ಬಾತ್‌ರೂಮ್ ತೊಳೆದು 6 ತಿಂಗಳಾಗಿತ್ತು, ಕಸಗಡ್ಡಿ ಜಾಸ್ತಿ ಇತ್ತು; ವಿಜಯ್ ರಾಘವೇಂದ್ರ ಪರಿಸ್ಥಿತಿ ಕಂಡು ಕಣ್ಣೀರಿಟ್ಟ ಮುರಳಿ!
ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಣ್ಣ-ತಮ್ಮ. ಶಿವಣ್ಣ ಮಾಮನ ಎದುರು ಆಡಿದ ಗೇಮ್‌ನಲ್ಲಿ ಸತ್ಯ ಹೊರ ಬಂತು.....
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಿಕೆಡಿ ಕಾರ್ಯಕ್ರಮದಲ್ಲಿ ವಿಶೇಷ ಸಂಚಿಕೆಯಲ್ಲಿ ಶ್ರೀಮುರಳಿ ಎಂಟ್ರಿ ಕೊಟ್ಟಿದ್ದರು. ಈ ವೇದಿಯಲ್ಲಿ ಅಣ್ಣ ತಮ್ಮ ಒಟ್ಟಿಗೆ ಶಿವಣ್ಣ ಮುಂದೆ ಹಾಜರ್ ಆಗಿರುವ ಕಾರಣ ಅನುಶ್ರೀ ಫನ್ನಿ ಟಾಸ್ಕ್ ಆಯೋಜಿಸಿದ್ದರು. ಮುರಳಿ ಮತ್ತು ವಿಜಯ್ ಕೈಗೆ ಒಂದು ಬೋರ್ಡ್ ಕೊಟ್ಟಿದ್ದಾರೆ, ಒಂದು ಸೈಡ್ ಮುರಳಿ ಮುಖ ಮತ್ತೊಂದು ಸೈಡ್ ವಿಜಯ್ ಮುಖ ಕಾಣಿಸುತ್ತದೆ. ಅನುಶ್ರೀ ಕೇಳುವ ಪ್ರಶ್ನೆಗಳಿಗೆ ಯಾರು ಎಂದು ಉತ್ತರ ಕೊಡುವುದು ಬೋರ್ಡ್ ತೋರಿಸುವ ಮೂಲಕ. ಫೋಟೋ ತೋರಿಸಿ ಸುಮ್ಮನಾಗಬಾರದು ಕಾರಣ ಕೂಡ ಶಿವಣ್ಣನ ಮುಂದೆ ಇಡಬೇಕು ಈ ಚಾಲೆಂಜ್‌ನ ಒಪ್ಪಿಕೊಂಡು ಗೇಮ್ ಶುರು ಮಾಡುತ್ತಾರೆ.
ಪ್ರಶ್ನೆ: ಅಪ್ಪ ಅಮ್ಮ ಹತ್ರ ಚಿಕ್ಕ ವಯಸ್ಸಿನಲ್ಲಿ ಜಾಸ್ತಿ ಬೈಯಿಸಿಕೊಳ್ಳುತ್ತಿದ್ದವರು ಯಾರು?
ಇಬ್ಬರು ಇಲ್ಲಿ ಶ್ರೀಮುರಳಿ ಫೋಟೋ ತೋರಿಸಿದ್ದಾರೆ.
