Asianet Suvarna News Asianet Suvarna News

ಪಿಯುಸಿ ಫಲಿತಾಂಶ ವಿಚಾರಕ್ಕೆ ತಾಯಿ-ಮಗಳ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

ಪಿಯುಸಿ ಫಲಿತಾಂಶ ವಿಚಾರಕ್ಕೆ ತಾಯಿ-ಮಗಳ ನಡುವೆ ಜಗಳವಾಗಿ ಮಗಳ ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Karnataka 2nd PUC Result 2024 issue mother killed her daughter at banashankari bengaluru rav
Author
First Published Apr 30, 2024, 12:27 AM IST

ಬೆಂಗಳೂರು (ಏ.30): ಪಿಯುಸಿ ಫಲಿತಾಂಶ ವಿಚಾರಕ್ಕೆ ತಾಯಿ-ಮಗಳ ನಡುವೆ ಜಗಳವಾಗಿ ಮಗಳ ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾಹಿತಿ(18) ತಾಯಿಯಿಂದಲೇ ಕೊಲೆಯಾದ ಮಗಳು. ಪದ್ಮಜಾ, ಮಗಳನ್ನ ಕೊಂದ ತಾಯಿ. ಸೋಮವಾರ ಸಂಜೆ ನಡೆದಿರುವ ಘಟನೆ. ಮನೆಯಲ್ಲಿ ವಾಸವಾಗಿದ್ದ ತಾಯಿ ಮಗಳು. ಇತ್ತೀಚೆಗೆ ಪಿಯುಸಿ ಫಲಿತಾಂಶ ಬಂದಿತ್ತು. ಮಗಳು ಸಾಹಿತಿ ಪಿಯುಸಿ ಪಾಸ್ ಆಗಿದ್ದಳು. ಆದರೆ ಮಗಳ ರಿಸಲ್ಟ್ ತಾಯಿಗೆ ತೃಪ್ತಿ ತಂದಿರಲಿಲ್ಲ. ಇದೇ ವಿಚಾರವಾಗಿ ತಾಯಿ ಮಗಳು ಜಗಳ ಮಾಡಿಕೊಂಡಿದ್ದರು. ಇಂದು ಸಂಜೆ ಮತ್ತೆ ತಾಯಿ ಮಗಳ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿದೆ. ಇಬ್ಬರು ಪರಸ್ಪರ ಚಾಕು ಹಿಡಿದುಕೊಂಡು ಅಕ್ಷರಶಃ ತಾಯಿ ಮಗಳ ಸಂಬಂಧವೇ ಮರೆತು ಕಾದಾಡಿದ್ದಾರೆ. ಮಗಳು ತಾಯಿಗೆ ಇರಿದರೆ, ತಾಯಿ ಕೂಡ ಮಗಳಿಗೆ ಚಾಕುವಿನಿಂದ ಮನಬಂದಂತೆ ಇರಿದ್ದಾರೆ.

ವಿಚ್ಛೇದನ ವಿಚಾರಕ್ಕೆ ಜಗಳ, ಮನೆ ಖಾಲಿ ಮಾಡುವ ವೇಳೆಯೇ ಪತ್ನಿಯ ಬರ್ಬರ ಹತ್ಯೆ!

 ತಾಯಿ ಚಾಕು ಇರಿತದಿಂದ ಮಗಳಿಗೆ ಗಂಭೀರ ಗಾಯಗಳಾಗಿದ್ದು ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇತ್ತ ಮಗಳು ಕೂಡ ಚಾಕುವಿನಿಂದ ಇರಿದಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ತಾಯಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬನಶಂಕರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios