ನೀವು ಪೋಕೆಮಾನ್‌ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'

ಪಿಕಾಚು ಮತ್ತು ಇತರ ಹಾರಾಡುವ ಪೋಕೆಮಾನ್‌ಗಳಾದ ಚಾರಿಜಾ಼ರ್ಡ್, ಲಾಟಿಯಾಸ್, ಲಾಟಿಯೋಸ್, ಹಾಗೂ ವಿವಿಲಾನ್‌ಗಳು ಹಾರಾಡುವಂತೆ, ಹೊಸ ಭರವಸೆ, ಸಾಧ್ಯತೆಗಳನ್ನು ತೋರುವಂತೆ ಕಾಣುತ್ತದೆ. ಇದೊಂದು ಅತ್ಯಂತ ರೋಮಾಂಚಕವಾದ, ಮನಸೆಳೆಯುವ ಅನುಭವವಾಗಿರಲಿದೆ.

unique pokemon themed aircraft spotted in delhi s skies ash

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) 

ನವದೆಹಲಿ (ಜೂನ್ 15, 2023): ಜಪಾನಿನ ಆಲ್ ನಿಪ್ಪಾನ್ ಏರ್‌ವೇಸ್ ಎಂಬ ವಿಮಾನಯಾನ ಸಂಸ್ಥೆ ಮಂಗಳವಾರ ಪೋಕೆಮಾನ್  ಥೀಮ್ ಆಧಾರಿತ ವಿಮಾನವನ್ನು ನವದೆಹಲಿಯಲ್ಲಿ ಅನಾವರಣಗೊಳಿಸಿತು. ಈ ವಿಮಾನಕ್ಕೆ "ಪಿಕಾಚು ಜೆಟ್ ಎನ್ ಎಚ್" ಎಂದು ಹೆಸರಿಡಲಾಗಿದೆ. ಇದನ್ನು ಎಎನ್ಎ ಹಾಗೂ ಪೋಕೆಮಾನ್ ಸಂಸ್ಥೆಗಳ ನಡುವಿನ ಸಹಯೋಗದಿಂದ ನಿರ್ಮಿಸಲಾಗಿದೆ. ಈ ವಿಮಾನದ ಹೊರಭಾಗದಲ್ಲಿ ಪಿಕಾಚು ವಿನ್ಯಾಸ ಚಿತ್ರಿಸಲಾಗಿದ್ದು, ವಿಮಾನದ ಒಳಭಾಗದಲ್ಲಿ ಪೋಕೆಮಾನ್ ಥೀಮಿನ ಸೌಕರ್ಯಗಳನ್ನು ಒದಗಿಸಲಾಗಿದೆ. ವಿಮಾನದಲ್ಲಿ ಸಾಗುವಾಗ ಪ್ರಯಾಣಿಕರು 'ಪೋಕೆಮಾನ್ ಏರ್ ಅಡ್ವೆಂಚರ್' ಅನುಭವಿಸಬಹುದು.

ಎಎನ್ಎಯ ಪಿಕಾಚು ಜೆಟ್ ಎನ್ಎಚ್ ವಿಮಾನದಲ್ಲಿ ಫ್ಯುಯಲ್‌ಸೇಜ್ ಆದ್ಯಂತ ರೇಕ್ವಾಜಾ಼ ಜೊತೆ ಪೋಕೆಮಾನ್ ಲೈವರಿ ವ್ಯವಸ್ಥೆ ಹೊಂದಿದೆ. ಪಿಕಾಚು ಮತ್ತು ಇತರ ಹಾರಾಡುವ ಪೋಕೆಮಾನ್‌ಗಳಾದ ಚಾರಿಜಾ಼ರ್ಡ್, ಲಾಟಿಯಾಸ್, ಲಾಟಿಯೋಸ್, ಹಾಗೂ ವಿವಿಲಾನ್‌ಗಳು ಹಾರಾಡುವಂತೆ, ಹೊಸ ಭರವಸೆ, ಸಾಧ್ಯತೆಗಳನ್ನು ತೋರುವಂತೆ ಕಾಣುತ್ತದೆ. ಇದೊಂದು ಅತ್ಯಂತ ರೋಮಾಂಚಕವಾದ, ಮನಸೆಳೆಯುವ ಅನುಭವವಾಗಿರಲಿದೆ.

ಇದನ್ನು ಓದಿ: ಸೋನಮ್ ವಾಂಗ್‌ಚುಕ್‌ ಆವಿಷ್ಕಾರ: ಹಿಮಾಲಯದಲ್ಲಿ ಅಂತರ್ಜಾಲ ಸಂಪರ್ಕ ಬದಲಾಯಿಸಿದ 'ಲೈಫೈ'!