ವಿಜಯ್: ಮುರಳಿ ಮುದ್ದು ಜಾಸ್ತಿ ಜೊತೆಗೆ ಸ್ವಲ್ಪ ತರ್ಲೆನೂ ಜಾಸ್ತಿ. ನಾನು ಮಾಡಿದ ತಪ್ಪುಗಳಿಗೆ ಮುರಳಿಯನ್ನು ಸಿಲುಕಿಸುತ್ತಿದ್ದೆ
ಮುರಳಿ: ಶೂನಲ್ಲಿ ನಮ್ಮ ಅಪ್ಪಾಜಿ ಹೇಗ್ ಹೊಡೆದಿದ್ದರು ಅಂದ್ರೆ ಕಾಲಲ್ಲಿ ನನಗೆ ಪದಎಳೆದುಬಿಟ್ಟಿತ್ತು. ಹೊರಗಡೆ ಮಾತ್ರ ಶ್ರೀರಾಮನ ತರ ಕಾಣಿಸುತ್ತಾನೆ ಆದರೆ ಮನೆಯಲ್ಲಿ ತುಂಬಾ ಆಫ್ ಇಡುತ್ತಿದ್ದ ಶಿವಣ್ಣ ಮಾಮ. ಸರಿಯಾಗಿ ಹೊಡೆಯುತ್ತಿದ್ದೆ. ಆದರೆ ಖುಷಿ ಏನೆಂದರೆ ಏನೇ ಜಗಳ ಮಾಡಿದ್ದರೂ ಕೊನೆಯಲ್ಲಿ ಪ್ಯಾಂಪರ್ ಮಾಡಿ ಪ್ರೀತಿ ಕೊಡುತ್ತಾನೆ ಆಗ ಅಣ್ಣ ಅಣ್ಣಂತೆ ಇದ್ದು ನನಗೆ ಸಪೋರ್ಟ್ ಮಾಡುತ್ತಾನೆ.
ಬಾತ್ ಟಬ್‌ನಲ್ಲಿ ಕಾಲೆತ್ತಿ ಕುಳಿತ ಬಿಗ್ ಬಾಸ್ ಅನುಷಾ ರೈ; ಫೋಟೋ ವೈರಲ್!
ಪ್ರಶ್ನೆ: ಇಬ್ಬರಲ್ಲಿ ಯಾರು ತುಂಬಾ ಭಾವುಕರು/ ಎಮೋಷನಲ್ ವ್ಯಕ್ತಿ ಯಾರು?
ಇಬ್ಬರು ಮತ್ತೆ ಶ್ರೀಮುರಳಿ ಫೋಟೋವನ್ನು ತೋರಿಸಿದ್ದಾರೆ.
ಅನುಶ್ರೀ: ಅಯ್ಯೋ!! ನಾವು ಇಷ್ಟು ದಿನ ವಿಜಯ್ ರಾಘವೇಂದ್ರ ತುಂಬಾ ಎಮೋಷನಲ್ ವ್ಯಕ್ತಿ ಅಂದುಕೊಂಡಿದ್ವಿ...
ವಿಜಯ್: ಮುರಳಿಯನ್ನು ನಾನು ತುಂಬಾ ಸುಲಭವಾಗಿ ಟ್ರಿಗರ್ ಮಾಡುತ್ತಿದ್ದೆ ಅಥವಾ ರೇಗಿಸುತ್ತಿದ್ದೆ. ಬೇಗ ಎಮೋಷನಲ್ ಆಗಿಬಿಡುತ್ತಿದ್ದ. ನನ್ನ ವಿಚಾರದಲ್ಲಿ ತುಂಬಾನೇ ಸೆನ್ಸಿಟಿವ್ ವ್ಯಕ್ತಿ ಅನ್ನೋದನ್ನು ಬಹಳ ಹತ್ತಿರದಿಂದ ನೋಡಿಬಿಟ್ಟಿದ್ದೀನಿ. ಚೆನ್ನೈನಲ್ಲಿ ಆಕ್ಟಿಂಗ್ ಕೋರ್ಸ್ ಮಾಡುತ್ತಿರುವಾಗ ಬಾಡಿಗೆ ಮನೆಯಲ್ಲಿ ಇದ್ದೆ....