IPL 2024 ಡೆಲ್ಲಿ ಕ್ಯಾಪಿಟಲ್ಸ್‌ಗಿಂದು ಕೋಲ್ಕತಾ ನೈಟ್ ರೈಡರ್ಸ್ ಚಾಲೆಂಜ್
ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ 5 ಪಂದ್ಯದಲ್ಲಿ ಕೇವಲ 1 ಗೆದ್ದಿದ್ದರೂ, ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಜಯಭೇರಿ ಬಾರಿಸಿದೆ. ಆದರೆ ಹ್ಯಾಟ್ರಿಕ್ ಜಯದೊಂದಿಗೆ ಟೂರ್ನಿಗೆ ಕೋಲ್ಕತಾ ಕಳೆದ 5 ಪಂದ್ಯಗಳಲ್ಲಿ 3ರಲ್ಲಿ ಪರಾಭವ ಗೊಂಡಿದೆ.
ಕೋಲ್ಕತಾ(ಏ.29): ಸತತ ಸೋಲಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದರೂ ಬಳಿಕ ಅಬ್ಬರಿಸಲು ಶುರುವಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದು, ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಕೆಕೆಆರ್ ತಂಡ ತವರಿನಲ್ಲಿ ಸೋಲಿನ ಸರಪಳಿಯನ್ನು ಕಳಚುವ ನಿರೀಕ್ಷೆಯಲ್ಲಿದೆ.
ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ 5 ಪಂದ್ಯದಲ್ಲಿ ಕೇವಲ 1 ಗೆದ್ದಿದ್ದರೂ, ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಜಯಭೇರಿ ಬಾರಿಸಿದೆ. ಆದರೆ ಹ್ಯಾಟ್ರಿಕ್ ಜಯದೊಂದಿಗೆ ಟೂರ್ನಿಗೆ ಕೋಲ್ಕತಾ ಕಳೆದ 5 ಪಂದ್ಯಗಳಲ್ಲಿ 3ರಲ್ಲಿ ಪರಾಭವ ಗೊಂಡಿದೆ. ಎರಡೂ ತಂಡಗಳಲ್ಲೂ ಸಿಕ್ಸರ್ ವೀರರಿದ್ದು, ಜಿದ್ದಾಜಿದ್ದಿನ ಹೋರಾಟ ಏರ್ಪಡುವನಿರೀಕ್ಷೆಯಿದೆ. ಟೂರ್ನಿಯಲ್ಲಿ ಡೆಲ್ಲಿ 103, ಕೋಲ್ಕತಾ 87 ಸಿಕ್ಸರ್ ಸಿಡಿಸಿವೆ. ಆದರೆ ಇತ್ತಂಡಗಳ ಬೌಲಿಂಗ್ ವಿಭಾಗ ದುರ್ಬಲವಾಗಿವೆ.
ICC T20 World Cup: ಚುಟುಕು ಕ್ರಿಕೆಟ್ ವಿಶ್ವಕಪ್‌ಗೆ ಬಲಿಷ್ಠ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಕಟ..!
ಜೇಕ್ ಪ್ರೇಸರ್ ಸ್ಪೋಟಕ ಆಟ: ಡೆಲ್ಲಿಯ ಕಮ್‌ಬ್ಯಾಕ್‌ಗೆ ಪ್ರಮುಖ ಕಾರಣ. 2 ಪಂದ್ಯಗಳಲ್ಲಿ ತಲಾ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವ 22ರ ಆಸೀಸ್ ಆಟಗಾರ 237.50ರ ಸ್ಟೈಕ್‌ರೇಟ್‌ನಲ್ಲಿ 247 ರನ್ ಚಚ್ಚಿದ್ದಾರೆ. ರಿಷಭ್ ಪಂತ್, ಟ್ರಿಸ್ಟನ್ ಸ್ಟಲ್ಸ್ ಕೂಡಾ ಅಬ್ಬರಿಸುತ್ತಿರುವುದು ತಂಡದ ಪ್ಲಸ್ ಪಾಯಿಂಟ್.
ಅತ್ತ ಕೋಲ್ಕತಾ ನೈಟ್ ರೈಡರ್ಸ್ ಸುನಿಲ್ ನರೈನ್, ಫಿಲ್ ಸಾಲ್ಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಮೊದಲ ಮುಖಾಮುಖಿಯಲ್ಲಿ ಕೋಲ್ಕತಾ 272 ರನ್ ಸಿಡಿಸಿ, 106 ರನ್‌ಗಳಿಂದ ಗೆದ್ದಿತ್ತು.
ಚೆಪಾಕ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸವಾಲು ಗೆದ್ದ ಸಿಎಸ್‌ಕೆ
ಸಂಭವನೀಯ ಆಟಗಾರರ ಪಟ್ಟಿ
ಕೋಲ್ಕತಾ ನೈಟ್ ರೈಡರ್ಸ್:
ಫಿಲ್ ಸಾಲ್ಟ್, ಸುನಿಲ್ ನರೈನ್, ಅಂಗಕೃಷ್ ರಘುವಂಶಿ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್ ದೀಪ್, ಚಮೀರ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ಡೆಲ್ಲಿ ಕ್ಯಾಪಿಟಲ್ಸ್:
ಪ್ರೇಸರ್, ಅಭಿಷೇಕ್ ಪೋರೆಲ್, ಶಾಯ್ ಹೋಪ್, ರಿಷಭ್ ಪಂತ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್, ಕುಮಾರ್ ಕುಶಾಗ್ರ, ಕುಲ್ದೀಪ್ ಯಾದವ್, ಲಿಜಾರ್ಡ್ ವಿಲಿಯಮ್ಸ್, ಮುಕೇಶ್ ಕುಮಾರ್, ಖಲೀಲ್ ಅಹಮದ್.
ಪಂದ್ಯ: ಸಂಜೆ. 7:30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