ಪೋಕೆಮಾನ್ ಲೈವರಿ ಎನ್ನುವುದು ಒಂದು ವಿಶೇಷ ಬಣ್ಣವಾಗಿದ್ದು, ಇದನ್ನು ಪೋಕೆಮಾನ್ ಸಂಸ್ಥೆಯ ಶೈಲಿಯಲ್ಲಿ ವಿಮಾನಕ್ಕೆ ಬಳಿಯಲಾಗಿರುತ್ತದೆ. ಮೊದಲ ಪೋಕೆಮಾನ್ ಲೈವರಿಯನ್ನು 2010ರಲ್ಲಿ ಆಲ್ ನಿಪ್ಪಾನ್ ಏರ್‌ವೇಸ್ ಸಂಸ್ಥೆಯ ಬೋಯಿಂಗ್ 747-400 ವಿಮಾನಕ್ಕೆ ಅಳವಡಿಸಲಾಗಿತ್ತು. ಆ ಬಳಿಕ ಬೇರೆ ಬೇರೆ ವಿಮಾನಯಾನ ಸಂಸ್ಥೆಗಳೂ ಇದನ್ನು ಅನುಸರಿಸಿದವು.

ಪೋಕೆಮಾನ್ ಲೈವರಿಯನ್ನು ತಮ್ಮ ವಿಮಾನಗಳಿಗೆ ಅಳವಡಿಸಿಕೊಂಡ ಇತರ ವಿಮಾನಯಾನ ಸಂಸ್ಥೆಗಳು:

  • ಆಲ್ ನಿಪ್ಪಾನ್ ಏರ್‌ವೇಸ್ (ಎಎನ್ಎ)
  • ಸ್ಕೂಟ್
  • ಏರ್ ಏಷ್ಯಾ
  • ವರ್ಜಿನ್ ಆಸ್ಟ್ರೇಲಿಯಾ
  • ಹವಾಯನ್ ಏರ್‌ಲೈನ್ಸ್
  • ಸಿಂಗಾಪುರ್ ಏರ್‌ಲೈನ್ಸ್

ಇದನ್ನೂ ಓದಿ: ಭಾರತದಲ್ಲಿ ನಿರುದ್ಯೋಗಿ ತಲೆಮಾರನ್ನೇ ಸೃಷ್ಟಿಸಿದ ಪ್ರಯೋಜನವಿಲ್ಲದ ಪದವಿಗಳು!

ಈ ಲೈವರಿಗಳು ಸಾಮಾನ್ಯವಾಗಿ ಪ್ರಮುಖ ಪೋಕೆಮಾನ್ ಪಾತ್ರಗಳಾದ ಪಿಕಾಚು, ಚಾರಿಜಾ಼ರ್ಡ್, ಹಾಗೂ ಈವೀ ಗಳನ್ನು ಹೊಂದಿರುತ್ತದೆ. ಇವುಗಳನ್ನು ಬೋಯಿಂಗ್ 747, ಬೋಯಿಂಗ್ 777, ಹಾಗೂ ಏರ್‌ಬಸ್ ಎ380 ವಿಮಾನಗಳಲ್ಲಿ ಕಾಣಬಹುದು.

ರೇಕ್ವಾಜಾ಼ ಎನ್ನುವುದು ರೇ ಮತ್ತು ಕ್ವಾಸರ್ ಎಂಬ ಎರಡು ಪದಗಳ ಸಂಯೋಗದಿಂದ ಉಂಟಾದ ಪದವಾಗಿದೆ. ರೇ ಎನ್ನುವುದು ಬೆಳಕಿನ ಕಿರಣ ಎಂಬ ಅರ್ಥ ನೀಡಿದರೆ, ಕ್ವಾಸರ್ ಎಂಬುದು ಖಗೋಳಶಾಸ್ತ್ರದಲ್ಲಿ ಅತ್ಯಂತ ಪ್ರಕಾಶಮಾನವಾದ, ಅತ್ಯಂತ ದೂರದಲ್ಲಿರುವ ವಸ್ತುವಾಗಿದೆ. ರೇಕ್ವಾಜಾ಼ದ ವಿನ್ಯಾಸ ಜಪಾನಿನ ಡ್ರ್ಯಾಗನ್ ಆಧಾರಿತವಾಗಿದ್ದು, ಅದು ಉದ್ದನೆಯ, ಹಾವಿನಂತಹ, ಹಸಿರು ಬಣ್ಣದ ದೇಹವನ್ನು ಹೊಂದಿದೆ. ಅದರ ಬೆನ್ನು ಮತ್ತು ತಲೆಯಲ್ಲಿ ಕೆಂಪು ಬಣ್ಣದ ರೆಕ್ಕೆಯಂತಹ ರಚನೆಗಳಿದ್ದರೆ, ಡ್ರ್ಯಾಗನ್‌ಗೆ ಮೂರು ಬೆಳ್ಳಗಿನ ಬೆರಳುಗಳಿರುವ ಎರಡು ಕೈಗಳಿವೆ. ರೇಕ್ವಾಜಾ಼ ಎನ್ನುವುದು ಅತ್ಯಂತ ಶಕ್ತಿಶಾಲಿ, ಡ್ರ್ಯಾಗನ್ ಅಥವಾ ಹಾರಾಡುವ ಪೋಕೆಮಾನ್ ಆಗಿದ್ದು, ಇದು ಪೋಕೆಮಾನ್ ಫ್ರಾಂಚೈಸಿಯ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

ಪಿಕಾಚು ಜೆಟ್‌ಎನ್ಎಚ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಒಂದು ಮೋಜಿನ, ವಿಶಿಷ್ಟ ಹಾರಾಟದ ಅನುಭವ ಸಿಗಲಿದೆ. ವಿಮಾನವನ್ನು ಪಿಕಾಚುವಿನಂತೆ ಸಿಂಗರಿಸಲಾಗಿದ್ದು, ಪ್ರಯಾಣಿಕರಿಗೆ ಪಿಕಾಚು ಟ್ಯಾಗ್, ಸ್ಟಿಕರ್ಸ್ ಹಾಗೂ ಬೋರ್ಡಿಂಗ್ ಪಾಸ್‌ಗಳು ಲಭಿಸಲಿವೆ. ಎಎನ್ಎ ಈ ವಿಶಿಷ್ಟ ವಿಮಾನದ ಮೂಲಕ ಪ್ರಯಾಣವನ್ನು ಹೆಚ್ಚು ಸಂತೋಷದಾಯಕ ಮತ್ತು ಆಕರ್ಷಕವಾಗಿಸಲು ಪ್ರಯತ್ನಿಸುತ್ತಿದೆ. ಪಿಕಾಚು ಎನ್ನುವುದು ಹಳದಿ ಬಣ್ಣದ, ಎಲೆಕ್ಟ್ರಿಕ್ ಮೌಸ್ ಪೋಕೆಮಾನ್ ಆಗಿದ್ದು, ಕಿವಿಯಲ್ಲಿ ಕಪ್ಪು ತುದಿಗಳನ್ನು, ಕೆನ್ನೆಗಳಲ್ಲಿ ಕೆಂಪು ಇಲೆಕ್ಟ್ರಿಕಲ್ ಪೌಚ್‌ಗಳು ಮತ್ತು ಲೈಟ್ನಿಂಗ್ ಬೋಲ್ಟ್ ಮಾದರಿಯ ಬಾಲವನ್ನು ಹೊಂದಿದೆ.

ಎಎನ್ಎ ಹಾಗೂ ಪೋಕೆಮಾನ್ ಸಂಸ್ಥೆಗಳ ಪ್ರಧಾನ ಕಚೇರಿಗಳು ಜಪಾನಿನ ಮಿನಾಟೋ, ಟೋಕಿಯೋದಲ್ಲಿನ ರೊಪ್ಪೋಂಗಿ ಹಿಲ್ಸ್ ಮೋರಿ ಟವರ್‌ನಲ್ಲಿದ್ದು, ಎರಡೂ ಸಂಸ್ಥೆಗಳು ಸಹಯೋಗ ಹೊಂದಿ, ಪಿಕಾಚು ಜೆಟ್ ಎನ್ಎಚ್ ಅನ್ನು ಭಾರತಕ್ಕೆ ತರಲು ಉತ್ಸುಕವಾಗಿವೆ. ಪ್ರಯಾಣಿಕರೂ ಒಂದು ಅತ್ಯುತ್ತಮ ಗುಣಮಟ್ಟದ, ವಿಶಿಷ್ಟ ಹಾರಾಟದ ಅನುಭವವನ್ನು ನಿರೀಕ್ಷಿಸಬಹುದಾಗಿದೆ. ಈ ಪ್ರಯಾಣವನ್ನು ಲಿಮಿಟೆಡ್ ಎಡಿಷನ್ ಪೋಕೆಮಾನ್ ಮರ್ಚಂಡೈಸ್‌ಗಳು ಇನ್ನಷ್ಟು ಸೊಗಸಾಗಿಸಲಿವೆ.

