Asianet Suvarna News Asianet Suvarna News

ಭಾರತದಲ್ಲಿ ನಿರುದ್ಯೋಗಿ ತಲೆಮಾರನ್ನೇ ಸೃಷ್ಟಿಸಿದ ಪ್ರಯೋಜನವಿಲ್ಲದ ಪದವಿಗಳು!

ಭಾರತದಲ್ಲಿ ಅಪಾರ ಸಂಖ್ಯೆಯ ಯುವಕರು ತಮ್ಮ ವೃತ್ತಿಜೀವನದ ಆರಂಭಕ್ಕಾಗಿ, ಅಭಿವೃದ್ಧಿಗಾಗಿ ಪರಿತಪಿಸುತ್ತಿದ್ದು, ತಮ್ಮ ಕನಸಿನ ಉದ್ಯೋಗವನ್ನು ಪಡೆಯಲು 2 - 3 ಪದವಿಗಳನ್ನು ಪಡೆಯಲು ಪ್ರಯತ್ನ ಪಡುತ್ತಿದ್ದಾರೆ. ಅದಕ್ಕಾಗಿ ಅವರು ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿ, ಸಾರ್ವಜನಿಕ ಸ್ಥಳಗಳ ಸಣ್ಣ ಕೊಠಡಿಗಳಲ್ಲೂ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿರುವ ಕಾಲೇಜುಗಳೆಡೆಗೆ ಆಕರ್ಷಿತರಾಗುತ್ತಿದ್ದಾರೆ.

useless degrees have created generations of unemployment in india ash
Author
First Published Apr 22, 2023, 11:55 AM IST

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನವದೆಹಲಿ (ಏಪ್ರಿಲ್ 22, 2023): ಭಾರತದ 117 ಬಿಲಿಯನ್ ಡಾಲರ್ ಮೌಲ್ಯದ ಶಿಕ್ಷಣ ಮಾರುಕಟ್ಟೆ ದಿನೇ ದಿನೇ ವಿಸ್ತಿರಿಸುತ್ತಿದೆ. ಹೊಸ ಹೊಸ ವಿಶ್ವವಿದ್ಯಾಲಯಗಳು ಶರವೇಗದಲ್ಲಿ ತೆರೆಯುತ್ತಿವೆ. ಆದರೆ, ಜಗತ್ತಿನಾದ್ಯಂತ ವಿದ್ಯಾರ್ಥಿಗಳು ಪದವಿಯ ಮೌಲ್ಯ ಮತ್ತು ಅದರ ಖರ್ಚಿನ ಕುರಿತು ಚರ್ಚೆಗಳನ್ನು ನಡೆಸುತ್ತಿದ್ದರೆ, ಭಾರತದಲ್ಲಿ ಪ್ರತಿವರ್ಷವೂ ಯಾವುದೇ ಸ್ಪರ್ಧಾತ್ಮಕ ಗುಣ ಹೊಂದಿರದ ಸಾವಿರಾರು ಪದವೀಧರರು ತಯಾರಾಗುತ್ತಿದ್ದಾರೆ. ಇದು ಭಾರತದ ಆರ್ಥಿಕತೆಯನ್ನು ಒಂದು ಗಂಭೀರ ಪರಿಸ್ಥಿತಿಯಲ್ಲಿ ನಿಲ್ಲಿಸಿದೆ.

ಭಾರತದಲ್ಲಿ ಅಪಾರ ಸಂಖ್ಯೆಯ ಯುವಕರು ತಮ್ಮ ವೃತ್ತಿಜೀವನದ ಆರಂಭಕ್ಕಾಗಿ, ಅಭಿವೃದ್ಧಿಗಾಗಿ ಪರಿತಪಿಸುತ್ತಿದ್ದು, ತಮ್ಮ ಕನಸಿನ ಉದ್ಯೋಗವನ್ನು ಪಡೆಯಲು 2 - 3 ಪದವಿಗಳನ್ನು ಪಡೆಯಲು ಪ್ರಯತ್ನ ಪಡುತ್ತಿದ್ದಾರೆ. ಅದಕ್ಕಾಗಿ ಅವರು ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿ, ಸಾರ್ವಜನಿಕ ಸ್ಥಳಗಳ ಸಣ್ಣ ಕೊಠಡಿಗಳಲ್ಲೂ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿರುವ ಕಾಲೇಜುಗಳೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಉದ್ಯೋಗ ಖಾತರಿ ಭರವಸೆ ನೀಡುವ ಶಿಕ್ಷಣ ಸಂಸ್ಥೆಗಳ ದೊಡ್ಡ ದೊಡ್ಡ ಫಲಕಗಳು ಹೆದ್ದಾರಿಗಳ ಎರಡೂ ಬದಿಗಳಲ್ಲಿ ಕಂಡುಬರುತ್ತಿವೆ.

