Asianet Suvarna News Asianet Suvarna News

ಮಾಸ್ತಿಗುಡಿ ಚಿತ್ರಕ್ಕೆ ಕಾಡುತ್ತಿದೆಯಾ ಮಾಸ್ತಿಯಮ್ಮನ ಶಾಪ? ಮಾಸ್ತಿಗುಡಿ ದುರಂತಕ್ಕೂ, ಮಾಸ್ತಿಯಮ್ಮನಿಗೂ ಏನು ಸಂಬಂಧ?

ಹೆಚ್ ಡಿ ಕೋಟೆ ಬಳ್ಳೆ ಶಿಬಿರದಲ್ಲಿರುವ ಮಾಸ್ತಮ್ಮ ದೇವಸ್ಥಾನದ ದೇವಿಯ ಶಾಪ, ಈಗ ಮಾಸ್ತಿಗುಡಿ ಚಿತ್ರತಂಡವನ್ನು ಕಾಡುತ್ತಿದೆ. ಮಾಸ್ತಿಯಮ್ಮನಿಗೆ ಪೂಜೆ ಸಲ್ಲಿಸಿದ್ದರೆ, ಇಂಥಾದ್ದೊಂದು ಅನಾಹುತ ಆಗುತ್ತಿರಲಿಲ್ಲ. ಏಕೆಂದರೆ, ಈ ಹಿಂದೆ ಗಂಧದ ಗುಡಿ ಚಿತ್ರದಲ್ಲೂ ಇಂಥದ್ದೇ ಅನಾಹುತವಾಗಿತ್ತು.

mastigudi film curse

ಬೆಂಗಳೂರು(ನ.11): ಮಾಸ್ತಿಗುಡಿ ದುರಂತಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಉದಯ್ ಮತ್ತು ಅನಿಲ್ ದುರ್ಮರಣಕ್ಕೆ ಮಾಸ್ತಿಯಮ್ಮನ ಶಾಪವೇ ಕಾರಣ ಎನ್ನಲಾಗುತ್ತಿದೆ. ಮಾಸ್ತಿಗುಡಿ ಚಿತ್ರ ತಂಡದಲ್ಲೇ ಇಂಥದ್ದೊಂದು ಭೀತಿಯ ಮಾತು ಕೇಳಿಬರುತ್ತಿದೆ. ತಾಯಿಯ ಕೆಂಡದಂತ ಕೋಪಕ್ಕೆ ಈ ಇಬ್ಬರೂ ಕಲಾವಿದರು ಬಲಿಯಾದರಾ ಅನ್ನೋದು ಅವರ ಅನುಮಾನ. 

ಏಕೆಂದರೆ, ಚಿತ್ರದ ಹೆಸರು ಮಾಸ್ತಿಗುಡಿಯಾದರೂ, ಮಾಸ್ತಿಯಮ್ಮನ ದೇವಸ್ಥಾನದಲ್ಲಿ ಯಾವುದೇ ಶೂಟಿಂಗ್ ಆಗಿಲ್ಲ. ಮಾಸ್ತಮ್ಮ ದೇವಿ ಚಿತ್ರೀಕರಣಕ್ಕೆ ನಿರಾಕರಣೆ ಅನುಮತಿ ಸಿಕ್ಕಿರಲಿಲ್ಲ. ಅಕ್ಟೋಬರ್​ನಲ್ಲಿ ಮಾಸ್ತಿಯಮ್ಮನ ದೇವಸ್ಥಾನಕ್ಕೆ ಪೂಜೆಯ ಚಿತ್ರೀಕರಣಕ್ಕೆ ಹೋಗಿದ್ದ ತಂಡ, ದಾಂಡೇಲಿ ಅಭಯಾರಣ್ಯದಲ್ಲಿ ಚಿತ್ರೀಕರಣ ಮುಗಿಸಿ ಬಂದಿತ್ತು. ದೇವಿಗೆ ಚಿತ್ರದ ಆರಂಭದಲ್ಲಿಯೇ ಪೂಜೆ ಸಲ್ಲಿಸಿರಲಿಲ್ಲ. ಇದಕ್ಕಾಗಿಯೇ ಚಿತ್ರತಂಡದ ಮೇಲೆ ಅಡವಿ ದೇವಿ ಮುನಿಸಿಕೊಂಡಿದ್ದಾಳೆ ಅನ್ನೋ ಭಯ ಕಾಡುತ್ತಿದೆ. 