ಇದನ್ನೂ ಓದಿ: ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?

ಪೋಕೆಮಾನ್ ಥೀಮಿನ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲು, ಎಎನ್ಎ ಒಂದು ವಿಶೇಷ ಬೋರ್ಡಿಂಗ್ ಸಂಗೀತ ನಿರ್ಮಿಸಿದೆ. ಇದು ಪ್ರಯಾಣಿಕರನ್ನು ಪೋಕೆಮಾನ್ ಜಗತ್ತಿಗೆ ಕರೆದೊಯ್ಯಲಿದೆ. ಪ್ರಯಾಣಿಕರು ವಿಮಾನಕ್ಕೆ ಏರುತ್ತಿರುವ ಹಾಗೇ ಅವರನ್ನು ಲವಲವಿಕೆ ಸಂಗೀತ ಹಾಗೂ ಚಿರಪರಿಚಿತ ಪೋಕೆಮಾನ್ ಧ್ವನಿಗಳು ಸ್ವಾಗತಿಸಲಿವೆ. ಈ ಸಂಗೀತ ಪ್ರಯಾಣಿಕರಿಗೆ ವಿಶ್ರಮಿಸಲು ಮತ್ತು ಪ್ರಯಾಣವನ್ನು ಆನಂದಿಸಲು ನೆರವಾಗಲಿದೆ. ಅದರೊಡನೆ, ಪ್ರಯಾಣಿಕರಿಗೆ ಪೋಕೆಮಾನ್ ಫ್ರಾಂಚೈಸ್ ನೀಡುವ ಖುಷಿ ಮತ್ತು ಉತ್ಸಾಹವನ್ನು ನೆನಪಿಸಲಿದೆ.

ಎಎನ್ಎಯ ನೂತನ ಪಿಕಾಚು ಜೆಟ್ ಪ್ರಯಾಣಿಕರಿಗೆ ಸ್ಮರಣೀಯ ಹಾರಾಟದ ಅನುಭವ ನೀಡುವಲ್ಲಿನ ಸಂಸ್ಥೆಯ ಬದ್ಧತೆಯನ್ನು ಸಾಬೀತುಪಡಿಸುತ್ತದೆ. ಪೋಕೆಮಾನ್ ಸಂಸ್ಥೆಯೊಡನೆ ಸಹಯೋಗ ಹೊಂದುವ ಮೂಲಕ ಎಎನ್ಎ ಪೋಕೆಮಾನ್ ಜಗತ್ತಿನ ಪಾತ್ರಗಳನ್ನು ಜೀವಂತಗೊಳಿಸಿದ್ದು, ಪ್ರಯಾಣಿಕರಿಗೆ ಅತ್ಯಂತ ವಿಶಿಷ್ಟವಾದ ಹಾರಾಟದ ಅನುಭವವನ್ನು ಒದಗಿಸುತ್ತದೆ.

ಇದನ್ನೂ ಓದಿ: ಸೋರಿಕೆಯಾದ ಅಮೆರಿಕದ ದಾಖಲೆಗಳಿಂದ ಹಲವು ದೇಶಗಳಿಗೆ ಕಳವಳ: ಬೇಹುಗಾರಿಕೆ ಮೇಲೆ ಗಂಭೀರ ಪರಿಣಾಮ..?

ಸಾಮಾನ್ಯ ಪ್ರಯಾಣಿಕರು ಮತ್ತು ಪೋಕೆಮಾನ್ ಅಭಿಮಾನಿಗಳು ಪೋಕೆಮಾನ್ ಮ್ಯಾಜಿಕ್ ಜೊತೆಗೆ ಹಾರಾಟ ನಡೆಸುವ ಅನುಭವ ಹೊಂದಬಹುದಾಗಿದೆ. ಪಿಕಾಚು ಜೆಟ್ ಎನ್ಎಚ್ ಪೋಕೆಮಾನ್ ಪಾತ್ರಗಳಿಂದ ಅಲಂಕೃತವಾಗಿದ್ದು, ಪ್ರಯಾಣಿಕರಿಗೆ ಪೋಕೆಮಾನ್ ಥೀಮಿನ ವಿವಿಧ ಸೇವೆಗಳನ್ನು ಒದಗಿಸುತ್ತದೆ. ಇದೊಂದು ಎಲ್ಲರನ್ನೂ ಒಳಗೊಳ್ಳುವ ಅನುಭವವಾಗಿದ್ದು, ವಯಸ್ಸಿನ ಅಂತರವಿಲ್ಲದೆ ಎಲ್ಲ ಪ್ರಯಾಣಿಕರೂ ಇದನ್ನು ಆನಂದಿಸಲಿದ್ದಾರೆ.

