ಸಂಗಮದ ಕಾವೇರಿ ನದಿಗೆ ಪ್ರವಾಸಕ್ಕೆ ಬಂದಿದ್ದರು, ಈಜುಬಾರದೇ ಇದ್ರೂ ನದಿಗೆ ಇಳಿದ ಕಾರಣ 12 ವಿಧ್ಯಾರ್ಥಿಗಳ ಪೈಕಿ ಐವರು ನೀರುಪಾಲಾಗಿ ಸಾವನ್ನಪ್ಪಿದಾರೆ.
12 ವಿದ್ಯಾರ್ಥಿಗಳ ಪೈಕಿ ಐವರು ಸಾವು
ಅವರೆಲ್ಲರೂ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಗಳು, ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತರು, ಸಾವಿನಲ್ಲೂ ಕೂಡ ಒಟ್ಟಾಗೇ ಸಾವನ್ನಪ್ಪಿದ್ದಾರೆ. ಹೌದು,ಕಾಲೇಜಿಗೆ ರಜೆ ಇದ್ದ ಹಿನ್ನಲೆ ಕನಕಪುರ ತಾಲ್ಲೂಕಿನ ಸಂಗಮಕ್ಕೆ 12 ವಿಧ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಈ ಪೈಕಿ ಐವರು ವಿಧ್ಯಾರ್ಥಿಗಳು ಕಾವೇರಿ ನದಿಯಲ್ಲಿ ನೀರಿನಲ್ಲಿ ಆಟವಾಡಲು ಹೋಗಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಸಂಗಮಕ್ಕೆ ಪ್ರವಾಸಕ್ಕೆ ಬಂದಿದ್ದ ವಿಧ್ಯಾರ್ಥಿಗಳು ಎಲ್ಲಾ ಕಡೆ ಸುತ್ತಾಡಿದ ನಂತರ ಮಧ್ಯಾಹ್ನದ ವೇಳೆಗೆ ಸಂಗಮದಲ್ಲಿ ಈಜಲು ಐವರು ವಿಧ್ಯಾರ್ಥಿಗಳು ನೀರಿಗಿಳಿದಿದ್ದರು, ನೀರಿಗೆ ಇಳಿಯಬಾರದು ಎಂಬ ಸೂಚನೆ ಇದ್ರೂ ನೀರಿಗಿಳಿದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನೂಳಿದ ವಿದ್ಯಾರ್ಥಿಗಳು ಕಿರುಚಾಡ್ತಿದ್ದಂತೆ ಕೂಡಲೇ ಅಲ್ಲಿನ ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ನೀರಿಗೆ ಧುಮುಕಿ ವಿಧ್ಯಾರ್ಥಿಗಳ ಮೃತ ದೇಹವನ್ನು ಹೊರತೆಗೆದಿದ್ದಾರೆ.
ದೇವರ ಫೋಟೊ ತೊಳೆಯಲು ಕಾವೇರಿ ನದಿಗೆ ಇಳಿದು ಇಬ್ಬರು ಯುವಕರು ಸಾವು
ಇನ್ನೂ ಮೃತರೆಲ್ಲರೂ ಒಂದೇ ಕಾಲೇಜಿನವರಾಗಿದ್ದು, ಹರ್ಷಿತ(20), ಅಭಿಷೇಕ್ ( 20), ತೇಜಸ್(21), ವರ್ಷ(20), ನೇಹಾ( 21) ಎಂದು ಗುರುತಿಸಲಾಗಿದೆ. ಇನ್ನೂಳಿದ 7 ವಿಧ್ಯಾರ್ಥಿಗಳು ಸೇಪ್ ಆಗಿದ್ದು, ಮೃತರೆಲ್ಲರೂ ಬೆಂಗಳೂರು ಮೂಲದವರೆಂದು ಗೊತ್ತಾಗಿದೆ. ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಸುರೇಶ್, ಡಿವೈಎಸ್ಪಿ ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈಜುಬಾರದ ಹಿನ್ನಲೆ ನೀರಿಗಿಳಿದು ಸಾವನ್ನಪ್ಪಿರೋದು ಧೃಡವಾಗಿದೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಲು ದಯಾನಂದ ಸಾಗರ್ ಆಸ್ಪತ್ರೆಗೆ ಮೃತ ದೇಹಗಳನ್ನು ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಮಾಹಿತಿ ಪಡೆದು ನಂತರ ಮೃತದೇಹ ಹಸ್ತಾಂತರಿಸಲಾಗುವುದು, ಈ ಸಂಬಂಧ ಸಾತನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ತಂದೆ-ಮಗ ಸೇರಿ ನಾಲ್ವರು ದುರ್ಮರಣ!
ಒಟ್ಟಾರೆ ಬದುಕಿ ಬಾಳಬೇಕಿದ್ದ ವಿಧ್ಯಾರ್ಥಿಗಳು ನೀರಿನ ಜೊತೆ ಚೆಲ್ಲಾಟ ಆಡಲು ಹೋಗಿ ಕಾವೇರಿ ತಾಯಿಯ ಒಡಲಲ್ಲಿ ಮುಳುಗಿ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.