ಎದ್ದು ನಡೆಯಲು ಕಷ್ಟವಾಗುತ್ತಿದ್ದಾಗ ಸ್ನಾನ ಮಾಡಿಸಿದ್ದೀರಿ, ಬಾತ್‌ರೂಮ್ ಕ್ಲೀನ್ ಮಾಡಿದ್ದೀರಿ; ನಟ ಶ್ರೀಮುರಳಿ ಪತ್ನಿ ಪೋಸ್ಟ್
ಶ್ರೀಮುರಳಿ ಕೈ ಹಿಡಿದು ಜೀವನದಲ್ಲಿ ಆಗಿರುವ ಪ್ರತಿಯೊಂದು ಬದಲಾವಣೆಗೂ ಧನ್ಯವಾದಗಳನ್ನು ತಿಳಿಸಿದ ಪತ್ನಿ. ಲವ್ ಆನಿವರ್ಸರಿ ದಿನ ಹಾಕಿದ ಪೋಸ್ಟ್ ವೈರಲ್....
ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಶ್ರೀಮುರಳಿ ಬೆಂಗಳೂರಿನ ಶೇಷಾದ್ರಿ ಪುರಂ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವಾಗ ವಿದ್ಯಾ ಎಂಬುವವರಿಗೆ ಪ್ರಪೋಸ್ ಮಾಡುತ್ತಾರೆ. 1999ರಲ್ಲಿ ಮುರಳಿ ಪ್ರಪೋಸ್ ಮಾಡಿದ್ದು, ಡಿಸೆಂಬರ್ 30, 2024ಕ್ಕೆ ವರ್ಷಗಳು ಕಳೆಯುತ್ತದೆ. ಈ ಖುಷಿಯಲ್ಲಿ ಪತ್ನಿ ವಿದ್ಯಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರೀತಿಯ ಪತಿ ಬಗ್ಗೆ ಹಂಚಿಕೊಂಡಿದ್ದಾರೆ.
'ಹ್ಯಾಪಿ 25ನೇ ವರ್ಷ ಕಂದಾ. 30 ಡಿಸೆಂಬರ್ 1999ರಿಂದ ನನ್ನನ್ನು ಪ್ರೀತಿಸುತ್ತಿರುವೆ ಎಂದು ಹೇಳುತ್ತಿರುವುದಕ್ಕೆ ಥ್ಯಾಂಕ್ಸ್. ಥ್ಯಾಂಕ್ ಯು ನನ್ನನ್ನು ಖುಷಿ ಪಡಿಸಿರುವುದಕ್ಕೆ, ಥ್ಯಾಂಕ್ ಯು ನನ್ನ ಮೇಲೆ ಯಾವುದೇ ದೊಡ್ಡ ಭಾರ ಹಾಕದೇ ಇರುವುದಕ್ಕೆ, ಥ್ಯಾಂಕ್ಸ್ ಯು ರಸ್ತೆ ದಾಟುವಾಟ ನನ್ನ ಕೈ ಹಿಡಿದು ನಡೆದಿರುವುದಕ್ಕೆ, ಥ್ಯಾಂಕ್ ಯು ನನ್ನ ಇಷ್ಟವಾದ ಚಿಕನ್ ಮತ್ತು ಕೇಕ್ ಕೊನೆ ಪೀಸ್ ಉಳಿಸಿರುವುದಕ್ಕೆ,ಥ್ಯಾಂಕ್ ಯು ಪ್ರತಿದಿನ ರಾತ್ರಿ ನನ್ನ ರಾತ್ರಿ ಸ್ಟ್ಯಾಂಡ್‌ನಲ್ಲಿ ನನ್ನ ನೀರಿನ ಬಾಟಲ್ ಇಡುವುದಕ್ಕೆ, ನನ್ನ ಔಷದಿಗಳನ್ನು ತೆಗೆದುಕೊಳ್ಳಲು ನೆನಪು ಮಾಡುವುದಕ್ಕೆ ಥ್ಯಾಂಕ್ ಯು, ನನ್ನ ಕೂದಲು ಕೆದರಿದಾಗ ಅದನ್ನು ಸರಿ ಮಾಡಿರುವುದಕ್ಕೆ ಥ್ಯಾಂಕ್ ಯು, ನನ್ನ ಕಷ್ಟಗಳಲ್ಲಿ ಜೊತೆಯಾಗಿರುವುದಕ್ಕೆ ಥ್ಯಾಂಕ್ ಯು, ಹೊಟ್ಟೆ ನೋವು ಬರುವಷ್ಟು ನಗಿಸುವುದಕ್ಕೆ ಥ್ಯಾಂಕ್ ಯು, ನಮ್ಮ ಜಗಳಗಳನ್ನು ಆದಷ್ಟು ಬೇಗ ನಿಲ್ಲಿಸುವುದಕ್ಕೆ ಥ್ಯಾಂಕ್ ಯು, ದೆವ್ವ ಸಿನಿಮಾ ನೋಡಿದ ದಿನ ರಾತ್ರಿ ಇಡೀ ನನ್ನ ಜೊತೆ ಎದ್ದಿರುವುದಕ್ಕೆ ಥ್ಯಾಂಕ್ ಯು, ನಾನು ಮೊದಲು ಬಂದು ಗೌರವಿಸುವುದನ್ನು ಹೇಳಿಕೊಟ್ಟೆ ಎಂದು ನಮ್ಮ ಮಕ್ಕಳಿಗೆ ಹೇಳುವುದಕ್ಕೆ ಥ್ಯಾಂಕ್ ಯು, ನನಗೆಂದು ನೀನು ಮಾಡುವ ಸಣ್ಣ ಪುಟ್ಟ ಕೆಲಸಗಳಿಗೆ ಥ್ಯಾಂಕ್ ಯು' ಎಂದು ವಿದ್ಯಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
'ತಾಯಿ ಮಕ್ಕಳನ್ನು ಪ್ರೀತಿಸುವಂತೆ ನನ್ನನ್ನು ಪ್ರೀತಿಸಿ ಮುದ್ದು ಮಾಡುವುದಕ್ಕೆ ಥ್ಯಾಂಕ್ ಯು. ನಾನು ಹುಷಾರಿಲ್ಲದೆ ಮಲಗಿದ್ದಾಗ ಯಾವುದೇ ನರ್ಸ್ ಇಟ್ಟಿಕೊಳ್ಳದೆ ನೀವೇ ನನ್ನನ್ನು ನೋಡಿಕೊಂಡಿರುವುದಕ್ಕೆ ಥ್ಯಾಂಕ್ ಯು. ನಡೆಯಲು ಕಷ್ಟ ಪಡುತ್ತಿದ್ದ ನನಗೆ ಸ್ನಾನ ಕೂಡ ಮಾಡಿಸಿರುವುದಕ್ಕೆ ಥ್ಯಾಂಕ್ ಯು, ನಾನು ಬಾತ್‌ರೂಮ್‌ಗೆ ಹೋಗಲು ಸಹಾಯ ಮಾಡುತ್ತಿದ್ರಿ ಅಲ್ಲದೆ ನನ್ನನ್ನು ಕ್ಲೀನ್ ಮಾಡುತ್ತಿದ್ರೆ....ಯಾವುದೇ ಮುಜುಗರವಿಲ್ಲದೆ ಇದನ್ನು ಹಂಚಿಕೊಳ್ಳುತ್ತಿರುವುದು ಯಾಕೆ ಅಂದರೆ ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಿಮ್ಮಂತ ಕೈಂಡ್, ನೈಸ್ ಆಂಡ್ ಲಕ್ಕಿ ವ್ಯಕ್ತಿಯನ್ನು ಪಡೆದಿರುವುದಕ್ಕೆ ಪುಣ್ಯ ಮಾಡಿರುವೆ' ಎಂದು ವಿದ್ಯಾ ಹೇಳಿದ್ದಾರೆ.
ಸರಳ ಸುಂದರಿ ಚೈತ್ರಾ ಕುಂದಾಪುರ; ಇದ್ಯಾವುದು ದುಬಾರಿ ಸೀರೆ ಅಲ್ವೇ ಅಲ್ಲ
'ಲ್ಯಾಂಡ್‌ಲೈನ್ ಫೋನ್, ಪತ್ರ ಬರೆಯುವುದು, ಟ್ರಂಕ್ ಕಾಲ್ ಮಾಡುವುದರಿಂದ ಹಿಡಿದು ವಾಟ್ಸಪ್ ಇಂಟರ್ನೆಟ್ ಕಾಲಕ್ಕೆ ಕಾಲಿಟ್ಟಿದ್ದೀವಿ. ಪ್ರೀತಿಯಲ್ಲಿ ಬಿದ್ದಾಗ ನಾವು ಟೀ-ನೇಜರ್‌ಗಳು ಆಗಿದ್ವಿ...ಈಗ ನೋಡಿ ನಮ್ಮನ್ನು. ಬೆಸ್ಟ್ ಲವ್ ಸ್ಟೋರಿ ಕೊಟ್ಟಿರುವುದಕ್ಕೆ ಥ್ಯಾಂಕ್ ಯು. ಐ ಲವ್ ಯು ಕಂದಾ' ಎಂದಿದ್ದಾರೆ.
ಅಬ್ಬಬ್ಬಾ! ಸೀತಾ ಹಾಕಿರೋ ಡೀಪ್ ಬ್ಲೌಸ್ ಡಿಸೈನ್ ನೋಡಿ ಫ್ಯಾನ್ಸ್ ಶಾಕ್