ಪಿಕಾಚು ಜೆಟ್ ಎನ್ಎಚ್ (ಬೋಯಿಂಗ್ 787-9) ಜೂನ್ 4ರಿಂದ ಅಕ್ಟೋಬರ್ 28, 2023 ತನಕ ಹಾರಾಟ ನಡೆಸಲಿದೆ. ಇದರ ಹಾರಾಟ ಮಾರ್ಗಗಳು ಬದಲಾಗಬಹುದಾಗಿದ್ದು, ಜಗತ್ತಿನಾದ್ಯಂತ ಇದು ಸಂಚರಿಸಲಿದೆ. ಕಾರ್ಯಾಚರಣಾ ಕಾರಣಗಳಿಗಾಗಿ ವಿಮಾನದ ಪಥ ಬದಲಾವಣೆಗಳು ಉಂಟಾಗಬಹುದು.

ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

• ಹನೆಡಾ - ಡೆಲ್ಲಿ (ಎನ್ಎಚ್837/ಎನ್ಎಚ್838)

• ಹನೆಡಾ - ಬ್ಯಾಂಕಾಕ್ (ಎನ್ಎಚ್847/ಎನ್ಎಚ್850/ಎನ್ಎಚ್849/ಎನ್ಎಚ್848)

• ಹನೆಡಾ - ಸಿಂಗಾಪುರ (ಎನ್ಎಚ್841/ಎನ್ಎಚ್844/ಎನ್ಎಚ್843/ಎನ್ಎಚ್842)

• ಹನೆಡಾ - ಜಕಾರ್ತಾ (ಎನ್ಎಚ್855/ಎನ್ಎಚ್856)

• ಹನೆಡಾ - ಮನಿಲಾ (ಎನ್ಎಚ್869/ಎನ್ಎಚ್870)

• ಹನೆಡಾ - ಹೋ ಚಿ ಮಿನ್ ಸಿಟಿ (ಎನ್ಎಚ್891/ಎನ್ಎಚ್892)

• ಹನೆಡಾ - ಸಿಡ್ನಿ (ಎನ್ಎಚ್879/ಎನ್ಎಚ್880/ಎನ್ಎಚ್889/ಎನ್ಎಚ್890)

• ಹನೆಡಾ - ವ್ಯಾಂಕೂವರ್ (ಎನ್ಎಚ್116/ಎನ್ಎಚ್115)

• ಹನೆಡಾ - ಹೊನೊಲುಲು (ಎನ್ಎಚ್186/ಎನ್ಎಚ್185)

ಈ ಮಧ್ಯೆ, ಎಎನ್ಎ ತನ್ನ ಜಾಲವನ್ನು ವಿಸ್ತರಿಸುತ್ತಿದ್ದು, ದೆಹಲಿಯಿಂದ ಪ್ರತಿದಿನವೂ ಟೋಕಿಯೋಗೆ (ಹನೆಡಾ) ಹಾರಾಟ ನಡೆಸಲಿದೆ. ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಅತ್ಯುತ್ತಮ ಜಪಾನಿ ಆತಿಥ್ಯವನ್ನು ಹಾರಾಟದ ವೇಳೆಯಲ್ಲೂ ಒದಗಿಸುತ್ತಾ, ಜಪಾನಿನ ವಿವಿಧ ಪ್ರದೇಶಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಉತ್ತೇಜನ ನೀಡಲಿದೆ. ಪ್ರಯಾಣಿಕರು ತಮ್ಮ ಸುಖಕರ ಪ್ರಯಾಣಕ್ಕಾಗಿ ವಿಮಾನ ಹಾರಾಟ ಆರಂಭಗೊಳ್ಳುವ 24 ಗಂಟೆಗಳ ಮೊದಲೇ ವಿಶಾಲ ಶ್ರೇಣಿಯ ವಿಶೇಷ ಭೋಜನವನ್ನು ವಿಮಾನದಲ್ಲಿ ಕಾಯ್ದಿರಿಸಬಹುದು.

ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿರೋ ಭಿಂದ್ರನ್‌ವಾಲೆ 2.0 ಅಮೃತ್ ಪಾಲ್ ಸಿಂಗ್ ಏಳು ಬೀಳು ಹೀಗಿದೆ..

Latest Videos
Follow Us:
Download App:
  • android
  • ios