ಇದನ್ನು ಓದಿ: ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

ಇದೊಂದು ವಿಚಿತ್ರ ಸನ್ನಿವೇಶವಾಗಿದೆ. ಭಾರತದ ಅತ್ಯುತ್ತಮ ತಂತ್ರಜ್ಞಾನ ಮತ್ತು ನಿರ್ವಹಣಾ ಶಿಕ್ಷಣ ಸಂಸ್ಥೆಗಳು ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆಗಳ ನಾಯಕತ್ವ ವಹಿಸಿರುವ, ಆಲ್ಫಬೆಟ್‌ ಇಂಕ್ (ಗೂಗಲ್‌ನ ಪೋಷಕ ಸಂಸ್ಥೆ) ಮುಖ್ಯಸ್ಥ ಸುಂದರ್ ಪಿಚಾಯ್, ಮೈಕ್ರೋಸಾಫ್ಟ್ ಕಾರ್ಪ್‌ನ ಸತ್ಯ ನಾಡೆಲ್ಲ ಅವರಂತಹ ಸಿಇಓಗಳನ್ನು ಸೃಷ್ಟಿಸಿವೆ. ಆದರೆ ಪಾಠ ಮಾಡಲು ಅಗತ್ಯ ತರಬೇತಿ ಕೊರತೆ ಹೊಂದಿರುವ ಉಪನ್ಯಾಸಕರು, ಯಾವುದೇ ಇಂಟರ್ನ್‌ಶಿಪ್ ಹಾಗೂ ಉದ್ಯೋಗ ಅವಕಾಶಗಳಿಲ್ಲದ ಹಳೆಯದಾಗಿರುವ ಪಠ್ಯ ವಿಷಯಗಳನ್ನು ಹೊಂದಿರುವ ಸಾವಿರಾರು ಸಣ್ಣಪುಟ್ಟ ಖಾಸಗಿ ಕಾಲೇಜುಗಳು ತಲೆಯೆತ್ತಿವೆ ಎಂದು ವರದಿಗಳು ಹೇಳುತ್ತವೆ.

ಭೋಪಾಲ್ - ಗಮನಿಸಬೇಕಾದ ಉದಾಹರಣೆ

2.6 ಮಿಲಿಯನ್ ಜನಸಂಖ್ಯೆ ಹೊಂದಿರುವ, ಮಧ್ಯ ಭಾರತದ ನಗರವಾಗಿರುವ ಭೋಪಾಲ್‌ನಂತಹ ನಗರಗಳೂ ಭಾರತದಲ್ಲಿನ ಶಿಕ್ಷಣದ ಅಭಿವೃದ್ಧಿಯಲ್ಲಿನ ಸಂಕೀರ್ಣತೆಗಳನ್ನು ತೋರಿಸುತ್ತವೆ. ಖಾಸಗಿ ಸಂಸ್ಥೆಗಳು ದೊಡ್ಡ ದೊಡ್ಡ ಜಾಹೀರಾತು ಫಲಕಗಳನ್ನು ಹಾಕಿ, ಆ ಮೂಲಕ ಯುವ ತಲೆಮಾರಿನ ಜನರನ್ನು ನಮ್ಮ ಪದವಿ ಪಡೆದರೆ ಉದ್ಯೋಗಾವಕಾಶಗಳನ್ನು ಒದಗಿಸುತ್ತೇವೆ ಎಂದು ಆಸೆಪಡಿಸುತ್ತವೆ. ಆದರೆ ಇಂತಹ ಹಲವು ಸಂಸ್ಥೆಗಳು ಸುಳ್ಳುಗಾರರು ಎಂದು ಸಾಬೀತಾಗಿದೆ. ಇಂತಹ ಒಂದು ಜಾಹೀರಾತಿನಲ್ಲಿ, "ದೈನಂದಿನ ತರಗತಿಗಳು ಮತ್ತು ಉತ್ತಮ ಉದ್ಯೋಗಾವಕಾಶಗಳು. ಇದಕ್ಕಿಂತ ಹೆಚ್ಚೇನಾದರೂ ಹೇಳಬೇಕೇ?" ಎಂದು ಪ್ರಶ್ನಿಸಲಾಗಿದೆ.