ಹೆಚ್ ಡಿ ಕೋಟೆ ಬಳ್ಳೆ ಶಿಬಿರದಲ್ಲಿರುವ ಮಾಸ್ತಮ್ಮ ದೇವಸ್ಥಾನದ ದೇವಿಯ ಶಾಪ, ಈಗ ಮಾಸ್ತಿಗುಡಿ ಚಿತ್ರತಂಡವನ್ನು ಕಾಡುತ್ತಿದೆ. ಮಾಸ್ತಿಯಮ್ಮನಿಗೆ ಪೂಜೆ ಸಲ್ಲಿಸಿದ್ದರೆ, ಇಂಥಾದ್ದೊಂದು ಅನಾಹುತ ಆಗುತ್ತಿರಲಿಲ್ಲ. ಏಕೆಂದರೆ, ಈ ಹಿಂದೆ ಗಂಧದ ಗುಡಿ ಚಿತ್ರದಲ್ಲೂ ಇಂಥದ್ದೇ ಅನಾಹುತವಾಗಿತ್ತು.

ಆ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿತ್ತು. ಗಂಧದಗುಡಿ ಶೂಟಿಂಗ್ ವೇಳೆ, ವಿಷ್ಣುವರ್ಧನ್ ಕೈಲಿದ್ದ ಬಂದೂಕಿನಲ್ಲಿ ಅಚಾತುರ್ಯದಿಂದ ವೊರಿಜಿನಲ್ ಬುಲೆಟ್ ತುಂಬಲಾಗಿತ್ತು. ಅದು ಆಕಸ್ಮಿಕವಾಗಿ ಸಿಡಿದು, ರಾಜ್ ಕುಮಾರ್ ಗುಂಡಿಗೆ ಬಲಿಯಾಗಬೇಕಿತ್ತು. ಆದರೆ, ಮಾಸ್ತಿಯಮ್ಮನ ಕೃಪೆಯಿಂದಾಗಿಯೇ ರಾಜ್ ಅಂದು ಪ್ರಾಣಾಪಾಯದಿಂದ ಪಾರಾಗಿದ್ದರು. 

ಗಂಧದ ಗುಡಿ ಚಿತ್ರ ಶುರುವಾಗುವ ಮುನ್ನ ಮಾಸ್ತಿಯಮ್ಮನಿಗೆ ರಾಜ್ ಕುಮಾರ್ ಪೂಜೆ ಸಲ್ಲಿಸಿದ್ದರು. ಆದರೆ, ಆ ಕೆಲಸವನ್ನು ಮಾಸ್ತಿಗುಡಿ ಚಿತ್ರತಂಡ ಮಾಡಿರಲಿಲ್ಲ. ಅಷ್ಟೇ ಅಲ್ಲ, ಗಂಧದ ಗುಡಿ ಪಾರ್ಟ್ 2 ನಲ್ಲಿ ಕೂಡಾ ಶಿವರಾಜ್ ಕುಮಾರ್, ಮಾಸ್ತಿಯಮ್ಮನಿಗೆ ಪೂಜೆ ಸಲ್ಲಿಸಿಯೇ ಚಿತ್ರದ ಶೂಟಿಂಗ್ ಶುರು ಮಾಡಿದ್ದರು. ಯಾವುದೇ ಅನಾಹುತವಾಗಿರಲಿಲ್ಲ. 
 

Follow Us:
Download App:
  • android
  • ios