ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಸ್ಪೋಟಿಸಿ ಓರ್ವ ಮಹಿಳೆ ಮತ್ತು ಮಗು ಮೃತಪಟ್ಟು ಓರ್ವ ಯುವತಿ ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ಬಾಗಲೂರು(ಮಾ.29): ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಸ್ಪೋಟಿಸಿ ಓರ್ವ ಮಹಿಳೆ ಮತ್ತು ಮಗು ಮೃತಪಟ್ಟು ಓರ್ವ ಯುವತಿ ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ಚಿರಂಜೀವಿ ಸರ್ಜಾ ಅಭಿನಯದ ರಣಂ ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಸ್ಪೋಟದ ರಭಸಕ್ಕೆ ದೇಹಗಳು ಛಿದ್ರ ಛಿದ್ರವಾಗಿವೆ.
ಇನ್ನು ಘಟನೆ ನಡೆಯುತ್ತಿದ್ದಂತೇ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿ ಚಿತ್ರತಂಡ ಸ್ಥಳದಿಂದ ಪರಾರಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
"
ಸುದ್ದಿ ತಿಳಿಯುತ್ತಿದ್ದಂತೇ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವ ರಣಂ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಚೇತನ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.
ಈ ಹಿಂದೆ ನಟ ದುನಿಯಾ ವಿಜಿ ಅಭಿನಯದ ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ಕೆರೆಯಲ್ಲಿ ಮುಳುಗಿ ಸಹ ನಟರಾದ ಉದಯ್ ಮತ್ತು ಅನಿಲ್ ದುರಂತ ಸಾವು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸುದ್ದಿಗಳನ್ನೂ ಓದಿ-
ವಿಡಿಯೋ) ಮಾಸ್ತಿಗುಡಿ ಸಿನಿಮಾ ಕ್ಕೈಮ್ಯಾಕ್ಸ್'ನಲ್ಲಿ ನಡೆದಿದ್ದೇನು..? ಉದಯ್ ಹಾಗೂ ಅನಿಲ್ ಸಾವಿಗೇ ಕಾರಣವೇನು..?(ವಿಡಿಯೋ) ಜೀವಂತವಾಗಿ ಮರಳಿದರೆ ಅನುಭವ ಹೇಳ್ತೀನಿ ಅಂದಿದ್ದ ಅನಿಲ್...!
ತಿಪ್ಪಗೊಂಡನಹಳ್ಳಿ ಕೆರೆ ನೀರಿನಲ್ಲಿ ರೋಬೋ ಕೈಗೆ ಸಿಕ್ಕ ಬಟ್ಟೆ ಮೃತ ನಟರದ್ದೇ?
ಪೊಲೀಸರ ವಶಕ್ಕೆ ನಿರ್ದೇಶಕ ನಾಗಶೇಖರ್
ಮಾಸ್ತಿಗುಡಿ ದುರಂತ: ಅನಿಲ್ ಶವವೂ ಪತ್ತೆ
ಮಾಸ್ತಿಗುಡಿ ಚಿತ್ರಕ್ಕೆ ಕಾಡುತ್ತಿದೆಯಾ ಮಾಸ್ತಿಯಮ್ಮನ ಶಾಪ? ಮಾಸ್ತಿಗುಡಿ ದುರಂತಕ್ಕೂ, ಮಾಸ್ತಿಯಮ್ಮನಿಗೂ ಏನು ಸಂಬಂಧ?
ಮಾಸ್ತಿ ಗುಡಿಯ ಖಳನಟರು ಸಾಯುತ್ತಾರೆ ಎಂಬ ರಹಸ್ಯ ಒಬ್ಬರಿಗೆ ಮೊದಲೇ ತಿಳಿದಿತ್ತಾ !
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 29, 2019, 8:02 PM IST