ಕೋರ್ಸ್ ಮುಗಿದ ಮೇಲೆ ನನ್ನನ್ನು ವಾಪಸ್ ಕರೆದುಕೊಂಡು ಹೋಗಲು ಮುರಳಿ ಕೂಡ ಬಂದಿದ್ದ. ನಾನು ವಾಸವಿದ್ದ ಜಾಗವನ್ನು ನೋಡಿ ಗಳಗಳ ಅಳುತ್ತಿದ್ದಾನೆ. ಯಾಕೆ ಈ ಮನೆಯಲ್ಲಿ ಇರುವೆ...ಈ ಜಾಗದಲ್ಲಿ ಹೇಗ್ ಇದ್ಯಾ ಎಂದು ಕಣ್ಣೀರಿಟ್ಟಿದ್ದಾರೆ. ಆದರೆ ಮುರಳಿ ಬಾಂಬೆಗೆ ಹೋಗಿ ಪಟ್ಟಿರುವ ಕಷ್ಟ ನನಗಿಂತ ಜಾಸ್ತಿ ಆದರೆ ಯಾರೊಂದಿಗೂ ಹೇಳಿಕೊಂಡಿಲ್ಲ ಏಕೆಂದರೆ ನಾನು ಜೀವನದಲ್ಲಿ ದುಡಿಯಬೇಕು ಧೈರ್ಯವಾಗಿ ಇರಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಬಿಗ್ ಬಾಸ್ 1 ತುಂಬಾ ಇನೋಸೆಂಟ್ ಸೀಸನ್, ಟಿವಿ ನೋಡಿಲ್ಲ ಅಂದ್ರೆ ನನ್ನ ತಾಯಿಯ ದಿನ
ಮುರಳಿ: ನಮ್ಮ ಅಣ್ಣನನ್ನು ಆ ಜಾಗದಲ್ಲಿ ನೋಡಿ ತುಂಬಾ ಕಷ್ಟ ಆಯ್ತು...ಆ ಮನೆಯಲ್ಲಿ ಬಾತ್‌ರೂಮ್ ಕ್ಲೀನ್ ಮಾಡಿ 6 ತಿಂಗಳು ಆಗಿತ್ತು, ಕಸ ಕಡ್ಡಿ ತುಂಬಾ ಇತ್ತು ಇದನ್ನು ನೋಡಿ ಬೇಸರ ಆಗಿತ್ತು. ಮುಂಬೈನಲ್ಲಿ ನಾನು ಕೂಡ ತುಂಬಾ ಕಷ್ಟ ಪಟ್ಟಿದ್ದೀನಿ. ಹಠ, ಚಲ ಮತ್ತು ಸಾಧನೆ ಇಷ್ಟೇ ನಮ್ಮ ಗುರಿಯಾಗಿತ್ತು. ನನ್ನ ಸ್ಕೂಲ್ ದಿನಗಳು ಮತ್ತು ಕಾಲೇಜ್ ದಿನಗಳಲ್ಲಿ ತುಂಬಾ ಅಟ್ಯಾಚ್ ಆಗಿದ್ದುಅಪ್ಪು ಮಾಮನಿಗೆ, ಹಲವು ವಿಚಾರಗಳಲ್ಲಿ ಜೊತೆಗಿದ್ದರು ಹಲವು ವಿಚಾರಗಳಲ್ಲಿ ಸಪೋರ್ಟ್ ಮಾಡುತ್ತಿದ್ದರು. ಫ್ಯಾಮಿಲಿ ಆಗಿ ನಾವು ವಾರಕ್ಕೊಮ್ಮೆ ಸಿಗುತ್ತೀವೋ ತಿಂಗಳಿಗೊಮ್ಮೆ ಸಿಗುತ್ತೀವೋ ಅಥವಾ ವರ್ಷಕ್ಕೊಮ್ಮೆ ಸಿಗುತ್ತೀವೋ ಗೊತ್ತಿಲ್ಲ...ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಅಷ್ಟೇ ಪ್ರೀತಿ ಮತ್ತು ಗೌರವ ಇರುತ್ತದೆ.