ಇದನ್ನೂ ಓದಿ: ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?

ಇನ್ನು 2013ರಲ್ಲಿ ಮಧ್ಯ ಪ್ರದೇಶದಲ್ಲಿ ನಡೆದ ಅತಿದೊಡ್ಡ ಪರೀಕ್ಷೆ ದಾಖಲಾತಿ ಉದ್ಯೋಗದ ವಂಚನೆಯನ್ನು ಯಾರು ತಾನೆ ಮರೆಯಲು ಸಾಧ್ಯ? ಅದು ಮಧ್ಯ ಪ್ರದೇಶ್ ಪ್ರೊಫೆಶನಲ್ ಎಕ್ಸಾಮಿನೇಶನ್ ಬೋರ್ಡ್ (ಎಂಪಿಪಿಇಬಿ) ಅಥವಾ ವ್ಯಾಪಮ್ (ವ್ಯವಸಾಯಿಕ್ ಪರೀಕ್ಷಾ ಮಂಡಲ್) ಅನ್ನೂ ಒಳಗೊಂಡಿತ್ತು. ಆ ಬೃಹತ್ ಹಗರಣ ಜುಲೈ 6ರ ರಾತ್ರಿ ಇಂದೋರ್ ಪೊಲೀಸರು ಬೇರೆ ಬೇರೆ ಹೊಟೆಲ್‌ಗಳಿಂದ 20 ಜನರನ್ನು (ಅದರಲ್ಲಿ 17 ಜನ ಉತ್ತರ ಪ್ರದೇಶದವರು) ಬಂಧಿಸಿದಾಗ ಬೆಳಕಿಗೆ ಬಂತು. ಅವರು ಜುಲೈ 7ರಂದು ನಡೆಯಲಿದ್ದ ಪಿಎಂಟಿ ಪರೀಕ್ಷೆಯನ್ನು ಸ್ಥಳೀಯ ಅಭ್ಯರ್ಥಿಗಳ ಹೆಸರಿನಲ್ಲಿ ಬರೆಯಲು ಬಂದಿದ್ದರು. ಈ ಹಗರಣ 1990ರ ದಶಕದಿಂದಲೂ ಚಾಲ್ತಿಯಲ್ಲಿದ್ದು, ರಾಜಕಾರಣಿಗಳು, ಹಿರಿಯ - ಕಿರಿಯ ಅಧಿಕಾರಿಗಳು, ಉದ್ಯಮಿಗಳು ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದ್ದರು.

ತನ್ಮಯ್ ಮಂಡಾಲ್ ಎಂಬ ಭೋಪಾಲ್‌ನ 25 ವರ್ಷದ ಯುವಕ ಸಿವಿಲ್ ಇಂಜಿನಿಯರಿಂಗ್ ಪದವಿಗಾಗಿ 4,000 ಡಾಲರ್ ಮೊತ್ತವನ್ನು ಖರ್ಚು ಮಾಡಿದ್ದ. ಅವನಿಗೆ ತನ್ನ ಪದವಿಯಿಂದ ಉತ್ತಮ ಉದ್ಯೋಗ ಮತ್ತು ಜೀವನಮಟ್ಟ ಲಭಿಸುತ್ತದೆ ಎಂಬ ನಂಬಿಕೆಯಿತ್ತು. ತಿಂಗಳಿಗೆ 420 ಡಾಲರ್ ಆದಾಯ ಹೊಂದಿದ್ದ ಅವನ ಕುಟುಂಬಕ್ಕೆ ಅದು ದೊಡ್ಡ ಮೊತ್ತವೇ ಆಗಿದ್ದರೂ, ಅದೂ ಅವನನ್ನು ಹಿಂಜರಿಯುವಂತೆ ಮಾಡಿರಲಿಲ್ಲ. 

ಇದನ್ನೂ ಓದಿ: ಸೋರಿಕೆಯಾದ ಅಮೆರಿಕದ ದಾಖಲೆಗಳಿಂದ ಹಲವು ದೇಶಗಳಿಗೆ ಕಳವಳ: ಬೇಹುಗಾರಿಕೆ ಮೇಲೆ ಗಂಭೀರ ಪರಿಣಾಮ..?

ಮಂಡಾಲ್ ತಾನು ಎಲ್ಲ ಪ್ರಯತ್ಬಗಳನ್ನು ನಡೆಸಿದರೂ, ಸರಿಯಾಗಿ ನಿರ್ಮಾಣ ಕಾರ್ಯಗಳ ಕುರಿತು ಯಾವುದೇ ಜ್ಞಾನ ಹೊಂದಿರದ ತನ್ನ ಶಿಕ್ಷಕರಿಂದಲೂ ಏನನ್ನೂ ಕಲಿಯಲು ಸಾಧ್ಯವಾಗಲಿಲ್ಲ ಎನ್ನುತ್ತಾನೆ. ಅವನಿಗೆ ಉದ್ಯೋಗ ಸಂದರ್ಶನದ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲು ಸಾಧ್ಯವಾಗಿರಲಿಲ್ಲ. ಅವನು ಕಳೆದ ಮೂರು ವರ್ಷಗಳಿಂದ ನಿರುದ್ಯೋಗಿಯಾಗಿಯೇ ಉಳಿದಿದ್ದಾನೆ.

"ನಾನು ಯಾವುದಾದರೂ ಒಳ್ಳೆಯ ಕಾಲೇಜಿನಲ್ಲಿ ಓದಬೇಕಿತ್ತು ಎಂದು ಈಗಲೂ ಅಂದುಕೊಳ್ಳುತ್ತೇನೆ. ನನ್ನ ಹಲವಾರು ಸ್ನೇಹಿತರೂ ಸಹ ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ" ಎನ್ನುವ ಮಂಡಾಲ್, ಇನ್ನೂ ಉದ್ಯೋಗ ಹುಡುಕುತ್ತಿದ್ದಾನೆ.

ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

ಭೋಪಾಲ್‌ನಲ್ಲಿ ನಿರ್ವಹಣೆ, ಎಂಜಿನಿಯರಿಂಗ್ ಹಾಗೂ ನಾಗರಿಕ ಸೇವಾ ತರಬೇತಿ ಒದಗಿಸುವುದು ಒಂದು ಬೃಹತ್ ಉದ್ಯಮವಾಗಿದೆ. ವಿದ್ಯಾರ್ಥಿಗಳು ಅವರ ಮಾಮೂಲಿ ಪದವಿಗಳಿಂದ ಸೂಕ್ತ ಉದ್ಯೋಗಾವಕಾಶಗಳು ಸಿಗದೇ ಹೋದಾಗ, ಉತ್ತಮ ಉದ್ಯೋಗಾವಕಾಶಗಳಿಗಾಗಿ ಇಂತಹ ತರಬೇತಿಗಳಿಗೆ ದಾಖಲಾದರು. ಅವರು ಇದರಿಂದ ಕೌಶಲಗಳು ವೃದ್ಧಿಯಾಗಿ, ಉತ್ತಮ ಉದ್ಯೋಗಾವಕಾಶ ಲಭಿಸಬಹುದು ಎಂದುಕೊಂಡಿದ್ದರು.

ಬಂಗಾಳದ ಮಹಾ ಹಗರಣ

ಕಳೆದ ವರ್ಷ ಜುಲೈ 23ರಂದು, ಜಾರಿ ನಿರ್ದೇಶನಾಲಯ (ಇಡಿ) ಪಾರ್ಥ ಚಾಟರ್ಜಿ ಎಂಬ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಿತು. ಆತ ವೆಸ್ಟ್ ಬೆಂಗಾಲ್ ಸ್ಕೂಲ್ ಸರ್ವಿಸ್ ಕಮಿಷನ್ನಿನ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ಇತ್ತೀಚೆಗೆ, ಅಂದರೆ ಈ ವರ್ಷದ ಫೆಬ್ರವರಿ 10ರಂದು, ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಾದ ಅಭಿಜಿತ್ ಗಂಗೋಪಾಧ್ಯಾಯ್ ಅವರು ಶಾಲಾ ನೇಮಕಾತಿ ಹಗರಣದ ಅರ್ಜಿಗಳ ಆಧಾರದಲ್ಲಿ, ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1,911 ಗ್ರೂಪ್ ಡಿ ಉದ್ಯೋಗ ನೇಮಕಾತಿಗಳನ್ನು ರದ್ದುಗೊಳಿಸುವಂತೆ ಆದೇಶಿಸಿದರು. ತನಿಖೆಯಲ್ಲಿ ಅವರ ಆಪ್ಟಿಕಲ್ ಮಾರ್ಕ್ ರೆಕಗ್ನಿಶನ್ (ಒಎಂಆರ್) ಶೀಟ್‌ಗಳಲ್ಲಿ ಮಾರ್ಪಾಡುಗಳು ಕಂಡು ಬಂದಿದ್ದವು. ಕಲ್ಕತ್ತಾ ಹೈಕೋರ್ಟ್ ಇದಕ್ಕೆ ಸಂಬಂಧಿಸಿದಂತೆ 842 ಶಾಲಾ ಶಿಕ್ಷಕರನ್ನು ಮಾರ್ಚ್ 11ರ ವೇಳೆಗೆ ಅಮಾನತುಗೊಳಿಸುವಂತೆ ಆದೇಶಿಸಿತು. ಅನಧಿಕೃತ ನೇಮಕಾತಿಗಳಿಗೆ ಸಂಬಂಧಿಸಿದಂತೆ, ಮಾರ್ಚ್ 10ರಂದು ಹೈಕೋರ್ಟ್ ನೀಡಿದ ಆದೇಶವನ್ನೂ ಸೇರಿಸಿ, ಇಲ್ಲಿಯ ತನಕ ಒಟ್ಟು 3,623 ಜನರನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ 252 ಜನರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ಅಕ್ರಮವಾಗಿ ನೇಮಕಗೊಂಡಿದ್ದರು. 618 ಜನರು ಪ್ರೌಢಶಾಲಾ ಶಿಕ್ಷಕರಾಗಿದ್ದರೆ, 842 ಜನರು ಗ್ರೂಪ್ ಸಿ ಶಿಕ್ಷಕರು ಮತ್ತು 1,911 ಜನರು ಗ್ರೂಪ್ ಡಿ ನೌಕರರಾಗಿದ್ದರು.

ಉತ್ತಮ ಜೀವನದ ಕನಸು

ಭಾರತದಲ್ಲಿನ ಮಿಲಿಯನ್‌ಗಟ್ಟಲೆ ಯುವಕ ಯುವತಿಯರು ಇಷ್ಟೊಂದು ಕಡಿಮೆ ಅವಕಾಶಗಳಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಜೀವನ ಸಾಗಿಸುವ ಕನಸು ಕಾಣುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಉದ್ಯೋಗದ ಆಸೆ ತೋರಿಸುವುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಭಾರತದ ಮಧ್ಯಮ ವರ್ಗದ ಮತ್ತು ಕಡಿಮೆ ಆದಾಯದ ಯುವ ಜನತೆ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದಾಗ, ಯುವಕರು ಬೇರೆ ಬೇರೆ ಸಮರ್ಥನೆಗಳನ್ನು ನೀಡುತ್ತಾರೆ. ಅದರಲ್ಲಿ ಸಾಮಾಜಿಕ ಜೀವನ ಮಟ್ಟವನ್ನು ಅಭಿವೃದ್ಧಿ ಪಡಿಸುವುದು, ಮದುವೆಗೆ ಉತ್ತಮ ಸಂಗಾತಿಯನ್ನು ಪಡೆಯುವುದು, ಪದವಿ ಅಗತ್ಯವಿರುವ ಉದ್ಯೋಗ ಪಡೆಯಲು ಯತ್ನಿಸುವುದು ಸಹ ಸೇರಿವೆ.

ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

ಇಂಡಿಯಾ ಬ್ರ್ಯಾಂಡ್ ಈಕ್ವಿಟಿ ಫೌಂಡೇಶನ್ ಎಂಬ ಸರ್ಕಾರದ ಟ್ರಸ್ಟ್ ಪ್ರಕಾರ, 2020ರಲ್ಲಿ 117 ಬಿಲಿಯನ್ ಮೌಲ್ಯ ಹೊಂದಿರುವ ಶಿಕ್ಷಣ ಕ್ಷೇತ್ರ 2025ರ ವೇಳೆಗೆ 225 ಬಿಲಿಯನ್ ಡಾಲರ್ ತಲುಪಲಿದೆ. ಭಾರತದ ಸಾರ್ವಜನಿಕ ಶಿಕ್ಷಣ ವಲಯದ ವೆಚ್ಚ 2.9% ಜಿಡಿಪಿಯಲ್ಲಿ ಸ್ಥಿರವಾಗಿದೆ. ಇದು ಪ್ರಸ್ತುತ ಸರ್ಕಾರದ ಶಿಕ್ಷಣ ನೀತಿಯ 6% ಗುರಿಗಿಂತ ಕಡಿಮೆಯೇ ಆಗಿದೆ.

ದೊಡ್ಡ ಉದ್ಯಮಗಳೂ ಇದರಿಂದಾಗಿ ದೊಡ್ಡ ಸವಾಲುಗಳನ್ನು ಎದುರಿಸುತ್ತಿವೆ. ಮಾನವ ಸಂಪನ್ಮೂಲ ಸಂಸ್ಥೆ ಎಸ್ಎಚ್ಎಲ್ ವರದಿಯ ಪ್ರಕಾರ, ಸಾಫ್ಟ್‌ವೇರ್ ಆಧಾರಿತ ಸ್ಟಾರ್ಟಪ್‌ಗಳಲ್ಲಿ ಉದ್ಯೋಗ ಪಡೆಯುವ ಅರ್ಹತೆಯನ್ನು ಕೇವಲ 3.8% ಎಂಜಿನಿಯರ್‌ಗಳು ಮಾತ್ರವೇ ಹೊಂದಿದ್ದಾರೆ. ಇನ್ನು ಸಣ್ಣಪುಟ್ಟ ಸಂಸ್ಥೆಗಳು ಇಂದಿಗೂ ಹಳೆಯದಾಗಿರುವ ಪಠ್ಯಗಳನ್ನೇ ಬೋಧಿಸುತ್ತಿವೆ. ಅದರಲ್ಲಿ ಆಂತರಿಕ ಕಂಬಶನ್ ಇಂಜಿನ್‌ಗಳು ಸಹ ಸೇರಿವೆ. ಆದರೆ ಇಂದು ಉದ್ಯಮಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವಲಯದಲ್ಲಿ, ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ವಲಯಗಳಲ್ಲಿ ಉದ್ಯೋಗಿಗಳನ್ನು ಹೊಂದಲು ಪ್ರಯತ್ನಿಸುತ್ತಿವೆ. ಆದರೆ ವಿದ್ಯಾರ್ಥಿಗಳು ಓದುತ್ತಿರುವ ವಿಷಯ ಮತ್ತು ಉದ್ಯಮಗಳ ಅವಶ್ಯಕತೆಗಳು ಸಂಪೂರ್ಣ ಭಿನ್ನವಾಗಿವೆ!

ಇದನ್ನೂ ಓದಿ: ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂಡು ನಮನ

Follow Us:
Download App:
  • android
  • ios